Shrirasthu Shubhamasthu:ತುಳಸಿಯನ್ನು ಮನೆಯಿಂದ ಓಡಿಸಲು ಶಾರ್ವರಿ ಮಾಸ್ಟರ್‌ಪ್ಲ್ಯಾನ್; ಏನಿದು?
ಸಮರ್ಥ್‌ಗೆ ತನ್ನ ತಾಯಿಯದ್ದೇ ದೊಡ್ಡ ಚಿಂತೆ. ಆಕೆ ಮಾಧವ ಅವರ ಮನೆಯಲ್ಲಿ ಯಾವ ರೀತಿ ಜೀವನ ಸಾಧಿಸುತ್ತಿದ್ದಾಳೆ ಎನ್ನುವ ಭಯ ಆತನಿಗೆ ಕಾಡಿತ್ತು. ಮಾಧವ ತುಂಬಾ ಒಳ್ಳೆಯವರು. ಅವರ ಮಕ್ಕಳು ಮಾತ್ರ ಕೆಟ್ಟವರು ಎಂದು ಹೇಳಲಾರೆ. ಆದರೆ ಕೆಲವೊಂದು ಬಾರಿ ಯೋಚಿಸಿದಾಗ ಹಾಗೆ ಅನ್ನಿಸುತ್ತದೆ ಎಂದು ಇದೀಗ ಸಮರ್ಥ್ ತನ್ನ ತಾಯಿಯ ಬಳಿ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾನೆ.
"ಅಮ್ಮ ನೀನು ಮೊದಲು ಈ ಮನೆಯಲ್ಲಿ ಇರುವುದು ನನಗೆ ಯಾಕೋ ಇಷ್ಟವಿರಲಿಲ್ಲ. ಆದರೆ, ಇದೀಗ ಈ ಮನೆಯವರು ನಿನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆದ ಕಾರಣ ನೀನು ಇಲ್ಲಿಯೇ ಇರು. ದಯವಿಟ್ಟು ನೀನು ನಮ್ಮ ಮನೆಗೆ ಬರಬೇಡ. ನಿನ್ನನ್ನು ಇಲ್ಲಿ ನೋಡಿಕೊಳ್ಳುವ ಹಾಗೆ ನಮ್ಮ ಮನೆಯಲ್ಲಿ ಖಂಡಿತ ನೋಡಿಕೊಳ್ಳಲು ಸಾಧ್ಯವಿಲ್ಲ. ನಿನಗೆ ಇಲ್ಲಿ ಸುರಕ್ಷಿತವಾದ ಸ್ಥಳವಿದೆ. ಆದಕಾರಣ ನೀನು ಇರುವುದು ಒಳಿತು" ಎಂದು ಹೇಳುತ್ತಾನೆ ಸಮರ್ಥ್.

ಸಮರ್ಥ್‌ಗೆ ಅವಿ ಹಾಗೂ ಅಭಿಯನ್ನು ನೋಡಿ ಬಹಳ ಖುಷಿಯಾಗುತ್ತೆ. ತನ್ನ ಹೆತ್ತ ತಾಯಿಯನ್ನು ಅವರಿಬ್ಬರೂ ಅಮ್ಮ ಎಂದೇ ಪೂಜಿಸುತ್ತಿದ್ದಾರೆ. ಅಮ್ಮ ಇಲ್ಲದವರಿಗೆ ಅಮ್ಮನ ಬೆಲೆ ಏನು ಅಂತ ಗೊತ್ತಾಗುವುದು ಎಂದು ಅವರಿಬ್ಬರೂ ಆಗಾಗ ಹೇಳುತ್ತಿದ್ದರು. ಇದು ಸಮರ್ಥ್‌ಗೆ ಕೊಂಚ ಸಮಾಧಾನವನ್ನೂ ತಂದಿದೆ. ಹೀಗಾಗಿ ಸಮರ್ಥ್ ಬಹಳ ನೆಮ್ಮದಿಯಿಂದ ದಿನ ಕಳೆಯುವ ಹಾಗೆ ಆಗಿದೆ. ತನ್ನ ತಾಯಿ ಖುಷಿಯಾಗಿದ್ದರೆ ನಾವೆಲ್ಲರೂ ಖುಷಿಯಾಗಿರುತ್ತೇವೆ ಎಂದು ಆತ ಅಂದುಕೊಂಡಿರುತ್ತಾನೆ.
ಆತನಿಗೆ ತನ್ನ ತಾಯಿ ಎಂದರೆ ಬಹಳ ಪ್ರೇಮ. ಆಕೆಗೆ ಏನು ಆಗಬಾರದು ಎನ್ನುವುದು ಆತನ ಇಚ್ಛೆ ಕೂಡ. ನಿಧಿಯನ್ನು ನೋಡಲು ಗಂಡಿನ ಕಡೆಯವರು ಬಂದಾಗ ಗಂಡಿನ ಅಮ್ಮ ಮಾತನಾಡಿದ ರೀತಿ, ಹಾಗೆ ಗಂಡಿನ ಅಪ್ಪ ಮಾತನಾಡಿದ ರೀತಿ ಯಾರಿಗೂ ಸ್ವಲ್ಪ ಕೂಡ ಹಿಡಿಸುವುದಿಲ್ಲ. ಯಾಕೆಂದರೆ ಹಿರಿಯ ವಯಸ್ಸಿನಲ್ಲಿ ತುಳಸಿ ತಾಯಿ ಆಗುತ್ತಿದ್ದಾರೆ ಎನ್ನುವ ವಿಚಾರವನ್ನು ಕೇಳಿ ಅವರೆಲ್ಲರೂ ತುಂಬಾ ಕೀಳಾಗಿ ನೋಡುತ್ತಾರೆ.
ತುಳಸಿ ಬಗ್ಗೆ ಮಾತಾಡಿದವರಿಗೆ ವಾರ್ನಿಂಗ್
ತುಳಸಿ ಬಗ್ಗೆ ಕೆಟ್ಟದಾಗಿ ಮಾತಾಡಿದವರನ್ನು ನೋಡಿ ಅಭಿಗೆ ಬಹಳ ಸಿಟ್ಟು ಬರುತ್ತೆ." ಯಾಕೆ ಹೀಗೆಲ್ಲ ಹೇಳುತ್ತಿದ್ದೀರಾ? ಈ ರೀತಿ ಮಾತನಾಡುವುದರಿಂದ ನಿಮಗೆ ಏನು ಲಾಭ. ನಿಮಗೆ ನನ್ನ ತಾಯಿಯ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ" ಎಂದು ಖಡಕ್ ಆಗಿ ವಾರ್ನಿಂಗ್ ಮಾಡುತ್ತಾನೆ. ನಿಧಿಗೆ ಏನು ಮಾತನಾಡಬೇಕು ಎಂದು ತಿಳಿಯದೇ ಮೌನಿ ಆಗುತ್ತಾಳೆ. ಆ ಕೂಡಲೇ ನಿಧಿಯನ್ನು ನೋಡಲು ಬಂದ ಗಂಡಿನ ಕಡೆಯವರು ನಮಗೆ ಈ ಸಂಬಂಧ ಬೇಡವೇ ಬೇಡ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾರೆ. ಆಗ ಶಾರ್ವರಿಗೆ ಕೋಪ ಬರುತ್ತದೆ. ಆಗ ಅಭಿಯ ಮೇಲೆ ಆಕೆ ರೇಗಾಡಿ ಬಿಡುತ್ತಾಳೆ. ನೀನು ಈ ರೀತಿಯ ಮಾತನ್ನು ಹೇಳುತ್ತಿಯಾ ಎಂದು ನಾನು ಎಕ್ಸ್‌ಪೆಕ್ಟ್ ಮಾಡಿರಲಿಲ್ಲ ಎಂದಾಗ ಮಹೇಶನಿಗೆ ಕೋಪ ಬಂದು ಆತನ ಹೆಂಡತಿಗೆ ವಾರ್ನಿಂಗ್ ಕೊಡುತ್ತಾನೆ.
ತುಳಸಿಯನ್ನುಹೊರ ಹಾಕಲು ಮಾಸ್ಟರ್ ಪ್ಲಾನ್
ಇನ್ನು ಶಾರ್ವರಿ ಬೀಗರ ಬಳಿ ಗುಟ್ಟಾಗಿ ಮಾತನಾಡುತ್ತಾಳೆ. ಹಾಗೆಯೇ ತುಳಸಿ ನಮ್ಮ ಮನೆಯಲ್ಲಿ ಇರದೇ ಇರುವ ಹಾಗೆ ನಾನು ನೋಡಿಕೊಳ್ಳುತ್ತೇನೆ. ನೀವು ಈ ಮದುವೆಗೆ ಒಪ್ಪಿಗೆಯನ್ನು ಕೊಡಬೇಕು. ಇದರಿಂದಾಗಿ ನನ್ನ ಮಗಳ ಮದುವೆ ನಿರ್ವಿಘ್ನವಾಗಿ ಆಗುವ ಹಾಗೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಆಗ ನಿಧಿ ಮಾದುವೆ ಆಗುವವರು ಆಯಿತು ಎನ್ನುವ ಒಪ್ಪಿಗೆಯನ್ನು ನೀಡುತ್ತಾರೆ. ಇನ್ನು ದೀಪಿಕಾ ಮೇಲೆ ಅಭಿಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತದೆ. ಯಾಕೆ ಹೀಗೆಲ್ಲ ಅಮ್ಮನ ಬಗ್ಗೆ ತುಚ್ಛವಾಗಿ ಮಾತನಾಡುತ್ತಿರುವೇ ಎಂದು ಸಖತ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ.


Click it and Unblock the Notifications











