Star Suvarna Holi: ಸ್ಟಾರ್ ಸುವರ್ಣದಲ್ಲಿ ರಾಗಿಣಿ, ಶುಭಾ ಪೂಂಜಾ, ಗುರುಕಿರಣ್ ಹೋಳಿ ಹಬ್ಬ
ಬಣ್ಣಗಳ ಹಬ್ಬ ಹೋಳಿ. ಭಾರತೀಯರು ಖುಷಿ ಖುಷಿಯಿಂದ ಕಾಯುವ ಹಬ್ಬ ಅಂದರೆ, ಅದು ಹೋಳಿ. ಈ ಹಬ್ಬವನ್ನು ಕಾಮನ ಹುಣ್ಣಿಮೆ ಎಂದೂ ಕರೆಯುತ್ತಾರೆ. ಅಸುರ ಶಕ್ತಿಗಳ ಸಂಹಾರದ ಸಂಕೇತವೇ ಈ ಹಬ್ಬದ ಹಿನ್ನೆಲೆ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೂ ಈ ಬಣ್ಣಗಳ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಮನೆ ಮನೆಗೆ ಹೋಗಿ ಪ್ರೀತಿಯಂದ ಬಣ್ಣ ಹಚ್ಚಿ ಬರುವ ಸಂಪ್ರದಾಯ ಇನ್ನೂ ಇದೆ.
ಯುವಕರಿಗಂತೂ ಈ ಹಬ್ಬದಲ್ಲಿ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳೂ ಕೂಡ ಈ ಹಬ್ಬವನ್ನು ಸಂಭ್ರಮದಿಂದಲೇ ಆಚರಣೆ ಮಾಡುತ್ತಾರೆ. ಇನ್ನು ಮನರಂಜನಾ ವಾಹಿನಿಯಲ್ಲೂ ಕೂಡ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತೆ. ಸ್ಟಾರ್ ಸುವರ್ಣದಲ್ಲಿ ಹೋಳಿ ಹಬ್ಬವನ್ನು ಸ್ಯಾಂಡಲ್‌ವುಡ್ ತಾರೆಯೊಂದಿಗೆ ಆಚರಿಸಿದೆ. ಈ ರಂಗೀನ ಹಬ್ಬದ ಇಂಟ್ರೆಸ್ಟಿಂಗ್ ವಿಷಯ ತಿಳಿಯಲು ಮುಂದೆ ಓದಿ.
ಸ್ಟಾರ್ ಸುವರ್ಣದಲ್ಲಿ ರಂಗೀನ್ ಹಬ್ಬ
ಹೋಳಿ ಹಬ್ಬ ಅಂದ್ರೆನೇ ಸಂಭ್ರಮ. ಇನ್ನು ಈ ಬಣ್ಣದ ಹಬ್ಬಕ್ಕೆ ಬಣ್ಣದ ಲೋಕದ ತಾರೆಯರು ಸೇರಿಕೊಂಡರೆ ಮುಗಿದೇ ಹೋಯ್ತು. ಆ ಹೋಳಿ ಹಬ್ಬಕ್ಕೆ ಒಂದು ರಂಗು, ಕಳೆ ಬಂದು ಬಿಡುತ್ತೆ. ಸ್ಟಾರ್ ಸುವರ್ಣ ಹೋಳಿ ಹಬ್ಬಕ್ಕೆ ಇಂತಹದ್ದೊಂದು ವೇದಿಕೆಯನ್ನು ರೆಡಿ ಮಾಡಿಕೊಂಡಿದೆ. ಸ್ಯಾಂಡಲ್‌ವುಡ್ ತಾರೆಯರು ಈ ಹೋಳಿ ಹಬ್ಬವನ್ನು ಮತ್ತಷ್ಟು ರಂಗಾಗಿಸಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಮೋಜು-ಮಸ್ತಿ, ತಮಾಷೆ ಎಲ್ಲವೂ ಇರುತ್ತೆ.

