'ಅರ್ಧಾಂಗಿ'ಗೆ ರಾಯಬಾರಿ ಪ್ರಿಯಾಂಕ ಉಪೇಂದ್ರ

ಕಿರುತೆರೆಯಲ್ಲಿ ಹೊಸ ಹೊಸ ಸಿರಿಯಲ್‌ಗಳು ಆರಂಭ ಆಗಿವೆ. ಕಿರುತೆರೆ ವೀಕ್ಷಕರ ಸಂಖ್ಯೆ ಹೆಚ್ಚಾಗಿದ್ದರಿಂದ ಧಾರಾವಾಹಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಕಾರಣಕ್ಕೆ ನಿನೂತನ ಧಾರಾವಾಹಿಗಳನ್ನು ಪ್ಲ್ಯಾನ್ ಮಾಡುತ್ತಿವೆ. ಇಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕ ಉಪೇಂದ್ರ ಕಿರುತೆರೆಗೂ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಧಾರಾವಾಹಿಗೆ ಹೊಸ ಕಳೆ ಬಂದಂತಾಗಿದೆ.

ಸ್ಟಾರ್ ಸುವರ್ಣ ಹೊಸ ಧಾರಾವಾಹಿಯೊಂದನ್ನು ಲಾಂಚ್ ಮಾಡುತ್ತಿದೆ. ಅದುವೇ 'ಅರ್ಧಾಂಗಿ' ಈಗಾಗಲೇ ಪ್ರಿಯಾಂಕ ಉಪೇಂದ್ರ ಅವರನ್ನಿಟ್ಟುಕೊಂಡು ಸ್ಟಾರ್ ಸುವರ್ಣ ಪ್ರಚಾರವನ್ನೂ ಮಾಡುತ್ತಿದೆ. ಈಗಾಗಲೇ ಪ್ರೋಮೊಗಳು ರಿಲೀಸ್ ಆಗಿದ್ದು, ಕಿರುತೆರೆ ವೀಕ್ಷಕರು 'ಅರ್ಧಾಂಗಿ' ಧಾರಾವಾಹಿಯನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

'ಅರ್ಧಾಂಗಿ'ಗೆ ರಾಯಬಾರಿ ಪ್ರಿಯಾಂಕ ಉಪೇಂದ್ರ

ಪ್ರಿಯಾಂಕ ಉಪೇಂದ್ರ ಇಲ್ಲಿವರೆಗೂ ಸಿನಿಮಾಗಳಲ್ಲಿಯೇ ಬ್ಯುಸಿಯಾಗಿದ್ದರು. ವಿವಾಹದ ಬಳಿಕವೂ ಮನೆಯ ಜೊತೆಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಉಪ್ಪಿ ಅರ್ಧಾಂಗಿಯಾಗಿ ಕುಟುಂಬ ಹಾಗೂ ವೃತ್ತಿ ಎರಡನ್ನೂ ನಿಭಾಯಿಸುತ್ತಿದ್ದಾರೆ. ಈಗ ಆ ಅರ್ಧಾಂಗಿಯ ಕಾನ್ಸೆಪ್ಟ್ ಪ್ರೇಕ್ಷಕರ ಮುಂದಿಡಲು ಸ್ಟಾರ್ ಸುವರ್ಣ ಮುಂದಾಗಿದೆ. ಮೇ 23 ರಿಂದ ಆರಂಭವಾಗಲಿದ್ದು, ಸಂಜೆ 7 ಗಂಟೆಯಿಂದ ಈ ಧಾರಾವಾಹಿ ಪ್ರಸಾರವಾಗಲಿದೆ. ಪ್ರಿಯಾಂಕ ಉಪೇಂದ್ರ ಈ ಧಾರಾವಾಹಿಯ ರಾಯಭಾರಿಯಾಗಿದ್ದಾರೆ.

