DKD 2025: ಮೊದಲ ದಿನ.. ಮೊದಲ ಫ್ರೇಮ್.. ಡಿಕೆಡಿ ಆರಂಭ; ಒಂದೇ ಫ್ರೇಮ್‌ನಲ್ಲಿ ಶಿವಣ್ಣ, ಅರ್ಜುನ್, ವಿಜಯ್, ಅನುಶ್ರೀ
ಕನ್ನಡ ಕಿರಿತೆರೆಯ ಮತ್ತೊಂದು ಜನಪ್ರಿಯ ರಿಯಾಲಿಟಿ ಶೋ ವೀಕ್ಷಕರ ಮುಂದೆ ಬರುವುದಕ್ಕೆ ಸಜ್ಜಾಗಿದೆ. ಈಗಾಗಲೇ ಅದಕ್ಕೆ ಬೇಕಿರೋ ತಯಾರಿ ಕೂಡ ಭರ್ಜರಿಯಾಗಿಯೇ ಆರಂಭ ಆಗಿದೆ. ಅದುವೇ ಜೀ ಕನ್ನಡದ ಜನಪ್ರಿಯ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'. ಜೀ ಕನ್ನಡದಲ್ಲಿ ಹಲವು ವರ್ಷಗಳಿಂದ ಪ್ರಸಾರ ಆಗುತ್ತಿರುವ ಫೇಮಸ್ ಶೋ 'ಡಿಕೆಡಿ'.
'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋಗೆ ಪ್ರತ್ಯೇಕ ಫ್ಯಾನ್ಸ್ ಫಾಲೋವಿಂಗ್ ಇದೆ. ವೀಕೆಂಡ್‌ನಲ್ಲಿ ಪ್ರಸಾರ ಆಗುವ ಈ ಶೋ ಅನ್ನು ವೀಕ್ಷಣೆ ಮಾಡುವುದಕ್ಕೆ ಅಂತಾನೇ ದೊಡ್ಡ ವೀಕ್ಷಕರ ಬಳಗವೇ ಇದೆ. ಈ ಶೋನಲ್ಲಿ ಸ್ಟಾರ್‌ಗಳು ಕೂಡ ಉತ್ಸಾಹದಲ್ಲಿದ್ದಾರೆ. ಅಂದ್ಹಾಗೆ ಇದು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನ 9ನೇ ಸೀಸನ್. ಈ ಸೀಸನ್‌ನಲ್ಲೂ ಪ್ರತಿಭಾವಂತ ಸ್ಪರ್ಧಿಗಳನ್ನು ವೀಕ್ಷಕರು ನಿರೀಕ್ಷೆ ಮಾಡುತ್ತಿದ್ದಾರೆ.

ಈಗಾಗಲೇ ಜೀ ಕನ್ನಡ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ಪ್ರೋಮೊ ರಿಲೀಸ್ ಮಾಡುತ್ತಿತ್ತು. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸ್ಟಾರ್ ತೀರ್ಪುಗಾರರಾಗಿ ಮುಂದುವರೆದಿದ್ದರೆ, ಮಾತಿನ ಮಲ್ಲಿ ಅನುಶ್ರೀ ನಿರೂಪಕಿಯಾಗಿದ್ದಾರೆ. ಹೀಗಾಗಿ ವೀಕೆಂಡ್‌ನಲ್ಲಿ ಮನರಂಜನೆ ನೀಡುವುದಕ್ಕೆ ಮತ್ತೊಂದು ರಿಯಾಲಿಟಿ ಶೋ ಬರುವುದಕ್ಕೆ ರೆಡಿಯಾಗಿದೆ. ಈ ವೇಳೆ ರಚಿತಾ ರಾಮ್ ವಿಶೇಷವಾದ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ.
ಮೊದಲ ದಿನ.. ಮೊದಲ ಫ್ರೇಮ್
ಡಿಂಪಲ್ ಕ್ವೀನ್ ರಚಿತಾ ರಾಮ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ಡಿಕೆಡಿ ಸೀಸನ್ 9ರ ಮೊದಲ ದಿನದ ಶೂಟಿಂಗ್ ಆರಂಭ ಆಗಿದ್ದು, ಸೆಟ್‌ನಲ್ಲಿ ಶಿವಣ್ಣ, ವಿಜಯ ರಾಘವೇಂದ್ರ, ಅರ್ಜುನ್ ಜನ್ಯಾ ಹಾಗೂ ಆಂಕರ್ ಅನುಶ್ರೀಯೊಂದಿಗೆ ನಿಂತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಲೈಟ್ಸ್, ಕ್ಯಾಮರಾ, ಡ್ಯಾನ್ಸ್.. ಫಸ್ಟ್ ಡೇ.. ಫಸ್ಟ್ ಫ್ರೇಮ್.. ಸದಾ ನೆನಪಿನಲ್ಲಿ ಉಳಿಯುತ್ತೆ.. ಎಂತಹ ಅದ್ಭುತ ಸ್ಟಾರ್ಟ್" ಎಂದು ರಚಿತಾ ರಾಮ್ ಬರೆದುಕೊಂಡಿದ್ದಾರೆ.
'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶುರು
ಕಿರುತೆರೆ ವೀಕ್ಷಕರ ನೆಚ್ಚಿನ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಸೀಸನ್ 9 ಅದ್ಧೂರಿಯಾಗಿ ಶೂಟಿಂಗ್ ಶುರುವಾಗಿದೆ. ಖುದ್ದಾಗಿ ರಚಿತಾ ರಾಮ್ ಇದನ್ನು ಕನ್ಫರ್ಮ್ ಮಾಡಿದಂತೆ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಡ್ಯಾನ್ಸ್ ಪ್ರಿಯರ ನೆಚ್ಚಿನ ಶೋ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ. ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳು ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಕನ್ನಡ ಚಿತ್ರರಂಗದ ತಾರೆಯರು ತೀರ್ಪುಗಾರರಾಗಿ ಬಂದಿರೋದು ಮತ್ತಷ್ಟು ಕಿಕ್ ಕೊಡಲಿದೆ. ಸದ್ಯ ಜೀ ಕನ್ನಡ ಇನ್ನೂ ಪ್ರಸಾರ ಯಾವಾಗ ಎಂಬುದನ್ನು ರಿವೀಲ್ ಮಾಡಿಲ್ಲ.
ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋ
ಜೀ ಕನ್ನಡ ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುವುದಕ್ಕೆ ಸಜ್ಜಾಗಿದೆ. ಈಗಾಗಲೇ 'ಕಾಮಿಡಿ ಕಿಲಾಡಿಗಳು' ಶೋ ಆರಂಭ ಆಗುತ್ತಿದೆ. ಮೊದಲ ವಾರದವೇ ಬ್ಲಾಕ್ ಬಸ್ಟರ್ ಪರ್ಫಾಮೆನ್ಸ್ ಕೊಟ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವುದಕ್ಕೆ ಸಜ್ಜಾಗಿದ್ದಾರೆ. 'ಕಾಮಿಡಿ ಕಿಲಾಡಿಗಳು' ಜೊತೆಗೆ ಈಗ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕೂಡ ಸೇರಿಕೊಂಡಿದೆ.


Click it and Unblock the Notifications











