Bombat Bhojana: ಗದಗದಲ್ಲಿ ಬೊಂಬಾಟ್ ಭೋಜನಾ, ಜೊತೆಗೊಂದಿಷ್ಟು ಮನರಂಜನೆ

ವೀಕೆಂಡ್‌ಗಾಗಿ ಮನರಂಜನೆ ನೀಡುವ ಚಾನೆಲ್‌ಗಳು ಏನಾದರೂ ಒಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇವೆ. ಈ ಬಾರಿ ಕೂಡ ಸ್ಟಾರ್ ಸುವರ್ಣ ವಿನೂತನವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಗದಗದ ಮಹಿಳೆಯರಿಗಾಗಿಯೇ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

ಸಿಹಿ ಕಹಿ ಚಂದ್ರು ನಡೆಸಿಕೊಡುವ ಫೇಮಸ್ ಅಡುಗೆ ಕಾರ್ಯಕ್ರಮ 'ಬೊಂಬಾಟ್ ಭೋಜನಾ'. ಹೀಗಾಗಿ ಸ್ಟಾರ್ ಸುವರ್ಣ ವಿನೂತನ ಪ್ರಯತ್ನಕ್ಕೆ ಕೈ ಹಾಕಿತ್ತು. ಗದಗದ ಮಹಿಳೆಯರಿಗೆ ಒಂದು ವಿಶಿಷ್ಟವಾದ ಟಾಸ್ಕ್ ನೀಡಿತ್ತು. ಅದರಂತೆ ಮಹಿಳೆಯರು ವಿಶಿಷ್ಟವಾದ ಅಡುಗೆಯನ್ನು ಮಾಡಿ ಇಂದು ಮಧ್ಯಾಹ್ನ 2 ಗಂಟೆಯೊಳಗೆ ಒಪ್ಪಿಸುವಂತೆ ಕೇಳಿತ್ತು. ಈ ಮೂಲಕ ಸಿಹಿ ಕಹಿ ಚಂದ್ರು ಆ ಅಡುಗೆಯನ್ನು ಟೇಸ್ಟ್ ಮಾಡಿ ವೇದಿಕೆಗೆ ಆಹ್ವಾನ ನೀಡಲಿದ್ದಾರೆ ಎಂದಿದ್ದರು.

ಉತ್ತಮ ಅಡುಗೆ ಮಾಡಿದ ಮಹಿಳೆಯರಿಗೆ ಸನ್ಮಾನ

ಇಂದು ಸಂಜೆ 6 ಗಂಟೆಗೆ ಗದಗದ ಸ್ಟೇಷನ್ ರಸ್ತೆಯಲ್ಲಿರುವ ಮುನ್ಸಿಪಾಲ್ ಕಾಲೇಜ್ ಗ್ರೌಂಡ್ಸ್‌ನಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಲ್ಲಿ ಸ್ಟಾರ್ ಸುವರ್ಣದ ಸುಪ್ರಸಿದ್ದ ಸೀರಿಯಲ್‌ ನಟ-ನಟಿಯರು ಭಾಗವಹಿಸಲಿದ್ದಾರೆ. ಈ ವೇಳೆ ಬೊಂಬಾಟ್ ಆಗಿ ಅಡುಗೆ ಮಾಡಿದ ಗದಗದ ಮಹಿಳೆಯನ್ನು ವೇದಿಕೆಗೆ ಆಹ್ವಾನ ನೀಡಲಾಗುತ್ತಿದೆ.

Star Suvarna And Bombat Bhojana Sihikahi Chandru Went To Gadag For Special Event

ಹೌದು.. ಇಂದು ಮಧ್ಯಾಹ್ನ 2 ಗಂಟೆಯೊಳಗೆ ಗದಗದ ಮಹಿಳೆಯರು ತಾವೇ ಕೈಯ್ಯಾರೆ ಮಾಡಿದ ವಿಶೇಷವಾದ ಅಡುಗೆಯನ್ನು ಸ್ಟಾರ್ ಸುವರ್ಣ ತಂಡಕ್ಕೆ ನೀಡಲಾಗಿತ್ತು. ಇವರಲ್ಲಿ ರುಚಿಕರವಾಗಿ ಅಡುಗೆ ಮಾಡಿದವರನ್ನು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ವೇದಿಕೆಗೆ ಕರೆದು ಚರ್ಚೆ ಮಾಡಲಿದ್ದಾರೆ.

ಬೊಂಬಾಟ್ ಭೋಜನಾ ಜೊತೆ ಜೇನುಗೂಡು ತಂಡ

ಬೊಂಬಾಟ್ ಭೋಜನಾದ ಸಿಹಿ ಕಹಿ ಚಂದ್ರು ವೇದಿಕೆ ಉಪಸ್ಥಿತಿ ಇರುತ್ತೆ. ಇದರೊಂದಿಗೆ 'ಕಾಮಿಡಿ ಗ್ಯಾಂಗ್' ತಂಡ ಕೂಡ ವೇದಿಕೆ ಮೇಲೆ ಇರುತ್ತೆ. ಇಂದು ಸಂಜೆಯಿಂದ ಹಾಸ್ಯ ಮನರಂಜನಾ ಕಾರ್ಯಕ್ರಮ 'ಕಾಮಿಡಿ ಗ್ಯಾಂಗ್' ತಂಡ ಗದಗದ ಜನರಿಗೆ ಸಖತ್ ಮನರಂಜನೆ ನೀಡಲಿದೆ. ಈ ಕಾರ್ಯಕ್ರಮದ ಜಡ್ಜ್‌ಗಳಾಗಿ ಮುಖ್ಯಮಂತ್ರಿ ಚಂದ್ರು, ಶ್ರುತಿ ಹರಿಹರನ್, ಶಿವು ಕೆಆರ್ ಪೇಟೆ, ಕುರಿ ಪ್ರತಾಪ್ ಕಾಣಿಸಿಕೊಳ್ಳಲಿದ್ದಾರೆ.

Star Suvarna And Bombat Bhojana Sihikahi Chandru Went To Gadag For Special Event

'ಕಾಮಿಡಿ ಗ್ಯಾಂಗ್' ಜೊತೆ ಸ್ಟಾರ್ ಸುವರ್ಣದ ಧಾರಾವಾಹಿ 'ಜೇನುಗೂಡು' ತಂಡ ಕೂಡ ಭಾಗವಹಿಸಲಿದೆ. ಗದಗದ ಜನರಿಗೆ ಸಖತ್ ಮನರಂಜನೆ ನೀಡಲು ವೇದಿಕೆ ಸಜ್ಜಾಗಿದೆ. ಒಂದ್ಕಡೆ ಬೊಂಬಾಟ್ ಭೋಜನಾದ ಸಿಹಿ ಕಹಿ ಚಂದ್ರು ಬೊಂಬಾಟ್ ಮಾತು. ಇನ್ನೊಂದು ಕಡೆ ಕಾಮಿಡಿ ಗ್ಯಾಂಗ್ ಹಾಗೂ ಜೇನುಗೂಡು ಧಾರಾವಾಹಿಯಿಂದ ಸಖತ್ ಮನರಂಜನೆ ಸಿಗಲಿದೆ.

More from Filmibeat

English summary
Star Suvarna And Bombat Bhojana Sihikahi Chandru Went To Gadag For Special Event. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X