ವೀಕೆಂಡ್‌ನಲ್ಲಿ ಹೊಸ ಸೆಲೆಬ್ರಿಟಿ ಗೇಮ್ ಶೋ 'Huu ಅಂತೀಯಾ...Uhuu ಅಂತೀಯಾ'; ಯಾವಾಗಿಂದ? ಎಲ್ಲಿ?

ಕಳೆದ ಎರಡು ಮೂರು ತಿಂಗಳಿಂದ ಐಪಿಎಲ್, ಎಲೆಕ್ಷನ್ ನೋಡಿ ಸುಸ್ತಾದವರಿದ್ದಾರೆ. ಇಂತಹವರಿಗಾಗಿ ಮನರಂಜನಾ ವಾಹಿನಿಗಳು ಹೊಸ ಶೋಗಳನ್ನು ಪರಿಚಯಿಸುವುದಕ್ಕೆ ಸಿದ್ಧವಾಗಿದೆ. ಅದರಲ್ಲೂ ಸ್ಟಾರ್ ಸುವರ್ಣ ಹೊಚ್ಚ ಹೊಸ ರಿಯಾಲಿಟಿ ಶೋ ಅನ್ನು ಕಿರುತೆರೆ ವೀಕ್ಷಕರಿಗೆ ನೀಡಿವುದಕ್ಕೆ ಮುಂದಾಗಿದೆ.

ಕನ್ನಡ ಕಿರುತೆರೆಯಲ್ಲಿ ವಿನೂತನ ರಿಯಾಲಿಟಿ ಶೋ ವೀಕೆಂಡ್‌ನಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿದೆ. ಐಪಿಎಲ್ ಮುಗಿಯುತ್ತಿರುವ ಈ ಹೊತ್ತಲ್ಲಿ 'Huu ಅಂತೀಯಾ...Uhuu ಅಂತೀಯಾ' ಎಂಬ ಹೊಸ ಬಗೆಯ ವಿನೂತನ ಗೇಮ್ ಶೋ ಅನ್ನು ಪ್ರಸಾರ ಮಾಡುವುದಕ್ಕೆ ಸಜ್ಜಾಗಿದೆ.

Star Suvarna to Launch Huu Antiya Uhuu Antiya Celebrity Show hosting roopesh shetty arun hariharan

ಅಷ್ಟಕ್ಕೂ 'Huu ಅಂತೀಯಾ...Uhuu ಅಂತೀಯಾ' ಶೋ ಅನ್ನು ಬಿಗ್‌ಬಾಸ್ ಖ್ಯಾತಿಯ ತುಳುನಾಡಿನ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಹಾಗೂ ತನ್ನದೇ ವಿಶಿಷ್ಟ ಕಾಮಿಡಿ ಸೆನ್ಸ್‌ನಿಂದ ನೋಡುಗರ ಮನಗೆದ್ದಿರುವ ಅರುಣ್ ಹರಿಹರನ್ ಈ ಶೋ ನಡೆಸಿಕೊಡುತ್ತಿದ್ದಾರೆ. ಹೀಗಾಗಿ ಈ ರಿಯಾಲಿಟಿ ಶೋ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

ಅಂದ್ಹಾಗೆ, 'Huu ಅಂತೀಯಾ...Uhuu ಅಂತೀಯಾ' ರಿಯಾಲಿಟಿ ಶೋನ ಮೊದಲ ಸಂಚಿಕೆಯಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್ ಮೂವರು ಸೆಲೆಬ್ರೆಟಿಗಳು ಭಾಗವಹಿಸುತ್ತಿದ್ದಾರೆ. ಈಗಾಗಲೇ ಈ ಶೋನ ಟೈಟಲ್ ಟ್ರ್ಯಾಕ್ ವೀಕ್ಷಕರಿಗೆ ಸಖತ್ ಕಿಕ್ ಕೊಡುವುದಕ್ಕೆ ಸಜ್ಜಾಗಿದೆ.