Star Suvarna launching new serial Ardhangi Priyanka Upendra as Ambassador

ಅಷ್ಟಕ್ಕೂ ಈ ಧಾರಾವಾಹಿಗೆ ರಾಯಬಾರಿಯಾಗಲು ಪ್ರಿಯಾಂಕ ಉಪೇಂದ್ರ ಒಪ್ಪಿದ್ದು ಯಾಕೆ ಅನ್ನುವುದನ್ನೂ ರಿವೀಲ್ ಮಾಡಿದ್ದಾರೆ. "ನನ್ನ ಸ್ನೇಹಿತ ಈ ಧಾರಾವಾಹಿಯ ಬಗ್ಗೆ ಮಾಹಿತಿ ನೀಡಿದರು. ಕಥೆ ಕೇಳಿದ್ಮೇಲೆ ಇಷ್ಟ ಆಯ್ತು. ಈ ಧಾರಾವಾಹಿ 'ಅರ್ಧಾಂಗಿ'ಗೆ ರಾಯಭಾರಿಯಾಗಲು ಒಪ್ಪಿಕೊಂಡೆ. ಒಳ್ಳೆಯ ಕೌಟುಂಬಿಕ ಧಾರಾವಾಹಿ" ಎನ್ನುತ್ತಾರೆ ಪ್ರಿಯಾಂಕ ಉಪೇಂದ್ರ.

Star Suvarna launching new serial Ardhangi Priyanka Upendra as Ambassador

ಅರ್ಧಾಂಗಿಯ ಕತೆಯೇನು?

'ಅರ್ಧಾಂಗಿ'ಯಾಗಿ ಕಾಣಿಸಿಕೊಳ್ಳುತ್ತಿರುವ ಅದಿತಿ ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ಮಲತಾಯಿಯ ಆಶ್ರಯದಲ್ಲಿ ಬೆಳೆಯಬೇಕಾಗುತ್ತೆ. ಮಲತಾಯಿ‌ಯಾದರೂ ಮಕ್ಕಳನ್ನು ಸ್ವಂತ ತಂಗಿ-ತಮ್ಮನಂತೆಯೇ ನೋಡಿಕೊಳ್ಳುತ್ತಾಳೆ.‌ ಈ ಸಂದರ್ಭದಲ್ಲಿ ಆಕೆ ಒಂದು ತ್ಯಾಗ ಮಾಡಬೇಕಾದ ಸಂದರ್ಭ ಎದುರಾಗುತ್ತೆ.‌ ಇಪ್ಪತ್ತೆಂಟು ವರ್ಷವಾಗಿದ್ದರೂ, ಎಂಟು ವರ್ಷದ ಮಗುವಿನಷ್ಟೇ ಬುದ್ಧಿಯಿರುವ ದಿಗಂತ್ ಎಂಬ ಹುಡುಗನನ್ನು ಮದುವೆಯಾಗಬೇಕಾಗುತ್ತೆ. ಆ ಬಳಿಕ 'ಅರ್ಧಾಂಗಿ' ಬಾಳಲ್ಲಿ ಏನಾಗುತ್ತೆ ಎಂಬುದೇ ಧಾರಾವಾಹಿಯ ಕಥೆ.

Star Suvarna launching new serial Ardhangi Priyanka Upendra as Ambassador

ಪೃಥ್ವಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ದಿಗಂತ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಅರುಣ ಚೇತನ ಶಾಲೆಯಲ್ಲಿ ವಿಶೇಷ ಮಕ್ಕಳೊಂದಿಗೆ ಇದ್ದು ಬಂದಿದ್ದಾರೆ. ಇನ್ನು 'ಅರ್ಧಾಂಗಿ' ಅದಿತಿ ಪಾತ್ರದಲ್ಲಿ ಅಂಜನಾ ದೇಶಪಾಂಡೆ ನಟಿಸುತ್ತಿದ್ದಾರೆ. ಕೆಳ ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿ ಅದಿತಿ ನಟಿಸಿದ್ದಾರೆ.

More from Filmibeat

English summary
Star Suvarna launching new serial Ardhangi Priyanka Upendra as Ambassador, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X