ಇಂದು ಬೆಂಕಿಗೆ ಆಹುತಿಯಾದ 'ಬಿಗ್ ಬಾಸ್' ಮನೆ ಅಂದು ಹೇಗಿತ್ತು ನೆನಪಿದ್ಯಾ.?

By Harshitha

Recommended Video

ಬೆಂಕಿಗೆ ಆಹುತಿಯಾದ 'ಬಿಗ್ ಬಾಸ್' ಮನೆ ಹೇಗಿತ್ತು ನೆನಪಿದ್ಯಾ.? | Filmibeat Kannada

ಯಾರೂ ಊಹಿಸದ, ಯಾರೂ ನಿರೀಕ್ಷೆ ಮಾಡದ ಘಟನೆಯೊಂದು ಇಂದು ನಡೆದು ಹೋಗಿದೆ. ಕಿರುತೆರೆ ಲೋಕದ ಜನಪ್ರಿಯ ದೊಡ್ಮನೆ 'ಬಿಗ್ ಬಾಸ್ ಮನೆ' ಭಸ್ಮಗೊಂಡಿದೆ.

ಮಧ್ಯರಾತ್ರಿ ಸುಮಾರು 3 ಗಂಟೆ ಹೊತ್ತಿಗೆ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ 'ಬಿಗ್ ಬಾಸ್ ಮನೆ' ಹಾಗೂ ಅದರ ಪಕ್ಕದಲ್ಲೇ ಇರುವ ಮೇಣದ ಮ್ಯೂಸಿಯಂ ಬೆಂಕಿಗೆ ಆಹುತಿ ಆಗಿದೆ.

ವಿಷಯ ತಿಳಿದ 'ಬಿಗ್ ಬಾಸ್' ಸ್ಪರ್ಧಿಗಳು ಅಕ್ಷರಶಃ ಶಾಕ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ತಾವು ಕಳೆದ ಅಮೂಲ್ಯ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದಾರೆ. ಇವತ್ತು ಸುಟ್ಟು ಕರಕಲಾಗಿರುವ 'ಬಿಗ್ ಬಾಸ್' ಮನೆಯಲ್ಲಿ ಒಂದು ತಿಂಗಳ ಹಿಂದೆ ಸ್ಪರ್ಧಿಗಳು ವಾಸವಿದ್ದರು. ಅಂದು 'ಬಿಗ್ ಬಾಸ್' ಮನೆ ಹೇಗಿತ್ತು ಅಂತ ಮರೆತು ಹೋಗಿರುವವರು ಒಮ್ಮೆ ಈ ಫೋಟೋಗಳನ್ನ ನೋಡ್ಕೊಂಡ್ ಬನ್ನಿ....

ಅಂದು ಶಾಂತಿ ನಿವಾಸದಂತೆ ಕಂಡಿದ್ದ ಮನೆ

ಅಂದು ಶಾಂತಿ ನಿವಾಸದಂತೆ ಕಂಡಿದ್ದ ಮನೆ

ಇಂದು ಅಗ್ನಿ ಅವಘಡ ಸಂಭವಿಸಿರುವ 'ಬಿಗ್ ಬಾಸ್ ಮನೆ'ಯಲ್ಲಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ನಡೆದಿತ್ತು. 'ಬಿಗ್ ಬಾಸ್ ಕನ್ನಡ-5' ಶೋ ಶುರು ಆದಾಗ, 'ಬಿಗ್ ಬಾಸ್ ಮನೆ'ಯೊಳಗೆ ಮೊದಲು ಕಾಲಿಟ್ಟಿದ್ದು ಕಿಚ್ಚ ಸುದೀಪ್. ನೀಲಿ ಗೇಟ್ ತೆಗೆದು ಒಳಗೆ ಕಾಲಿಟ್ಟ ಕೂಡಲೆ, ಕಿಚ್ಚ ಸುದೀಪ್ ಕಣ್ಣಿಗೆ ಬಿದ್ದಿದ್ದು 'ಬಿಗ್ ಬಾಸ್ ಕನ್ನಡ-5' ಎಂದು ಬೃಹದಾಕಾರದಲ್ಲಿ ಬರೆದಿದ್ದ ಅಕ್ಷರಗಳು. ಸುದೀಪ್ ಕಣ್ಣಲ್ಲಿ ಅಂದು ಈ ಮನೆ '#75 ಶಾಂತಿ ನಿವಾಸ' ತರಹ ಕಂಡಿತ್ತು.

