»   » ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಶೋ: ಈ ವಾರಾಂತ್ಯದ ಸೆಲೆಬ್ರಿಟಿಗಳು

ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಶೋ: ಈ ವಾರಾಂತ್ಯದ ಸೆಲೆಬ್ರಿಟಿಗಳು

Posted By:
Subscribe to Filmibeat Kannada

ಕನ್ನಡದ ಕೋಟ್ಯಾಧಿಪತಿ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಮುಂತಾದ ಜನಪ್ರಿಯ ರಿಯಾಲಿಟಿ ಶೋ ನೀಡಿದ್ದ ಸ್ಟಾರ್ ನೆಟ್ವರ್ಕ್ ಒಡೆತನದ ಸುವರ್ಣ ವಾಹಿನಿಯಲ್ಲಿ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ' ಎನ್ನುವ ವಿನೂತನ ಕಾರ್ಯಕ್ರಮ ಆರಂಭವಾಗಿದ್ದು ಗೊತ್ತೇ ಇದೆ.

ಸ್ಯಾಂಡಲ್ ವುಡ್ ತಾರೆಯರು ಹಾಗೂ ಕಿರುತೆರೆಯ ಸೆಲೆಬ್ರಿಟಿಗಳು ಭಾಗವಹಿಸುವ ಈ ಶೋನ ಈ ವಾರದ (ಜ 25) ಎಪಿಸೋಡ್ ನಲ್ಲಿ 'ಮಿಲನ' ಮತ್ತು 'ಮಧುಬಾಲ' ಧಾರವಾಹಿಯವರು ಭಾಗವಹಿಸುತ್ತಿದ್ದಾರೆ. (ಸುವರ್ಣ ವಾಹಿನಿಯಲ್ಲಿ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ)

Swalpa Adjust Madkolli show, Milana and Madhubala serial leading artist participating in Suvarna TV

ಮಿಲನ ಧಾರವಾಹಿಯಲ್ಲಿನ ಪ್ರಮುಖ ಪಾತ್ರಧಾರಿಗಳಾದ ಸಮರ್ಥ್ ಮತ್ತು ಪ್ರಾರ್ಥನಾ ಈ ಭಾನುವಾರದ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಲ್ಲದೇ, ಮಧುಬಾಲ ಧಾರವಾಹಿಯ ಬಾಲಕೃಷ್ಣ ಮತ್ತು ಮಧು ಕೂಡಾ ಭಾಗವಹಿಸುತ್ತಿದ್ದಾರೆ.

ಪ್ರತೀ ಭಾನುವಾರ ರಾತ್ರಿ 9 ರಿಂದ 10 ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ಕೈ ಕಟ್ ಬಾಯಿ ಮುಚ್ಚು, ಕತೆ ಕೇಳ್ರಪ್ಪ ಕತೆ, ಆ ಕಚಕ್ ಮತ್ತು ಫೈನಲ್ ರೌಂಡ್ ಎಂಬ 4 ಸುತ್ತುಗಳಿರುತ್ತವೆ.

ಶೈನ್ ಶೆಟ್ಟಿ ಹಾಗೂ ಅನುಶ್ರೀ ನಿರೂಪಕರಾಗಿರುವ ಈ ಶೋನ ಮೊದಲ ಸಂಚಿಕೆಯಲ್ಲಿ ಬಿಗ್ ಬಾಸ್ 2 ರಿಯಾಲಿಟಿ ಶೋನ ಸ್ಪರ್ಧಿಗಳಾಗಿದ್ದ ದೀಪಿಕಾ ಕಾಮಯ್ಯ, ಸಂತೋಷ್, ಆದಿ ಲೋಕೆಶ್ ಹಾಗೂ ಅನಿತಾ ಭಟ್ ಭಾಗವಹಿಸಿದ್ದರು.

Swalpa Adjust Madkolli show, Milana and Madhubala serial leading artist participating in Suvarna TV

ಎರಡನೇ ಶೋನಲ್ಲಿ ಪೂಜಾ ಗಾಂಧಿ ಪ್ರಮುಖ ಭೂಮಿಕೆಯಲ್ಲಿರುವ ಅಭಿನೇತ್ರಿ ಚಿತ್ರತಂಡ ಮತ್ತು ಮೂರನೇ ಶೋನಲ್ಲಿ 'ಬೆಂಗಳೂರು 23' ಚಿತ್ರತಂಡದ ಚಿಕ್ಕಣ್ಣ, ಚಂದನ್, ಶಿವಾನಿ ಮತ್ತು ಜೆಕೆ ಭಾಗವಹಿಸಿದ್ದರು. ನಾಲ್ಕನೇ ಎಪಿಸೋಡಿ ನಲ್ಲಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕಾರ್ಯಕ್ರಮದ ನಾಲ್ವರು ಫೈನಲಿಸ್ಟುಗಳು ಭಾಗವಹಿಸಿದ್ದರು.

ವಾರಾಂತ್ಯದಲ್ಲಿ ನಕ್ಕು ನಲಿಯುತ್ತಾ, ಪುರುಷೊತ್ತು ಇಲ್ಲದಿದ್ದರೂ ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡು ಸುವರ್ಣ ವಾಹಿನಿಯಲ್ಲಿ ಬರುವ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ' ರಿಯಾಲಿಟಿ ಶೋ ವೀಕ್ಷಿಸಿ. (ಫಿಲ್ಮಿಬೀಟ್ ಕನ್ನಡ)

English summary
Popular reality show in Suvarna TV 'Swalpa Adjust Madkolli', Milana and Madhubala serial's leading artists participating in this weeks episode (Jan 25)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada