ಇವುಗಳಲ್ಲಿ ಅತೀ ಹೆಚ್ಚು ಹಣ ಗಳಿಸುವ ಕನ್ನಡದ ಧಾರಾವಾಹಿ ಯಾವುದು ಗೊತ್ತೇ? ಒಂದು ಎಪಿಸೋಡ್‌ಗೆ ಎಷ್ಟು ಲಕ್ಷ?

ಒಂದು ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವುದರಿಂದ ಹಣ ಗಳಿಸುತ್ತೆ. ಓಟಿಟಿ, ಸ್ಯಾಟಲೈಟ್‌ ಹಕ್ಕುಗಳನ್ನು ಸೇಲ್ ಮಾಡುವುದರಿಂದ ಹಣ ಗಳಿಸುತ್ತೆ. ಆಡಿಯೋ ರೈಟ್ಸ್, ಡಬ್ಬಿಂಗ್ ರೈಟ್ಸ್ ಅಂತ ಕೋಟಿ ಲೆಕ್ಕದಲ್ಲಿ ದುಡ್ಡು ಮಾಡುತ್ತೆ. ಸಿನಿಮಾ ನಿರ್ಮಾಣ ಮಾಡುವುದಕ್ಕೂ ಕೋಟಿ ಬೇಕು. ಗಳಿಸುವುದು ಕೂಡ ಕೋಟಿ ಲೆಕ್ಕದಲ್ಲಿಯೇ. ಆದರೆ, ಧಾರಾವಾಹಿಗಳು ಹೇಗೆ ಹಣ ಗಳಿಸುತ್ತವೆ ಅನ್ನೋದು ನಿಮಗೆ ಗೊತ್ತೇ?

ಹಣ ಗಳಿಸುವ ವಿಚಾರದಲ್ಲಿ ಸಿನಿಮಾಗೆ ಹೋಲಿಸಿದರೆ, ಧಾರಾವಾಹಿಗಳ ಹಾದಿ ಕೊಂಚ ವಿಭಿನ್ನ. ಸಿನಿಮಾದಂತೆ ಆಯ್ಕೆಗಳು ಇಲ್ಲಿ ಕಮ್ಮಿ. ಬೇರೆ ಬೇರೆ ಮೂಲಗಳಿಂದ ಹಣ ಹರಿದು ಬರುವುದಿಲ್ಲ. ಇಲ್ಲೇನಿದ್ದರೂ ವಾಹಿನಿಯೇ ಕಿರುತೆರೆ ನಿರ್ಮಾಪಕರು ಹಣ ನೀಡಬೇಕು. ಧಾರಾವಾಹಿ ಟಿಆರ್‌ಪಿ ಗಳಿಸುವಲ್ಲಿ ಸಕ್ಸಸ್ ಆದರೆ ಮುಗಿದೇ ಹೋಯ್ತು. ಹಣ ಹರಿದು ಬರುತ್ತಲೇ ಇರುತ್ತೆ. ಹಾಗಂತ ನಿರ್ಮಾಪಕರಿಗೆ ದೊಡ್ಡ ಮಟ್ಟದಲ್ಲಿ ಲಾಭ ಆಗುತ್ತೆ ಅಂತಲ್ಲ.

These Serials Are Getting High Payment from Entertainment Channels Here is the Details

ಕನ್ನಡದಲ್ಲಿ ಹತ್ತು ಹಲವು ಧಾರಾವಾಹಿಗಳನ್ನು ಮನರಂಜನಾ ವಾಹಿನಿಗಳು ನಿರ್ಮಾಣ ಮಾಡುತ್ತಿವೆ. ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ, ಉದಯ ಟಿವಿ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದೆ. ಹಾಗಿದ್ದರೆ, ಈ ನಾಲ್ಕು ವಾಹಿನಿಗಳಲ್ಲಿ ಯಾವ ಧಾರಾವಾಹಿಗೆ ಹೆಚ್ಚು ಹಣ ಸಿಗುತ್ತೆ? ಒಂದು ಎಪಿಸೋಡ್‌ಗೆ ಧಾರಾವಾಹಿಗಳನ್ನು ಗಳಿಸುವ ಹಣ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

ಹೈಲೈಟ್ಸ್

ಧಾರಾವಾಹಿಗಳಲ್ಲಿ ಹಣ ಗಳಿಸುವುದು ಸಿನಿಮಾಗಿಂತ ವಿಭಿನ್ನ
ಧಾರಾವಾಹಿಗಳ ನಿರ್ಮಾಪಕರಿಗೆ ವಾಹಿನಿಯೇ ಹಣ ಕೊಡುತ್ತೆ
ಒಂದು ಧಾರಾವಾಹಿಗೆ ಎಷ್ಟು ಲಕ್ಷದವರಗೆಗೂ ಹಣ ಬರುತ್ತೆ?
ಅತೀ ಹೆಚ್ಚು ಹಣ ಪಡೆಯುತ್ತಿರುವ ಧಾರಾವಾಹಿ ಯಾವುದು?

ಅತೀ ಹಣ ಪಡೆಯುತ್ತಿರುವ ಧಾರಾವಾಹಿ ಯಾವುದು ಅಂತ ತಿಳಿದುಕೊಳ್ಳುವುದಕ್ಕೂ ಮುನ್ನ ನಿರ್ಮಾಪಕರಿಗೆ ಹಣ ಹೇಗೆ ಕೈ ಸೇರುತ್ತೆ ಅನ್ನೋದನ್ನು ತಿಳಿದುಕೊಳ್ಳೋಣ. ಕಿರಿತೆರೆಯಲ್ಲಿ ಒಂದು ಹೊಸ ಧಾರಾವಾಹಿ ಆರಂಭ ಆದರೆ, ಮೊದಲ ಎಪಿಸೋಡ್‌ನಿಂದಲೇ ಹಣ ಬರುವುದಿಲ್ಲ. ಯಾವುದೇ ವಾಹಿನಿಯು 45 ಎಪಿಸೋಡ್‌ಗಳವರೆಗೆ ಹಣವನ್ನು ನೀಡುವುದಿಲ್ಲ. ಅದನ್ನು ನಿರ್ಮಾಪಕರೇ ಭರಿಸಬೇಕಾಗುತ್ತೆ. ಆನಂತರವಷ್ಟೇ ವಾಹಿನಿಗಳು ಒಂದು ಎಪಿಸೋಡ್‌ಗೆ ಇಷ್ಟು ಹಣ ಅಂತ ರಿಲೀಸ್ ಮಾಡುತ್ತೆ.

These Serials Are Getting High Payment from Entertainment Channels Here is the Details

ಮೊದಲ 45 ಎಪಿಸೋಡ್ ಹಣ ಕೊಡಲ್ಲ

ಇದು ಕೇವಲ ಕನ್ನಡದ ಕಿರುತೆರೆಯಲ್ಲಷ್ಟೇ ಅಲ್ಲ. ಭಾರತದಾದ್ಯಂತ ಇದೇ ಪದ್ಧತಿಯಿದೆ. "ಭಾರತದ ಯಾವುದೇ ಭಾಷೆಯ ಮನೊರಂಜನಾ ವಾಹಿನಿಯೂ ಇದೇ ಮಾದರಿಯಲ್ಲಿ ಕೆಲಸ ಮಾಡುತ್ತೆ. ಮೊದಲ 45 ಎಪಿಸೋಡ್‌ಗಳನ್ನು ವಾಹಿನಿ ಕೊಡುವುದಿಲ್ಲ. ಅದನ್ನು ನಿರ್ಮಾಪಕರೇ ಭರಿಸಬೇಕು. ಇದಕ್ಕೆ ಕಾರಣವೂ ಇದೆ. ಒಂದು ವೇಳೆ 10 ರಿಂದ 15 ಎಪಿಸೋಡ್ ಮಾಡಿ ಕೈ ಕೊಟ್ಟು ಹೋದರೆ, ಅದನ್ನು ವಾಹಿನಿಯೇ ಭರಿಸಬೇಕಾಗುತ್ತೆ. ಹೀಗಾಗಿ ನಿರ್ಮಾಪಕರೇ ಹಣವನ್ನು ಹಾಕಬೇಕಾಗುತ್ತೆ. ಧಾರಾವಾಹಿ ಮುಗಿದ ಬಳಿಕ ಆ ಹಣವನ್ನು ಕೊನೆಯಲ್ಲಿ ಹಿಂತಿರುಗಿಸಲಾಗುತ್ತೆ." ಎಂದು ಕಿರುತೆರೆಯ ಮೂಲಗಳು ಫಿಲ್ಮೀಬೀಟ್‌ ಜೊತೆ ಹಂಚಿಕೊಂಡಿವೆ.