ವಿಶಾಲವಾಗಿತ್ತು ಮನೆಯ ಹೊರಾಂಗಣ

ವಿಶಾಲವಾಗಿತ್ತು ಮನೆಯ ಹೊರಾಂಗಣ

ಹಿಂದಿನ ಸೀಸನ್ ಗಳಿಗಿಂತಲೂ ಈ ಬಾರಿ ಮನೆಯ ಹೊರಾಂಗಣ ವಿಶಾಲವಾಗಿತ್ತು. ಸ್ವಿಮ್ಮಿಂಗ್ ಪೂಲ್ ಹಾಗೂ ಜಿಮ್ ಏರಿಯಾದಲ್ಲೇ ಬಹುತೇಕ ಸ್ಪರ್ಧಿಗಳು ಕಾಲ ಕಳೆದಿದ್ದರು. ಹೊರಾಂಗಣದಲ್ಲೇ ಹೆಚ್ಚಾಗಿ ಕೂರುತ್ತಿದ್ದವರು, 'ಗಾರ್ಡನ್ ಏರಿಯಾ' ಗುಂಪಿನ ಸದಸ್ಯರಾಗಿದ್ದರು. ಅಷ್ಟಕ್ಕೂ, ಗಾರ್ಡನ್ ಏರಿಯಾ ಮತ್ತು ಲಿವಿಂಗ್ ಏರಿಯಾ ಗುಂಪುಗಳ ನಡುವಿನ ಗಲಾಟೆ ನಿಮಗೆ ಗೊತ್ತಿರೋದೇ ತಾನೆ.!

ಹಾಲ್ ತುಂಬಾ ಟಿವಿಗಳಿತ್ತು

ಹಾಲ್ ತುಂಬಾ ಟಿವಿಗಳಿತ್ತು

ಈ ಬಾರಿ 'ಬಿಗ್ ಬಾಸ್ ಮನೆ'ಯೊಳಗೆ ಹಾಲ್ ತುಂಬಾ ಟಿವಿಗಳಿತ್ತು. ವಾರಕ್ಕೊಮ್ಮೆ ಇದೇ ಟಿವಿ ಮೂಲಕ ಸುದೀಪ್ ಪಂಚಾಯತಿ ನಡೆಸುತ್ತಿದ್ದರು.

ಬೃಹತ್ ಡೈನಿಂಗ್ ಹಾಲ್

ಬೃಹತ್ ಡೈನಿಂಗ್ ಹಾಲ್

ಪ್ರತಿ ಸೀಸನ್ ನಂತೆ ಈ ಬಾರಿಯೂ 'ಬಿಗ್ ಬಾಸ್ ಮನೆ'ಯಲ್ಲಿ ಬೃಹತ್ ಡೈನಿಂಗ್ ಹಾಲ್ ಇತ್ತು. ಈ ಸೀಸನ್ ನಲ್ಲಿ ಬಹುತೇಕ ಜಗಳ, ಗಲಾಟೆ ನಡೆದಿದ್ದು ಇಲ್ಲೇ. ಅದು ತಿಂಡಿ-ಊಟ ಹಂಚಿಕೆ ವಿಚಾರವಾಗಿ.

