'ಲಕ್ಮಿ ನಿವಾಸ' ಧಾರಾವಾಹಿ ಒಂದು ಕೋಟಿ ವಂಚನೆ ಆರೋಪ; ದೂರು ದಾಖಲಿಸಿದ ಸೃಜನ್ ಲೋಕೇಶ್
ಸ್ಯಾಂಡಲ್‌ವುಡ್ ನಟ ಸತ್ಯ ಹಾಗೂ ಅವರ ಪತ್ನಿ ನಿರ್ಮಲಾ ಮತ್ತೊಮ್ಮೆ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ಧಾರಾವಾಹಿ ನಿರ್ಮಾಣಕ್ಕೆ ಪಡೆದುಕೊಂಡಿದ್ದ ಒಂದು ಸಾಲವನ್ನು ಹಿಂತಿರುಗಿಸದ ಹಿನ್ನೆಲೆಯಲ್ಲಿ ದಂಪತಿಯ ವಿರುದ್ಧ ದೂರನ್ನು ದಾಖಲಿಸಲಾಗಿದೆ. ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಠಾಣೆಯಲ್ಲಿ ಸೃಜನ್ ಲೋಕೇಶ್ ಒಡೆತನದ ಲೋಕೇಶ್ ಪ್ರೊಡಕ್ಷನ್ಸ್ ಸಂಸ್ಥೆಯ ಆಗ್ನಿ ಯು ಸಾಗರ್ ಎಂಬುವವರು ದೂರನ್ನು ದಾಖಲಿಸಿದ್ದಾರೆ.
ಕನ್ನಡದ ನಂಬರ್ ಒನ್ ಮನರಂಜನಾ ವಾಹಿನಿ ಜೀ ಕನ್ನಡದಲ್ಲಿ 'ಲಕ್ಷ್ಮೀ ನಿವಾಸ' ಎನ್ನುವ ಜನಪ್ರಿಯ ಧಾರಾವಾಹಿ ಪ್ರಸಾರ ಆಗುತ್ತಿದೆ. ಆದರೆ, ಕೆಲವು ದಿನಗಳ ಹಿಂದಷ್ಟೇ ಈ ಸೀರಿಯಲ್ ಮರು ಪ್ರಸಾರ ಕಂಡಿತ್ತು. ಕನ್ನಡದ ಪ್ರಮುಖ ಮನರಂಜನಾ ವಾಹಿನಿಯಲ್ಲಿ ಸಾಮಾನ್ಯವಾಗಿ ಇಂತಹ ಘಟನೆಗಳು ನಡೆಯುವುದಿಲ್ಲ. ಆಗಲೇ ಏನೋ ಸರಿಯಿಲ್ಲ ಅನ್ನೋದು ಗೊತ್ತಾಗಿತ್ತು.

ಆ ವೇಳೆನೇ 'ಲಕ್ಷ್ಮಿ ನಿವಾಸ' ಧಾರಾವಾಹಿಯ ನಿರ್ಮಾಪಕರಿಂದ ಏನೋ ತೊಂದರೆಯಾಗಿದೆ ಅನ್ನೋದು ಗೊತ್ತಾಗಿ ಹೋಗಿತ್ತು. ಆ ಸಮಯದಲ್ಲಿ ಈ ಧಾರಾವಾಹಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಈಗ ಇದೇ ಧಾರಾವಾಹಿಯ ನಿರ್ಮಾಪಕರಾಗಿರುವ ನಟ ಸತ್ಯ ಹಾಗೂ ನಿರ್ಮಲಾ ಅವರ ಮೇಲೆ ಒಂದು ಕೋಟಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ 'ಲಕ್ಮಿ ನಿವಾಸ' ನಿರ್ಮಾಪಕರು ಈ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದೇಕೆ? ಸೃಜನ್ ಲೋಕೇಶ್‌ಗೂ ಈ ನಿರ್ಮಾಪಕರಿಗೂ ಏನು ಸಂಬಂಧ? ತಿಳಿಯುವುದಕ್ಕೆ ಮುಂದೆ ಓದಿ.
'ಲಕ್ಷ್ಮಿ ನಿವಾಸ' ಧಾರಾವಾಹಿ ನಿರ್ಮಾಣ ಮಾಡಿದ ನಟ ಸತ್ಯ ಹಾಗೂ ನಿರ್ಮಲಾ ನಷ್ಟ ಅನುಭವಿಸಿದ್ದರು. ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ಪ್ರಮುಖ ಪಾತ್ರಧಾರಿಗಳಿಗೆ ಸಂಭಾವನೆ ನೀಡಿರಲಿಲ್ಲ. ಹೀಗಾಗಿ ಒಬ್ಬೊಬ್ಬರೇ ಈ ಧಾರಾವಾಹಿಯಿಂದ ಹಿಂದೆ ಸರಿದಿದ್ದರು. ಆರಂಭದಿಂದ ಇದ್ದವರು ಒಬ್ಬೊಬ್ಬರೇ ಸೀರಿಯಲ್ ಅನ್ನು ಬಿಟ್ಟು ಹೋಗಿದ್ದಕ್ಕೆ ಹಣ ಕಾಸಿನ ಸಮಸ್ಯೆಯೇ ಕಾರಣವೆಂದು ಹೇಳಾಗಿತ್ತು. ಈಗ ಇವರ ಮೇಲೆ ದೂರು ನೀಡಿದ ಬಳಿಕ ಅದೂ ಸಾಬೀತಾಗಿದೆ.

