ನವರಾತ್ರಿಯಲ್ಲಿ ನವ ದೇವಿಯವರಿಗೆ ಸುವರ್ಣ ಸಂಕಲ್ಪ; ಮೊದಲ ದಿನ 'ಸ್ನೇಹದ ಕಡಲಲ್ಲಿ' ನಟಿಯಿಂದ ಶೈಲ ಪುತ್ರಿ ಪೂಜೆ
ಹಿಂದೂಗಳು ನವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ. ಇಡೀ ದೇಶದಲ್ಲಿ ನವರಾತ್ರಿಯನ್ನು ಅಲ್ಲಿನ ಸಂಪ್ರದಾಯದಂತೆ ಆಚರಣೆ ಮಾಡಲಾಗುತ್ತೆ. ಈ ವರ್ಷ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ. ನಿನ್ನೆ (ಸೆಪ್ಟೆಂಬರ್ 22) ನವರಾತ್ರಿಯ ಮೊದಲ ದಿನ ಹೀಗಾಗಿ ಎಲ್ಲೆಡೆಯೂ ಸಂಭ್ರಮ ಮನೆ ಮಾಡಿದೆ.
ಈ ಹಬ್ಬದಂದು ದೇವಿಯ ನವ ಅವತಾರಗಳಿಗೆ ಪೂಜೆಯನ್ನು ಸಲ್ಲಿಸಲಾಗುತ್ತಿದೆ. ಈ ಸಂಬಂಧ ಕನ್ನಡದ ಮನರಂಜನಾ ವಾಹಿನಿ ಸ್ಟಾರ್ ಸುವರ್ಣ ಕೂಡ ತನ್ನ ವೀಕ್ಷಕರಿಗಾಗಿ ನವರಾತ್ರಿ ಹಬ್ಬವನ್ನು ಆಚರಣೆ ಮಾಡುತ್ತಿದೆ. ನಾಡಹಬ್ಬ ದಸರಾ ನಾಡಿನೆಲ್ಲೆಡೆ ಸುಪ್ರಸಿದ್ಧವಾಗಿರೋ ಹಬ್ಬ. ಈ ಹಬ್ಬದ ಸಂಭ್ರಮದಲ್ಲಿ ವಾಹಿನಿ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಸುವರ್ಣ ಸಂಕಲ್ಪದ' ಗುರೂಜಿಗಳೊಂದಿಗೆ ಒಂಬತ್ತು ದೇವಿಯ ದೇವಸ್ಥಾನಗಳಿಗೆ ಭೇಟಿ ನೀಡಲಿದೆ. ಈ ವೇಳೆ ಸುವರ್ಣದ ಧಾರಾವಾಹಿಯ ಕಲಾವಿದರೊಂದಿಗೆ ದೇವಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವಿ ಪಾರಾಯಣವನ್ನು ಮಾಡಲಾಗುತ್ತಿದೆ. ನವರಾತ್ರಿಯ ಮೊದಲ ದಿನವಾದ ನಿನ್ನೆ ಬೆಂಗಳೂರಿನ ನಂದಿನಿ ಲೇಔಟ್‌ನ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಶೈಲ ಪುತ್ರಿ ಪೂಜೆಯನ್ನು ನೆರೆವೇರಿಸಲಾಗಿದೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಸ್ನೇಹದ ಕಡಲಲ್ಲಿ' ಧಾರಾವಾಹಿಯ ನಟಿ ನಿಸರ್ಗ ಈ ಪೂಜೆಯಲ್ಲಿ ಭಾಗಿಯಾಗಿದ್ದರು.
ಶೈಲ ಪುತ್ರಿ ಪೂಜೆಯ ಹಿನ್ನೆಲೆ ಏನು?
ನೀವು ಶೈಲ ಪುತ್ರಿಯ ಕಥೆ ಕೇಳಿದ್ದೀರಾ? ನವರಾತ್ರಿಯ ಮೊದಲನೇ ದಿನ ಪೂಜಿಸ್ಪಡುವ ದೇವಿ ಪಾರ್ವತಿಯ ಶೈಲಪುತ್ರಿ ಅವತಾರದ ಕಥೆಯಿದು. ದಕ್ಷಪ್ರಜಾಪತಿಯ ಮಗಳಾಗಿದ್ದ ಸತಿ ದೇವಿ, ತಂದೆಯ ಇಷ್ಟದ ವಿರುದ್ಧ ಶಿವನನ್ನ ಪ್ರೀತಿಸಿ ಮದ್ವೆ ಆಗುತ್ತಾಳೆ. ಹೀಗಾಗಿ ದಕ್ಷ ಬೇಕೆಂದೆ ಯಾಗಕ್ಕೆ ಸತಿ ದೇವಿಗೆ ಆಹ್ವಾನ ನೀಡಿರುವುದಿಲ್ಲ. ಆದರೂ ಯಾಗಕ್ಕೆ ಸತಿ ದೇವಿ ಹೋದ ಸಂದರ್ಭದಲ್ಲಿ ದಕ್ಷ ಶಿವನಿಗೆ ಅವಮಾನ ಮಾಡುತ್ತಾನೆ. ಈ ಕಾರಣಕ್ಕೆ ಬೇಸರಗೊಂಡ ಸತಿದೇವಿ ಯಜ್ಞ ಕುಂಡಕ್ಕೆ ಹಾರಿ ಪ್ರಾಣ ತ್ಯಾಗ ಮಾಡುತ್ತಾಳೆ.

