DKD 2025: ಡಾನ್ಸ್ ಕರ್ನಾಟಕ ಡಾನ್ಸ್ ಹೊಸ ಸೀಸನ್ ಆರಂಭಕ್ಕೆ ಮುಹೂರ್ತ ಫಿಕ್ಸ್; ಯಾವಾಗ? ಎಷ್ಟೊತ್ತಿಗೆ?

ಡ್ಯಾನ್ಸ್ ಪ್ರಿಯರ ಅಚ್ಚು ಮೆಚ್ಚಿನ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಮತ್ತೆ ಆರಂಭ ಆಗುತ್ತಿದೆ. ಜೀ ಕನ್ನಡದಲ್ಲಿ ಡಿಕೆಡಿ ಮತ್ತೊಂದು ಸೀಸನ್ ವೀಕ್ಷಕರ ಮುಂದೆ ಬರಲಿದೆ. ಜನಮನ್ನಣೆ ಗಳಿಸಿರುವ ಎಲ್ಲರ ಅಚ್ಚು ಮೆಚ್ಚಿನ ಈ ಡಾನ್ಸ್ ರಿಯಾಲಿಟಿ ಶೋ ಈ ಬಾರಿ ಇನ್ನಷ್ಟು ವಿಭಿನ್ನವಾಗಿರಲಿದೆ. ಹೊಸ ಥೀಮ್‌ಗಳು, ಅದ್ಭುತ ಪ್ರತಿಭೆಗಳೊಂದಿಗೆ ಈ ಬಾರಿಯ ಮತ್ತಷ್ಟು ಮನರಂಜನೆ ನೀಡಲು ಸಜ್ಜಾಗಿದೆ.

ಈ ಬಾರಿ ಕೂಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿಗೆ ಅನುಶ್ರೀ ನಿರೂಪಣೆ ಇರುತ್ತೆ. ಕಳೆದ ಬಾರಿಯಂತೆ ಈ ಬಾರಿ ಕೂಡ ತೀರ್ಪುಗಾರರಾಗಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಹಾಗೂ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಇರಲಿದ್ದಾರೆ.

Shivarajkumar Rachita Ram Vijay Raghavendra s Dance Karnataka Dance 2025 stars from Nov 15th

ಶಿವಣ್ಣ ಕೇವಲ ಅತ್ಯುತ್ತಮ ನಟ ಅಷ್ಟೇ ಅಲ್ಲ, ಒಳ್ಳೆಯ ಡ್ಯಾನ್ಸರ್ ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. ಅವರ ಸ್ಪೀಡ್‌ಗೆ ಮ್ಯಾಚ್ ಮಾಡೋರೇ ಇಲ್ಲ. ಹಾಗೇ ರಚಿತಾ ರಾಮ್ ಶಾಸ್ತ್ರೀಯ ನೃತ್ಯಗಾರ್ತಿಯೂ ಕೂಡ ಹೌದು. ಹೀಗಾಗಿ ಹೊಸ ಪ್ರತಿಭೆಗಳಿಗೆ ಡಿಂಪಲ್ ಕ್ವೀನ್ ಸಲಹೆ ಸಿಗಲಿದೆ. ಇವರೊಂದಿಗೆ ರಾಷ್ಟ್ರಪ್ರಶಸ್ತಿ ವಿಜೇತ ವಿಜಯ ರಾಘವೇಂದ್ರ ಅವರ ನಟನೆ ಹಾಗೂ ಡ್ಯಾನ್ಸ್ ಟಿಪ್ಸ್ ಸಿಗಲಿದೆ. ಇನ್ನು ಡ್ಯಾನ್ಸ್ ಅಂದ್ಮೇಲೆ ಸಂಗೀತದ ಜ್ಞಾನ ಕೂಡ ಮುಖ್ಯ. ಅದನ್ನು ನೀಡುವುದಕ್ಕೆ ಅರ್ಜುನ್ ಜನ್ಯ ಇದ್ದು, ಈ ಶೋಗೆ ಹೆಚ್ಚಿನ ಶಕ್ತಿ ಬಂದಿದೆ.

