ಸೀರಿಯಲ್ ಪ್ರಿಯರಿಗೆ ಮತ್ತೊಂದು ಹೊಚ್ಚ ಹೊಸ ಧಾರಾವಾಹಿ 'ನೀನಾದೆ ನಾ': ಎಲ್ಲಿ? ಯಾವಾಗ?

ಸಿನಿಮಾದಷ್ಟೇ ಧಾರಾವಾಹಿಗಳು ಕೂಡ ಜನಪ್ರಿಯವಾಗುತ್ತಿವೆ. ವೀಕ್ಷಕರು ಸೀರಿಯಲ್‌ ನೋಡುವ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮನರಂಜನಾ ವಾಹಿನಿಗಳು ಹೊಸ ಹೊಸ ಧಾರಾವಾಹಿಗಳನ್ನು ವೀಕ್ಷಕರಿಗೆ ನೀಡುವುದಕ್ಕೆ ಸಜ್ಜಾಗಿವೆ. ವೆಬ್ ಸೀರಿಸ್‌ನಂತೆಯೇ ಹೊಸ ಧಾರಾವಾಹಿಗಳು ಮನೆ ಮನೆಗೆ ತಲುಪುತ್ತಿವೆ.

ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಹೆಚ್ಚು ಒತ್ತು ನೀಡುತ್ತಿರುವ ಸ್ಟಾರ್ ಸುವರ್ಣ ಇದೀಗ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಇತ್ತೀಚೆಗಷ್ಟೇ ಪ್ರಸಾರ ಮಾಡುತ್ತಿರುವ 'ನಮ್ಮ ಲಚ್ಚಿ', 'ರಾಣಿ' ಅಂತಹ ಧಾರಾವಾಹಿಗಳು ವೀಕ್ಷಕರ ಇಷ್ಟ ಆಗಿದೆ. ಅವರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಹೊಚ್ಚ ಹೊಸ ಧಾರಾವಾಹಿ 'ನೀನಾದೆ ನಾ' ಪ್ರಸಾರ ಮಾಡಲು ಸಜ್ಜಾಗಿದೆ.

Star Suvarna telecasting new serial Neenade Naa from May 16th

'ನೀನಾದೆ ನಾ' ಕಿರುತೆರೆಯಲ್ಲಿ ವೀಕ್ಷಕರಿಗೆ ಹೊಸ ಅನುಭವ ನೀಡಬಹುದು. ಯಾಕೆಂದರೆ ದೇವರ ಆಟ ಬಲ್ಲವರಾರು ಎಂಬ ಮಾತಿದೆ. ಈ ಕತೆನೂ ಒಂತರ ಹಾಗೇನೇ ಅಪರಿಚಿತ ಹೃದಯಗಳ ಅನಿರೀಕ್ಷಿತ ಪ್ರೇಮಯಾನವೇ 'ನೀನಾದೆ ನಾ' ಎಂದು ಸ್ಟಾರ್ ಸುವರ್ಣ ಹೇಳಿಕೊಂಡಿದೆ.

ಈ ಧಾರಾವಾಹಿಯ ನಾಯಕಿ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಆದರೂ ಸಂಸ್ಕಾರ-ಸಂಸ್ಕೃತಿ, ಆಚಾರ-ವಿಚಾರಗಳನ್ನು ಪರಿಪಾಲಿಸುವಲ್ಲಿ ಸದಾ ಮುಂದೆ. ಈ ಧಾರಾವಾಹಿಯ ಕಥಾ ನಾಯಕಿ ವಯಸ್ಸು 'ವೇದಾ'. ಈಕೆ ಅಜ್ಜಿಯ ಪ್ರೀತಿಯ ಮೊಮ್ಮಗಳು. ನೇರ ನುಡಿ ನಡೆಯ ಹುಡುಗಿ. ಮನೆಯವರ ಮುಂದೆನೇ, ಹುಟ್ಟಿದ ಊರಲ್ಲಿ, ಮನೆಯವರು ಒಪ್ಪಿದ ಹುಡುಗನೊಂದಿಗೆ ಮದುವೆಯಾಗಬೇಕು ಎಂಬ ಆಸೆ. ಆದರೆ, ಅಂದ್ಕೊಂಡಿದ್ದೆಲ್ಲಾ ಆಗಬೇಕಲ್ಲಾ. ಇಲ್ಲೂ ಕೂಡ ಅದೇ ಟ್ವಿಸ್ಟ್.

