ಬಿಗ್‌ಬಾಸ್ ನಿರೂಪಣೆ ಮಾಡಲಿದ್ದಾರೆ ಜನಪ್ರಿಯ ನಟಿ!

ಬಿಗ್‌ಬಾಸ್, ಭಾರತದ ಟಿವಿ ಜಗತ್ತಿನ ಅತಿ ಜನಪ್ರಿಯ ರಿಯಾಲಿಟಿ ಶೋ. ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಬಂಗಾಳಿ ಭಾಷೆಗಳಲ್ಲಿ ಬಿಗ್‌ಬಾಸ್ ಶೋ ಪ್ರಸಾರವಾಗುತ್ತದೆ. ಎಲ್ಲ ಭಾಷೆಗಳಲ್ಲಿಯೂ ಈ ಶೋ ಹಿಟ್ ಎನಿಸಿಕೊಂಡಿದೆ.

ಬಿಗ್‌ಬಾಸ್ ರಿಯಾಲಿಟಿ ಶೋ ಕೇವಲ ಶೋನಲ್ಲಿ ಸ್ಪರ್ಧಿಗಳ ವಾಗ್ವಾದ, ಜಗಳ, ಮುನಿಸು ಈ ಕಾರಣಕ್ಕಾಗಿ ಮಾತ್ರವೇ ಖ್ಯಾತಿ ಗಳಿಸಿಲ್ಲ. ಈ ಶೋ ಹಿಟ್ ಆಗುವ ಹಿಂದೆ ಶೋನ ನಿರೂಪಣೆ ಬಹಳ ಪ್ರಮುಖ ಪಾತ್ರವಹಿಸಿದೆ.

ಎಲ್ಲ ಭಾಷೆಗಳಲ್ಲಿಯೂ ಬಿಗ್‌ಬಾಸ್ ಶೋ ನಿರೂಪಣೆ ಮಾಡಲು ಪವರ್‌ಫುಲ್ ಸೆಲೆಬ್ರಿಟಿಗಳನ್ನು ಆಯೋಜಕರು ನೇಮಿಸಿದ್ದಾರೆ. ಕನ್ನಡದಲ್ಲಿ ಸುದೀಪ್, ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ನಾಗಾರ್ಜುನ, ಮಲಯಾಳಂನಲ್ಲಿ ಮೋಹನ್‌ಲಾಲ್, ತಮಿಳಿನಲ್ಲಿ ಕಮಲ್ ಹಾಸನ್, ಮರಾಠಿಯಲ್ಲಿ ಮಹೇಶ್ ಮಂಜ್ರೇಕರ್ ಬಿಗ್‌ಬಾಸ್ ನಿರೂಪಣೆ ಮಾಡುತ್ತಾರೆ. ಈ ನಿರೂಪಕರು ಸಹ ಬಿಗ್‌ಬಾಸ್‌ನ ಅವಿಭಾಜ್ಯ ಅಂಗದಂತಾಗಿಬಿಟ್ಟಿದ್ದಾರೆ. ಕನ್ನಡದಲ್ಲಿ ಸುದೀಪ್ ಬಿಟ್ಟರೆ ಮತ್ತೊಬ್ಬ ಬಿಗ್‌ಬಾಸ್ ನಿರೂಪಕನನ್ನು ಊಹಿಸಲು ಸಹ ಸಾಧ್ಯವಿಲ್ಲ. ಹಾಗೆಯೇ ತಮಿಳು, ಹಿಂದಿಯಲ್ಲಿಯೂ ಅಷ್ಟೆ. ಆದರೆ ತಮಿಳಿನ ಬಿಗ್‌ಬಾಸ್ ಶೋ ನಿರೂಪಣೆಯನ್ನು ಕಮಲ್‌ ಹಾಸನ್ ಕೆಲ ಕಾಲ ಮಾಡಲಾಗುತ್ತಿಲ್ಲ.

