ಕನ್ನಡ ಕಿರುತೆರೆಯ ಜನಪ್ರಿಯ ಕುಕಿಂಗ್ ಶೋ 'ಬೊಂಬಾಟ್ ಭೋಜನ' 6ನೇ ಸೀಸನ್ ಹೈಲೈಟ್ಸ್ ಏನು?

ಕನ್ನಡ ಕಿರುತೆರೆಯಲ್ಲಿ ನಿರಂತರವಾಗಿ ಜನಪ್ರಿಯತೆ ಗಳಿಸುತ್ತಾ ಪ್ರಸಾರ ಆಗುತ್ತಿರುವ ಜನಪ್ರಿಯ ಶೋ ಅಂದರೆ, ಅದು 'ಬೊಂಬಾಟ್ ಭೋಜನ'. ಕನ್ನಡ ಚಿತ್ರರಂಗದ ಜನಪ್ರಿಯ ನಟ ಸಿಹಿ ಕಹಿ ಚಂದ್ರು ನಡೆಸಿಕೊಡುವ ಈ ಅಡುಗೆ ಶೋ ಈಗ ಐದು ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿ, 6ನೇ ಸೀಸನ್‌ಗೆ ಕಾಲಿಡುವುದಕ್ಕೆ ಸಜ್ಜಾಗುತ್ತಿದೆ.

ಸಿಹಿಕಹಿ ಚಂದ್ರು ಅವರ 'ಬೊಂಬಾಟ್ ಭೋಜನ' ಕಿರುತೆರೆ ಇತಿಹಾಸದಲ್ಲಿಯೇ ದಾಖಲೆ ಸೃಷ್ಟಿಸಿದ ಶೋ. ಯಾಕಂದ್ರೆ, ಇಲ್ಲಿವರೆಗೂ 1500ಕ್ಕೂ ಹೆಚ್ಚು ಎಪಿಸೋಡ್‌ಗಳು ಪ್ರಸಾರ ಆಗಿದ್ದು, ಹೊಸ ಮೈಲಿಗಲ್ಲು ಸೃಷ್ಟಿಸಿದೆ. 5 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ ಇದೀಗ ಹೊಸತನದೊಂದಿಗೆ 6ನೇ ಸೀಸನ್ ಆರಂಭ ಆಗುತ್ತಿದ್ದು,ವೀಕ್ಷಕರ ಮುಂದೆ ಹೊಸ ರೆಸಿಪಿಗಳೊಂದಿಗೆ ಬರುವುದಕ್ಕೆ ಸಜ್ಜಾಗಿದೆ.

Sihi Kahi Chandru cooking show Bombat Bhojan season 6 highlights and other details

'ಬೊಂಬಾಟ್ ಭೋಜನ ಸೀಸನ್ 6' ರ ಪ್ರಮುಖ ಆಕರ್ಷಣೆ ಅಂದರೆ "ಜನರಿಂದ, ಜನರಿಗಾಗಿ, ಜನರಿಗೋಸ್ಕರ" ಅನ್ನೋ ಟ್ಯಾಗ್ ಲೈನ್. ಈ ಸೀಸನ್‌ನ ಪ್ರತಿಯೊಂದು ಎಪಿಸೋಡ್‌ನಲ್ಲೂ ಜನರನ್ನು ನೋಡುಬಹುದು. ಹಾಗೇ ಅಭಿಮಾನಿ ದೇವರುಗಳನ್ನು ಕಾಣಬಹುದು. 'ಬೊಂಬಾಟ್ ಭೋಜನ'ದ 6ನೇ ಸೀಸನ್ ಜನರಿಗೆ ಅರ್ಪಣೆ ಮಾಡುತ್ತಿದ್ದು, ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ಆಶೀರ್ವಾದದೊಂದಿಗೆ ಮೊದಲ ಸಂಚಿಕೆ ಅಲ್ಲಿಂದಲೇ ಆರಂಭವಾಗಲಿದೆ.

