ದಿಯಾ ಜೊತೆ ಜಗಳ ಆಡೋ ಏಲಿಯನ್ ಫ್ಲಾಶ್ ಬ್ಯಾಕ್‌ನಲ್ಲಿ ಹೇಗಿದ್ದಾರೆ ನೋಡಿ..!
ಸ್ಟಾರ್ ಸುವರ್ಣದಲ್ಲಿ 'ಜೇನುಗೂಡು' ಧಾರಾವಾಹಿ ಸದ್ಯ ಎಲ್ಲರ ಮನಗೆದ್ದು ಮುಂದೆ ಸಾಗುತ್ತಿದೆ. ಆ ಧಾರಾವಾಹಿಯಲ್ಲಿ ಹೈಲೈಟ್ ಎಂದರೆ ಅದು ದಿಯಾ ಮತ್ತು ಶಶಾಂಕ್. ಎದುರು ಬಂದರೆ ಸಾಕು ಹಾವು ಮುಂಗುಸಿಯಂತೆ ಕಿತ್ತಾಡುವ ಇವರಿಬ್ಬರನ್ನು ಮನೆಯವರು ಇದೀಗ ಗಂಟು ಹಾಕಲು ಹೊರಟಿದ್ದಾರೆ. ಮನೆಯವರ ಒತ್ತಾಯಕ್ಕೆ ಮದುವೆಯಾಗಲು ಹೊರಟಿರುವ ಈ ಜೋಡಿ ಬದಲಾಗುವ ಲಕ್ಷಣಗಳು ಕಾಣುತ್ತಿವೆ.
ಶಶಾಂಕ್ ಒಬ್ಬ ದೊಡ್ಡ ಸೈಟಿಸ್ಟ್ ಆಗಿದ್ದಾನೆ. ಆತನನ್ನು ನೋಡಿದರೆ ಬರೀ ಲ್ಯಾಬ್, ಓದು, ಸಂಶೋಧನೆ ಅಂತ ಇರುತ್ತಾನೆ. ಇನ್ನೆಲ್ಲಿ ಪ್ರೀತಿ ಹುಟ್ಟಬಹುದು ಎಂದುಕೊಳ್ಳುತ್ತಿದ್ದವರಿಗೆ ಬೇರೆ ರೀತಿಯಲ್ಲೇ ಟರ್ನಿಂಗ್ ಪಾಯಿಂಟ್ ಸಿಗುತ್ತಿದೆ. ಶಶಾಂಕ್ ಮನಸ್ಸಲ್ಲೂ ಒಬ್ಬ ರೋಮ್ಯಾಂಟಿಕ್ ಪರ್ಸನ್ ಇದ್ದಾನೆ. ಈತನಲ್ಲಿ ಕಾಳಜಿ ವಹಿಸುವ ಪ್ರೇಮಿ ಕೂತಿದ್ದಾನೆ ಅನ್ನೋದಂತು ಪಕ್ಕ ಆಗಿದೆ. ಆದರೆ, ಶಶಾಂಕ್ ನಿಜವಾದ ಲೈಫ್‌ನಲ್ಲಿ ಇರುವುದೇ ಬೇರೆ.

ಹುಡುಗಿಯರ ಮನಕದ್ದಿರುವ ಶಶಾಂಕ್
ಶಶಾಂಕ್ ಧಾರಾವಾಹಿಯಲ್ಲಿ ದೊಡ್ಡ ಸೈಂಟಿಸ್ಟೇ ಇರಬಹುದು. ರೋಮಿಯೋ ರೀತಿ ಲವ್ ಮಾಡುವುದಕ್ಕೆ ಬಾರದೆ ಇರಬಹುದು. ಹುಡುಗಿ ಹಿಂದೆ ಓಡಾಡದೆ ಇರಬಹುದು. ಆದರೆ ಈ ರೀತಿಯ ಹುಡುಗ ಕೂಡ ಕೆಲವೊಂದಿಷ್ಟು ಹುಡುಗಿಯರ ಹಾರ್ಟ್ ಕದಿಯುವುದರಲ್ಲಿ ನೋ ಡೌಟ್. ಇದೇ ರೀತಿಯ ಹುಡುಗ ನಮಗೂ ಸಿಗಬಾರದೆ ಎಂದು ಇತ್ತೀಚಿಗೆ ಅನ್ನಿಸದೆ ಇರುವುದಿಲ್ಲ. ಆತ ದೊಡ್ಡ ಸೈಂಟಿಸ್ಟ್ ಆದರೂ, ಆಕೆ ಕಂಡರೆ ಆಗುವುದೇ ಇಲ್ಲ ಎನ್ನುವ ಶಶಾಂಕ್‌ಗೆ ದಿಯಾ ಮೇಲೆ ಲವ್ವಾಗಿದೆ. ಇದು ಕೆಲ ಹುಡುಗಿಯ ಡ್ರೀಮ್ ಬಾಯ್ ಕನಸು ಕಾಣುವಂತೆ ಮಾಡಿದೆ.