ಇತ್ತ ಹೆಂಡತಿಯನ್ನು ಕಳೆದುಕೊಂಡ ಶಿವ ಅದೇ ನೋವಿನಲ್ಲಿ ತಪ್ಪಸ್ಸಿಗೆ ಕೂರುತ್ತಾನೆ. ಇದೇ ಸಮಯದಲ್ಲಿ ತಾರಕಾಸುರ ಎನ್ನುವ ರಾಕ್ಷಸನು ತನ್ನ ಸಾವು ಶಿವನ ಮಗನಿಂದಲೇ ಆಗ್ಬೇಕು ಎನ್ನುವ ವರವನ್ನು ಬ್ರಹ್ಮನಿಂದ ಪಡೆದುಕೊಳ್ಳುತ್ತಾನೆ. ಇಲ್ಲಿಂದ ದೇವತೆಗಳಿಗೆ ತೊಂದರೆ ಕೊಡೋದಕ್ಕೆ ಶುರು ಮಾಡುತ್ತಾನೆ. ಆಗ ಸತಿ ದೇವಿ ಮತ್ತೆ ಹುಟ್ಟಿ ಬರಬೇಕು ಅಂತ ದೇವತೆಗಳು ಪ್ರಾರ್ಥನೆ ಮಾಡುತ್ತಾರೆ. ಮತ್ತೊಂದು ಕಡೆ ಪರ್ವತ ರಾಜ ದಂಪತಿಗಳು ತಮಗೆ ಮಗು ಬೇಕು ಅಂತ ದೇವಿ ಮೊರೆ ಹೋಗ್ತಾರೆ. ಆಗ ಸತಿ ದೇವಿ ಪರ್ವತ ರಾಜನ ಮಗಳಾಗಿ ಹುಟ್ಟಿ ಬರುವ ಪಾರ್ವತಿಗೆ, ಶೈಲ ಪುತ್ರಿ ಅನ್ನೋ ಹೆಸರು ಬರುತ್ತೆ.
ನವರಾತ್ರಿಯ 9 ದಿನಗಳು ಒಂದೊಂದು ಬಣ್ಣದ ವಸ್ತ್ರವನ್ನು ಧರಿಸಿದ ಶ್ರೇಷ್ಠ ಎನ್ನುವ ನಂಬಿಕೆಯಿದೆ. ಮೊದಲನೇ ದಿನ ಕೇಸರಿ ಬಣ್ಣ ಶ್ರೇಷ್ಠ. ಇದು ಸಂತೋಷ, ಸಂತೃಪ್ತಿ ಹಾಗೂ ಉತ್ಸಾಹದ ಸೂಚನೆಯಾಗಿದೆ. ನವರಾತ್ರಿಯ ಮೊದಲ ದಿನ ಪಾಡ್ಯ. ಈ ಕಾರಣಕ್ಕೆ ಮೊದಲ ದಿನವೇ ಕಳಶ ಪ್ರತಿಷ್ಠಾಪಿಸಿ ನವರಾತ್ರಿ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.
ನವರಾತ್ರಿಯ ಮೊದಲ ದಿನ ಶೈಲಪುತ್ರಿಗೆ ಪೂಜೆಯನ್ನು ಮಾಡುವುದರ ಮೂಲಕ ಆರಂಭ ಆಗುತ್ತೆ. ದೇವಿ ಶೈಲಪುತ್ರಿಗೆ ಕಿತ್ತಳೆ ಬಣ್ಣವೆಂದರೆ ಬಲು ಪ್ರೀತಿ. ಈ ಕಾರಣಕ್ಕೆ ಮೊದಲ ದಿನ ಕೇಸರಿ ಬಣ್ಣದ ಬಟ್ಟೆಯನ್ನು ತೊಡುವುದು ಶ್ರೇಷ್ಠ ಎಂಬುದು ಜನರ ನಂಬಿಕೆ. ಕೇಸರಿ ಬಣ್ಣವು ಮನಸ್ಸಿಗೆ ಶಕ್ತಿ ಹಾಗೂ ಸಂತೋಷದ ಭಾವನೆಯನ್ನು ನೀಡುತ್ತದೆ. ಹಾಗೇ ಮನುಷ್ಯರಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಟ್ಟಿನಲ್ಲಿ ಸ್ಟಾರ್ ಸುವರ್ಣ ನವರಾತ್ರಿಯಲ್ಲಿ 9 ದೇವಿ ಪೂಜೆ ಮಾಡುವುದಕ್ಕೆ ಮುಂದಾಗಿ


Click it and Unblock the Notifications











