ಜೇನುಗೂಡು: ಶಶಾಂಕ್‌ನನ್ನು ಗಂಡ ಎಂದು ಒಪ್ಪಿಕೊಂಡಳಾ ದಿಯಾ?

'ಜೇನುಗೂಡು' ಧಾರಾವಾಹಿ ಸಿಕ್ಕಾಪಟ್ಟೆ ಮಜಾ ನೀಡುತ್ತಿದೆ. ಸಕಲೇಶಪುರದ ಸುಂದರ ನೋಟದ ನಡುವೆ ದಿಯಾ ಶಶಾಂಕ್ ಜಗಳದ ನಡುವೆ ಇದೀಗ ಸ್ನೇಹಿತರ ಬಳಗವೂ ಹೆಚ್ಚಾಗಿದೆ. ದಿಯಾ ಮತ್ತು ಶಶಾಂಕ್ ನಡುವೆ ಮಾತು ಎತ್ತಿದರೆ ಶುರುವಾಗುತ್ತಿದ್ದ ಜಗಳ, ಈಗ ಒಬ್ಬರಿಗೊಬ್ಬರು ಹೊಟ್ಟೆಕಿಚ್ಚು ಪಡುವಂತ ಸ್ಥಿತಿ ನಿರ್ಮಾಣವಾಗಿದೆ. ಟ್ರಿಪ್ ಅನ್ನು ಎಂಜಾಯ್ ಮಾಡಲು ಬಂದ ಕುಕ್ಕಿ ಗ್ಯಾಂಗ್ ಇಬ್ಬರನ್ನು ನೋಡಿ ಶಾಕ್ ಆಗಿದ್ದಾರೆ.

ನಡುಕೋಟೆ ಕುಟುಂಬ ಸಕಲೇಶಪುರಕ್ಕೆ ಪ್ರವಾಸ ಬಂದಿದ್ದಾರೂ ಯಾಕೆ? ದಿಯಾ ಮತ್ತು ಶಶಾಂಕ್ ನಡುವೆ ಪ್ರೀತಿ ಚಿಗುರುವಂತೆ ಮಾಡುವುದಕ್ಕೆ. ಕುಕ್ಕಿ ಮಾಡಿದ್ದ ಫ್ಲ್ಯಾನ್ ಇನ್ನೇನು ವರ್ಕೌಟ್ ಆಗುತ್ತಿತ್ತು. ಆದರೆ ಮಧ್ಯೆ ಮಾಯಾ ಬಂದು ಎಲ್ಲವೂ ಉಲ್ಟಾ ಆಗಿ ಹೋಗಿದೆ.

 ಮಾಯಾ ಬುದ್ಧಿ ಕುಕ್ಕಿ ಗ್ಯಾಂಗ್‌ಗೆ ಅರ್ಥವಾಗಿದೆ?

ಮಾಯಾ ಬುದ್ಧಿ ಕುಕ್ಕಿ ಗ್ಯಾಂಗ್‌ಗೆ ಅರ್ಥವಾಗಿದೆ?