ಕಮಲ್ ಹಾಸನ್‌ ನಿರೂಪಣೆ ಮಾಡುವುದಿಲ್ಲ

ಕಮಲ್ ಹಾಸನ್‌ ನಿರೂಪಣೆ ಮಾಡುವುದಿಲ್ಲ

ತಮಿಳಿನ ಬಿಗ್‌ಬಾಸ್ ಶೋ ಈಗಾಗಲೇ ಚಾಲ್ತಿಯಲ್ಲಿದ್ದು, ಕಮಲ್ ಹಾಸನ್ ಶೋ ಅನ್ನು ನಿರೂಪಣೆ ಮಾಡುತ್ತಿದ್ದರು. ಆದರೆ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವ ಕಾರಣ ಶೋ ನಿರೂಪಣೆ ಅವರಿಂದ ಸಾಧ್ಯವಿಲ್ಲ. ಹಾಗಾಗಿ ಅವರ ಜಾಗಕ್ಕೆ ಮತ್ತೊಬ್ಬ ನಿರೂಪಕರನ್ನು ಕರೆತರಲು ಆಯೋಜಕರು ಯೋಜನೆ ಹಾಕಿದ್ದು. ಮಹಿಳಾ ನಿರೂಪಕರಿಂದ ವೀಕೆಂಡ್ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದೆ.

ನಿರೂಪಣೆ ಮಾಡಲಿದ್ದಾರೆ ಶ್ರುತಿ ಹಾಸನ್

ನಿರೂಪಣೆ ಮಾಡಲಿದ್ದಾರೆ ಶ್ರುತಿ ಹಾಸನ್

ಕಮಲ್ ಹಾಸನ್ ಹಿರಿಯ ಪುತ್ರಿ ಶ್ರುತಿ ಹಾಸನ್ ಈ ವಾರಾಂತ್ಯದ ಬಿಗ್‌ಬಾಸ್ ಶೋ ಅನ್ನು ನಿರೂಪಣೆ ಮಾಡಲಿದ್ದಾರೆ. ಅಪ್ಪನ ಗೈರು ಹಾಜರಿ ಸಮಯದಲ್ಲಿ ಮಗಳಾಗಿ ಸ್ಪರ್ಧಿಗಳೊಟ್ಟಿಗೆ ಶ್ರುತಿ ಹಾಸನ್ ಮಾತನಾಡಲಿದ್ದಾರೆ. ವಾರದ ಟಾಸ್ಕ್‌ಗಳ ವಿಮರ್ಶೆ ಮಾಡಲಿದ್ದಾರೆ. ಸ್ಪರ್ಧಿಯೊಬ್ಬರನ್ನು ಹೊರಗೆ ಕಳಿಸಲಿದ್ದಾರೆ. ಈ ವರೆಗೆ ತಮಿಳಿನಲ್ಲಿ ಐದು ಬಿಗ್‌ಬಾಸ್ ಸೀಸನ್ ನಡೆದಿದ್ದು, ಕಮಲ್ ಹಾಸನ್ ಹೊರತುಪಡಿಸಿ ಇನ್ಯಾರೂ ನಿರೂಪಣೆ ಮಾಡಿಲ್ಲ. ಆದರೆ ಇದೇ ಮೊದಲ ಬಾರಿಗೆ ನಿರೂಪಕರು ಬದಲಾಗಲಿದ್ದಾರೆ.

