Star Suvarna: 'ಬೆಟ್ಟದ ಹೂ' ಹಾಗೂ 'ಮುದ್ದುಮಣಿಗಳು' ಧಾರಾವಾಹಿಯಲ್ಲಿ ಕಲ್ಯಾಣೋತ್ಸವ

ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ಎರಡು ಧಾರಾವಾಹಿ 'ಬೆಟ್ಟದ ಹೂ' ಹಾಗೂ 'ಮುದ್ದುಮಣಿಗಳು'. ಈ ಎರಡೂ ಧಾರಾವಾಹಿಗಳು ಈಗ ರೋಚಕ ಟ್ವಿಸ್ಟ್ ಅನ್ನು ಪಡೆದುಕೊಂಡಿದೆ. ವಾರ ಫೂರ್ತಿ ಎರಡೂ ಧಾರಾವಾಹಿಗಳಲ್ಲಿ ಒಂದಲ್ಲಒಂದು ಟ್ವಿಸ್ಟ್ ಸಿಗಲಿದೆ. ಹೀಗಾಗಿ ಈ ಎರಡೂ ಧಾರಾವಾಹಿಗಳನ್ನು ಫಾಲೋ ಮಾಡುತ್ತಿರುವ ವೀಕ್ಷಕರಿಗೆ ಈ ವಾರ ಭರ್ಜರಿ ಮನರಂಜನೆ ಸಿಗುವುದು ಗ್ಯಾರಂಟಿ.

'ಮುದ್ದುಮಣಿಗಳು' ಮತ್ತು 'ಬೆಟ್ಟದ ಹೂ' ಧಾರಾವಾಹಿಗಳು ಈ ವಾರ ಕುತೂಹಲಕಾರಿ ತಿರುವು ಪಡೆಯಲಿವೆ. ವಿಶೇಷವೆಂದರೆ ಈ ಎರಡೂ ಧಾರಾವಾಹಿಯ ಕಥೆಗಳ ದಿಕ್ಕು ಕೂಡ ಮದುವೆ ಮಂಟಪದಲ್ಲಿ ಬದಲಾಗಲಿದೆ. ಹೀಗಾಗಿ ಒಂದು ಗಂಟೆಯ ಅಂತರದಲ್ಲಿ ಎರಡು ಧಾರಾವಾಹಿಗಳಿಂದ ವೀಕ್ಷಕರಿಗೆ ರೋಚಕ ಟ್ವಿಸ್ಟ್ ಸಿಗಲಿದೆ. ಹೀಗಾಗಿ ಈ ಮನರಂಜನಾ ವಾಹಿನಿಯಲ್ಲಿ ಕಲ್ಯಾಣೋತ್ಸವ ಆಚರಿಸುತ್ತಿದೆ.

ಎರಡು ಧಾರಾವಾಹಿಯಲ್ಲೂ ಟ್ವಿಸ್ಟ್ ಮೇಲೆ ಟ್ವಿಸ್ಟ್

ಸ್ಟಾರ್ ಸುವರ್ಣದಲ್ಲಿ ಸಂಜೆ 7.30ಕ್ಕೆ 'ಮುದ್ದುಮಣಿಗಳು' ಪ್ರಸಾರ ಆಗಲಿದೆ. ಸದ್ಯ ಈ ಧಾರಾವಾಹಿಯಲ್ಲಿ ಶ್ರವಣ್, ಭೂಮಿಯನ್ನು ಮದುವೆಯಾಗಿದ್ದಾರೆ. ಇದನ್ನು ಕಂಡು ದೃಷ್ಟಿಗೊಂದಲಕ್ಕೆ ಬಿದ್ದಿದ್ದಾರೆ. ಈಗ ಕುತೂಹಲ ಏನಪ್ಪಾ ಅಂದ್ರೆ, ದೃಷ್ಟಿ ಮುಂದೇನು ಮಾಡುತ್ತಾಳೆ. ಶಿವನನ್ನು ಮದುವೆ ಆಗುತ್ತಾಳಾ ಎಂಬುದು ಧಾರಾವಾಹಿಯಲ್ಲಿನ ಹೈ ವೋಲ್ಟೇಜ್ ಟ್ವಿಸ್ಟ್.

