ಜೇನುಗೂಡು: ಫುಲ್ ರೊಮ್ಯಾಂಟಿಕ್ ಮೂಡಿನಲ್ಲಿ ಧಾರಾವಾಡದ ಐಶ್ವರ್ಯಾ ಸಾಲಿಮಠ್
'ಜೇನುಗೂಡು' ಧಾರಾವಾಹಿಯಲ್ಲಿ ಇತ್ತೀಚೆಗೆ ನಡುಕೋಟೆ ಮನೆಯಲ್ಲಿ ಮದುವೆ ನಡೆದಿತ್ತು. ಸುಮಿ ಮದುವೆದಲ್ಲಿ ಎಲ್ಲರೂ ಭಾವನಾತ್ಮಕವಾಗಿಯೂ ಮಿಂದೆದ್ದಿದ್ದರು. ಮನೆ ಮಗಳನ್ನು ಕಳುಹಿಸಿಕೊಡಲು ಎಲ್ಲರ ಕಣ್ಣುಗಳು ನೀರಾಗಿದ್ದವು. ಗಂಡನ ಮನೆಗೆ ಹೋದ ಸುಮಿ ಆಗಾಗ ನಡುಕೋಟೆ ಮನೆಗೆ ಬರುತ್ತಿರುತ್ತಾಳೆ. ಮನೆ ಮಗಳು ಮನೆಗೆ ಬಂದರೆ ಆಗುವ ಖುಷಿ ಅಷ್ಟಿಷ್ಟಲ್ಲ.
ಕುಕ್ಕಿಗೆ ಕಷ್ಟ ಎಂದು ಬಂದಾಗಲೂ ಸಹಾಯಕ್ಕೆ ಧಾವಿಸಿದ್ದು ಇದೇ ಮನೆ ಮಗಳು ಸುಮಿ. ಸುಮಿಯ ಮದುವೆಯ ಬಳಿಕ ಈಗ ಶಶಾಂಕ್ ಮತ್ತು ದಿಯಾ ಮದುವೆಯ ಸಂಭ್ರಮ ಶುರುವಾಗಿದೆ. ಸುಮಿ ಮದುವೆಗಿಂತ ಶಶಾಂಕ್ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎಂದುಕೊಂಡಿದ್ದಾರೆ. 'ಜೇನುಗೂಡು' ಧಾರಾವಾಹಿ ಪಕ್ಕಾ ಉತ್ತರ ಕರ್ನಾಟಕ ಭಾಷೆಯ ಧಾರಾವಾಹಿಯಾಗಿರುವುದರಿಂದ ಈ ತಂಡದಲ್ಲಿ ಉತ್ತರ ಕರ್ನಾಟಕದ ಮಂದಿಯೇ ಇದ್ದಾರೆ.

ಧಾರಾವಾಡದ ಐಶ್ವರ್ಯಾ ಬೆಂಗಳೂರಿನಲ್ಲಿ ಬ್ಯುಸಿ
ಐಶ್ವರ್ಯಾ ಸಾಲಿಮಠ ಮೂಲತಃ ಧಾರಾವಾಡದವರು. ನಟನಾ ಕ್ಷೇತ್ರದಲ್ಲಿ ಆಸಕ್ತಿ ಇರುವ ಕಾರಣ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ಈ ಹಿಂದೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಇದೀಗ 'ಜೇನುಗೂಡು' ಧಾರಾವಾಹಿಯಲ್ಲಿ ಸುಮಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಐಶ್ವರ್ಯಾ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿದ್ದಾರೆ. ಮಾಡರ್ನ್ ಡ್ರೆಸ್‌ಗಳಿಗೂ ಪೋಸ್ ಕೊಟ್ಟಿರುವ ಐಶ್ವರ್ಯಾ, ಟ್ರೆಡಿಷನಲ್ ಡ್ರೆಸ್‌ಗೂ ಸೈ ಎನ್ನುತ್ತಾರೆ. ಅವರ ಸೋಶಿಯಲ್ ಮೀಡಿಯಾಗೊಮ್ಮೆ ಇಣುಕು ಹಾಕಿದ್ದರೆ, ಅವರ ವೆರೈಟಿ ವೆರೈಟಿ ಫೋಟೊಗಳು ಕಣ್ಣಿಗೆ ಬೀಳುತ್ತವೆ. ಎಲ್ಲಾ ಡ್ರೆಸ್‌ನಲ್ಲೂ ಮುದ್ದು ಮುದ್ದಾಗಿ ಕಾಣುತ್ತಾರೆ. ಐಶ್ವರ್ಯಾ ಸಾಲಿಮಠ ಇನ್‌ಸ್ಟಾಗ್ರಾಂನಲ್ಲಿ 56 ಸಾವಿರಕ್ಕೂ ಹೆಚ್ಚು ಜನ ಫಾಲೋವರ್ಸ್ ಇದ್ದಾರೆ.

