Shrirasthu Shubhamasthu:'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಅಂತ್ಯ; ಅಂತಿಮ ಎಪಿಸೋಡ್ ಕೊನೆಯಾಗಿದ್ದು ಹೇಗೆ?

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಇಂದು (ಆಗಸ್ಟ್ 29) ಕೊನೆಯ ಎಪಿಸೋಡ್ ಪ್ರಸಾರ ಕಂಡಿದೆ. ಸುಧಾರಾಣಿ, ಅಜಿತ್ ಹಂಡೆ, ದೀಪಕ್, ಲಾವಣ್ಯ ಸೇರಿದಂತೆ ಹಲವು ಜನಪ್ರಿಯ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸಿದ್ದರು. ಆರಂಭದಿಂದಲೂ ಈ ಸೀರಿಯಲ್ ಕಿರುತೆರೆ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇಂದು ಕೊನೆಯ ಎಪಿಸೋಡ್ ಪ್ರಸಾರ ಆಗುವುದರ ಮೂಲಕ ಅಂತ್ಯ ಕಂಡಿದೆ.

ಆರಂಭದಲ್ಲಿ 'ಶ್ರೀರಸ್ತು ಶುಭಮಸ್ತು' ಎರಡು ಪ್ರಮುಖ ಪಾತ್ರಗಳಿಂದ ಗಮನ ಸೆಳೆದಿತ್ತು. ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಸುಧಾರಾಣಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಇವರೊಂದಿಗೆ ಬಹಳ ದಿನಗಳ ಬಳಿಕ ಅಜಿತ್ ಹಂಡೆ ಮತ್ತೆ ಕಿರುತೆರೆಗೆ ಮರಳಿದ್ದರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ಧಾರಾವಾಹಿ ಹೆಂಗಳೆಯರ ಮನಸ್ಸನ್ನು ಗೆದ್ದಿತ್ತು. ಈ ಜೋಡಿಗಾಗಿಯೇ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದವರು ಅದೆಷ್ಟೋ ಮಂದಿ.

Shrirasthu Shubhamasthu Kannada Serial Final Episode Highlights

'ಶ್ರೀರಸ್ತು ಶುಭಮಸ್ತು' ಕೆಲವು ದಿನಗಳಿಂದ ಟಿಆರ್‌ಪಿಯಲ್ಲಿ ಇಳಿಕೆ ಕಂಡಿತ್ತು. ಮೂರು ವರ್ಷಗಳಿಂದ ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದ ಈ ಧಾರಾವಾಹಿಯನ್ನು ಮುಗಿಸುವುದಕ್ಕೆ ಜೀ ಕನ್ನಡ ಮುಂದಾಗಿತ್ತು. ಅದರಂತೆಯೇ ಈಗ ಈ ಜನಪ್ರಿಯ ಧಾರಾವಾಹಿ ಅಂತ್ಯ ಕಂಡಿದೆ. ಹಾಗಿದ್ದರೆ, ಕೊನೆಯ ಎಪಿಸೋಡ್‌ನಲ್ಲಿ ಏನಾಯ್ತು? ಮಾಧವ, ತುಳಸಿ, ಶಾರ್ವರಿ ಈ ಮೂವರ ಕಥೆ ಏನಾಯ್ತು? ಧಾರಾವಾಹಿ ಸುಖಾಂತ್ಯ ಕಂಡಿತೇ? ಇದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಶಾರ್ವರಿ ಅಂತ್ಯ ಆಯಿತೇ?

ಮಾಧವನ ಕುಟುಂಬವನ್ನು ಹೇಗಾದರೂ ಮಾಡಿ ಮುಗಿಸಲೇಬೇಕು ಅಂತ ಶಾರ್ವರಿ ಹೊಂಚು ಹಾಕಿ ಕೂತಿದ್ದಳು. ಆರಂಭದಲ್ಲಿ ಅವಳ ಕುತಂತ್ರ ಮಾಧವನ ಕುಟುಂಬಕ್ಕೆ ಗೊತ್ತಾಗುತ್ತಿರಲಿಲ್ಲ. ಆದರೆ, ಬರಬರುತ್ತಾ? ಕಥೆ ನಾನಾ ದಿಕ್ಕುಗಳನ್ನು ಪಡೆದುಕೊಳ್ಳುತ್ತಾ ಮುಂದಕ್ಕೆ ಸಾಗಿತ್ತು. ಕಥೆ ಮುಂದೆ ಸಾಗುತ್ತಿದ್ದಂತೆ ಮಾಧವ, ತುಳಸಿ ಹಾಗೂ ಮನೆಯವರ ಮುಂದೆ ಶಾರ್ವರಿಯ ಬಣ್ಣ ಬಯಲಾಗಿತ್ತು. ಅಸಲಿ ವಿಲನ್ ಈಕೆನೇ ಅನ್ನೋದು ಹೊರಬಿದ್ದಿತ್ತು. ಈಗ ಪೂರ್ಣಿಮಾ-ಅವಿನಾಶ ಮಗುವನ್ನು ಎತ್ತಿಕೊಂಡು ಪರಾರಿಯಾಗಿರುವ ಶಾರ್ವರಿ ಅಂತ್ಯದೊಂದಿಗೆ 'ಶ್ರೀರಸ್ತು ಶುಭಮಸ್ತು' ಅಂತ್ಯ ಆಗುತ್ತಾ? ಅನ್ನೋದು ವೀಕ್ಷಕರ ಕುತೂಹಲವಾಗಿತ್ತು.