ಈ ಶೋ ನೋಡುವ ವೀಕ್ಷಕರಿಗೆ ದುಬಾರಿ ಉಡುಗೊರೆ ಕೂಡ ಇದೆ. ಈ ಸೆಲೆಬ್ರಿಟಿ ಶೋ ನೋಡುವವರು 'ಐ ಫೋನ್' ಗೆಲ್ಲಬಹುದು. ಮೊದಲ ಹಾಗೂ ಎರಡನೇ ಸಂಚಿಕೆಯ ಕೊನೆಯಲ್ಲಿ ಕೇಳುವ ಪ್ರಶ್ನೆಗೆ ಸರಿಯಾದ ಉತ್ತರವನ್ನು ಕೊಟ್ಟಿದ್ದೇ ಆದಲ್ಲಿ 'ಐ ಫೋನ್' ಅನ್ನು ಗೆಲ್ಲಬಹುದಾಗಿದೆ. ಅಂದ್ಹಾಗೆ ಈ ಗೇಮ್ ವಿಶೇಷತೆಗಳು ಏನು ಗೊತ್ತಾ? ಈ ಗೇಮ್ ಶೋ ನಿಯಮಾವಳಿಗಳು ಹೀಗಿವೆ ನೋಡಿ.

Star Suvarna to Launch Huu Antiya Uhuu Antiya Celebrity Show hosting roopesh shetty arun hariharan

ರೂಪೇಶ್ ಶೆಟ್ಟಿ, ಅರುಣ್ ಅಂತಹ ಇಬ್ಬರು ಜನಪ್ರಿಯ ಆ್ಯಂಕರ್‌ಗಳನ್ನು ಹೊಂದಿರುವ ಈ ಶೋನಲ್ಲಿ ಒಟ್ಟು ಮೂರು ಸುತ್ತುಗಳು ಇರುತ್ತವೆ. ಈ ಶೋನಲ್ಲಿ ಭಾಗವಹಿಸುವ ಸೆಲೆಬ್ರಿಟಿಗಳಿಗೆ ಬರೋಬ್ಬರಿ 6 ಲಕ್ಷ ರೂಪಾಯಿ ಗೆಲ್ಲುವ ಅವಕಾಶ ಇರುತ್ತದೆ. ಹಾಗೇ ಮೊದಲ ಸುತ್ತಿನಲ್ಲಿ ಸ್ಪರ್ಧಿಗಳು ಒಬ್ಬರ ನಂತರ ಒಬ್ಬರು ಆಟ ಆಡುತ್ತಾರೆ. ನಿರೂಪಕರು ನೀಡಿದ ಸತ್ಯ ಮತ್ತು ಸುಳ್ಳು ಸಂಗತಿಗಳನ್ನು ಸ್ಪರ್ಧಿಗಳು ಸರಿಯಾಗಿ ಆರಿಸಿದರೆ 1 ಲಕ್ಷ ರೂಪಾಯಿ ಗೆಲ್ಲು ಬಹುದು.

ಇನ್ನು 'Huu ಅಂತೀಯಾ...Uhuu ಅಂತೀಯಾ' ಶೋ ಎರಡನೇ ಸುತ್ತಿನಲ್ಲಿ ಸ್ಪರ್ಧಿಗಳಿಗೆ ಊಟದ ಸವಾಲು ಎದುರಾಗುತ್ತೆ. ಈ ಸುತ್ತು ಸಖತ್ ಮಜಾವಾಗಿರುತ್ತೆ. ಜೊತೆಗೆ ಟ್ವಿಸ್ಟ್‌ ಕೂಡ ಇರುತ್ತೆ. ಒಟ್ಟು 60 ಸೆಕೆಂಡ್‌ಗಳ ಸಮಯವನ್ನು ನೀಡಲಾಗುತ್ತಿದ್ದು, ಇದರಲ್ಲಿ ಗೆದ್ದವರಿಗೆ 2 ಲಕ್ಷ ರೂಪಾಯಿ ಸಿಗಲಿದೆ. ಹಾಗೇ ಕೊನೆಯ ಸುತ್ತಿನಲ್ಲಿ ಕೇವಲ ಇಬ್ಬರು ಸ್ಪರ್ಧಿಗಳು ಆಟ ಆಡುತ್ತಾರೆ. ಇಲ್ಲಿ ಗೆದ್ದವರಿಗೆ 3 ಲಕ್ಷ ರೂಪಾಯಿ ಸಿಗುತ್ತೆ.

'Huu ಅಂತೀಯಾ...Uhuu ಅಂತೀಯಾ' ಇದೇ ವೀಕೆಂಡ್‌ನಲ್ಲಿ ವೀಕ್ಷಕರನ್ನು ರಂಜಿಸಲು ಬರುತ್ತಿದೆ. ಮೇ 19 ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.

More from Filmibeat

English summary
Star Suvarna introduces a new celebrity show, Huu Antiya Uhuu Antiya, hosted by Roopesh Shetty and comedian Arun Hariharan, kicking off from May 19
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X