'ಸರಿಗಮಪ' ವೇದಿಕೆ ಮೇಲೆ ಗೀತಕ್ಕನಿಗೆ 'ಐ ಲವ್ ಯು' ಎಂದ ಶಿವಣ್ಣ; ಸೆಂಚುರಿ ಸ್ಟಾರ್‌ ಇಸ್ ಬ್ಯಾಕ್

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಫಿಟ್ ಅಂಡ್ ಫೈನ್ ಆಗಿ ಎಂದಿನಂತೆ ಎನರ್ಜೆಟಿಕ್ ಆಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಿವಣ್ಣನಿಗೆ ಆ ಗುಂಗಿನಿಂದ ಹೊರ ತಂದಿದ್ದು ಸಿನಿಮಾಗಳ ಜೊತೆಗೆ ರಿಯಾಲಿಟಿ ಶೋ. ಜೀ ಕನ್ನಡದ ರಿಯಾಲಿಟಿ ಶೋಗೆ ಮುಖ್ಯ ಜಡ್ಜ್ ಆಗಿದ್ದ ಶಿವಣ್ಣ ವೇದಿಕೆ ಮೇಲಿನ ಪ್ರತಿಭೆಗಳ ಪರ್ಫಾಮೆನ್ಸ್‌ಗೆ ತಮ್ಮ ನೋವನೆಲ್ಲ ಮರೆತಿದ್ದರು. ಈಗ ಮತ್ತೆ ಅದೇ ವೇದಿಕೆ ಅದೇ ಎನರ್ಜಿಯೊಂದಿಗೆ ಎಂಟ್ರಿ ಕೊಟ್ಟಿದ್ದಾರೆ.

ಅಮೆರಿಕದಲ್ಲಿ ಸರ್ಜರಿಗೆ ಒಳಗಾಗಿ ಬೆಂಗಳೂರಿಗೆ ಹಿಂತಿರುಗಿದ ಬಳಿಕ ಶಿವಣ್ಣ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಸಿನಿಮಾ ಹಾಗೂ ರಿಯಾಲಿಟಿ ಶೋಗಳಿಂದ ದೂರ ಉಳಿದಿದ್ದರು. ಕೆಲವು ದಿನಗಳಿಂದ ಮತ್ತೆ ಎಂದಿನಂತೆ ಅವರು ವೃತ್ತಿ ಬದುಕಿನ ಕಡೆಗೆ ಮರಳುತ್ತಿದ್ದಾರೆ. ಗ್ರೀನ್‌ ಸಿಗ್ನಲ್ ಕೊಟ್ಟಿದ್ದ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದಾರೆ. ಈ ಮಧ್ಯೆ ರಿಯಾಲಿಟಿ ಶೋ ವೇದಿಕೆ ಮೇಲೂ ಕಾಣಿಸಿಕೊಂಡಿದ್ದಾರೆ.

Shivarajkumar proposed to his wife Geetha Shivarajkumar in the Saregamapa Kannada reality show

ಜೀ ಕನ್ನಡ ಶಿವಣ್ಣನನ್ನು ಅದ್ಧೂರಿಯಾಗಿ ಸ್ವಾಗತಿಸುವುದಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಈ ವೀಕೆಂಡ್‌ನಲ್ಲಿ 'ಸರಿಗಮಪ' ಶೋ ಅನ್ನು ಸಂಪೂರ್ಣ ಶಿವರಾಜ್‌ಕುಮಾರ್‌ಮಯವನ್ನಾಗಿ ಮಾಡಿದೆ. ಈ ವೇದಿಕೆ ಮೇಲೆ ಗಾಯಕರು ಶಿವಣ್ಣ ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ. ಈ ಮಧ್ಯೆ ಶಿವಣ್ಣನ ಪರ್ಫಾಮೆನ್ಸ್ ಇರುತ್ತೆ. ಶಿವಣ್ಣ ಕೂಡ ಹಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದೇ ವೇದಿಕೆ ಮೇಲೆ ಶಿವಣ್ಣ ಪತ್ನಿ ಗೀತಾ ಶಿವರಾಜ್‌ಕುಮಾರ್‌ಗೆ ಪ್ರಪೋಸ್ ಮಾಡಿದ್ದಾರೆ.

ಶಿವಣ್ಣ ಎನರ್ಜೆಟಿಕ್ ಡ್ಯಾನ್ಸ್

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಂದರೆ ಎನರ್ಜಿ. ಸ್ಯಾಂಡಲ್‌ವುಡ್‌ನಲ್ಲಿ ಎನರ್ಜಿಗೆ ಇನ್ನೊಂದು ಹೆಸರೇ ಶಿವಣ್ಣ. ಇಷ್ಟು ದಿನ ಕಿರುತೆರೆ ಶಿವಣ್ಣ ಆ ಎನರ್ಜಿಯನ್ನು ಮಿಸ್ ಮಾಡಿಕೊಂಡಿತ್ತು. ಈಗ ಮತ್ತೆ ಶಿವಣ್ಣ ಅದೇ ಜೋಷ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡದ ಸರಿಗಮಪ ವೇದಿಕೆ ಮೇಲೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಮುಗಿಲೆತ್ತರಕ್ಕೆ ಜಿಗಿದು ಶಾಕ್ ಕೊಟ್ಟಿದ್ದಾರೆ. ಜೀ ಕನ್ನಡದ ಶಿವಣ್ಣನ ಪ್ರೋಮೊ ರಿಲೀಸ್ ಮಾಡಿದ್ದು, ಫ್ಯಾನ್ಸ್ ಫುಲ್ ಕಳೆದು ಹೋಗಿದ್ದಾರೆ.

