ಕಷ್ಟ ಪಡುವ ಮನೆ ಒಡತಿಗೆ 'ಥ್ಯಾಂಕ್ ಯು' ಹೇಳುವುದಕ್ಕೊಂದು ಕಾರ್ಯಕ್ರಮ 'ಸುವರ್ಣ ಗೃಹಮಂತ್ರಿ'

ಮನರಂಜನ ವಾಹಿನಿಗಳು ಹೊಸ ಹೊಸ ಪ್ರಯತ್ನಕ್ಕೆ ಮುಂದಾಗುತ್ತಲೇ ಇರುತ್ತವೆ. ಪ್ರತಿಕ್ಷಣ ಕಿರುತೆರೆ ವೀಕ್ಷಕರನ್ನು ಹೇಗೆ ರಂಜಿಸಬೇಕು ಅನ್ನೋದನ್ನು ಎದುರು ನೋಡುತ್ತಲೇ ಇರುತ್ತವೆ. ಇದಕ್ಕಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಕಿರುತೆರೆ ವೀಕ್ಷಕರಿಗಾಗಿಯೇ ಡಿಸೈನ್ ಮಾಡುತ್ತವೆ. ಇಂತಹ ಸಾಕಷ್ಟು ಕಾರ್ಯಕ್ರಮಗಳ ಮಧ್ಯೆ ವಿನೂತನ ಶೋ ಒಂದು ಪ್ರಸಾರ ಆಗುತ್ತಿದೆ.

ಸ್ಟಾರ್ ಸುವರ್ಣ ಮಹಿಳೆಯರಿಗಾಗಿ ವಿನೂತನವಾದ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಈ ಮೂಲಕ ಮಹಿಳೆಯನ್ನು ಸನ್ಮಾನಿಸಿ ಗೌರವಿಸುವ ಉದ್ದೇಶವನ್ನು ಇಟ್ಟುಕೊಂಡು 'ಸುವರ್ಣ ಗೃಹಮಂತ್ರಿ' ಎನ್ನುವ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Star Suvarna s a new reality show for women Suvarna Gruha Mantri is creating buzz

ಮಹಿಳೆಯರು ಮಧ್ಯಾಹ್ನದ ವೇಳೆಗೆ ಮಹಿಳೆಯರು ಕಿರುತೆರೆಯನ್ನು ಹೆಚ್ಚು ವೀಕ್ಷಣೆ ಮಾಡುತ್ತಾರೆ. ಈ ಸಮಯದಲ್ಲಿ ಅವರಿಗಾಗಿ ಒಂದು ಕಾರ್ಯಕ್ರಮವನ್ನು ರೂಪಿಸಿದ್ದಾರೆ. ತಮ್ಮ ವೀಕ್ಷಕರಿಗೆ ಮಧ್ಯಾಹ್ನದ ಮನರಂಜನೆಯನ್ನು ಮತ್ತಷ್ಟು ದುಪ್ಪಟ್ಟು ಮಾಡಿಕೊಳ್ಳುವುದಕ್ಕೆ 'ಸುವರ್ಣ ಗೃಹಮಂತ್ರಿ' ರಿಯಾಲಿಟಿ ಶೋ ಪ್ರಸಾರ ಮಾಡುತ್ತಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಂದ್ಹಾಗೆ ಸ್ಟಾರ್ ಸುವರ್ಣದ ಹೊಸ ಶೋ 'ಸುವರ್ಣ ಗೃಹಮಂತ್ರಿ' ಮನೆಯಲ್ಲಿ ಕೆಲಸ ಮಾಡುವ ಗೃಹಿಣಿಯರು ಅಥವಾ ಹೆಣ್ಣು ಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಮನೆಯಲ್ಲೇ ಇರುವ ಹೆಣ್ಣು ಮಕ್ಕಳು ಎಷ್ಟೇ ಚೆನ್ನಾಗಿ ಮನೆಯನ್ನು ನೋಡಿಕೊಂಡರೂ ಅವರಿಗೆ 'ಥ್ಯಾಂಕ್ ಯೂ' ಅಂತ ಯಾರೂ ಹೇಳುವುದಿಲ್ಲ. ಅಂತಹ ಹೆಣ್ಮಕ್ಕಳನ್ನು ಗುರುತಿಸಿ, ಸನ್ಮಾನ ಮಾಡಲಾಗುತ್ತೆ.

