For Quick Alerts
  ALLOW NOTIFICATIONS  
  For Daily Alerts

  ದೀಪಾವಳಿಗೂ ಮುನ್ನ ಕಿರುತೆರೆಯಲ್ಲಿ ಇದೇನು ಹಬ್ಬ?

  |

  ಹಬ್ಬ ಹರಿದಿನಗಳ ಸಮಯದಲ್ಲಿ ಅಥವಾ ಸಾಲು ಸಾಲು ರಜೆಯ ಸಮಯದಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ಪೈಪೋಟಿಗೆ ಬಿದ್ದಂತೆ ಟಿವಿ ವಾಹಿನಿಗಳು ಪ್ರಸಾರ ಮಾಡುವುದು ವಾಡಿಕೆ.

  ಆದರೆ ಆದ್ಯಾಕೋ ಟಿವಿ ವಾಹಿನಿಗಳು ಇತ್ತೀಚೆಗೆ ತಮ್ಮ strategy ಬದಲಾಯಿಸಿ ಕೊಂಡಂತಿದೆ. ದಸರಾ ಹಬ್ಬದ ಸಮಯದಲ್ಲೂ ಕಿರುತೆರೆಯಲ್ಲಿ ಹಿಟ್ ಚಿತ್ರಗಳು ಪ್ರಸಾರವಾಗಿರಲಿಲ್ಲ.

  ಇದೇ ಶುಕ್ರವಾರದಿಂದ (ನ1) ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ನಾಲ್ಕು ದಿನಗಳ ಕಾಲ ಸತತ ರಜಾ.

  ಆದರೆ ಅದಕ್ಕೆ ಒಂದು ವಾರದ ಮುನ್ನವೇ ಅಂದರೆ ಭಾನುವಾರ (ಅ 27) ದಂದು ಮೂರು ಸೂಪರ್ ಹಿಟ್ ಚಿತ್ರಗಳು ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

  ಭಾನುವಾರ ಪ್ರಸಾರವಾಗಲಿರುವ ಹಿಟ್ ಚಿತ್ರಗಳು ಯಾವುವು? ಸ್ಲೈಡಿನಲ್ಲಿ ನೋಡಿ..

  ಬಚ್ಚನ್

  ಬಚ್ಚನ್

  ಆಂಗ್ರಿ ಯಂಗ್ ಮ್ಯಾನ್ ಪಾತ್ರದಲ್ಲಿ ನಟಿಸಿದ್ದ ಸುದೀಪ್ ಅಭಿನಯದ ಬಚ್ಚನ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದ್ದು ಮಾಡಿತ್ತು. ಚಿತ್ರದ ಡೈಲಾಗುಗಳು ಮೇಜರ್ ಹೈಲೈಟ್ಸ್. ಖುಷಿಯಾಗಿದ್ದಾಗ ದೇವರು ಎಂತೆಂಥವರನ್ನೋ ಸೃಷ್ಟಿಸುತ್ತಾನೆ. ಆದರೆ ಕೋಪ ಬಂದಾಗ ಮಾತ್ರ ನನ್ನಂಥವನನ್ನು ಸೃಷ್ಟಿಸುತ್ತಾನೆ. ಸುಮ್ಮನ್ 'ಇರಾನ್' ಅಂದ್ರೆ 'ಇರಾಕ್' ಬಿಡಲ್ವೆ. ನಾನು ಕೂಲಾಗಿದ್ರೆ ಜಂಟಲ್ ಮ್ಯಾನ್, ಕೋಪ ಬಂದ್ರೆ ಬಗ್ಗಿಸಿ ಬಗ್ಗಿಸಿ ಹೊಡೆಯೋ ಬಚ್ಚನ್..." ಈ ರೀತಿಯ ಡೈಲಾಗ್ ಗಳಿಂದಲೇ ಸುದೀಪ್ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ.

  ಉದಯ ಟಿವಿ

  ಉದಯ ಟಿವಿ

  ಬಚ್ಚನ್ (Angry young man is back)
  ಸಮಯ: ಸಂಜೆ ಆರು ಗಂಟೆಗೆ
  ವಾಹಿನಿ: ಉದಯ ಟಿವಿ
  ತಾರಾಗಣದಲ್ಲಿ: ಸುದೀಪ್, ಭಾವನಾ, ಪಾರುಲ್ ಯಾದವ್, ತುಲಿಪ್ ಜೋಷಿ, ಜಗಪತಿ ಬಾಬು, ರವಿಶಂಕರ್, ಆಶಿಸ್ ವಿದ್ಯಾರ್ಥಿ
  ಸಂಗೀತ: ಹರಿಕೃಷ್ಣ
  ನಿರ್ದೇಶನ: ಶಶಾಂಕ್
  ಬಚ್ಚನ್ ಚಿತ್ರ ವಿಮರ್ಶೆ

  ವರದನಾಯಕ

  ವರದನಾಯಕ

  2007ರಲ್ಲಿ ಬಿಡುಗಡೆಗೊಂಡಿದ್ದ ಗೋಪಿಚಂದ್, ಜಗಪತಿ ಬಾಬು, ಅನೂಕ್ಷ ಪ್ರಮುಖ ಭೂಮಿಕೆಯಲ್ಲಿದ್ದ ತೆಲುಗು ಲಕ್ಷ್ಯಂ ಚಿತ್ರದ ರಿಮೇಕ್ 'ವರದನಾಯಕ' ಚಿತ್ರ. ಈ ಚಿತ್ರ ಕೂಡಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿತ್ತು.

  ಸುವರ್ಣ ಟಿವಿ

  ಸುವರ್ಣ ಟಿವಿ

  ವರದನಾಯಕ
  ಸಮಯ: ಸಂಜೆ ಆರು ಗಂಟೆಗೆ
  ವಾಹಿನಿ : ಸುವರ್ಣ ಟಿವಿ
  ತಾರಾಗಣದಲ್ಲಿ: ಸುದೀಪ್, ಚಿರಂಜೀವಿ ಸರ್ಜಾ, ಸಮೀರಾ ರೆಡ್ಡಿ, ನಿಖೆಶಾ ಪಟೇಲ್, ಶೋಭರಾಜ್
  ಸಂಗೀತ: ಅರ್ಜುನ್ ಜನ್ಯಾ
  ನಿರ್ದೇಶನ: ಅಯ್ಯಪ್ಪ ಶರ್ಮಾ
  ವರದನಾಯಕ ಚಿತ್ರ ವಿಮರ್ಶೆ

  ಆಟೋರಾಜ

  ಆಟೋರಾಜ

  ಆಟೋರಾಜ
  ಜೀ ಟಿವಿ
  ಸಮಯ: ಸಂಜೆ ಐದು ಗಂಟೆ
  ತಾರಾಗಣದಲ್ಲಿ : ಗಣೇಶ್, ಭಾಮಾ,
  ಸಂಗೀತ: ಅರ್ಜುನ್ ಜನ್ಯಾ
  ನಿರ್ದೇಶನ: ಉದಯ್ ಪ್ರಕಾಶ್
  ಆಟೋರಾಜ ಚಿತ್ರ ವಿಮರ್ಶೆ

  English summary
  Three super hit movies in small screen on Oct 27. Udaya TV telecasting Bachchan, Suvarna TV Varadanayaka and Zee Kannada telecasting Auto Raja. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X