ಕಿರುತೆರೆಗೆ 'ಜೈ ಲಲಿತಾ' ಎಂಟ್ರಿ ಕೊಡುವ ಸಮಯ ಬಂದೇ ಬಿಡ್ತು; ವೀಕ್ಷಕರಿಗೆ ಮತ್ತೊಂದು ಹೊಚ್ಚ ಹೊಸ ಸೀರಿಯಲ್

2025 ಮುಗಿಯುತ್ತಿದ್ದಂತೆ ಕನ್ನಡ ಕಿರುತೆರೆಯಲ್ಲಿ ಹೊಚ್ಚ ಹೊಸ ಧಾರಾವಾಹಿಗಳು ಆರಂಭ ಆಗುತ್ತಿವೆ. ಕನ್ನಡದ ಜನಪ್ರಿಯ ವಾಹಿನಿಗಳು ಹೊಸ ವರ್ಷಕ್ಕೆ ಈಗಿನಿಂದಲೇ ಅಣಿಯಾಗುತ್ತಿವೆ. ತಮ್ಮ ವಿಭಿನ್ನ ಕಥೆಗಳ ಮೂಲಕ ವೀಕ್ಷಕರನ್ನು ತನ್ನ ಸೆಳೆಯುವ ಪ್ರಯತ್ನ ಮಾಡುತ್ತಲೇ ಇದೆ. ಇದೂವರೆಗೂ ಮನಮುಟ್ಟುವ ಕಥೆಗಳನ್ನು ವೀಕ್ಷಕರ ಮುಂದೆ ಇಡುತ್ತಲೇ ಬಂದಿರುವ ಸ್ಟಾರ್ ಸುವರ್ಣ ವಾಹಿನಿ ಮತ್ತೊಂದು ಹೊಸ ಧಾರಾವಾಹಿಯನ್ನು ಪ್ರಸಾರ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದೆ. ವಿಭಿನ್ನ ಕಥಾ ಹಂದರದ ಆ ಹೊಸ ಕಥೆಯೇ 'ಜೈ ಲಲಿತಾ'

ಈಗಾಗಲೇ ಸ್ಟಾರ್ ಸುವರ್ಣ 'ಜೈ ಲಲಿತಾ' ಧಾರಾವಾಹಿಯ ಬಗ್ಗೆ ಕೆಲವು ವಿಷಯಗಳನ್ನು ಮುಟ್ಟಿಸುವ ಪ್ರಯತ್ನ ಮಾಡಿದೆ. ಪ್ರೋಮೊಗಳಿಗೆ ವೀಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಈ ಧಾರಾವಾಹಿಯ ಸ್ಟಾರ್‌ಕಾಸ್ಟ್ ಕೂಡ ಇಂಪ್ರೆಸಿವ್ ಆಗಿದೆ. ಇನ್ನು ಈಗಾಗಲೇ ತಂಡವೇ ಮಾಹಿತಿ ನೀಡಿರುವಂತೆ ಕಥೆ ಕೂಡ ಅಷ್ಟೇ ವಿಭಿನ್ನವಾಗಿ ಇರುತ್ತೆ. 'ಜೈ ಲಲಿತಾ' ಧಾರಾವಾಹಿಯ ಕಥೆ, ಸ್ಟಾರ್‌ಕಾಸ್ಟ್ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿ.