ಆರವ್ ಸೂರ್ಯ ಜಸ್ಟ್ ಸೂರ್ಯ
'ಜೇನುಗೂಡು' ಧಾರಾವಾಹಿಯಲ್ಲಿ ಶಶಾಂಕ್ ಆಗಿ ನಟಿಸುತ್ತಿರುವ ಆರವ್ ಸೂರ್ಯ ಇತ್ತೀಚೆಗೆ ಮದುವೆ ಕೂಡ ಆಗಿದ್ದಾರೆ. ಅದ್ದೂರಿಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಆರವ್ ಸೂರ್ಯ ಇತ್ತೀಚೆಗೆ ವೈಷ್ಣವಿ ಎಂಬುವವರನ್ನು ಮದುವೆಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೊಸ ಜೋಡಿಯ ಫೋಟೊಗಳು ಸಿಕ್ಕಾಪಟ್ಟೆ ಮಿಂಚುತ್ತಿವೆ. ಫ್ಯಾನ್ಸ್, ಫ್ರೆಂಡ್ಸ್ ಎಲ್ಲರೂ ಹೊಸ ಜೋಡಿಗೆ, ಹೊಸ ಬದುಕಿಗೆ ಶುಭಕೋರಿದ್ದಾರೆ.
ಸೈಂಟಿಸ್ಟ್ ಪಾತ್ರಗಳೇ ಯಾಕೆ ಸಿಗುತ್ತೆ?
ನಟ-ನಟಿಯರಿಗೆ ಇಂಥದ್ದೆ ಪಾತ್ರಗಳು ಮ್ಯಾಚ್ ಆಗುತ್ತವೆ ಅನ್ನುವುದು ನಿರ್ದೇಶಕರಿಗೆ ಗೊತ್ತಿರುತ್ತೆ. ಅದರ ಜೊತೆಗೆ ಪಾತ್ರದ ಹಂಗಿಲ್ಲದೆ ನಟನೆಗೆ ಮಾತ್ರ ಒತ್ತು ಕೊಡುವವರು ಮಾತ್ರ ಸಿಕ್ಕಿದ ಪಾತ್ರಗಳಿಗೆ ಜೀವ ತುಂಬುತ್ತಾರೆ. ಅದೃಷ್ಟ ಕೈಹಿಡಿದಾಗ ಡಾಕ್ಟರ್ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ ಎಂಬಂತೆ ಕೆಲವೊಂದಿಷ್ಟು ಕಲಾವಿದರ ಅದೃಷ್ಟ ಖುಲಾಯಿಸಿರುತ್ತದೆ. ಅವರಿಗೆ ಒಪ್ಪುವ ಪಾತ್ರಗಳೇ ಅರಸಿ ಬರುತ್ತವೆ. ಅದೇ ಹಾದಿಯಲ್ಲಿ ಸಾಗಿದ್ದು, ಆರವ್ ಸೂರ್ಯಗೆ ಸಿಗುವ ಪಾತ್ರಗಳು. ಈಗಾಗಲೇ ನಂದಿನಿ ಧಾರಾವಾಹಿಯಲ್ಲಿ ಡಾ.ರಾಮ್ ಆಗಿ, 'ಯಾರಿವಳು' ಧಾರಾವಾಹಿಯಲ್ಲಿ ಡಾ ನಿಖಿಲ್ ಆಗಿ ಕಾಣಿಸಿಕೊಂಡಿದ್ದಾರೆ. ಈಗ 'ಜೇನುಗೂಡು' ಧಾರಾವಾಹಿಯಲ್ಲಿ ಸೈಂಟಿಸ್ಟ್ ಆಗಿ ಮಿಂಚುತ್ತಿದ್ದು, ಆರವ್ ಸೂರ್ಯಗೆ ಈ ರೀತಿಯ ಪಾತ್ರಗಳು ಹೇಳಿ ಮಾಡಿಸಿದಂತಿದೆ.

ಸಿನಿಮಾಗಳಲ್ಲೂ ಆರವ್ ನಟನೆ
ಆರವ್ ಸೂರ್ಯ 'ಜೇನುಗೂಡು' ಧಾರಾವಾಹಿಗೂ ಮುನ್ನ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮರಳಿ ಬಂದಳು ಸೀತೆ, ನಂದಿನಿ, ಇವಳೇ ವೀಣಾ ಪಾಣಿ ಹೀಗೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ಶಾರ್ಟ್ ಮೂವಿ ಮಾಡಿದ್ದಾರೆ. ಹಲವು ಚಿತ್ರಗಳನ್ನು ಮಾಡಿದ್ದಾರೆ. ಅದರಲ್ಲೂ ಹಳ್ಳಿ ಸೊಗಡು ಸಿನಿಮಾ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿದೆ. ಇನ್ನು, 'ಶ್ರೀಚಕ್ರಂ' ಅನ್ನುವ ಸಿನಿಮಾದಲ್ಲಿ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











