ಕುರಿ ಪ್ರತಾಪ್ 'ಬಿಗ್ ಬಾಸ್' ಹೋಗೋದನ್ನು ರಿವೀಲ್ ಮಾಡಿದ '99'
Recommended Video
ಕನ್ನಡ ಬಿಗ್ ಬಾಸ್ - 7ನೇ ಸೀಸನ್ ಗೆ, ಭಾನುವಾರ (ಅ 13) ಅದ್ದೂರಿ ಚಾಲನೆ ಸಿಕ್ಕಿದೆ. ಹದಿನೆಂಟು ಸ್ಪರ್ಧಾಳುಗಳು ಬಿಗ್ ಬಾಸ್ ಮನೆಯೊಳಗೆ ಬಲಗಾಲಿಟ್ಟು ಪ್ರವೇಶಿಸಿದ್ದಾರೆ.
ಮೊದಲನೇ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ ಕುರಿ ಪ್ರತಾಪ್ ಮತ್ತು ನಿರೂಪಕ, ಕಿಚ್ಚ ಸುದೀಪ್ ನಡುವಿನ ಸಂಭಾಷಣೆ, ಮೊದಲ ದಿನದ ಕಾರ್ಯಕ್ರಮದ ಹೈಲೆಟ್ಸ್ ಆಗಿತ್ತು.
ಕಾರ್ಯಕ್ರಮದಲ್ಲಿ ಕುರಿ ಪ್ರತಾಪ್ ಬಗ್ಗೆ ಸುದೀಪ್ ಬೇಸರವನ್ನು ವ್ಯಕ್ತಪಡಿಸಿದ್ದರು. "ಬಿಗ್ ಬಾಸ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಡುವ ಸ್ಪರ್ಧಿಗಳು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು ಎನ್ನುವ ನಿಯಮವಿದೆ. ನೀವು ಅದನ್ನು ಪಾಲಿಸಿಲ್ಲ" ಎಂದು ಸುದೀಪ್, ಪ್ರತಾಪ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.
ಬಿಗ್ ಬಾಸ್ ಗೆ ಹೋಗುತ್ತಿದ್ದೇನೆ ಎನ್ನುವುದು ಹೇಗೆ ಬಹಿರಂಗಗೊಂಡಿತು ಎನ್ನುವುದನ್ನು ಕುರಿ ಪ್ರತಾಪ್ ತಮ್ಮದೇ ರೀತಿಯಲ್ಲಿ ವಿವರಿಸುತ್ತಿದ್ದರು. " 99ರಿಂದ ನಾನು ಕಾರ್ಯಕ್ರಮಕ್ಕೆ ಹೋಗುವುದು ರಿವೀಲ್ ಆಯಿತು" ಎಂದು ಕುರಿ ಸ್ಪಷ್ಟನೆಯನ್ನು ನೀಡಿದರು.

ನಾನು ಕೆಲವು ತಿಂಗಳ ಹಿಂದೆ ಮಾಲ್ ಗೆ ಹೋಗಿದ್ದೆ
"ನಾನು ಕೆಲವು ತಿಂಗಳ ಹಿಂದೆ ಮಾಲ್ ಗೆ ಹೋಗಿದ್ದೆ. ಮಾಲ್ ನಲ್ಲಿ ಖರೀದಿಸಿ ಹಿಂದಿರುಗಿದಾಗ, ಯಾರೋ ಒಬ್ಬರು ಬಿಗ್ ಬಾಸ್ ಗೆ ಹೋಗುತ್ತಿದ್ದೀರಾ ಎಂದು ಪ್ರಶ್ನಿಸಿದರು. ನಾನು ಒಂದು ಕ್ಷಣ ಶಾಕ್ ಆದೆ. ಇಲ್ಲಪ್ಪಾ ನಾನು ಹೋಗುತ್ತಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದೆ. ಅದಕ್ಕೆ ಅವರು, ಇಲ್ಲಾ ಸಾರ್ ನೀವು ಹೋಗುತ್ತಿದ್ದೀರಾ ಎಂದು ಹೇಳಿದ್ರು" ಎಂದು ಕುರಿ ಪ್ರತಾಪ್, ಸುದೀಪ್ ಗೆ ವಿವರಿಸಿದರು.