Star Suvarna new serial Jai Lalitha telecast date and star cast details

'ಜೈ ಲಲಿತಾ' ಧಾರಾವಾಹಿ ಕಥೆ ಕಡೆ ಬರೋದಾರೇ, ಭೈರವಪುರ ಎಂಬ ಸುಂದರ ಹಳ್ಳಿಯಲ್ಲಿ ಸಂಪ್ರದಾಯಸ್ಥ ಮನೆತನದ ಹುಡುಗಿಯ ಕಥೆ. ಕಥಾ ನಾಯಕಿ ಲಲಿತಾ. ಬಿ.ಎ ಪಾಸ್ ಮಾಡಬೇಕು ಅನ್ನೋದು ಇವಳ ಅತೀ ದೊಡ್ಡ ಕನಸು. ಹಾಗಂತ ಬಿಎ ಮುಗಿಸಿದರೆ, ಒಳ್ಳೆಯ ಕೆಲಸ ಸಿಗತ್ತೆ ಅಂತಲ್ಲ.. ಮದ್ವೆ ಆಗೋದಕ್ಕೆ ಒಳ್ಳೇ ಹುಡುಗ ಸಿಗ್ತಾನೆ ಅನ್ನೋ ಆಸೆ. ಇಲ್ಲಿ ನಾಯಕಿಯ ಮಹದಾಸೆಯಿಂದ ಆರಂಭ ಆಗುವ ಕಥೆ ಮುಂದೆ ಹೇಗೆಲ್ಲ ತಿರುವು ಪಡೆದುಕೊಳ್ಳುತ್ತೆ ಅನ್ನೋದೇ ಕಥೆ.

ಇನ್ನು 'ಜೈ ಲಲಿತಾ' ಧಾರಾವಾಹಿಯ ನಾಯಕಿ ರಾಕಿಂಗ್ ಸ್ಟಾರ್ ಯಶ್ ಅಪ್ಪಟ ಅಭಿಮಾನಿ ಅನ್ನೋದು ವಿಶೇಷ. ಹೌದು, ಲಲಿತಾಗೆ ಸಿನಿಮಾ ಅಂದ್ರೆನೂ ಪಂಚ ಪ್ರಾಣ. ಹಾಗೇ ರಾಕಿಂಗ್ ಸ್ಟಾರ್ ಯಶ್ ಅಂದ್ರೆನೂ ಅಷ್ಟೇ ಪ್ರಾಣ. ಇನ್ನು ಥಿಯೇಟರ್‌ಗೆ ಒಳ್ಳೆಯ ಸಿನಿಮಾ ಬಂತು ಅಂದರೆ, ಅದನ್ನು ನೋಡದೇ ಬಿಡೋದಿಲ್ಲ. ಒಂಥರಾ ಪಕ್ಕಾ ಡ್ರಾಮಾ ಕ್ವೀನ್, ಶುದ್ಧ ತರ್ಲೆ.. ಈಕೆ ಊರಿನವರ ಮನೆಮಗಳು, ಜೊತೆಗೆ ತಂದೆಯ ಮುದ್ದಿನ ಮಗಳು.

ಇನ್ನು ನಾಯಕನದ್ದು ಬೇರೆಯದ್ದೇ ಕಥೆ ಇದೆ. ಇದೇ ಭೈರವಪುರ ಊರಿನ ರಾಜಕಾರಣಿ ದೇವರಾಜ್ ಚಕ್ರವರ್ತಿಯ ಎರಡನೇ ಮಗ ಜೈರಾಜ್ ಕಥಾ ನಾಯಕ. ದೇವರಾಜ್‌ಗೆ ತಾನು ಹೇಳಿದಂತೆ ತನ್ನ ಮಗ ಕೇಳಬೇಕು ಅನ್ನೋ ಹಠ. ಆದರೆ, ಜೈರಾಜ್‌ನದ್ದು ತದ್ವಿರುದ್ದ ಮನಸ್ಥಿತಿ. ತಂದೆ ಏನೇ ಹೇಳಿದರೂ, ಜೈರಾಜ್ ಮಾತ್ರ ತನಗನಿಸಿದನ್ನೇ ಮಾಡೋ ಶೂರ. ಅಚಾನಕ್ ಆಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಲಲಿತಾ ಪಂಚಾಯತ್ ಚುನಾವಣೆಯಲ್ಲಿ ಊರಿನವರ ಮತಗೆದ್ದು ಅಧ್ಯಕ್ಷೆನೂ ಆಗುತ್ತಾಳೆ.