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಹೊಸ ಸೀಸನ್‌ನಲ್ಲಿ ಬಿಗ್ ಟ್ವಿಸ್ಟ್ ಇರುತ್ತೆಂದು ಜೀ ಕನ್ನಡ ಹೇಳಿಕೊಂಡಿದೆ. ಜನಪ್ರಿಯ ಸೆಲೆಬ್ರಿಟಿಗಳು ಆಯ್ಕೆಯಾದ ಪ್ರತಿಭೆಗಳಿಗೆ ಜೋಡಿಯಾಗಿ ಭಾಗಿಯಾಗಲಿದ್ದಾರೆ. ಅವರು ಯಾರು ಅಂತ ನೋಡುವುದಾರೇ, ಧನಂಜಯ್, ಭವ್ಯಾ ಗೌಡ, ಆರತಿ ಪಡುಬಿದ್ರಿ, ಅಮೋಘ್, ಪ್ರತೀಕ್ಷಾ, ನಂದಿನಿ, ಅನೂಪ್, ಸ್ಮೈಲ್ ಗುರು ರಕ್ಷಿತ್, ಜಗಪ್ಪ, ಅನನ್ಯ, ಪೂಜಾ ರಮೇಶ್ ಮತ್ತು ಅಶ್ವಿನ್ ಇರುತ್ತಾರೆ. ವಿಶೇಷ ಅಂದರೆ, ಮೊದಲ ಎಪಿಸೋಡ್‌ನಲ್ಲಿ ಸೆಲೆಬ್ರಿಟಿ ಡ್ಯಾನ್ಸರ್‌ಗಳ ಎಂಟ್ರಿ ಆಗುತ್ತೆ. ಮುಂದಿನ ಎಪಿಸೋಡ್‌ಗಳಲ್ಲಿ ಆಡಿಷನ್‌ನಲ್ಲಿ ಆಯ್ಕೆಯಾದ ಡ್ಯಾನ್ಸರ್‌ಗಳು ಮುಂದಿನ ಎಪಿಸೋಡ್‌ಗಳಲ್ಲಿ ಇವರಿಗೆ ಜೋಡಿಯಾಗಿ ಎಂಟ್ರಿ ಕೊಡಲಿದ್ದಾರೆ.

Shivarajkumar Rachita Ram Vijay Raghavendra s Dance Karnataka Dance 2025 stars from Nov 15th

ಈ ಬಾರಿ ಜೀ ಕನ್ನಡ ಮನರಂಜನೆಯ ಜೊತೆ ವೀಕ್ಷಕರಿಗೆ ಸಖತ್ ಟ್ವಿಸ್ಟ್ ಕೊಟ್ಟಿದೆ. ಈ ಬಾರಿ ಓಪನಿಂಗ್ ಸಖತ್ ಎಂಟರ್‌ಟೈನಿಂಗ್ ಆಗಿರುತ್ತೆ ಅನ್ನೋದಂತೂ ಕನ್ಫರ್ಮ್ ಆಗಿದೆ. ಇದೇ ವೀಕೆಂಡ್‌ನಿಂದ ಡ್ಯಾನ್ಸ್ ಪ್ರಿಯರಿಗೆ ಮಸ್ತ್ ಮನರಂಜನೆ ಸಿಗೋದು ಹಂಡ್ರೆಡ್ ಪರ್ಸೆಂಟ್ ಕನ್ಫರ್ಮ್. ಜೀ ಕನ್ನಡ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಹೊಸ ಸೀಸನ್ ಮೂಲಕ ಡಾನ್ಸ್ ಹಬ್ಬವನ್ನು ಸೃಷ್ಠಿಸಲಿದೆ.

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌' ಹೊಸ ಸೀಸನ್ ಡಾನ್ಸ್ ಮತ್ತು ಕ್ರಿಯೇಟಿವಿಟಿ ಇರುತ್ತೆ ಎಂಬ ಹೊಸ ಭರವಸೆ ನೀಡಿದೆ. ಪ್ರತಿ ಎಪಿಸೋಡ್‌ನಲ್ಲಿ ವಿಭಿನ್ನ ಥೀಮ್‌ಗಳು, ರೋಮಾಂಚನಕಾರಿ ಫೇಸ್‌ಆಫ್‌ಗಳು ಇರುತ್ತೆ. ಹಾಗೇ ಕರ್ನಾಟಕದ ಸಂಸ್ಕೃತಿ, ರಿದಮ್ ಮತ್ತು ಆತ್ಮಸ್ಥೈರ್ಯವನ್ನು ಪ್ರತಿಬಿಂಬಿಸುವ ಡಾನ್ಸ್ ಇರಲಿದ್ದು ಇದು ಪ್ರೇಕ್ಷಕರನ್ನು ತನ್ನತ್ತ ಸೆಳೆಯಲಿದೆ. 'ಡಾನ್ಸ್ ಕರ್ನಾಟಕ ಡಾನ್ಸ್'ನ ಹೊಸ ಸೀಸನ್‌ ಮೂಲಕ ವೀಕ್ಷಕರನ್ನು ಹಿಡಿದಿಡುವುದಕ್ಕೆ ಸಜ್ಜಾಗುತ್ತಿದೆ. ಡಾನ್ಸ್ ಹಬ್ಬವನ್ನು 'ಡಾನ್ಸ್ ಕರ್ನಾಟಕ ಡಾನ್ಸ್' ಇದೆ ನವೆಂಬರ್ 15 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7:30 ಕ್ಕೆ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ.

More from Filmibeat

English summary
Shivarajkumar, Rachita Ram, Vijay Raghavendra's Dance Karnataka Dance 2025 stars from Nov 15th.
Read more about: dkd shivarajkumar zee kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X