ಹುಬ್ಬಳ್ಳಿ ಹುಡುಗನ ಜೊತೆ ಹೊಸ ಜೀವನ
ಐಶ್ವರ್ಯಾ ಧಾರಾವಾಹಿಯಲ್ಲಿ ನಟಿಸುತ್ತಿರುವುದರ ಜೊತೆ ತನ್ನ ವೈಯಕ್ತಿಕ ಜೀವನದ ಕಡೆಗೂ ಗಮನ ಕೊಟ್ಟಿದ್ದಾರೆ. ಇತ್ತೀಚೆಗೆ ಮದುವೆ ಕೂಡ ಆಗಿದ್ದಾರೆ. ವಿನಯ್ ಎಂಬುವವರ ಜೊತೆ ಲಗ್ನವಾಗಿದ್ದು, ವಿನಯ್ ಕೂಡ ನಟನಾಗಿದ್ದಾರೆ. ಹುಬ್ಬಳ್ಳಿ ಹುಡುಗ ವಿನಯ್ ಕೂಡ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇಬ್ಬರು ಸ್ನೇಹಿತರಾಗಿದ್ದು, ಬಳಿಕ ಮನೆಯವರ ಒಪ್ಪಿಗೆಯೊಂದಿಗೆ ಗ್ರ್ಯಾಂಡ್ ಆಗಿ ಮದುವೆಯಾಗಿದ್ದಾರೆ. ವಿನಯ್ 'ಮಹಾದೇವಿ' ಧಾರಾವಾಹಿಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು. 'ಮಹಾಸತಿ' ಧಾರಾವಾಹಿಯಲ್ಲೂ ಆ ಪಾತ್ರ ಎಲ್ಲರ ಮನಸ್ಸಲ್ಲೂ ಇನ್ನು ಉಳಿದುಕೊಂಡಿದೆ. ಇದೀಗ ಧಾರಾವಾಡದ ಐಶ್ವರ್ಯಾ ಜೊತೆ ಮದುವೆಯಾಗಿದ್ದು, ಗಂಡ ಹೆಂಡತಿ ಇಬ್ಬರು ನಟನಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಹನಿಮೂನ್‌ನಲ್ಲಿರೋ 'ಜೇನುಗೂಡು' ಸುಮಿ
ಇತ್ತೀಚೆಗಷ್ಟೆ ಮದುವೆಯಾಗಿರುವ ಐಶ್ವರ್ಯಾ ಮತ್ತು ವಿನಯ್ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಮೂಡಿನಲ್ಲಿದ್ದಾರೆ. ಅವರ ಸೋಶಿಯಲ್ ಮೀಡಿಯಾದಲ್ಲಿ ಫೋಟೊಶೂಟ್ ಶೇರ್ ಮಾಡಿಕೊಂಡಿರುವ ನಟ-ನಟಿ ಫಾಲೋವರ್ಸ್‌ಗೆ ಕಿಕ್ ಹತ್ತಿಸುತ್ತಿದ್ದಾರೆ. ಇದು ನನ್ನ ನಿನ್ನ ಪ್ರೇಮಗೀತೆ ಅಂತ ಕ್ರೇಜಿಸ್ಟಾರ್ ಹಾಡಿನ ಸಾಲು ಹೇಳುತ್ತಾ, ಪ್ರೀತಿ ಪ್ರೇಮ ಪ್ರಣಯದಲ್ಲಿ ತೇಲುತ್ತಿದ್ದಾರೆ. ಅವರ ಕಮೆಂಟ್ ಬಾಕ್ಸ್‌ನಲ್ಲಿಯೂ ಸಿಕ್ಕಾಪಟ್ಟೆ ಆಶೀರ್ವಾದಗಳು ಸಿಕ್ಕಿದ್ದು, ಜೋಡಿ ಅದ್ಭುತವಾಗಿದೆ. ಹೀಗೆ ಸುಖವಾಗಿ ಖುಷಿಯಾಗಿರಿ ಎಂದು ಹಾರೈಸುತ್ತಿದ್ದಾರೆ.
ಬ್ಯಾಚುಲರ್ ಪಾರ್ಟಿಯಲ್ಲಿ ಮಸ್ತ್ ಮಜಾ ಮಾಡಿದ ಜೋಡಿ
ಐಶ್ವರ್ಯಾ ಮತ್ತು ವಿನಯ್ ಮೊದಲಿನಿಂದಲೂ ಸ್ನೇಹಿತರಾಗಿದ್ದವರು. ಹೀಗಾಗಿ ಮ್ಯೂಚ್ಯೂವಲ್ ಸ್ನೇಹಿತರು ಹೆಚ್ಚಾಗಿಯೇ ಇದ್ದಾರೆ. ಮದುವೆಗೂ ಮುನ್ನ ಸ್ನೇಹಿತರ ಜೊತೆಗೂಡಿ ಸಿಕ್ಕಾಪಟ್ಟೆ ಮಸ್ತಿ ಮಾಡಿದ್ದಾರೆ. ಬ್ಯಾಚುಲರ್ ಪಾರ್ಟಿ ಮಾಡಿದ್ದ ಟೀಂ ಕೇಕ್ ಕಟ್ ಮಾಡಿಸಿ, ಡ್ಯಾನ್ಸ್, ಹಾಡು ಅಂತ ಕುಣಿದು ಕುಪ್ಪಳಿಸಿದ್ದಾರೆ. ಇವರದ್ದೇ ಆದ ಗ್ಯಾಂಗ್ ಇದೆ. ಟ್ರಿಪ್, ಅಲ್ಲಿ ಇಲ್ಲಿ ಸುತ್ತಾಡಿರುವ ಕುರುಹುಗಳು ಐಶ್ವರ್ಯಾ ಮತ್ತು ವಿನಯ್ ಸೋಶಿಯಲ್ ಮೀಡಿಯಾದಲ್ಲಿ ಸಿಗುತ್ತದೆ.


Click it and Unblock the Notifications