Star Suvarna’s Two Serial Bettada Hoo Muddumanigalu Kalyanothsava in This Week

ಇದೇ ಸ್ಟಾರ್ ಸುವರ್ಣದಲ್ಲಿ ರಾತ್ರಿ 8 ಗಂಟೆಗೆ ಪ್ರಸಾರ ಆಗುತ್ತಿರುವ ಇನ್ನೊಂದು ಧಾರಾವಾಹಿ 'ಬೆಟ್ಟದ ಹೂ'. ಈ ಸೀರಿಯಲ್‌ನಲ್ಲೂ ಒಂದು ಟ್ವಿಸ್ಟ್‌ ಇದೆ. ಇಲ್ಲಿ ರಾಹುಲ್ ಮತ್ತು ಮಾಲಿನಿ ಮದುವೆ ತಯಾರಿ ನಡೆಯುತ್ತಿದೆ. ಇದನ್ನು ಹೂವಿ ಮೂಕ ಪ್ರೇಕ್ಷಕಿಯಾಗಿ ನೋಡುತ್ತಾ ನಿಂತಿದ್ದಾಳೆ. ಇಲ್ಲೂ ಒಂದು ಟ್ವಿಸ್ಟ್ ಇದೆ. ಈಗಾಗಲೇ ರಾಹುಲ್, ಹೂವಿಯನ್ನು ವಿವಾಹವಾಗಿದ್ದಾನೆ. ಈ ಸಂದರ್ಭದಲ್ಲಿ ಅದನ್ನು ಹೇಳುತ್ತಾಳಾ? ಅನ್ನೋದು ಟ್ವಿಸ್ಟ್.

ಒಂದು ಗಂಟೆ ಭರಪೂರ ಮನರಂಜನೆ

ಒಂದು ಗಂಟೆಗಳ ಕಾಲ, ಒಂದು ವಾರ ನಿರಂತರ ಮನರಂಜನೆ ಸಿಗಲಿದೆ. 7.30ಕ್ಕೆ ಮುದ್ದುಮಣಿಯಿಂದ ಆರಂಭ ಆಗುವ ಈ ಕಲ್ಯಾಣೋತ್ಸವದ ಎಪಿಸೋಡ್ 8.30ಕ್ಕೆ ಮುಕ್ತಾಯಗೊಳ್ಳಲಿದೆ. ಈ ಒಂದು ಗಂಟೆಗಳಲ್ಲಿ 'ಮುದ್ದುಮಣಿಗಳು' ಹಾಗೂ 'ಬೆಟ್ಟದ ಹೂ' ಎರಡೂ ಧಾರವಾಹಿಗಳಲ್ಲಿ ಕಲ್ಯಾಣೋತ್ಸವ ನೋಡಬಹುದು. ಮದುವೆ ಸಂಭ್ರಮ, ಕಲ್ಯಾಣ ಮಂಟಪ, ವಧು ವರ, ಹೀಗಾಗಿ ಸ್ಕ್ರೀನ್ ಸಖತ್ ಕಲರ್‌ಫುಲ್ ಆಗಿರುತ್ತೆ.

ಇದರೊಂದಿಗೆ ಟ್ವಿಸ್ಟ್‌ಗಳಿಗೇನು ಕಮ್ಮಿಯಿರಲ್ಲ. ಎರಡೂ ಸೀರಿಯಲ್‌ನಲ್ಲೂ ಮದುವೆನೇ ಟರ್ನಿಂಗ್ ಪಾಯಿಂಟ್. ಈ ಕಾರಣಕ್ಕೆ ಮುಂದೇನಾಗುತ್ತೆ ಅನ್ನುವ ಕುತೂಹಲ ಈ ವಾರ ಕಿರುತೆರೆ ವೀಕ್ಷಕರಿಗೆ ಸಿಗಲಿದೆ. ಇದಕ್ಕಾಗಿ ಸ್ಟಾರ್ ಸುವರ್ಣ ಚಾನೆಲ್ ಕಲ್ಯಾಣೋತ್ಸವ ಥೀಮ್‌ನಲ್ಲಿ ಪ್ರೇಕ್ಷಕರಿಗೆ ಸಖಯ್ ಮನರಂಜನೆ ನೀಡಲು ಮುಂದಾಗಿದೆ.

More from Filmibeat

English summary
Star Suvarna's two serial Bettada Hoo Muddumanigalu Kalyanothsava in this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X