'ಬೊಂಬಾಟ್ ಭೋಜನ' 6ನೇ ಸೀಸನ್‌ ಹೈಲೈಟ್ಸ್

1. ವಿಶೇಷ ಭೋಜನ : ಸಿಹಿ ಕಹಿ ಚಂದ್ರು ಅವರು ರುಚಿ-ರುಚಿಯಾದ ಅಡುಗೆಯನ್ನು ಹೇಳಿಕೊಡುತ್ತಾರೆ. ಜೊತೆಗೆ ಪತ್ರ ಹಾಗೂ ಕರೆಯ ಮೂಲಕ ಅಭಿಮಾನಿಗಳಿಂದ ಬಂದಿರುವ ಅಡುಗೆ ಕೋರಿಕೆಯನ್ನು ಈಡೇರಿಸುತ್ತಾರೆ.
2. ಆರೋಗ್ಯ ಭೋಜನ : ಡಾ.ಗೌರಿ ಸುಬ್ರಮಣ್ಯ ರವರು ಜನರಿಗೆ ಉಪಯುಕ್ತವಾದ ಮನೆಮದ್ದನ್ನು ಇಲ್ಲಿ ತಿಳಿಸುತ್ತಾರೆ.
3. ಸ್ಪೆಷಲ್ ಭೋಜನ : ಬೇರೆ ಬೇರೆ ಜಿಲ್ಲೆಗಳಲ್ಲಿರುವ ಲೇಡೀಸ್ ಕ್ಲಬ್‌ಗಳಿಗೆ ಹೋಗಿ ಅಲ್ಲಿನ ಜನರೊಂದಿಗೆ ಬೆರೆತು, ಅಡುಗೆ ಮಾಂತ್ರಿಕ ಸಿಹಿ ಕಹಿ ಚಂದ್ರು ರವರು ವಿಭಿನ್ನ ಅಡುಗೆ ಡಿಶ್ ಗಳನ್ನು ತಯಾರಿಸುತ್ತಾರೆ.
4. ಹಿತ ಭೋಜನ : ಜನಸಾಮಾನ್ಯರು / ಸೆಲೆಬ್ರಿಟಿಗಳು ಬಂದು ವಿವಿಧ ರೀತಿಯ ಕೈರುಚಿಯನ್ನು ತಿಳಿಸುತ್ತಾರೆ.
5. ಭೂರಿ ಭೋಜನ : ಕರ್ನಾಟಕದಾದ್ಯಂತ ಸಂಚಾರ ಮಾಡಿ, ಹೋಟೆಲ್‌ಗಳಿಗೆ ಧಾವಿಸಿ ಅಲ್ಲಿನ ಜನಪ್ರಿಯ ತಿನಿಸುಗಳನ್ನು ಸವಿದು ಜನರಿಗೆ ಮಾಹಿತಿ ನೀಡುತ್ತಾರೆ. ಜೊತೆಗೆ ಅಲ್ಲಿನ ಜನರ ಅಭಿಪ್ರಾಯವನ್ನು ಸಂಗ್ರಹಿಸುತ್ತಾರೆ.
6. ಸಹ ಭೋಜನ : ಒಬ್ಬರ ಮನೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟು, ಅವರು ತಯಾರಿಸಿರುವ ಅಡುಗೆಯ ರುಚಿಯನ್ನು ಸವಿದು, ಕೈತುತ್ತನ್ನು ನೀಡಿ ಅವರೊಂದಿಗೆ ಮಾತುಕತೆ ನಡೆಸಿ, ಜೊತೆಗೆ ಸ್ಥಳದಲ್ಲೇ ಫೋಟೋ ತೆಗೆದು ಸರ್ಟಿಫಿಕೇಟ್ ನೀಡಲಾಗುತ್ತೆ.

Sihi Kahi Chandru cooking show Bombat Bhojan season 6 highlights and other details

7. ಗೃಹ ಭೋಜನ : ಸಿಹಿ ಕಹಿ ಚಂದ್ರು ಅವರು ಜಿಲ್ಲೆಯಾದ್ಯಂತ ಸಂಚರಿಸುತ್ತಾ, ವೀಕ್ಷಕರ ಮನೆಗಳಿಗೆ ಹೋಗಿ ತಮ್ಮ ಕೈಯಾರೆ ಮಾಡಿದ ರುಚಿಯಾದ ಅಡುಗೆ ಉಣಬಡಿಸೋದು ಹಾಗೂ ತಾವು ತೆರಳಿದ ಮನೆಯಲ್ಲಿ ದೇವಿ ಸದಾ ನೆಲೆಸಲೆಂದು ಮನೆ ಮಂದಿಗೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯದಿಂದ ದೈವಾನುಗ್ರಹಗೊಂಡ ದೇವಿಯ ವಿಗ್ರಹವನ್ನು ಉಡುಗೊರೆಯಾಗಿ ನೀಡಲಿದ್ದಾರೆ.
8. ಬಾಲ ಭೋಜನ : ಇದು ಪ್ರತಿ ಶುಕ್ರವಾರದಂದು ಮಕ್ಕಳಿಗಾಗಿ ಮಾಡಿರೋ ಹೊಸ ವಿಭಾಗ. ಮಕ್ಕಳ ಜೊತೆ ಪೋಷಕರು ಭಾಗಿಯಾಗಿ ರುಚಿ-ರುಚಿಯಾದ ಅಡುಗೆ ಹೇಳಿ ಕೊಡಲಾಗುತ್ತದೆ.
ಸಾಮಾನ್ಯ ಜನರಿಗೆ ಸೆಲೆಬ್ರಿಟಿ ಅನ್ನೋ ಅನುಭವ ಕೊಡಲು 'ಸಿಹಿ-ಸಹಿ' ಎಂಬ ಬೋರ್ಡ್ ಇರಿಸಲಾಗಿದೆ. ಇದೆಲ್ಲದರ ಜೊತೆಗೆ ಎಂದಿನಂತೆ ಪ್ರತೀ ಶನಿವಾರ ಮಧ್ಯಾಹ್ನ 12 ಗಂಟೆಗೆ ಮಾಂಸ ಪ್ರಿಯರಿಗಾಗಿ ಆದರ್ಶ್ ತಟಪತಿ ಸಾರಥ್ಯದ 'ಬೊಂಬಾಟ್ ಬಾಡೂಟ' ಕಾರ್ಯಕ್ರಮ ಪ್ರಸಾರವಾಗಲಿದೆ. ಇನ್ನು ಅಡುಗೆ ಮಾಂತ್ರಿಕ ಸಿಹಿ ಕಹಿ ಚಂದ್ರು ರವರ 'ಬೊಂಬಾಟ್ ಭೋಜನ ಸೀಸನ್ 6' ಇದೇ ಅಕ್ಟೋಬರ್ 27 ರಿಂದ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಲಿದೆ.

More from Filmibeat

English summary
Sihi Kahi Chandru cooking show Bombat Bhojan season 6 highlights and other details.
Read more about: sihi kahi chandru tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X