ಮಾಯಾ ಸಕಲೇಶಪುರಕ್ಕೆ ಯಾಕೆ ಬಂದಿದ್ದಾಳೆ ಎಂಬುದು ಕುಕ್ಕಿ ಗ್ಯಾಂಗ್ ಗೆ ಈಗಾಗಲೇ ತಿಳಿದಿದೆ. ಶಶಾಂಕ್‌ನನ್ನು ಹೇಗಾದರೂ ಮಾಡಿ ಒಲಿಸಿಕೊಳ್ಳುವುದಕ್ಕೆ ಮಾಯಾ ಬಂದಿದ್ದಾಳೆ ಎಂಬುದನ್ನು ಕುಕ್ಕಿ ಗ್ಯಾಂಗ್ ಅರ್ಥ ಮಾಡಿಕೊಂಡಿದೆ. ಅದಕ್ಕೆ ಶಶಾಂಕ್‌ನಿಂದ ಮಾಯಾ ದೂರ ಇರುವಂತೆ ಅವರು ನೋಡಿಕೊಳ್ಳುತ್ತಿದ್ದಾರೆ. ಮಾಯಾ ಅದಕ್ಕೆ ಉಲ್ಟಾ ಯೋಚನೆ ಮಾಡುತ್ತಿದ್ದಾಳೆ. ಶಶಾಂಕ್ ಮತ್ತು ದಿಯಾ ಒಟ್ಟಿಗೆ ಇರುವುದಕ್ಕೆ ಬಿಡುತ್ತಲೆ ಇಲ್ಲ. ಫೈರ್ ಕ್ಯಾಂಪ್ ಇದೆ ಅಂತ ಮಾಯಾಳನ್ನು ರೂಮಿನಲ್ಲಿಯೇ ಬಿಟ್ಟು ತನ್ನ ಗ್ಯಾಂಗ್ ಜೊತೆ ಹೋಗಿದ್ದ ಶಶಾಂಕ್. ಆದರೆ ಮಾಯಾ ತನಗೆ ಏನೋ ಅಪಾಯವಾಗಿದೆ ಎಂದು ಶಶಾಂಕ್‌ಗೆ ಫೋನ್ ಮಾಡಿ, ಕರೆದಿದ್ದಾಳೆ. ಅಲ್ಲಿ ಎಲ್ಲರ ಜೊತೆಗಿದ್ದ ಶಶಾಂಕ್ ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಅಲ್ಲಿಂದ ಮಾಯಾಳನ್ನು ನೋಡುವುದಕ್ಕೆ ಹೋಗಿದ್ದಾನೆ. ಇದು ಎಲ್ಲರಿಗೂ ಬೇಸರ ತರಿಸಿದೆ.

 ದಿಯಾಗಿದೆ ಶಶಾಂಕ್ ಮೇಲೆ ಬೇಸರ

ದಿಯಾಗಿದೆ ಶಶಾಂಕ್ ಮೇಲೆ ಬೇಸರ

ದಿಯಾ ತುಂಬಾ ಮುಗ್ಧಳೆ ಆದರೆ ಮಾಯಾ ಮಾಡುತ್ತಿರುವ ಎಲ್ಲಾ ಕಿತಾಪತಿ ಅರ್ಥವಾಗುತ್ತಿದೆ. ಇದೇ ಕಾರಣಕ್ಕೆ ಶಶಾಂಕ್ ಮೇಲೆ ಬೇಸರ ಮಾಡಿಕೊಂಡು ಬಂದು ಕುಳಿತಿದ್ದಾಳೆ. ಮೂಲಾಮ್ ಅಚ್ಚುವುದಕ್ಕೆ ಹೋದಾಗಲೂ ಮಾಯಾಳ ವರ್ತನೆಯಿಂದಾಗಿ ದಿಯಾಳಿಗೆ ಬೇಸರವಾಗಿತ್ತು. ಆದರೂ ಅದನ್ನು ಸಹಿಸಿಕೊಂಡು ಬಂದು ಜರಿ ಬಳಿ ಕುಳಿತಿದ್ದಳು. ಕುಕ್ಕಿಗೆ ಇಲ್ಲಿನ ಎಲ್ಲಾ ಸನ್ನಿವೇಶ ಅರ್ಥವಾಗಿದ್ದಕ್ಕೆ, ಮಾಯಾಳ ನಾಟಕಕ್ಕೆ ಬ್ರೇಕ್ ಹಾಕುವುದಕ್ಕೆಂದೆ ಡಾಕ್ಟರ್‌ನ ಕರೆಸಿ, ಮತ್ತೆ ದಿಯಾ ಇರುವ ಜಾಗಕ್ಕೆ ಶಶಾಂಕ್ ಹೋಗುವಂತೆ ಮಾಡಿದ್ದಾನೆ. ದಿಯಾ ಒಬ್ಬಳೆ ಕುಳಿತು ಶಶಾಂಕ್ ಎಷ್ಟು ಪೆದ್ದು ಅಲ್ವಾ ಅಂತ ಯೋಚಿಸುತ್ತಿರುವಾಗಲೇ ಶಶಾಂಕ್ ಅಲ್ಲಿಗೆ ಎಂಟ್ರಿ ಕೊಡುತ್ತಾನೆ. ಅದೇ ಸಮಯಕ್ಕೆ ಕ್ರಿಶ್ ಕಾಲ್ ಮಾಡುತ್ತಾನೆ. ಒಂದು ಕಡೆ ಬೇಸರ, ಒಂದು ಕಡೆ ಕೋಪ ಎರಡು ಮಿಕ್ಸ್ ಆಗಿದ್ದ ದಿಯಾ, ಕ್ರಿಶ್‌ನ ಸಕಲೇಶಪುರಕ್ಕೆ ಬರುವಂತೆ ಕರೆಯುತ್ತಾಳೆ. ಇದು ಶಶಾಂಕ್‌ಗೆ ಕೋಪ ತರಿಸುತ್ತೆ. ಆಗ ದಿಯಾ ಹೇಳುವ ಮಾತುಗಳು ಶಶಾಂಕ್‌ಗೆ ಅರ್ಥವಾದರೆ, ಪ್ರೀತಿ ಹೆಚ್ಚಾಗಿರುತ್ತಿತ್ತು. ಮಾಯಾಳನ್ನು ನೀನು ಕರೆಸಿದ್ದಿಯಾ, ಹಾಗೇ ಕ್ರಿಶ್‌ನನ್ನು ನಾನು ಕರೆಸುತ್ತಿದ್ದೀನಿ. ಮಾಯಾ ಬಂದಿದ್ದು ನನಗೆ ಇಷ್ಟವಾಗಿಲ್ಲ ಆದರೂ ಸಹಿಸಿಕೊಂಡಿದ್ದೀನಿ. ಈಗ ಕ್ರಿಶ್ ಬಂದಿರುವುದು ನಿನಗೆ ಇಷ್ಟವಿಲ್ಲದೆ ಹೋದರೂ ಸಹಿಸಿಕೊಳ್ಳಬೇಕು ಎಂದಿದ್ದಾಳೆ.

