ಕಿರುತೆರೆ ವೀಕ್ಷಕರಿಗಾಗಿ ಪೌರಾಣಿಕ ಧಾರಾವಾಹಿ 'ಶ್ರೀ ದೇವೀ ಮಹಾತ್ಮೆ'; ಎಲ್ಲಿ? ಯಾವಾಗ?

ಕನ್ನಡ ಕಿರುತೆರೆಯಲ್ಲಿ ಕೇವಲ ಸಾಂಸಾರಿಕ ಧಾರಾವಾಹಿಗಳೇ ಹೆಚ್ಚಾಗಿವೆ. ಇವುಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಪೌರಾಣಿಕ ಧಾರಾವಾಹಿಗಳು ಕೂಡ ಪ್ರಸಾರ ಆಗುತ್ತವೆ. ಪೌರಾಣಿಕ ಕಥೆಗಳನ್ನು ತೆರೆಮೇಲೆ ನೋಡಲು ಬಯಸುವ ವೀಕ್ಷಕರಿಗಾಗಿ ಹೊಸ ಧಾರಾವಾಹಿಯನ್ನು ಸ್ಟಾರ್ ಸುವರ್ಣ ಪ್ರಸಾರ ಮಾಡುತ್ತಿದೆ.

ಕನ್ನಡ ಕಿರುತೆರೆಯಲ್ಲಿ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ವೀಕ್ಷಕರಿಗೆ ನೀಡಲು ಸ್ಟಾರ್ ಸುವರ್ಣ ಮತ್ತೆ ಮುಂದೆ ಬಂದಿದೆ. ಈಗಾಗಲೇ ಈ ವಾಹಿನಿಯಲ್ಲಿ 'ಗುರು ರಾಘವೇಂದ್ರ ವೈಭವ', 'ಹರ ಹರ ಮಹಾದೇವ', 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಹಾಗೂ 'ಎಡೆಯೂರು ಶ್ರೀ ಸಿದ್ದಲಿಂಗೇಶ್ವರ'ದಂತಹ ಧಾರಾವಾಹಿಗಳು ಪ್ರಸಾರ ಆಗಿವೆ. ಈಗ ಆ ಸಾಲಿಗೆ ಮತ್ತೊಂದು ಧಾರಾವಾಹಿ ಸೇರ್ಪಡೆಯಾಗಿದೆ. ಅದುವೇ 'ಶ್ರೀದೇವಿ ಮಹಾತ್ಮೆ'.

new mythological serial Sri Devi Mahatme

ಇದೀಗ ಜಗವನು ಕಾಯುವ ಕರುಣೆಯ ತಾಯಿ 'ಪಾರ್ವತಿ'ಯ ಕಥೆಯನ್ನು ಕಿರುತೆರೆ ವೀಕ್ಷಕರ ಮುಂದಿಡುತ್ತಿದೆ. 'ಶ್ರೀ ದೇವೀ ಮಹಾತ್ಮೆ' ಪ್ರಸಾರಕ್ಕೆ ಈಗಾಗಲೇ ಸ್ಟಾರ್ ಸುವರ್ಣ ಸಜ್ಜಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಂಜೆ 7 ಗಂಟೆಗೆ ಪ್ರಸಾರ ಆಗಲಿದೆ. ಅಂದ್ಹಾಗೆ, ಪುರಾಣಗಳ ಪ್ರಕಾರ ಸತಿಯು ಅತ್ಯಂತ ಸುಂದರಿ. ತಪಸ್ವಿ ಶಿವನಿಗೆ ಮನಸೋಲುವ ಸತಿ, ಮುಂದೆ ಪಾರ್ವತಿಯಾಗಿ ಹೇಗೆ ಮರು ಜನ್ಮ ತಾಳುತ್ತಾಳೆ? ಮಹಾಕಾಳಿಯ ರುದ್ರಾವತಾರವನ್ನು ಏಕೆ ಧರಿಸುತ್ತಾಳೆ ? ಎಂಬುದನ್ನು ವಿವರಿಸುತ್ತಾ ಪಾರ್ವತಿಯ ಮಹಿಮೆಯನ್ನು, ಆಕೆಯ ಪವಾಡಗಳನ್ನು ಎಳೆ ಎಳೆಯಾಗಿ ಮನಸ್ಸಿಗೆ ಮುಟ್ಟುವಂತೆ ತಿಳಿಸುವುದಕ್ಕೆ 'ಶ್ರೀ ದೇವೀ ಮಹಾತ್ಮೆ'ಯ ತಂಡ ಮುಂದಾಗಿದೆ.

ಇನ್ನು ಈ ಧಾರಾವಾಹಿಯು ಅದ್ದೂರಿಯಾಗಿ ಮೂಡಿ ಬರುತ್ತಿದೆ. 'ಶ್ರೀದೇವೀ ಮಹಾತ್ಮೆ'ಗಾಗಿ ಅಮೋಘ ಸೆಟ್‌ಗಳು ಹಾಗೂ ಅತ್ಯದ್ಭುತ ಗ್ರಾಫಿಕ್ಸ್‌ ತಂತ್ರಜ್ಞಾನಗಳನ್ನು ಬಳಸಿಕೊಂಡು ಶೂಟಿಂಗ್ ಮಾಡಲಾಗುತ್ತಿದೆ. ಈ ಧಾರಾವಾಹಿಯ ಪ್ರೋಮೊ ಈಗಾಗಲೇ ಪ್ರಸಾರವಾಗುತ್ತಿದ್ದು, ವೀಕ್ಷಕರು ಮನಸೋತಿದ್ದಾರೆ. ಈ ಧಾರಾವಾಹಿಯನ್ನು ನೋಡುವುದಕ್ಕೆ ಕಾತರತೆಯಿಂದ ಕಾಯುತ್ತಿದ್ದಾರೆ.

new mythological serial Sri Devi Mahatme

'ಶ್ರೀದೇವೀ ಮಹಾತ್ಮೆ' ಧಾರಾವಾಹಿಯಲ್ಲಿ ಶಿವನ ಪಾತ್ರವನ್ನು ಅರ್ಜುನ್ ರಮೇಶ್, ಪಾರ್ವತಿಯ ಪಾತ್ರದಲ್ಲಿ ಜೀವಿತಾ ವಸಿಷ್ಠ ನಟಿಸುತ್ತಿದ್ದಾರೆ. ಜೊತೆಗೆ ಈ ಪೌರಾಣಿಕ ಧಾರಾವಾಹಿಯು ಅತ್ಯುತ್ತಮ ತಾರಾಗಣವನ್ನು ಹೊಂದಿದ್ದು, ನಂದಿ ಮೂವೀಸ್ ನಿರ್ಮಾಣ ಸಂಸ್ಥೆಯು ಈ ಧಾರಾವಾಹಿಯನ್ನು ನಿರ್ಮಿಸುತ್ತಿದೆ. ಪಾರ್ವತಿ ಜಗನ್ಮಾತೆಯಾದ ಕಥೆ 'ಶ್ರೀ ದೇವೀ ಮಹಾತ್ಮೆ' ಜುಲೈ 1 ರಿಂದ ಸೋಮ-ಶನಿವಾರ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

More from Filmibeat

English summary
Star Suvarna a new mythological serial Sri Devi Mahatme is getting a good response
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X