Shivarajkumar proposed to his wife Geetha Shivarajkumar in the Saregamapa Kannada reality show

ಜನುಮದ ಜೋಡಿ ಸಾಂಗ್

ಶಿವರಾಜ್‌ಕುಮಾರ್ 'ಸರಿಗಮಪ' ಶೋನಲ್ಲಿ ಬರೀ ಡ್ಯಾನ್ಸ್ ಅಷ್ಟೇ ಮಾಡಿಲ್ಲ. ಬದಲಾಗಿ, ಅವರದ್ದೇ ಸಿನಿಮಾ ಫೇಮಸ್ ಸಾಂಗ್ ಅನ್ನು ಹಾಡಿ ರಂಜಿಸಿದ್ದಾರೆ. 'ಜನುಮದ ಜೋಡಿ' ಸಿನಿಮಾದ "ಕನಕ.. ಕನಕ" ಸಾಂಗ್ ಅನ್ನು ಅದೇ ಗೆಟಪ್‌ನಲ್ಲಿ ಹಾಡಿದ್ದಾರೆ. ಎತ್ತಿನಗಾಡಿಯ ಮೇಲೆ ಕುಳಿತು ಸರಿಗಮಪ ಸ್ಪರ್ಧಿ ಜೊತೆಗೂಡಿ ಆ ಹಾಡನ್ನು ಹಾಡಿದ್ದಾರೆ. ಡ್ಯಾನ್ಸ್, ಸಾಂಗ್ ಜೊತೆ ಕೆಲವು ಎಮೋಷನಲ್ ಮೂವ್‌ಮೆಂಟ್ಸ್ ಅನ್ನೂ ನೋಡಬಹುದಾಗಿದೆ.

ಪತ್ನಿಗೆ ಶಿವಣ್ಣ ಪ್ರಪೋಸ್

ಆಂಕರ್ ಅನುಶ್ರೀ ಇದ್ಮೇಲೆ ವೇದಿಕೆ ಮೇಲೆ ಇಂತಹ ಏನಾದರೂ ಚಮತ್ಕಾರ ಇರಲೇಬೇಕು. ಕಿರುತೆರೆ ವೀಕ್ಷಕರಿಗೆ ಈ ವೀಕೆಂಡ್‌ನಲ್ಲಿ ಭರ್ಜರಿ ಮನರಂಜನೆ ಸಿಗೋದು ಗ್ಯಾರಂಟಿ. ಯಾಕಂದ್ರೆ, ಶಿವಣ್ಣ ವೇದಿಕೆ ಮೇಲೆ ಪತ್ನಿ ಗೀತಾ ಶಿವರಾಜ್‌ಕುಮಾರ್‌ಗೆ ಪ್ರಪೋಸ್ ಮಾಡಿದ್ದಾರೆ. ಗೀತಕ್ಕನ ಮುಂದೆ ಕೂತು ಶಿವಣ್ಣ 'ಐ ಲವ್‌ ಯೂ' ಎಂದಿದ್ದಾರೆ. ಈ ವೀಕೆಂಡ್‌ನಲ್ಲಿ ಪ್ರಸಾರ ಆಗುವ ಸರಿಗಮಪ ಶೋನಲ್ಲಿ ಇದೇ ಹೈಲೈಟ್. ಇನ್ನು ಬರೀ ಶಿವಣ್ಣ ಅಷ್ಟೇ ಅಲ್ಲ. ಗೀತಕ್ಕ ಕೂಡ ಶಿವಣ್ಣನಿಗೆ ಐ ಲವ್‌ ಯೂ ಎಂದಿದ್ದಾರೆ.

ಶಿವಣ್ಣ ಭಾವುಕ

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 'ಸರಿಗಮಪ' ವೇದಿಕೆ ಮೇಲೆ ಭಾವುಕರಾಗಿದ್ದಾರೆ. ಅವರಿಗೆ ತೋರಿರುವ ಪ್ರೀತಿಯನ್ನು ಕಂಡು ಮನಸೋತಿದ್ದಾರೆ. "ಇಷ್ಟು ಜನ ನನ್ನನ್ನು ಪ್ರೀತಿಸುತ್ತಾರಲ್ಲ. ಅದಕ್ಕೆ ಪುಣ್ಯ ಮಾಡಿರಬೇಕು" ಎಂದು ಸೆಂಚುರಿ ಸ್ಟಾರ್ ಶಿವಣ್ಣ ಹೇಳಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಶಿವಣ್ಣ ಎನರ್ಜಿಗೆ ಮತ್ತೆ ಅಭಿಮಾನಿಗಳು ಫಿದಾ ಆಗಿದ್ದಾರೆ.

More from Filmibeat

English summary
Shivarajkumar proposed to his wife, Geetha Shivarajkumar, in the Saregamapa Kannada reality show
Read more about: shivarajkumar reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X