'ಹಿಟ್ಲರ್ ಕಲ್ಯಾಣ'ದ AJ ಮನಸ್ಸು ಲೀಲಾಗೆ ಅರ್ಥ ಆಗ್ತಿಲ್ಲ: ಇವತ್ತಾದ್ರೂ ಆಗುತ್ತಾ?
ಧಾರಾವಾಹಿ ಅಂದ್ರೆ ಟ್ವಿಸ್ಟ್.. ಟ್ವಿಸ್ಟ್ ಅಂದರೆ ಧಾರಾವಾಹಿ ಅನ್ನುವ ಹಾಗಾಗಿದೆ. ಪ್ರತಿ ದಿನ ಏನಾದರೂ ಒಂದು ಟ್ವಿಸ್ಟ್ ಕೊಟ್ಟ ಸೀರಿಯಲ್ ಮುಗಿಸಿಬಿಡ್ತಾರೆ. ಮಾರನೇ ದಿನ ಜಪ್ಪಯ್ಯ ಅಂದರೂ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯನೇ ಇಲ್ಲ. ಇನ್ನು ಮನೆಯಲ್ಲಿರುವ ಹೆಣ್ಣು ಮಕ್ಕಳು ಊಟ ಬೇಕಾದರೂ ಬಿಡುತ್ತಾರೆ. ಹೀಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುವ ಧಾರಾವಾಹಿಗಳನ್ನು ಮಾತ್ರ ಬಿಟ್ಟಿರುವುದಿಲ್ಲ. ಅದಕ್ಕೆ ಮನರಂಜನಾ ವಾಹಿನಿಗಳಲ್ಲಿ ಸೀರಿಯಲ್‌ಗಳ ಮೇಲೆ ಸೀರಿಯಲ್‌ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಂದ್ಹಾಗೆ ಜೀ ಕನ್ನಡದ ನಂಬರ್ ಒನ್ ಧಾರಾವಾಹಿ 'ಹಿಟ್ಲರ್ ಕಲ್ಯಾಣ'ದಲ್ಲೂ ಟ್ವಿಸ್ಟ್‌ಗೇನು ಕಮ್ಮಿಯಿಲ್ಲ. ಇವತ್ತು ಸೀರಿಯಲ್‌ನಲ್ಲಿ ಏನು ನಡೆಯುತ್ತೆ ಅಂತ ನೋಡಿ.
ಜೀ ಕನ್ನಡ ವಾಹಿನಿದ 'ಹಿಟ್ಲರ್ ಕಲ್ಯಾಣ' ಆರಂಭದಿಂದಲೂ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಅಂತ ಅನಿಸುತ್ತಿದೆ. ಉದ್ಯಮಿಯಾಗಿರುವ ಧಾರಾವಾಹಿಯ ಹೀರೋ ಎಜೆ. ಸದಾ ಎಡವಟ್ಟುಗಳನ್ನು ಮಾಡಿಕೊಳ್ಳುವ ನಾಯಕಿ ಲೀಲಾ. ಇವರಿಬ್ಬರ ನಡುವಿನ ಕಿತ್ತಾಟ, ಸೆಂಟಿಮೆಂಟ್. ಆಗಾಗ ಕಥೆಯಲ್ಲಿ ಟ್ವಿಸ್ಟ್ ಅಂಡ್ ಟರ್ನ್‌ಗಳು. ಇವೆಲ್ಲದರಿಂದ 'ಹಿಟ್ಲರ್ ಕಲ್ಯಾಣ' ಹಿಟ್ ಮೇಲೆ ಹಿಟ್ ಬಾರಿಸುತ್ತಲೇ ಇದೆ. ಇಂದಿನ ಸಂಚಿಕೆಯಲ್ಲಿ ಏನು ನಡೆಯುತ್ತೆ? ಅನ್ನುವುದು ಮತ್ತಷ್ಟು ಕುತೂಹಲ

ಎಜೆ ಮನಸ್ಸು ಲೀಲಾ ಅರ್ಥ ಆಗುತ್ತಾ?
ಎಜೆ ಎಲ್ಲದರಲ್ಲೂ ಪರ್ಫೆಕ್ಟ್. ಲೀಲಾ ಎಡವಟ್ಟುಗಳ ರಾಣಿ. ಇಬ್ಬರ ಸಂಸಾರ ಇವುಗಳ ತಿಕ್ಕಾಟದಲ್ಲೇ ಮುಂದೆ ಸಾಗುತ್ತಿದೆ. ಆಗಾಗ ಗಂಭೀರವಾಗಿರುವ ಎಜೆ ಮೂಖದಲ್ಲಿ ನಗುನೂ ಬರುತ್ತೆ. ಲೀಲಾ ಮೇಲೆ ಪ್ರೀತಿ ಉಕ್ಕುತ್ತೆ. ಇತ್ತ ಲೀಲಾ ಮತ್ತೆ ಏನಾದರೂ ಒಂದು ಎಡವಟ್ಟು ಮಾಡಿಕೊಂಡು ಎಜೆ ಕೋಪಕ್ಕೆ ಕಾರಣ ಆಗುತ್ತೆ. ಆದರೆ, ಆ ಗಂಭೀರ ಮನಸ್ಥಿತಿಯ ಹಿಂದಿರುವ ಎಜೆ ಮನಸ್ಸನ್ನು ಲೀಲಾ ಅರ್ಥ ಮಾಡಿಕೊಂಡಿದ್ದಾಳಾ ಇಲ್ಲವಾ? ಅನ್ನುವುದೇ 'ಹಿಟ್ಲರ್ ಕಲ್ಯಾಣ'ದ ಅತೀ ದೊಡ್ಡ ಸೀಕ್ರೆಟ್. ಅದು ಗೊತ್ತಾದರೆ, ಧಾರಾವಾಹಿಯನ್ನೇ ಮುಗಿಸಬೇಕಾಗಬಹುದು. ಆದರೆ, ಇವತ್ತಿನ ಸಂಚಿಕೆಯ ಮಟ್ಟಿಗೆ ಅರ್ಥ ಮಾಡಿಕೊಳ್ಳುತ್ತಾಳಾ ಅನ್ನುವುದು ಕುತೂಹಲ.