Star Suvarna new serial Jai Lalitha telecast date and star cast details

ಲಲಿತಾ ರಾಜಕೀಯ ಪ್ರವೇಶ ಮಾಡುತ್ತಿದ್ದಂತೆ ದೇವರಾಜ್ ಚಕ್ರವರ್ತಿ ಹುನ್ನಾರ ಹೂಡುತ್ತಾನೆ. ತನ್ನ ಮೋಸದ ಜಾಲದಲ್ಲಿ ಬೀಳಿಸಿ, ಲಲಿತಾಳನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳುತ್ತಾನೆ. ಆದರೆ, ಈ ಮದುವೆ ಜೈರಾಜ್‌ಗೆ ಇಷ್ಟವಿಲ್ಲ ಎಂಬ ವಿಷಯ ತಿಳಿಯದೆ ಲಲಿತಾ ಮದುವೆ ಆಗುತ್ತಾಳೆ. ಈ ವಿಷಯ ತಿಳಿದಾಗ ಆಕೆಯೆ ಮುಂದಿನ ನಡೆ ಏನಾಗುತ್ತೆ? ಮದುವೆಯೇ ಆಕೆಯ ಕನಸಾಗಿತ್ತು. ಈಗ ಇಷ್ಟವಿಲ್ಲದ ಮದುವೆಯಾಗಿ ಜೀವನವನ್ನೇ ಮುಳ್ಳಾಗಿಸಿಕೊಳ್ಳುತ್ತಾಳಾ? ಇಡೀ ಊರನ್ನೇ ಗೆದ್ದವಳು ಅತ್ತೆಯ ಮನಸ್ಸನ್ನು ಗೆದ್ದು ಚಕ್ರವರ್ತಿ ಮನೆತನದ ಸೊಸೆಯಾಗುತ್ತಾಳಾ? ಮುಂದಿನ ದಿನಗಳಲ್ಲಿ ಲಲಿತಾಳ ಮುಗ್ದತೆಗೆ ಕರಗಿ ಮನಸೋಲ್ತಾನ ಜೈರಾಜ್? ಎಂಬುದನ್ನು ವೀಕ್ಷಕರು ಮುಂದಿನ ದಿನಗಳಲ್ಲಿ ತಿಳಿದುಕೊಳ್ಳಲಿದ್ದಾರೆ.

'ಜೈ ಲಲಿತಾ' ಧಾರಾವಾಹಿಯನ್ನು ನಿರ್ಮಾಪಕ ಶ್ರೀನಿಧಿ ಡಿ.ಎಸ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ 'ಜೈ ಲಲಿತಾ' ಎಂಬ ಧಾರಾವಾಹಿ ನಿರ್ಮಾಣ ಆಗುತ್ತಿದ್ದು, ದರ್ಶಿತ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ನಾಯಕ ಜೈರಾಜ್ ಪಾತ್ರದಲ್ಲಿ ನಟ ಶಿವಾಂಕ್ ಹಾಗೂ ನಾಯಕಿ ಲಲಿತಾ ಪಾತ್ರದಲ್ಲಿ ನಟಿ ಮನಸ್ವಿನಿ ನಟಿಸುತ್ತಿದ್ದಾರೆ. ಇವರೊಂದಿಗೆ ಸುನಿಲ್ ಪುರಾಣಿಕ್, ಸ್ಪಂದನಾ, ರೋಹಿತ್, ನಿರಂಜನ್, ರಶ್ಮಿತಾ ಹಾಗೂ ಶ್ವೇತಾ ರಾವ್ ಸೇರಿದಂತೆ ಜನಪ್ರಿಯ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಆಕಸ್ಮಿಕವಾಗಿ ಅಧಿಕಾರ ಪಡೆದು, ಧೈರ್ಯದಿಂದ ಮುನ್ನಡೆಯೋ ಮುದ್ದು ಬಜಾರಿಯ ಕಥೆ 'ಜೈ ಲಲಿತಾ' ಧಾರಾವಾಹಿ ಡಿಸೆಂಬರ್ 8 ರಿಂದ ಪ್ರತಿದಿನ ರಾತ್ರಿ 9.30 ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಇದಕ್ಕೆ ವೀಕ್ಷಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ನೋಡಬೇಕಿದೆ.

More from Filmibeat

English summary
Star Suvarna new serial Jai Lalitha telecast date and star cast details.
Read more about: serial tv show star suvarna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X