'ನೀನಾದೆ ನಾ' ಧಾರಾವಾಹಿಯ ಕಥಾ ನಾಯಕ ವಿಕ್ರಮ್. ಈತ 'ವೇದಾ' ತೀರಾ ವಿರುದ್ಧ. ಗುಂಡಾಗಿರಿ ಮಾಡಿಕೊಂಡು, ಬಾಸ್ ಹೇಳಿದನ್ನು ಮಾಡಿಕೊಂಡಿರುವ ಯುವಕ. ಆಚಾರ-ವಿಚಾರ, ಸಂಸ್ಕಾರದ ಗಂಧಗಾಳಿನೇ ಗೊತ್ತಿಲ್ಲ. ಪದವಿ ಮುಗಿಸಿದ್ದರೂ, ಈತ ಹೀಗಿರೋದ್ರಿಂದ ಅಪ್ಪನಿಗೂ ಇವನ ಮೇಲೆ ಸಿಕ್ಕಾಪಟ್ಟೆ ಕೋಪ.

Star Suvarna telecasting new serial Neenade Naa from May 16th

ಹೀಗೊಂದು ದಿನ ಸನ್ನಿವೇಶವೊಂದರಲ್ಲಿ ದೇವರ ಸನ್ನಿಧಾನದಲ್ಲಿ ವಿಧಿಯಾಟದಂತೆ ವಿಕ್ರಮ್- ವೇದಾಳಿಗೆ ತಾಳಿ ಕಟ್ಟುತ್ತಾನೆ. ಶ್ರೀಮಂತ ಕುಟುಂಬದಲ್ಲಿ ಬೆಳೆದ 'ವೇದ' ರೌಡಿ ಸ್ವಭಾವದ ವಿಕ್ರಮ್‌ನನ್ನು ಗಂಡ ಎಂದು ಒಪ್ಪಿಕೊಳ್ತಾಳಾ ? ವಿದ್ಯಾವಂತೆ ವೇದಾ ಮುಂದಿನ ನಡೆ ಏನಿರಬಹುದು? ವಿರುದ್ಧ ಮನಸುಗಳು ಹೇಗೆ ಒಂದಾಗುತ್ತವಾ? ಎಂಬುದೇ "ನೀನಾದೆ ನಾ" ಧಾರಾವಾಹಿಯ ಒಂದೆಳೆ ಕಥೆ.

'ನೀನಾದೆ ನಾ' ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ದಿಲೀಪ್ ಶೆಟ್ಟಿ, ನಾಯಕಿಯಾಗಿ ಖುಷಿ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ, ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣಗಾಗಿ ಖ್ಯಾತ ನಟ ರಮೇಶ್ ಅರವಿಂದ್ ತಮ್ಮ 'ವಂದನ ಮೀಡಿಯಾ' ಸಂಸ್ಥೆಯಡಿ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.

ವಿಭಿನ್ನ ಪ್ರೇಮಕಥೆಯನ್ನು ಆಧರಿಸಿದ 'ನೀನಾದೆ ನಾ' ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಇದೇ ಮೇ 16ರಿಂದ ರಾತ್ರಿ 9.30 ಕ್ಕೆ ಪ್ರಸಾರ ಆಗಲಿದೆ. ಈ ಮೂಲಕ ಇನ್ಮುಂದೆ ರಮೇಶ್ ಅರವಿಂದ್ ಧಾರಾವಾಹಿ ಕ್ಷೇತ್ರದಲ್ಲೂ ಕಾಣಿಸಿಕೊಳ್ಳುತ್ತಾರೆ.

More from Filmibeat

English summary
Star Suvarna telecasting new serial Neenade Naa from May 16th, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X