ಮಾಧವ-ತುಳಸಿ-ಶಾರ್ವರಿ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮೂರು ಪಾತ್ರಗಳು ಹೈಲೈಟ್ ಆಗಿದ್ದವು. ತುಳಸಿ ಪಾತ್ರದಲ್ಲಿ ಸುಧಾರಾಣಿ, ಮಾಧವನ ಪಾತ್ರದಲ್ಲಿ ಅಜಿತ್ ಹಂಡೆ ಹಾಗೂ ಶಾರ್ವರಿ ಪಾತ್ರದಲ್ಲಿ ಆರಂಭದಲ್ಲಿ ನೇತ್ರಾ ಜಾದವ್ ನಟಿಸಿದ್ದರೆ, ನಂತರದ ದಿನಗಳಲ್ಲಿ ಸ್ವಪ್ನಾ ಜಾದವ್ ನಟಿಸುತ್ತಿದ್ದರು. ಈ ಮೂರು ಪಾತ್ರಗಳು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಹೈಲೈಟ್ ಆಗಿತ್ತು. ಈ ಮೂರು ಪಾತ್ರಗಳು ಈ ಧಾರಾವಾಹಿಯ ಪಿಲ್ಲರ್‌ನಂತೆ ಇದ್ದವು.

ಮಾಧವನ ಕುಟುಂಬದ ಮೇಲ್ಯಾಕೆ ಕೋಪ?

ಶಾರ್ವರಿಗೆ ಮಾಧವನ ಕುಟುಂಬದ ಮೇಲ್ಯಾಕೆ ಕೋಪ? ಹಿಂದೆ ಮಾಧವನನ್ನು ಮದುವೆ ಆಗಬೇಕು ಅಂತ ಶಾರ್ವರಿ ಅಕ್ಕ ರಾಧಾ ಇಷ್ಟ ಪಟ್ಟಿದ್ದಳು. ಆದರೆ, ಮಾಧವ ಮಾತ್ರ ಬೇರೆ ಹುಡುಗಿಯನ್ನು ಮದುವೆಯಾಗಿದ್ದರು. ಇದರಿಂದ ಕೋಪಗೊಂಡ ಶಾರ್ವರಿ, ಮಾಧವನ ಕುಟುಂಬದ ಮೇಲೆ ಹಗೆ ಸಾಧಿಸುತ್ತಲೇ ಇದ್ದಳು. ಮಾಧನ ಮೊದಲ ಪತ್ನಿಯನ್ನು ಅಪಘಾತಕ್ಕೂ ಈಕೆನೇ ಕಾರಣವಾಗಿದ್ದಳು. ಈಗ ಮಾಧವನನ್ನು ಕಿಡ್ನಾಪ್ ಮಾಡಿ ರಾಧಾ ಜೊತೆ ಮದುವೆ ಮಾಡಿಸುವುದಕ್ಕೂ ಮುಂದಾಗಿದ್ದಳು. ಕೊನೆಯ ಎಪಿಸೋಡ್‌ನಲ್ಲೂ ಮಾಧವನ ಕುಟುಂಬಕ್ಕೆ ಬುದ್ಧಿ ಕಲಿಸಲೇಬೇಕು ಅಂತ ಮೀರಾಳನ್ನು ಕಿಡ್ನಾಪ್ ಮಾಡಿದ್ದಳು. ಕೊನೆಗೆ ಈ ಧಾರಾವಾಹಿ ಅಂತ್ಯ ಕಂಡಿದ್ದೇಗೆ?

More from Filmibeat

English summary
Kannada serial Shrirasthu Shubhamasthu aired its final episode with emotional highlights, heartfelt performances, and a memorable ending that left fans touched. Here’s a look at the key moments from the last episode of the Zee Kannada show.
Read more about: serial tv show zee kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X