ಬಿಗ್‌ಬಾಸ್ ಶೋ ನಿರೂಪಣೆ ಮಾಡಿದ ಮಹಿಳೆಯರು

ಬಿಗ್‌ಬಾಸ್ ಶೋ ನಿರೂಪಣೆ ಮಾಡಿದ ಮಹಿಳೆಯರು

ಕಳೆದ ವರ್ಷ ತೆಲುಗಿನ ಬಿಗ್‌ಬಾಸ್ ಶೋ ನಡೆಯುವ ಸಂದರ್ಭದಲ್ಲಿ ನಟ ನಾಗಾರ್ಜುನ 'ವೈಲ್ಡ್ ಡಾಗ್' ಸಿನಿಮಾದ ಚಿತ್ರೀಕರಣ ನಿಮಿತ್ತ ಕಾಶ್ಮೀರಕ್ಕೆ ತೆರಳಲೇ ಬೇಕಾದ ಸಂದರ್ಭ ಬಂದಿದ್ದರಿಂದ ಆಗ ಸೊಸೆಯಾಗಿದ್ದ ನಟಿ ಸಮಂತಾರಿಗೆ ಬಿಗ್‌ಬಾಸ್ ನಿರೂಪಣೆ ಜವಾಬ್ದಾರಿ ಹೊರಿಸಿದ್ದರು. ಸಮಂತಾ ಆ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸಿದ್ದರು. ಈಗ ಶ್ರುತಿ ಹಾಸನ್ ತಂದೆಯ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಬಿಗ್‌ಬಾಸ್ ಶೋ ಅನ್ನು ಮಹಿಳೆಯರು ನಿರೂಪಣೆ ಮಾಡುತ್ತಿರುವುದು ಇದು ಹೊಸದೇನೂ ಅಲ್ಲ. ಈ ಹಿಂದೆ ನಟಿ ರಮ್ಯ ಕೃಷ್ಣ ತೆಲುಗು ಬಿಗ್‌ಬಾಸ್ ರಿಯಾಲಿಟಿ ಶೋ ನಿರೂಪಣೆ ಮಾಡಿದ್ದಾರೆ. ನಟಿ, ನಿರ್ದೇಶಕಿ, ನೃತ್ಯ ನಿರ್ದೇಶಕಿ ಫರ್ಹಾನ್ ಖಾನ್ ಹಿಂದಿ ಬಿಗ್‌ಬಾಸ್ ಶೋ ನಿರೂಪಣೆ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಸಹ ಹಿಂದಿ ಬಿಗ್‌ಬಾಸ್ ಶೋ ನಿರೂಪಣೆ ಮಾಡಿದ್ದಾರೆ. ನಟಿ ರಮ್ಯಾ ಕೃಷ್ಣ ಸಹ ತೆಲುಗಿನ ಕೆಲವು ಬಿಗ್‌ಬಾಸ್ ಶೋ ನಿರೂಪಣೆ ಮಾಡಿದ್ದರು.

ಕಮಲ್ ಆರೋಗ್ಯ ಸ್ಥಿರವಾಗಿದೆ

ಕಮಲ್ ಆರೋಗ್ಯ ಸ್ಥಿರವಾಗಿದೆ

ಇನ್ನು ನಟಿ ಶ್ರುತಿ ಹಾಸನ್ ವಿಚಾರಕ್ಕೆ ಮರಳುವುದಾದರೆ, ಶ್ರುತಿ ಹಾಸನ್ ಪ್ರಸ್ತುತ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾವನ್ನು ಕನ್ನಡದ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಬಳಿಕ ಬಾಲಕೃಷ್ಣ ನಟನೆಯ 107ನೇ ಸಿನಿಮಾಕ್ಕೆ ಶ್ರುತಿ ಹಾಸನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾವನ್ನು ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡಲಿದ್ದಾರೆ. ಶ್ರುತಿ ಹಾಸನ್ ಪ್ರಸ್ತುತ ತಮ್ಮ ಬಾಯ್‌ಫ್ರೆಂಡ್ ಜೊತೆಗೆ ಮುಂಬೈನಲ್ಲಿ ಲಿವಿನ್‌ ಟುಗೆದರ್‌ನಲ್ಲಿದ್ದಾರೆ. ಇನ್ನು ನಟ ಕಮಲ್‌ ಹಾಸನ್‌ಗೆ ನಿನ್ನೆಯಷ್ಟೆ ಕೋವಿಡ್ ಪಾಸಿಟಿವ್ ಆಗಿರುವ ವರದಿ ಬಂದಿದ್ದು, ಕಮಲ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

More from Filmibeat

English summary
Actress Shruti Haasan may host Tamil bigg boss this weekend. Kamal Haasan tested positive with coronavirus so he not able to host the show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X