ಮತ್ತೆ ಕಿರುತೆರೆಗೆ ಕಮಲ್ ಹಾಸನ್: ಬಿಗ್‌ಬಾಸ್ ಆರಂಭ ಶೀಘ್ರ

ತಮಿಳಿನಲ್ಲಿ ಮತ್ತೆ ಬಿಗ್‌ಬಾಸ್ ಆರಂಭವಾಗುತ್ತಿದೆ. ಕೆಲವು ತಿಂಗಳ ಹಿಂದಷ್ಟೆ ಮುಗಿದಿದ್ದ ಶೋ ಇದೀಗ ಮತ್ತೆ ಆರಂಭವಾಗುತ್ತಿದ್ದು, ಪ್ರೊಮೊ ಚಿತ್ರೀಕರಣ ಸಹ ಮುಗಿದಿದೆ.

ತಮಿಳಿನಲ್ಲಿ ಈವರೆಗೆ ನಾಲ್ಕು ಸೀಸನ್‌ಗಳ ಬಿಗ್‌ಬಾಸ್ ಪ್ರಸಾರವಾಗಿದ್ದು, ಐದನೇ ಸೀಸನ್‌ಗೆ ಸಕಲ ತಯಾರಿ ಮುಗಿದಿದ್ದು, ಸೀಸನ್‌ 5ರ ಪ್ರೊಮೊ ಚಿತ್ರೀಕರಣ ಸಹ ಮುಗಿದಿದೆ. ಪ್ರೊಮೊ ಚಿತ್ರೀಕರಣದ ಸಮಯದಲ್ಲಿ ಕಮಲ್‌ ಹಾಸನ್‌ರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು ಚಿತ್ರಗಳು ವೈರಲ್ ಆಗಿವೆ.

ಬಿಗ್‌ಬಾಸ್ 5 ಪ್ರೊಮೊನಲ್ಲಿ ಹಲವು ಅವತಾರಗಳಲ್ಲಿ ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದೀಗ ಲೀಕ್ ಆಗಿರುವ ಎರಡು ಚಿತ್ರಗಳ ಪೈಕಿ ಒಂದರಲ್ಲಿ ಕಮಲ್ ಹಾಸನ್ ಸೂಟು ಧರಿಸಿ ಹ್ಯಾಂಡ್ಸಮ್ ಲುಕ್‌ನಲ್ಲಿದ್ದರೆ ಮತ್ತೊಂದು ಚಿತ್ರದಲ್ಲಿ ನೈಟ್ ಡ್ರೆಸ್ ತೊಟ್ಟು ಜಾಲಿ ಮೂಡ್‌ನಲ್ಲಿದ್ದಾರೆ.

Tamil Bigg Boss Five Will Air Soon, Promo Shooting Done Already

ಶೋನ ಪ್ರೊಮೊ ಇದೇ ತಿಂಗಳ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ. ತೆಲುಗು ಬಿಗ್‌ಬಾಸ್‌ ಹೊಸ ಸೀಸನ್‌ನ ಪ್ರೊಮೊ ಈಗಾಗಲೇ ಬಿಡುಗಡೆ ಆಗಿದ್ದು ತೆಲುಗು ಬಿಗ್‌ಬಾಸ್ 5 ಸೆಪ್ಟೆಂಬರ್ 5ರಿಂದ ಪ್ರದರ್ಶನವಾಗಲಿದೆ. ತೆಲುಗು ಬಿಗ್‌ಬಾಸ್‌ ಆರಂಭವಾದ ಕೆಲವೇ ದಿನಗಳಲ್ಲಿ ತಮಿಳು ಬಿಗ್‌ಬಾಸ್ ಸಹ ಆರಂಭವಾಗಲಿದೆ.

ತಮಿಳು ಬಿಗ್‌ಬಾಸ್ ಸೀಸನ್ 4 ಕಳೆದ ವರ್ಷ ಅಕ್ಟೋಬರ್ 4 ರಂದು ಪ್ರದರ್ಶನ ಆರಂಭಿಸಿತ್ತು. ಇದೇ ವರ್ಷದ ಜನವರಿ 17ರಂದು ಫಿನಾಲೆ ನಡೆದು 105 ದಿನಗಳ ಈ ಆಟದಲ್ಲಿ ಆರಿ ವಿಜೇತರಾಗಿದ್ದರು. ಸ್ಪರ್ಧೆಯಲ್ಲಿ 17 ಆಟಗಾರರು ಇದ್ದರು. ತಮಿಳು ಬಿಗ್‌ಬಾಸ್‌ ನಾಲ್ಕು ಸೀಸನ್‌ ನಲ್ಲಿಯೂ ಕಮಲ್ ಹಾಸನ್ ಒಬ್ಬರೇ ನಿರೂಪಕರು.

ಕನ್ನಡದಲ್ಲಿ ಕೆಲವು ದಿನಗಳ ಹಿಂದಷ್ಟೆ ಬಿಗ್‌ಬಾಸ್ ಸೀಸನ್ 8 ಮುಗಿದಿದ್ದು, ಮಂಜು ಪಾವಗಡ ವಿಜೇತರಾಗಿದ್ದಾರೆ. ಕನ್ನಡದಲ್ಲಿ ಹೊಸ ಸೀಸನ್ ಅನ್ನು ಈಗಲೇ ಪ್ರಾರಂಭ ಮಾಡುವ ಉಮೇದು ಆಯೋಜಕರಿಗಿಲ್ಲ. ಆದರೆ ಮುಂದಿನ ತಿಂಗಳು ಪ್ರಾರಂಭವಾಗಲಿರುವ ಐಪಿಎಲ್ ಮುಗಿದ ಬಳಿಕ ಹೊಸ ಸೀಸನ್ ಆರಂಭ ಮಾಡುವ ಸಾಧ್ಯತೆ ಇದೆ.

ಇನ್ನು ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ನಟ ಕಮಲ್‌ಹಾಸ್ 'ವಿಕ್ರಂ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ಹಾಗೂ ವಿಜಯ್ ಸೇತುಪತಿ ಸಹ ಇದ್ದಾರೆ. 'ವಿಶ್ವರೂಪಂ 3', 'ಇಂಡಿಯನ್ 2' ಸಿನಿಮಾಗಳಲ್ಲಿಯೂ ಕಮಲ್ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಮಹೇಶ್ ನಾರಾಯಣ್ ನಿರ್ದೇಶನದ 'ತೇವರ್ ಮಗನ್ 2', ಮಲಯಾಳಂನ 'ದೃಶ್ಯಂ 2'ನ ತಮಿಳು ರೀಮೇಕ್‌ನಲ್ಲಿ ನಟಿಸಲಿದ್ದಾರೆ. ಇದರ ಜೊತೆಗೆ 'ತಲೈವಾರ್ ಇರುಕ್ಕಿಂಡ್ರಾನ್' ಸಿನಿಮಾವನ್ನು ಅವರೇ ನಿರ್ದೇಶನ ಮಾಡಲಿದ್ದಾರೆ.

More from Filmibeat

English summary
Tamil Bigg Boss season 5 will air soon. Kamal Haasan will host the show. Promo shooting with Kamal Haasan has already done.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X