ಪ್ರೋಮೊ ಏನು ಹೇಳ್ತಿದೆ?
ಟಿವಿ ಲೋಕದ ಜನಪ್ರಿಯ ಧಾರಾವಾಹಿ 'ಹಿಟ್ಲರ್ ಕಲ್ಯಾಣ' ಪ್ರತಿದಿನ ಒಂದೊಂದು ಹಿಟ್ ಕೊಡುತ್ತೆ. ಅದರ ಪ್ರಕಾರ, ಪವಿತ್ರಾಗೆ ಇವತ್ತಾದರೂ ಕೋಮಾದಿಂದ ಹೊರಬರಬಹುದಾ? ಅನ್ನೋ ಪ್ರಶ್ನೆ ಎದ್ದಿದೆ. ಎಚ್ಚರವಿಲ್ಲದೆ ಮಲಗಿದ್ದ ಪವಿತ್ರಾ ಜೊತೆ ಎಜೆ ಮಾತಾಡುವಾಗ, ಲೀಲಾ ಎಂಟ್ರಿ ಆಗುತ್ತೆ. ಇಬ್ಬರ ನಡುವೆ ಒಂದಿಷ್ಟು ಮಾತುಕತೆ ನಡೆಯುತ್ತೆ. ಲೀಲಾಳದ್ದು ಒಂದಿಷ್ಟು ಹುಡುಕಾಟ. ಇವೆಲ್ಲದ ಮಧ್ಯೆ ಪ್ರವಿತ್ರಾ ಕೋಮಾದಿಂದ ಹೊರಬರುವ ಸುಳಿವು ಸಿಕ್ಕಿದೆ. ಮುಂದೇನಾಗುತ್ತೆ ಅನ್ನುವುದು ಇಂದಿನ ಸಂಚಿಕೆಯಲ್ಲಿ ನೋಡಿ.

ಅಂತರಾ ಕತೆಯೇನು?
'ಹಿಟ್ಲರ್ ಕಲ್ಯಾಣ' ಆರಂಭ ಆದಲ್ಲಿಂದ ಎಜೆ ಮೊದಲ ಪತ್ನಿ 'ಅಂತರಾ' ಸಾವನ್ನಪ್ಪಿದ್ದಾರೆ ಎಂದೇ ತೋರಿಸಲಾಗಿತ್ತು. ಆದರೆ, ಧಾರಾವಾಹಿಯಲ್ಲಿ ಏನು ಬೇಕಾದರೂ ಆಗುತ್ತೆ. ಅದಕ್ಕೆ ಜನರು ಮುಗಿಬಿದ್ದು ಸೀರಿಯಲ್ ನೋಡುತ್ತಾರೆ. ಕೆಲವೇ ದಿನಗಳ ಹಿಂದಿನ ಕಥೆ. ಎಜೆ ಲೀಲಾಳನ್ನು ವಿವಾಹವಾಗಿದ್ದರೂ, ಅಂತರಾಳನ್ನು ಮನಸ್ಸಿಂದ ದೂರ ಮಾಡಿಲ್ಲ. ಅಂತರಾಳನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಎಜೆ ಕಲ್ಪನೆಯಲ್ಲೂ ಅಂತರಾ ಬಂದಿದ್ದರು. ಹೀಗಾಗಿ ಲೀಲಾ, ಅಂತರಾ, ಎಜೆ ' ಹಿಟ್ಲರ್ ಕಲ್ಯಾಣದಲ್ಲಿ ಬೇಜಾನ್ ಟ್ವಿಸ್ಟ್ ಸಿಗಬಹುದು ನೋಡಿ.

'ಹಿಟ್ಲರ್ ಕಲ್ಯಾಣ' ಜಾತ್ರೆ
ಕಿರುತೆರೆಯಲ್ಲಿ 'ಹಿಟ್ಲರ್ ಕಲ್ಯಾಣ' ಯಶಸ್ವಿ ಧಾರಾವಾಹಿ ಎನಿಸಿಕೊಂಡಿದೆ. ಅತಿ ಹೆಚ್ಚು ಟಿಆರ್‌ಪಿ ಗಿಟ್ಟಿಸಿಕೊಳ್ಳುತ್ತಿರುವ ಈ ಧಾರಾವಾಹಿ ತಂಡ ಕೊಪ್ಪಳದ ಯಲಬುರ್ಗಾದಲ್ಲಿ ಹಿಟ್ಲರ್ ಜಾತ್ರೆಯನ್ನು ಮಾಡಿದ್ದಾರೆ. ಇದು ಇದು ಮಾರ್ಚ್ 6 ರಂದು ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ. ಎಜೆ, ಲೀಲಾ, ದುರ್ಗಾ, ಲಕ್ಷ್ಮಿ, ಸರಸ್ವತಿ, ಅಂತರಾ ಪಾತ್ರಧಾರಿಗಳು ಜೊತೆಗೆ ಸಂವಾದ ಮಾಡಬಹುದು ಎನ್ನಲಾಗಿದೆ.


Click it and Unblock the Notifications