ಹೌದು, ಸ್ಟಾರ್ ಸುವರ್ಣ ಹೋಳಿ ಹಬ್ಬಕ್ಕೆ ಅದ್ಧೂರಿ ವೇದಿಕೆಯನ್ನು ರೆಡಿ ಮಾಡಿಟ್ಟಿಕೊಂಡಿದೆ. ಈ ರಂಗಿನ ಹಬ್ಬದ ಕಾರ್ಯಕ್ರಮದಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಧಾರಾವಾಹಿಯ ಕಲಾವಿದರು ಸೇರಿದಂತೆ ಸಿನಿಮಾ ತಾರೆಯರೂ ಕೂಡ ಭಾಗವಹಿಸಲಿದ್ದಾರೆ. ನಟಿ ಶುಭಾ ಪೂಂಜಾ, ರಾಗಿಣಿ ದ್ವಿವೇದಿ ಹಾಗೂ ಸಂಗೀತ ಗುರುಕಿರಣ್ ಭಾಗವಹಿಸಲಿದ್ದಾರೆ. ಕಿರುತೆರೆ ಕಲಾವಿದರೊಂದಿಗೆ ಸಿನಿಮಾ ತಾರೆಯರ ಹೋಳಿ ಆಟ ಕಿರುತೆರೆ ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡಲಿದೆ.
ಈ ರಂಗೀನ್ ಹಬ್ಬದ ಹೈಲೈಟ್ ಏನೇನು?
ನಟಿ ಶುಭಾ ಪೂಂಜಾ ಮತ್ತು ಪತಿ ಸುಮಂತ್ ಇದೇ ಮೊದಲ ಬಾರಿಗೆ ಮನರಂಜನಾ ವಾಹಿನಿಯಲ್ಲಿ ಜೊತೆಯಾಗಿ ಕಾಣಸಿಕೊಳ್ಳಲಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಶುಭಾ ಪೂಂಜಾ ಹಾಗೂ ಸುಮಂತ್ ಹೋಳಿ ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಇನ್ನೊಂದು ಕಡೆ ಸ್ಟಾರ್ ಸುವರ್ಣ ಜೊತೆ ರಾಗಿಣಿ ದ್ವಿವೇದಿ ಕೂಡ ಬಣ್ಣದ ಹಬ್ಬ ಆಚರಿಸಲಿದ್ದಾರೆ. ರಾಗಿಣಿ ಹಾಗೂ ಡ್ಯಾನ್ಸ್ ಮಾಸ್ಟರ್ ಮುರುಗ ಜಂಟಿಯಾಗಿ ಹೋಳಿ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಲಿದ್ದಾರೆ.
ಸ್ಯಾಂಡಲ್‌ವುಡ್‌ನ ಸಂಗೀತ ನಿರ್ದೇಶಕ ಗುರುಕಿರಣ್ ಸಿನಿಮಾ ಪಯಣದಲ್ಲಿ 25 ವರ್ಷಗಳ್ನು ಪೂರೈಸಿದ್ದು, ರಂಗಿನ ಹಬ್ಬದಲ್ಲಿ ಅವರ ಈ ಸಿನಿಮಾರಂಗದ ಮೈಲಿಗಲ್ಲನ್ನು ಸಂಭ್ರಮಿಸಲಿದ್ದಾರೆ. ಈ ರಂಗಿನ ಹಬ್ಬಕ್ಕೆ ಗುರುಕಿರಣ್ ಸಿನಿ ಜರ್ನಿ ವಿಶೇಷ ರಂಗು ತುಂಬಲಿದೆ. ಈಗಾಗಲೇ ಹೋಳಿ ಹಬ್ಬವನ್ನು ಆಚರಣೆ ಮಾಡಿದ್ದು, ಅದನ್ನು ಸ್ಟಾರ್ ಸುವರ್ಣ ಕ್ಯಾಮರಾದಲ್ಲಿ ಸೆರೆಹಿಡಿದಿದೆ. ಇದು ಮಾರ್ಚ್ 20ರಂದು ಸಂಜೆ ಆರು ಗಂಟೆಗೆ ಪ್ರಸಾರ ಆಗಲಿದೆ. ನಿರಂಜನ್ ದೇಶ್‌ಪಾಂಡೆ ಈ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ.


Click it and Unblock the Notifications