ಅದ್ಭುತವಾಗಿ ಮನೆಯನ್ನು ನಿಭಾಯಿಸುತ್ತಿರುವ ಗೃಹಿಣಿಯರನ್ನು ಗುರುತಿಸಿ, ಪತಿ ಹಾಗೂ ಪತ್ನಿ ನಡುವಿನ ಅನ್ಯೋನ್ಯತೆ ಬಗ್ಗೆ ತಿಳಿದು ಅವರನ್ನು ಸನ್ಮಾನ ಮಾಡಲಾಗುತ್ತೆ. ಇದರೊಂದಿಗೆ ಮಾತುಕತೆ, ಆಟದ ಜೊತೆ ಮನರಂಜನೆಗೆ ಒತ್ತು ನೀಡಲಾಗುತ್ತೆ. ಇದರೊಂದಿಗೆ ಬಹುಮಾನವಾಗಿ ರೇಷ್ಮೆ ಸೀರೆ, ಚಿನ್ನ, ಬೆಳ್ಳಿ ಹಾಗೂ ಬೆಲೆ ಬಾಳುವ ಬಹುಮಾನಗಳನ್ನು 'ಸುವರ್ಣ ಗೃಹಮಂತ್ರಿ' ಕಾರ್ಯಕ್ರಮದಲ್ಲಿ ನೀಡಲಾಗುತ್ತೆ.

Star Suvarna s a new reality show for women Suvarna Gruha Mantri is creating buzz

'ಸುವರ್ಣ ಗೃಹಮಂತ್ರಿ' ಶೋ ಅನ್ನು ನಿರೂಪಕ ಮುರಳಿ ನಡೆಸಿಕೊಡುತ್ತಿದ್ದಾರೆ. ಕರ್ನಾಟಕದ ಮಹಿಳೆಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ನಿರೂಪಕ ಮುರಳಿ ಅವರ ಅಣ್ಣನ ಸ್ಥಾನದಲ್ಲಿ ನಿಂತು ರೇಷ್ಮೆ ಸೀರೆ, ಬೆಳ್ಳಿ-ಬಂಗಾರ ಕೊಟ್ಟು ಮನೆ ಗೃಹಿಣಿಗೆ ಹಾರೈಸಿ, ರಾಣಿ ಸೀಟಿನಲ್ಲಿ ಕೂರಿಸಿ ಗೌರವಿಸಲಿದ್ದಾರೆ.

ಮೇ 13ನೇ ತಾರೀಕಿನಿಂದಲೇ ಸ್ಟಾರ್ ಸುವರ್ಣದಲ್ಲಿ 'ಸುವರ್ಣ ಗೃಹಮಂತ್ರಿ' ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಸದ್ಯ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮಹಿಳೆಯರನ್ನು ಎಂಗೇಜ್ ಮಾಡುತ್ತಿದ್ದಾರೆ. ಕರುನಾಡಿನ ಗೃಹಿಣಿಯರನ್ನು ಸಂಭ್ರಮಿಸೋದಕ್ಕೆ ರಾಣಿ ಸೀಟಿನೊಂದಿಗೆ ಹೊಸ ಶೋ 'ಸುವರ್ಣ ಗೃಹಮಂತ್ರಿ' ಮೇ 13ರಿಂದ ಸೋಮವಾರದಿಂದ ಮಧ್ಯಾಹ್ನ 1 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿದೆ.

More from Filmibeat

English summary
Star Suvarna new reality show Suvarna Gruhamantri:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X