ನಟ ಸತ್ಯ ಹಾಗೂ ಅವರ ಪತ್ನಿ ನಿರ್ಮಲಾ ಅವರ ವಿರುದ್ಧ ಹಣ ಪಡೆದು ಹಿಂತಿರುಗಿಸದೇ ವಂಚನೆ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಸೃಜನ್ ಲೋಕೇಶ್ ಪ್ರೊಡಕ್ಷನ್ಸ್‌ನ ಜೆಪಿಎ ಹೋಲ್ಡರ್ ಆಗಿರುವ ಅಗ್ನಿ ಯು ಸಾಗರ್ ಎಂಬುವವರು ದೂರನ್ನು ದಾಖಲಿಸಿದ್ದಾರೆ. ಇವರಿಂದ 'ಲಕ್ಷ್ಮಿ ನಿವಾಸ' ಧಾರಾವಾಹಿ ನಿರ್ಮಾಣ ಮಾಡುವುದಕ್ಕೆ ಒಂದು ಕೋಟಿ ರೂಪಾಯಿ ಹಣವನ್ನು ಇವರು ಸಾಲವಾಗಿ ಪಡೆದಿದ್ದರು. 2023ರಲ್ಲಿ ಸತ್ಯ ದಂಪತಿ ಅಗ್ರಿಮೆಂಟ್ ಅನ್ನೂ ಮಾಡಿಕೊಂಡಿದ್ದರು. ಈ ಅಗ್ರಿಮೆಂಟ್ ಪ್ರಕಾರ 2024, ಏಪ್ರಿಲ್ ತಿಂಗಳಿನಿಂದ ಪ್ರತಿ ತಿಂಗಳು ₹5 ಲಕ್ಷದಂತೆ ಹಿಂತಿರುಗಿಸಬೇಕಾಗಿತ್ತು.
ಈ ಅಗ್ರಿಮೆಂಟ್ ಮಾಡಿಕೊಂಡು ಒಂದು ಕೋಟಿ ರೂಪಾಯಿ ಪಡೆದ ದಿನದಿಂದಲೂ ಹಣವನ್ನು ಹಿಂತಿರುಗಿಸಿಲ್ಲ. ಹೀಗಾಗಿ ಅಗ್ರಿಮೆಂಟ್‌ನಲ್ಲಿರುವ ಷರತ್ತುಗಳನ್ನು ಮುರಿದಿದ್ದಾರೆ. ಸೃಜನ್ ಲೋಕೇಶ್ ಅವರಿಂದ ಸಾಲದ ರೂಪದಲ್ಲಿ ಹಣ ಪಡೆದು, ಅದನ್ನು ಹಿಂತಿರುಗಿಸದೆ ವಂಚಿಸಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿದೆ. ಹೀಗಾಗಿ ಸತ್ಯ ಪಂದತಿ ಕಷ್ಟಕ್ಕೆ ಸಿಕ್ಕಿಕೊಂಡಿದೆ ಎನ್ನಲಾಗಿದೆ.
ಸತ್ಯ ಹಾಗೂ ನಿರ್ಮಲಾ ಇಬ್ಬರೂ ನಟನೆಯ ಹಿನ್ನಲೆಯಿಂದ ಬಂದವರಾಗಿದ್ದರಿಂದ ಧಾರಾವಾಹಿಯ ನಿರ್ಮಾಣ ಮಾಡುವುದರಲ್ಲಿ ಎಡವಿದ್ದಾರೆ. ಇದು ಟೆಲಿವಿಷನ್ ಅಸೋಶಿಯೇಷನ್ ಗಮನಲ್ಲೀ ಬಂದಿತ್ತು. ಆ ನಂತ್ರ ಸಮಸ್ಯೆಯನ್ನು ಬಗೆಹರಿಸಲಾಗಿತ್ತು.ಯಾವಾಗ ಒಂದು ದಿನ ಧಾರಾವಾಹಿ ಯಾವಾಗ ಪ್ರಸಾರ ಆಗಲಿಲ್ಲವೋ ಆಗೇ ನಿರ್ಮಾಪಕಿ ಗೇಟ್‌ಪಾಸ್ ಕೊಡಲಾಗಿತ್ತು. ಬಳಿಕ ಆ ಜಾಗಕ್ಕೆ ಮತ್ತೊಬ್ಬ ನಿರ್ಮಾಪಕರನ್ನು ಕರೆಸಿ ಅವಕಾಶ ನೀಡಲಾಗಿದೆ.


Click it and Unblock the Notifications











