'ಶ್ರಾವಣಿ ಸುಬ್ರಮಣ್ಯ' ಹೀರೋ ಅಮೋಘ್ ಪರ್ಫಾಮೆನ್ಸ್‌ಗೆ ಕರಗಿದ ಸೆಂಚುರಿ ಸ್ಟಾರ್: ಶಿವಣ್ಣನ ಬ್ಯಾನರ್‌ನಲ್ಲೇ ಚೊಚ್ಚಲ ಸಿನಿಮಾ

ಜೀ ಕನ್ನಡದಲ್ಲಿ ಒಂದ್ಕಡೆ ಧಾರಾವಾಹಿ, ಇನ್ನೊಂದು ಕಡೆ ರಿಯಾಲಿಟಿ ಶೋ ಎರಡರಲ್ಲೂ ವೀಕ್ಷಕರನ್ನು ಸೆಳೆಯುತ್ತಿದೆ. ಈಗಾಗಲೇ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಹಾಗೂ 'ಕಾಮಿಡಿ ಕಿಲಾಡಿಗಳು ಜೂನಿಯರ್ಸ್' ಶೋಗಳು ವೀಕೆಂಡ್‌ನಲ್ಲಿ ವೀಕ್ಷಕರಿಗೆ ಮನರಂಜನೆಯ ಕಿಕ್ ಕೊಡುತ್ತಿದೆ. ಈ ಮಧ್ಯೆ ಧಾರಾವಾಹಿಗಳು ಕನ್ನಡಿಗರ ಮನೆ ಮನೆಯ ಹೆಣ್ಣು ಮಕ್ಕಳನ್ನು ರಂಜಿಸುತ್ತಿವೆ.

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಹಾಗೂ 'ಕಾಮಿಡಿ ಕಿಲಾಡಿಗಳು ಜೂನಿಯರ್ಸ್' ಈ ಎರಡೂ ಶೋಗಳ 'ಮಹಾ ಸಂಚಿಕೆ' ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಶಿವಣ್ಣ, ರಚಿತಾ ರಾಮ್ ಹಾಗೂ ನಿಶ್ವಿಕಾ ನಾಯ್ದು ಜಡ್ಜ್‌ಗಳಾಗಿ ಕಾಣಿಸಿಕೊಂಡಿದ್ದಾರೆ. ಈ ಮಹಾ ಸಂಚಿಕೆಯಲ್ಲಿ ಜೀ ಕನ್ನಡದಲ್ಲಿಯೇ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿ 'ಶ್ರಾವಣಿ ಸುಬ್ರಮಣ್ಯ'ದ ಹೀರೋ ಸುಬ್ಬು ಅಲಿಯಾಸ್ ಅಮೋಘ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ.

Shivarajkumar promised produce Sharavani Subramanya Serial hero Amogh debut movie in DKD Stage

'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯ ಹೀರೋ ಅಮೋಘ್ ಅಭಿನಯದವನ್ನು ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್ ಮೆಚ್ಚಿಕೊಂಡಿದ್ದಾರೆ. ಅಮೋಘ್ ಸದ್ಯ ಕಿರುತೆರೆಯಲ್ಲಿರುವ ಸ್ಮಾರ್ಟ್‌ ಹೀರೋಗಳಲ್ಲಿ ಒಬ್ಬರು. 'ಡಿಕೆಡಿ'-'ಕಾಮಿಡಿ ಕಿಲಾಡಿಗಳು ಜೂನಿಯರ್ಸ್‌'ನಲ್ಲಿ ಇವರ ನಟನೆಯನ್ನು ಕಂಡು ಸೆಂಚುರಿಸ್ಟಾರ್, ರಚಿತಾ ರಾಮ್ ಮನಸಾರೇ ಮನಸೋತ್ತಿದ್ದಾರೆ. ಇನ್ನು ಅಮೋಘ್‌ಗೆ ಸೆಂಚುರಿ ಸ್ಟಾರ್ ಶಿವಣ್ಣ ಮನಸೋತಿದ್ದಾರೆ. ಸಿನಿಮಾ ನಿರ್ಮಾಣ ಮಾಡುವ ಭರವಸೆಯನ್ನು ನೀಡಿದ್ದಾರೆ. ಶಿವಣ್ಣ, ರಚಿತಾ ರಾಮ್ ಹಾಗೂ ನಿಶ್ಚಿಕಾ ನಾಯ್ಡು ಕೂಡ ಮೆಚ್ಚಿಕೊಂಡಿದ್ದಾರೆ.