 ಕ್ರಿಶ್ ಬಂದಿದ್ದಕ್ಕೆ ಶಶಾಂಕ್‌ಗೆ ಹೊಟ್ಟೆಕಿಚ್ಚು

ಕ್ರಿಶ್ ಬಂದಿದ್ದಕ್ಕೆ ಶಶಾಂಕ್‌ಗೆ ಹೊಟ್ಟೆಕಿಚ್ಚು

ದಿಯಾಗೆ ಕ್ರಿಶ್ ಬಾಯ್ ಫ್ರೆಂಡ್ ಆಗಿರುವುದು ಮೊದಲೆ ಇಷ್ಟವಿಲ್ಲ. ಆದರೆ ಅಗ್ರಿಮೆಂಟ್ ಮಾಡಿಕೊಳ್ಳುವಾಗ ಮಾತು ಕೊಟ್ಟಿರುವ ಕಾರಣಕ್ಕೆ ಶಶಾಂಕ್ ಎಲ್ಲವನ್ನು ಸಹಿಸಿಕೊಳ್ಳುತ್ತಿದ್ದಾನೆ. ಈಗ ಸಕಲೇಶಪುರಕ್ಕೂ ಬಂದಿರುವ ಕ್ರಿಶ್ ಬೇರೆಯದ್ದೇ ರೀತಿಯಾಗಿ ಶಶಾಂಕ್‌ನನ್ನು ಕಾಡುತ್ತಿದ್ದಾನೆ. ಬಂದ ಕೂಡಲೇ ದಿಯಾ ಎಲ್ಲರನ್ನೂ ಪರಿಚಯ ಮಾಡಿಕೊಟ್ಟಳು. ಶಶಾಂಕ್‌ನನ್ನು ಪರಿಚಯ ಮಾಡಿಕೊಟ್ಟಾಗ, ಈ ಮನುಷ್ಯನನ್ನು ಅದೇಗೆ ಮದುವೆಯಾಗುವದಕ್ಕೆ ಒಪ್ಪಿಕೊಂಡೆ ಎಂದು ಮತ್ತಷ್ಟು ಕೋಪ ತರಿಸಿದ್ದಾನೆ. ಇದೀಗ ಎಲ್ಲರೂ ಸೇರಿ ಫೈರ್ ಕ್ಯಾಂಪ್ ಬಳಿ ಎಂಜಾಯ್ ಮಾಡುವ ಸಲುವಾಗಿ ಹೊರಟಿದ್ದಾರೆ.