ಅಂಡರ್ ವೇರ್ ನಿಂದ ಗೊತ್ತಾಯಿತು ಸರ್ ಎಂದರು
"ನಿಮಗೆ ಹೇಗೆ ಗೊತ್ತಾಯಿತು" ಎಂದು ನಾನು ಅವರಲ್ಲಿ ಕೇಳಿದಾಗ ಅಂಡರ್ ವೇರ್ ನಿಂದ ಗೊತ್ತಾಯಿತು ಸರ್ ಎಂದರು. ನಾನು, ಪ್ಯಾಂಟ್ ಸುತ್ತ ನೋಡಿಕೊಂಡೆ. ನಿಮಗೆ ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಿದೆ. ಅದಕ್ಕೆ 99 ಅಂಡರ್ ವೇರ್ ಖರೀದಿ ಮಾಡಿದಿರಲ್ವಾ, ಅದರಿಂದ ಗೊತ್ತಾಯಿತು ಎಂದು ನನಗೆ ಅವರು ಹೇಳಿದರು" ಎಂದು ಸುದೀಪ್ ಗೆ ಕುರಿ ಪ್ರತಾಪ್ ವಿವರಣೆಯನ್ನು ನೀಡಿದರು.

99 ಅಂಡರ್ ವೇರ್ ಯಾರು ತೆಗೆದುಕೊಂಡು ಹೋಗುತ್ತಾರೆ
" ಇಲ್ಲಪ್ಪಾ, ನಾನು ಊರಿಗೆ ಹೋಗುತ್ತಿದ್ದೇನೆ ಎಂದು ಹೇಳಿದೆ. ಅದಕ್ಕೆ ಅವರು, ಊರಿಗೆ ಹೋಗುವವರು 99 ಅಂಡರ್ ವೇರ್ ಯಾರು ತೆಗೆದುಕೊಂಡು ಹೋಗುತ್ತಾರೆ ಎಂದು ಮರು ಪ್ರಶ್ನಿಸಿದರು. ನೀವು ಅಷ್ಟು ಅಂಡರ್ ವೇರ್ ಪರ್ಚೇಸ್ ಮಾಡಿರುವುದರಿಂದಲೇ ಈ ಅನುಮಾನ ಎಂದು ನನಗೆ ಹೇಳಿದರು" ಎಂದು ಕುರಿ ಪ್ರತಾಪ್, ಸುದೀಪ್ ಗೆ ವಿವರಿಸುತ್ತಿದ್ದರು.

ಬಿಗ್ ಬಾಸ್ ಗೆ ಹೋಗುತ್ತಿರುವವರನ್ನು ಕಂಡು ಹಿಡಿದ ಏಕೈಕ ವ್ಯಕ್ತಿ ನೀವು
"ಅಂಡರ್ ವೇರ್ ಮೂಲಕ, ಬಿಗ್ ಬಾಸ್ ಗೆ ಹೋಗುತ್ತಿರುವವರನ್ನು ಕಂಡು ಹಿಡಿದ ಏಕೈಕ ವ್ಯಕ್ತಿ ನೀವು" ಎಂದು ನಗುತ್ತಾ, ಮಾಲ್ ನಿಂದ ಹೊರಟೆ ಎಂದು ಕುರಿ ಪ್ರತಾಪ್ ವಿವರಿಸುತ್ತಿದ್ದರು. ಈ ಬಾರಿಯ ಬಿಗಿ ಬಾಸ್ ಗೆ ಕುರಿ ಪ್ರತಾಪ್ ಹೋಗುವುದು ಕನ್ಫರ್ಮ್ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಬಿಗ್ ಬಾಸ್ ಮನೆಯ ರೂಲ್ಸ್ ಬುಕ್ ಓದಿದ ಕುರಿ ಪ್ರತಾಪ್
ಇಂಗ್ಲಿಷ್ ನಲ್ಲಿ ಬಿಗ್ ಬಾಸ್ ಮನೆಯ ರೂಲ್ಸ್ ಬುಕ್ ಓದಿದ ಕುರಿ ಪ್ರತಾಪ್ ಶೈಲಿಗೆ ಎಲ್ಲರು ಹೊಟ್ಟೆ ಹುಣ್ಣಾಗುವಂತೆ ನಕ್ಕರು. ಮೊದಲ ದಿನವೆ ವೇದಿಕೆ ಮೇಲೆ ಎಲ್ಲರನ್ನು ನಗಿಸಿದ ಪ್ರತಾಪ್ ಮನೆಯೊಳಗೆ ಎಷ್ಟು ಮನರಂಜನೆ ನೀಡಲಿದ್ದಾರೆ ನೀಡಲಿದ್ದಾರೆ ಎನ್ನುವುದು ಪ್ರೇಕ್ಷಕರ ಕುತೂಹಲ.


Click it and Unblock the Notifications