ಯಾವ ಧಾರಾವಾಹಿಗೆ ಅತೀ ಹೆಚ್ಚು ಹಣ

ಧಾರಾವಾಹಿ ಆರಂಭ ಆದ ಆರಂಭದಲ್ಲಿ ಒಂದು ಎಪಿಸೋಡ್‌ಗೆ ನಿರೀಕ್ಷೆಗಿಂತ ಹೆಚ್ಚು ಹಣವನ್ನೇ ವಾಹಿನಿ ಫಿಕ್ಸ್ ಮಾಡುತ್ತೆ. ಟಿಆರ್‌ಪಿ ಚೆನ್ನಾಗಿ ಬಂದರೆ, ಬಿಡುಗಡೆ ಹಣವನ್ನು ಏರಿಕೆ ಮಾಡುತ್ತೆ. ಸದ್ಯ ಕನ್ನಡ ಕಿರುತೆರೆಯಲ್ಲಿ ಒಂದು ಎಪಿಸೋಡ್‌ಗೆ ಅತೀ ಹೆಚ್ಚು ಹಣವನ್ನು ಪಡೆಯುತ್ತಿರುವ ಧಾರಾವಾಹಿ 'ಶ್ರೀ ರಾಘವೇಂದ್ರ ಮಹಾತ್ಮೆ' ಎನ್ನಲಾಗಿದೆ. ಈ ಧಾರಾವಾಹಿ ಒಂದು ಎಪಿಸೋಡ್‌ಗೆ ₹2 ಲಕ್ಷ ಪಡೆಯುತ್ತಿದ್ದು, ₹50 ಸಾವಿರ ಹೆಚ್ಚುವರಿಯಾಗಿ ವಿಎಫ್‌ಎಕ್ಸ್‌ಗೆ ನೀಡಲಾಗುತ್ತಿದೆ ಎಂಬುವುದು ಕಿರುತೆರೆಯಲ್ಲಿ ಹರಿದಾಡುತ್ತಿರುವ ಸುದ್ದಿ.

ಇದು ಬಿಟ್ಟರೆ, ಜೀ ಕನ್ನಡದಲ್ಲಿಯೇ ಪ್ರಸಾರ ಆಗುತ್ತಿರುವ 'ಕರ್ಣ' ಧಾರಾವಾಹಿಗೆ ಒಂದು ಎಪಿಸೋಡ್‌ಗೆ ₹1.70 ಲಕ್ಷಕ್ಕೂ ಹೆಚ್ಚು ಹಣವನ್ನು ನೀಡಲಾಗುತ್ತಿದೆ ಎಂಬುದು ಕಿರುತೆರೆಯಲ್ಲಾಗುತ್ತಿರುವ ಚರ್ಚೆ. ಅಂದ್ಹಾಗೆ ಈ ಅಂಕಿ ಅಂಶಗಳು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಇದನ್ನು ವಾಹಿನಿಗಳಾಗಲಿ, ನಿರ್ಮಾಣ ಸಂಸ್ಥೆಗಳಾಗಿ ಬಹಿರಂಗ ಪಡಿಸಿಲ್ಲ. ಈ ಅಂಶಗಳಲ್ಲಿ ಏರು-ಪೇರಾಗಿರುವ ಸಾಧ್ಯತೆಯಿದೆ.

More from Filmibeat

English summary
Top entertainment channels are paying huge amounts for popular serials. Here are the details of the high-budget TV serials that are ruling TRP charts and earning massive payments from broadcasters.
Read more about: serial payment
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X