»   » ಮನಸಾರೆ ಶಿವಣ್ಣನನ್ನು ಕಿಚ್ಚ ಸುದೀಪ್ ಹಾರೈಸಿದ್ದು ಹೀಗೆ

ಮನಸಾರೆ ಶಿವಣ್ಣನನ್ನು ಕಿಚ್ಚ ಸುದೀಪ್ ಹಾರೈಸಿದ್ದು ಹೀಗೆ

Posted By:
Subscribe to Filmibeat Kannada

ಈಟಿವಿ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮದ ಶನಿವಾರದ (ಮೇ 18) ಎಪಿಸೋಡಿನಲ್ಲಿ ಸುದೀಪ್, ಶಿವಣ್ಣನ ಮುಂದಿನ ಬಹು ನಿರೀಕ್ಷೀತ ಕಡ್ಡಿಪುಡಿ ಚಿತ್ರಕ್ಕೆ ಮತ್ತು ಶಿವರಾಜ್ ಕುಮಾರಿಗೆ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ.

ಕಡ್ಡಿಪುಡಿ ಚಿತ್ರದ ನಿರ್ದೇಶಕ ದುನಿಯಾ ಸೂರಿ ಮತ್ತು ಆ ಚಿತ್ರದ ಎರಡು ಹಾಡಿಗೆ ಸಾಹಿತ್ಯ ಬರೆದಿರುವ ಯೋಗರಾಜ್ ಭಟ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಅವರ ಮುಂದಿನ ಕಡ್ಡಿಪುಡಿ ಚಿತ್ರ ಯುಶಸ್ವಿಯಾಗಲಿ.

ಈ ಚಿತ್ರ ಅವರ ವೃತ್ತಿ ಜೀವನದ ಮತ್ತೊಂದು ಸೂಪರ್ ಹಿಟ್ ಚಿತ್ರವಾಗಲಿ, ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಸುದೀಪ್ ಹಾರೈಸಿದರು.

Sudeep best wishes to Shivaraj Kumar in Bigg Boss

ಕಾರ್ಯಕ್ರಮದಲ್ಲಿ ಕಡ್ಡಿಪುಡಿ ಚಿತ್ರದ ಬಗ್ಗೆ ನಿರ್ದೇಶಕ ಸೂರಿಯಿಂದ ಬಹಳಷ್ಟು ಮಾಹಿತಿ ಪಡೆದುಕೊಂಡ ಸುದೀಪ್, ಸ್ಯಾಂಡಲ್ ವುಡ್ಡಿನಲ್ಲಿ ಲಾಂಗ್ ಹೇಗೆ ಹಿಡಿಯಬೇಕೆಂದು ತಿಳಿಸಿಕೊಟ್ಟವರೇ ಶಿವಣ್ಣ. ಈ ಚಿತ್ರ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿದೆ ಎಂದು ಸುದೀಪ್ ನಿರ್ದೇಶಕರ ಬೆನ್ನು ತಟ್ಟಿದರು.

ಸೂರಿ ಮತ್ತು ಯೋಗರಾಜ್ ಭಟ್ ನಡುವಿನ ಸ್ನೇಹದ ಬಗ್ಗೆ ಮಾತು ಉರುಳಿದಾಗ ಉತ್ತಮ ಸ್ನೇಹ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಕೆಲವರು ಮಾಡುತ್ತಲೇ ಇರುತ್ತಾರೆ ಎಂದು ಮಾರ್ಮಿಕವಾಗಿ ಸುದೀಪ್ ಬೇಸರ ವ್ಯಕ್ತ ಪಡಿಸಿದರು.

ಶಿವಣ್ಣನಿಗಾಗಿ ಕಥೆ ಹಣೆದು ಚಿತ್ರ ನಿರ್ದೇಶಿಸುತ್ತಿದ್ದೇನೆ. ಇದು ನನ್ನ ಶೈಲಿಯ ಸಿನಿಮಾ, ಕೆಲವೊಂದು ಹೊಸ ಪ್ರಯತ್ನ ಮಾಡಿದ್ದೇನೆ ಎಂದು ಸೂರಿ ಈ ಸಂದರ್ಭದಲ್ಲಿ ಹೇಳಿದರು.

English summary
Sudeep best wishes to Hatrick Hero Shivaraj Kumar in Bigg Boss reality show.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada