ಸ್ಟಾರ್ ಸುವರ್ಣದಲ್ಲಿ 'ಸುವರ್ಣ ಸಂಭ್ರಮ': ಜೂನ್ 4ಕ್ಕೆ ಸಖತ್ ಮನರಂಜನೆ
ಕಿರುತೆರೆ ವೀಕ್ಷಕರಿಗೆ ಈ ವೀಕೆಂಡ್‌ನಲ್ಲಿ ಸಖತ್ ಮನರಂಜನೆ ಸಿಗುತ್ತಿದೆ. ಸ್ಟಾರ್ ಸುವರ್ಣ ತನ್ನ ವೀಕ್ಷಕರಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತಿದೆ. ವಾರಾಂತ್ಯದಲ್ಲಿ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಮುಂದಾಗಿದೆ.
ಒಂದೇ ವೇದಿಕೆಯಲ್ಲಿ ಎರಡು ಸೂಪರ್ ಹಿಟ್ ಧಾರಾವಾಹಿಗಳ ಸಮ್ಮಿಲನ ಆಗಿದೆ. ಸ್ಟಾರ್ ಸುವರ್ಣದ ಜನಪ್ರಿಯ ಧಾರಾವಾಹಿಗಳಾದ 'ಕಥೆಯೊಂದು ಶುರುವಾಗಿದೆ' ಹಾಗೂ 'ನಮ್ಮ ಲಚ್ಚಿ' ಧಾರಾವಾಹಿ ತಂಡ ವೇದಿಕೆ ಮೇಲೆ ಪೈಪೋಟಿಗೆ ಇಳಿದಿದ್ದಾರೆ. ಹೀಗಾಗಿ ಮನರಂಜನೆ ಸಿಗೋದು ಪಕ್ಕಾ ಗ್ಯಾರಂಟಿ.

ಅಂದ್ಹಾಗೆ ಈ ಕಾರ್ಯಕ್ರಮದ ಹೆಸರು 'ಸುವರ್ಣ ಸಂಭ್ರಮ'. ಇನ್ನು ಈ ಕಾರ್ಯಕ್ರಮವನ್ನು ನಿರೂಪಣೆಯ ಜವಾಬ್ದಾರಿಯನ್ನು ನಿರೂಪಕಿ ಅನುಪಮ ಗೌಡ ಹೊತ್ತುಕೊಂಡಿದ್ದಾರೆ.
'ಕಥೆಯೊಂದು ಶುರುವಾಗಿದೆ' ಹಾಗೂ 'ನಮ್ಮ ಲಚ್ಚಿ' ಈಗಾಗಲೇ ನೂರಕ್ಕೂ ಅಧಿಕ ಸಂಚಿಕೆಗಳನ್ನು ಪೂರೈಸಿದೆ. ಹೀಗಾಗಿ ಎರಡು ಧಾರಾವಾಹಿಗಳ ಕಲಾವಿದರೆಲ್ಲಾ ಒಂದಾಗಿ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದ್ದಾರೆ. ಕೃತಿ ಹಾಗೂ ಯುವರಾಜ್ ಜೋಡಿಯ ಡಾನ್ಸ್‌ಗೆ ವೀಕ್ಷಕರು ಮನಸೋಲೋದಂತೂ ಪಕ್ಕ. ಇನ್ನು ತಾಯಿಯನ್ನು ಕಳೆದುಕೊಂಡಿರುವ ಲಚ್ಚಿಗೆ ಈ ವೇದಿಕೆಯಲ್ಲಿ ತಾಯಿಯ ಅಕ್ಕರೆ ಸಿಗುತ್ತಿದೆ. ಪುಷ್ಪ, ಶಾಂತಲಾ ಹಾಗೂ ಮಾತಂಗಿ ಒಂದಾಗಿ ಹಾಕಿರುವ ಸ್ಟೆಪ್ಸ್ ಅಂತೂ ಅತ್ಯದ್ಭುತ.

ಸ್ಟಾರ್ ಸುವರ್ಣದ ಅಚ್ಚುಮೆಚ್ಚಿನ 20 ಕಲಾವಿದರು ಒಂದೇ ವೇದಿಕೆಯಲ್ಲಿ ಮೋಜು ಮಸ್ತಿ ಮಾಡುತ್ತಾ ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಕಲಾವಿದರ ಮಾತುಗಳನ್ನು ಕೇಳಬಹುದು. ಅಲ್ಲದೆ ಕಲಾವಿದರ ಅಮ್ಮಂದಿರು ಈ ವೇದಿಕೆಯಲ್ಲಿ ಮೊದಲ ಬಾರಿಗೆ ತಾಯಂದಿರು ಕಾಣಿಸಿಕೊಂಡಿದ್ದಾರೆ.
ತಾಯಿಯ ಪ್ರೀತಿ ವಾತ್ಸಲ್ಯದ ಅಪ್ಪುಗೆಗೆ ಭಾವುಕರಾದ ನಟ-ನಟಿಯರು. ಫಸ್ಟ್ ಟೈಮ್ ಇನ್ ದಿ ಹಿಸ್ಟರಿ ವಿಜಯ್ ಸೂರ್ಯ ಹಾಗು ನೇಹಾ ಗೌಡ ಮೈನವಿರೇಳಿಸುವ ಸುಂದರ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಸ್ತ್ ಮಜಾ ಕೊಡುವ ಆಟಗಳನ್ನು ಆಡಿ ನಕ್ಕು ನಗಿಸಲಿದ್ದಾರೆ ನಿಮ್ಮ ನೆಚ್ಚಿನ ತಾರೆಗಳು. ಸ್ಟಾರ್ ಸುವರ್ಣ ವಾಹಿನಿಯ 'ಸುವರ್ಣ ಸಂಭ್ರಮ' ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ಇನ್ನಷ್ಟು ಮನರಂಜನೆ ಸಿಗೋದು ಖಚಿತ.
ಮನರಂಜನೆಯ ಹಬ್ಬದೂಟ ಬಡಿಸಲು 'ನಮ್ಮ ಲಚ್ಚಿ' ಜೊತೆ 'ಕಥೆಯೊಂದು ಶುರುವಾಗಿದೆ' ಇದೇ ಜೂನ್ 4 ರಂದು ಸಂಜೆ 6 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿದೆ.


Click it and Unblock the Notifications