ಬೆಡ್ ರೂಮ್ ಏರಿಯಾ

ಬೆಡ್ ರೂಮ್ ಏರಿಯಾ

ಸೆಲೆಬ್ರಿಟಿ ಸ್ಪರ್ಧಿಗಳ ಗುಂಪು ಹೆಚ್ಚಾಗಿ ಹರಟೆ ಹೊಡೆಯುತ್ತಿದ್ದದ್ದು ಇಲ್ಲೇ. ತಮ್ಮ ಬ್ರೇಕಪ್ ಕಥೆ ಹೇಳುತ್ತಾ ಅನುಪಮಾ ಕಣ್ಣೀರಿಟ್ಟಿದ್ದು, ಜಗನ್ ಗೆ ಆಶಿತಾ ಸಿಹಿ ಮುತ್ತು ಕೊಟ್ಟಿದ್ದು, ಐಸ್ ಕ್ರೀಮ್ ಗಾಗಿ ಕಿತ್ತಾಟ ನಡೆದಿದ್ದು ಇಲ್ಲೇ.

ಬಾತ್ ರೂಮ್ ಏರಿಯಾ

ಬಾತ್ ರೂಮ್ ಏರಿಯಾ

ಬಾತ್ ರೂಮ್ ಒಳಗೆ 'ಬಿಗ್ ಬಾಸ್' ಸೈಕಲ್ ಇಟ್ಟಿದ್ದು ಈ ಸೀಸನ್ ನಲ್ಲೇ. ಕಣ್ಣೀರು ಹಾಕೋಕೆ ಬಹುತೇಕ ಸ್ಪರ್ಧಿಗಳು ಓಡೋಡಿ ಬರ್ತಿದ್ದದ್ದು ಇದೇ ಜಾಗಕ್ಕೆ. ಇಲ್ಲಿ ಜಗಳವೂ ನಡೆದಿದೆ, ಸಂಧಾನವೂ ನಡೆದಿದೆ. ಆದ್ರೀಗ ಅದೆಲ್ಲವೂ ನೆನಪು ಮಾತ್ರ

ಎರಡನೇ ಒಲೆ ಉರಿದಿದ್ದು ಇಲ್ಲೇ.!

ಎರಡನೇ ಒಲೆ ಉರಿದಿದ್ದು ಇಲ್ಲೇ.!

'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲೇ ಎರಡು ಒಲೆ ಉರಿದಿದ್ದು ಈ ಸೀಸನ್ ನಲ್ಲೇ. ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲೇ ತಮಗೆ ಬೇಕಾದ ಅಡುಗೆ ಮಾಡಿಕೊಳ್ತಿದ್ರು ಸಮೀರಾಚಾರ್ಯ. ಆದ್ರೆ, ಅದಕ್ಕೆ ಸ್ವಲ್ಪ ದಿನದಲ್ಲೇ ಫುಲ್ ಸ್ಟಾಪ್ ಬಿತ್ತು. ಸಿಟ್ಟು, ಸ್ನೇಹ, ಪ್ರೀತಿ ಎಲ್ಲದರ ಮಿಶ್ರಿತವಾಗಿದ್ದ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಸಮಾಪ್ತಿ ಆಗಿ ಇನ್ನೂ ಒಂದು ತಿಂಗಳಾಗಿಲ್ಲ. ಅಷ್ಟು ಬೇಗ 'ಬಿಗ್ ಬಾಸ್' ಮನೆ ಬೆಂಕಿಗೆ ಆಹುತಿಯಾಗಿದೆ. ಆದ್ರೆ, ಸ್ಪರ್ಧಿಗಳಿಗೆ ಮಾತ್ರ ಈ ಮನೆಯಲ್ಲಿ ಕಳೆದ ಅಪರೂಪದ ಕ್ಷಣಗಳು ಇನ್ನೂ ಹಸಿರಾಗಿದೆ.

More from Filmibeat

English summary
Take a look at the pictures of Bigg Boss House before fire accident took place.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X