ದಿಯಾ ಮಾತಿಗೆ ಕುಕ್ಕಿ ಗ್ಯಾಂಗ್ ಫುಲ್ ಖುಷ್

ದಿಯಾಗೆ ಬಾಯ್ ಫ್ರೆಂಡ್ ಇರುವುದು ನಡುಕೋಟೆ ಮನೆಗೆ ಯಾವುದೇ ಸಮಸ್ಯೆ ಇಲ್ಲ. ಯಾಕೆಂದರೆ ದಿಯಾ ಏನು ಎಂಬುದು ನಡುಕೋಟೆ ಮನೆಗೆ ಈಗಾಗಲೇ ಚೆನ್ನಾಗಿಯೇ ತಿಳಿದಿದೆ. ಅಷ್ಟೇ ಅಲ್ಲ ಅವರ ತಂದೆ ಕೂಡ ದಿಯಾಗೆ ಬಾಯ್ ಫ್ರೆಂಡ್ ಎಂದರೆ ಎಷ್ಟಕ್ಕೆ ಸೀಮಿತ ಎನ್ನುವುದನ್ನು ಅರಿವು ಮೂಡಿಸಿದ್ದಾರೆ. ಹೀಗಾಗಿ ಕ್ರಿಶ್ ಸಕಲೇಶಪುರಕ್ಕೆ ಬಂದಿರುವುದಕ್ಕೆ ಯಾವುದೇ ಬೇಸರವಿಲ್ಲ. ಆದರೆ ಕ್ರಿಶ್ ಅತಿಯಾಗಿ ಆಡುತ್ತಿದ್ದಾನೆ. ಫೈರ್ ಕ್ಯಾಂಪ್ ವೇಳೆ ಎಲ್ಲರೂ ಎಂಜಾಯ್ ಮಾಡಬೇಕೆಂದು ಬಂದಿದ್ದಾರೆ. ಈ ವೇಳೆ ಕ್ರಿಶ್ ದಿಯಾಗೆ ಡ್ರಿಂಕ್ಸ್ ಮಾಡುವಂತೆ ಬಲವಂತ ಮಾಡಿದ್ದಾನೆ. ನಾನು ಕುಡಿಯಲ್ಲ ಎಂದಾದ ಮೇಲೂ ದಿಯಾಗೆ ಬಲವಂತ ಮಾಡಿದ್ದಾನೆ. ಈ ಸನ್ನಿವೇಶ ಶಶಾಂಕ್‌ಗೆ ಕೋಪ ತರಿಸಿದೆ. ಆಕೆಗೆ ಇಷ್ಟ ಇಲ್ಲ ಎಂದರು ಬಲವಂತ ಯಾಕೆ ಮಾಡುತ್ತಿರಾ ಎಂದಾಗ ಕ್ರಿಶ್ ನೀನ್ಯಾರು ಕೇಳುವುದಕ್ಕೆ? ಎಂದಿದ್ದಾನೆ. ಆಗ ದಿಯಾ ಕ್ರಿಶ್ ಗೆ ವಾರ್ನಿಂಗ್ ಕೊಟ್ಟಿದ್ದಾಳೆ. ಮಧ್ಯೆ ಬಂದಿರುವುದು ನೀನು. ಅವರೆಲ್ಲ ನನ್ನ ಗಂಡನ ಮನೆಯವರು ಎಂದಾಕ್ಷಣ ಕುಕ್ಕಿ ಗ್ಯಾಂಗ್ ಫುಲ್ ಖುಷಿಯಾಗಿದೆ.

More from Filmibeat

English summary
Star Suvarna Serial Jenugudu Written Update On May 19th Episode. Here Is The Details about Diya Lashes At Krish Episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X