ಯುವತಿಯ ಖಾಸಗಿ ಫೋಟೋ, ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ; 'ಬೃಂದಾವನ' ನಟನ ವಿರುದ್ಧ FIR
ಕನ್ನಡದ ಧಾರಾವಾಹಿ 'ಬೃಂದಾವನ'ದಲ್ಲಿ ನಾಯಕನಾಗಿ ನಟಿಸಿದ್ದ ವರುಣ್ ಆರಾಧ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರಾವಾಹಿಯಲ್ಲಿ ನಟಿಸುವುದಕ್ಕೂ ಮುನ್ನ ವರುಣ್ ಆರಾಧ್ಯ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದರು. ಇವರೊಂದಿಗೆ ಮತ್ತೊಬ್ಬ ಯುವತಿ ಕೂಡ ಅಷ್ಟೇ ಜನಪ್ರಿಯ ಗಳಿಸಿದ್ದರು ಇವರಿಬ್ಬರೂ ಜೊತೆಗೂಡಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದರು. ಆದ್ರೀಗ ಆ ಯುವತಿ 'ಬೃಂದಾವನ'ದ ನಟ ವರುಣ್ ಆರಾಧ್ಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
'ಬೃಂದಾವನ' ಸೀರಿಯಲ್‌ನಲ್ಲಿ ನಟಿಸುವುದಕ್ಕೂ ಮುನ್ನ ವರುಣ್ ಆರಾಧ್ಯ ಹಾಗೂ ದೂರು ಕೊಟ್ಟ ಯುವತಿ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಇನ್ನೇನು ಧಾರಾವಾಹಿಯಲ್ಲಿ ನಟಿಸುವುದಕ್ಕೆ ಕೆಲವು ತಿಂಗಳ ಹಿಂದಷ್ಟೇ ಆ ಯುವತಿ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು. ಇಬ್ಬರ ಸಂಬಂಧ ಅನ್ಯೋನ್ಯವಾಗಿದ್ದ ವರುಣ್ ಆರಾಧ್ಯ ತನ್ನ ಪ್ರೇಯಸಿಯ ಖಾಸಗಿ ಫೋಟೋಗಳನ್ನು ತೆಗೆದುಕೊಂಡಿದ್ದು, ಈಗ ಅದನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.

ಮಾಜಿ ಪ್ರೇಯಸಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಪಶ್ಚಿಮ ವಿಭಾಗದ CEN ಠಾಣೆಯಲ್ಲಿ ದೂರನ್ನು ದಾಖಲಿಸಿಕೊಳ್ಳಲಾಗಿದೆ. ನಟ ಹಾಗೂ ಸೋಶಿಯಲ್ ಮಿಡಿಯಾ ಇನ್ಫ್ಯೂಯೆನ್ಸರ್ ವಿರುದ್ಧ ಐಟಿ ಕಾಯ್ದೆ ಅನ್ವಯ ದಾಖಲು ಮಾಡಿಕೊಳ್ಳಲಾಗಿದೆ. ಬ್ರೇಕಪ್ ಮಾಡಿಕೊಂಡ ಬಳಿಕ ಮತ್ತೊಂದು ಯುವತಿಯನ್ನು ಪ್ರೀತಿಸುತ್ತಿದ್ದರೂ, ಮಾಜಿ ಪ್ರೇಯಸಿಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ದೂರು ಕೊಟ್ಟ ಯುವತಿ ಸೋಶಿಯಲ್ ಮೀಡಿಯಾದಲ್ಲಿ ಪರಿಚಯ ಆಗಿದ್ದರು. ಐದು ವರ್ಷಗಳ ಹಿಂದಿನ ಪರಿಚಯ ಪ್ರೀತಿಗೂ ತಿರುಗಿತ್ತು. ಆ ವೇಳೆ ಆ ಯುವತಿ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಮಾಡುತ್ತಿದ್ದರು. ಇಬ್ಬರು ಹೆಚ್ಚು ಕಡಿಮೆ ನಾಲ್ಕು ವರ್ಷಗಳ ಕಾಲ ಪ್ರೀತಿಯಲ್ಲಿ ಮಾಡಿದ್ದ ಜೋಡಿ ದಿಢೀರನೇ ಬ್ರೇಕಪ್ ಮಾಡಿಕೊಂಡಿದ್ದಾಗಿ ಹೇಳಿದ್ದರು. ಇಬ್ಬರ ಸಂಬಂಧ ಚೆನ್ನಾಗಿದ್ದ ಸಮಯದಲ್ಲಿ ಈ ಜೋಡಿ ತೆಗೆದುಕೊಂಡಿದ್ದ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ವರುಣ್ ಆರಾಧ್ಯ ಬ್ಲ್ಯಾಕ್ಮೇಲ್ ಮಾಡಿದ್ದಾನೆಂದು ಆ ಯುವತಿ ಆರೋಪ ಮಾಡಿದ್ದಾರೆ.