ಈಗಾಗಲೇ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿ ಮೂಲಕ ಅಮೋಘ್ ಕಿರುತೆರೆ ವೀಕ್ಷಕರ ಮನಗೆದ್ದಿದ್ದಾರೆ. ಸುಬ್ಬು ಪಾತ್ರದಲ್ಲಿ ಅಮೋಘ್ ನಟನೆ ಇಷ್ಟ ಆಗಿದೆ. ಡಿಕೆಡಿ ಹಾಗೂ ಕಾಮಿಡಿ ಕಿಲಾಡಿಗಳು ಜೂನಿಯರ್ಸ್ ಮಹಾ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಅಮೋಘ್ ಅತಿಥಿಗಳಿಗೆ ಇಷ್ಟ ಆಗಿದ್ದಾರೆ. ಅವರ ನಟನೆಯನ್ನು ನೋಡಿ ಶಿವಣ್ಣನೇ ಮೆಚ್ಚಿಕೊಂಡಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನ ದಿಗ್ಗಜರಾದ ಡಾ. ಶಿವರಾಜ್ ಕುಮಾರ್, 'ಡಿಂಪಲ್ ಕ್ವೀನ್' ರಚಿತಾ ರಾಮ್ ಹಾಗೂ ನಿಶ್ವಿಕಾ ನಾಯ್ಡು ಅವರು ಅಮೋಘ್‌ನ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

Shivarajkumar promised produce Sharavani Subramanya Serial hero Amogh debut movie in DKD Stage

ಅಮೋಘ್ ಪರ್ಫಾಮೆನ್ಸ್ ಅನ್ನು ಮೆಚ್ಚಿದ ಶಿವಣ್ಣ ಬಂಪರ್ ಆಫರ್ ಕೊಟ್ಟಿದ್ದಾರೆ. ವೇದಿಕೆ ಮೇಲೆ ಸುಬ್ಬು ಅಲಿಯಾಸ್ ಅಮೋಘ್‌ಗೆ ತಮ್ಮ ಬ್ಯಾನರ್‌ನಿಂದ ಚೊಚ್ಚಲ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಅಮೋಘ್‌ ಚೊಚ್ಚಲ ಸಿನಿಮಾವನ್ನು ನಾನೇ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದು, ಖುಷಿಯಿಂದ ಶಿವಣ್ಣನನ್ನು ಅಪ್ಪಿಕೊಂಡಿದ್ದಾರೆ.

ಅಮೋಘ್‌ನ ಅದ್ಭುತ ನಟನೆಗೆ ಫಿದಾ ಆಗಿದ್ದು, ಶಿವಣ್ಣ ಒಬ್ಬರೇ ಅಲ್ಲ. ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಅಮೋಘ್ ನಾಯಕನಾಗುವ ಸಿನಿಮಾಗೆ ತಾನೇ ನಾಯಕಿ ಎಂದು ಸಂಭ್ರಮದಿಂದ ಹೇಳಿದ್ದಾರೆ. ಇನ್ನು ಮತ್ತೊಬ್ಬ ನಟಿ ನಿಶ್ವಿಕಾ ನಾಯ್ಡು ಅವರು ಅಮೋಘ್‌ ಸಾಧನೆಯನ್ನು ಮೆಚ್ಚಿ, ಜೀವನದಲ್ಲಿ ನೀನು ಇನ್ನಷ್ಟು ಎತ್ತರಕ್ಕೆ ಬೆಳೆಯುವೆ ಎಂದು ಶುಭ ಹಾರೈಸಿದ್ದಾರೆ.

ಇನ್ನು 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಗೂ ಮುನ್ನ ಕೆಲವು ಪೋಷಕ ಪಾತ್ರಗಳಲ್ಲಿ ಅಮೋಘ್ ನಟಿಸಿದ್ದಾರೆ. ಮೂಲತ: ಉಡುಪಿ ಜಿಲ್ಲೆಯ ಕುಂದಾಪುರದವರಾದ ಅಮೋಘ್ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಮೊದಲಿನಿಂದಲೂ ರಂಗಭೂಮಿಯ ನಂಟನ್ನು ಬೆಳೆಸಿಕೊಂಡಿರುವ ಅಮೋಘ್ ನಟನೆಯಲ್ಲಿ ಪರಿಣಿತಿ ಪಡೆದಿದ್ದಾರೆ. ಹೀಗಾಗಿ 'ಶ್ರಾವಣಿ ಸುಬ್ರಮಣ್ಯ' ಸೀರಿಯಲ್‌ನಲ್ಲೂ ಸಹಜ ನಟನೆಯಿಂದ ಗಮನ ಸೆಳೆದಿದ್ದಾರೆ.

More from Filmibeat

English summary
Shivarajkumar promised produce Sharavani Subramanya Serial hero Amogh debut movie in DKD Stage.
Read more about: shivarajkumar dkd serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X