ಈ ಯುವತಿ ವರುಣ್ ಆರಾಧ್ಯ ಮೊಬೈಲ್ ವೀಕ್ಷಿಸುತ್ತಿದ್ದಾಗ ಶಾಕ್ ಆಗಿತ್ತು. ವರುಣ್ ಫೋನ್‌ನಲ್ಲಿ ಮತ್ತೊಬ್ಬ ಯುವತಿಯೊಂದಿಗೆ ಇದ್ದ ಖಾಸಗಿ ಫೋಟೋಗಳು ಪತ್ತೆ ಆಗಿದ್ದವು. ಆ ಬಗ್ಗೆ ಪ್ರಶ್ನೆ ಮಾಡಿದಾಗ ಇಬ್ಬರ ನಡುವೆ ವೈಮನಸ್ಸು ಮೂಡಿ, ಬ್ರೇಕಪ್ ಆಗಿತ್ತು. ಆ ವೇಳೆ ಬೇರೆ ಯುವತಿಯೊಂದು ಸಂಪರ್ಕದಲ್ಲಿರುವ ಮಾಹಿತಿಯನ್ನು ಬಹಿರಂಗ ಮಾಡದಂತೆ ಬೆದರಿಕೆ ಕೂಡ ಹಾಕಿರುವ ಆರೋಪ ಈ ನಟನೆ ಮೇಲಿದೆ.
ಒಂದು ವೇಳೆ ಬಾಯ್ಬಿಟ್ಟರೆ ತನ್ನ ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಮಾಜಿ ಪ್ರಿಯತಮೆಗೆ ಬೆದರಿಕೆ ಹಾಕಿರುವ ಆರೋಪ ವರುಣ್ ಆರಾಧ್ಯ ಮೇಲಿದೆ. ಮಾಜಿ ಪ್ರಿಯತಮೆ ಮೊಬೈಲ್‌ಗೆ ಖಾಸಗಿ ಫೋಟೋ ಒಂದನ್ನು ಕಳುಹಿಸಿ, ತನ್ನ ಬಳಿ ಯುವತಿಯ ಖಾಸಗಿ ಹಾಗೂ ವಿಡಿಯೋಗಳು ಇದ್ದು, ನೀನು ತನ್ನ ವಿಚಾರವನ್ನು ಬಾಯಿಬಿಟ್ಟರೆ, ನಿನ್ನ ಖಾಸಗಿ ವಿಡಿಯೋವನ್ನು ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಸದ್ಯಕ್ಕೀಗ ಬೃಂದಾವನದ ನಟ ವರುಣ್ ಆರಾಧ್ಯ ವಿರುದ್ಧ ಪೊಲೀಸರು FIR ಅನ್ನು ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ವರುಣ್ ಆರಾಧ್ಯಗೆ ದೊಡ್ಡ ಸಂಕಷ್ಟ ಎದುರಾಗಿದೆ. ಸಿನಿಮಾ ಹಾಗೂ ಕಿರುತೆರೆಯಲ್ಲಿ ಇಂತಹ ಹಲವು ಪ್ರಕರಣಗಳು ಪ್ರತಿ ದಿನ ಏನಾದರೂ ಒಂದು ಹೊರಬೀಳುತ್ತಲೇ ಇರುತ್ತವೆ. ಆದ್ರೀಗ ಕನ್ನಡ ಕಿರುತೆರೆ ನಟ ಬೆದರಿಕೆ ಹಾಕುವುದಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.


Click it and Unblock the Notifications











