Aryavardhan Guruji: ಆರ್ಯವರ್ಧನ್ ಗುರೂಜಿಗೆ 'ಹುಲಿ ಉಗುರು' ತಂದಿಟ್ಟ ಸಂಕಷ್ಟ.. ಬಂಗಾರದ ಪೆಂಡೆಂಟ್ ವಶ!

ಸೆಲೆಬ್ರೆಟಿಗಳಿಗೆ 'ಹುಲಿ ಉಗುರು' ಸಂಕಷ್ಟ ತಂದೊಡ್ಡಿದೆ. ಹುಲಿ ಉಗುರಿನ ಪೆಂಡೆಂಟ್ ಅನ್ನು ವರ್ತೂರು ಸಂತೋಷ್ ಧರಿಸಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರು. ಆ ಬಳಿಕ ಅರಣ್ಯ ಅಧಿಕಾರಿಗಳು ಬಿಗ್ ಬಾಸ್ ಮನೆಗೆ ತೆರಳಿ ವರ್ತೂರ್ ಸಂತೋಷ್‌ರನ್ನು ವಶಕ್ಕೆ ಪಡೆದಿದ್ದರು.

ಇಲ್ಲಿಂದ ಹುಲಿ ಉಗುರು ಧರಿಸಿದ್ದ ಸೆಲೆಬ್ರೆಟಿಗಳ ಹೆಸರು ಬರಲಾರಂಭಿಸಿವೆ. ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರ ಹೆಸರು ಇದೇ ವಿವಾದದಲ್ಲಿ ತಳುಕು ಹಾಕಿಕೊಂಡಿದೆ. ಇನ್ನು ಕೆಲವರಿಗೆ ಆತಂಕ ಹೆಚ್ಚಾಗಿದೆ. ಸದ್ಯಕ್ಕೀಗ ಹುಲಿ ಉಗುರು ವಿವಾದಕ್ಕೆ ಹೊಸ ಹೆಸರು ಸೇರಿಕೊಂಡಿದೆ. ಅವರೇ ಮಾಜಿ ಬಿಗ್ ಬಾಸ್ ಸ್ಪರ್ಧಿ ಆರ್ಯವರ್ಧನ್ ಗುರೂಜಿ.

Tiger Nail Issue: Bigg Boss Kannada Season 9 ex contestant Aryavardhan Guruji tiger claw seize

ಕಳೆದ ಬಿಗ್ ಬಾಸ್ ಸೀಸನ್‌ನಲ್ಲಿ ಆರ್ಯವರ್ಧನ್ ಗುರೂಜಿ ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ್ದರು. ಈ ಸಂಬಂಧ ಆರ್ಯವರ್ಧನ್ ಗುರೂಜಿಗೆ ಅರಣ್ಯ ಅಧಿಕಾರಿಗಳು ನೋಟೀಸ್ ಕಳುಹಿಸಿದ್ದರು. ಜೊತೆ ಕಚೇರಿಗೆ ತರಳಿ ಪೆಂಡೆಂಟ್ ಅನ್ನು ವಶಕ್ಕೆ ಪಡೆದಿದ್ದಾರೆಂದು ವರದಿಯಾಗಿದೆ.

ಆರ್ಯವರ್ಧನ್ ಗುರೂಜಿಗೆ ಸಂಕಷ್ಟ?

ವರ್ತೂರು ಸಂತೋಷ್ ಹುಲಿ ಉಗುರು ಪ್ರಕರಣದ ಬೆನ್ನಲ್ಲೇ ಒಂದೊಂದೇ ಹೊಸ ಹೆಸರು ಕೂಡ ತಳುಕು ಹಾಕಿಕೊಳ್ಳುತ್ತಿದೆ. ಅದರಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಆರ್ಯವರ್ಧನ್ ಗುರೂಜಿಯದ್ದು ಲೇಟೆಸ್ಟ್ ಹೆಸರು. ಕಳೆದ ಸೀಸನ್‌ನಲ್ಲಿ ಆರ್ಯವರ್ಧನ್ ಹುಲಿ ಉರುಗು ಇರುವ ಪೆಂಡೆಂಟ್ ಅನ್ನು ಧರಿಸಿ ಬಿಗ್ ಮನೆಯೊಳಗೆ ಪ್ರವೇಶ ಮಾಡಿದ್ದರು. ಮನೆಯೊಳಗೆ ಹೋದ ಬಳಿಕವೂ ಆ ಪೆಂಡೆಂಟ್ ಅವರ ಕತ್ತಿನಲ್ಲೇ ಇತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಅರಣ್ಯ ಅಧಿಕಾರಿಗಳು ನೋಟೀಸ್ ಕಳುಹಿಸಿದ್ದರು.

ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ?

ಅರಣ್ಯ ಅಧಿಕಾರಿಗಳು ಆರ್ಯವರ್ಧನ್ ಗುರೂಜಿಗೆ ನೋಟೀಸ್ ನೀಡಿದ ಬಳಿಕ ಕಚೇರಿಗೆ ತೆರಳಿ ಬಂಗಾರದ ಪೆಂಡೆಂಟ್ ಅನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಬಂಗಾರದ ಪೆಂಡೆಂಟ್ ಅನ್ನು ಅಧಿಕಾರಿಗಳು ಚಿನ್ನದ ಅಂಗಡಿಗೆ ತೆಗೆದುಕೊಂಡು ಹೋಗಿದ್ದಾರೆಂದು ಕೆಲವೆಡೆ ವರದಿಯಾಗಿದ್ದರೆ. ಚಿನ್ನದ ಸರವನ್ನು ಬಿಟ್ಟು ಕೇವಲ ಪೆಂಡೆಂಟ್ ಅಷ್ಟೇ ತೆಗೆದುಕೊಂಡು ಹೋಗಿದ್ದಾರೆಂದು ಮತ್ತೆ ಕೆಲವೆಡೆ ವರದಿಯಾಗಿದೆ.

Tiger Nail Issue: Bigg Boss Kannada Season 9 ex contestant Aryavardhan Guruji tiger claw seize

3 ಲಕ್ಷ ರೂಪಾಯಿ ಬೆಲೆಯ ಚಿನ್ನದ ಸರ?

ಆರ್ಯವರ್ಧನ್ ಬಿಗ್ ಬಾಸ್ ಮನೆಯಲ್ಲಿ ಧರಿಸಿದ್ದ ಚಿನ್ನ ಸರದ ಬೆಲೆ 3 ಲಕ್ಷ ರೂಪಾಯಿ ಎಂದು ನ್ಯೂಸ್ 18 ಕನ್ನಡ ವರದಿ ಮಾಡಿದೆ. ಅರಣ್ಯ ಅಧಿಕಾರಿಗಳು ಈ ಸರವನ್ನು ಚಿನ್ನದ ಅಂಗಡಿಗೆ ತೆಗೆದುಕೊಂಡು ಹೋಗಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಆರ್ಯವರ್ಧನ್ ಗುರೂಜಿ ಮಾಹಿತಿಯನ್ನು ನೀಡಿಲ್ಲ. ಅದಕ್ಕಿನ್ನೂ ಸಮಯವಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಮಾಹಿತಿ ನೀಡುವ ಸಾಧ್ಯತೆಯಿದೆ.

ಸೆಲೆಬ್ರೆಟಿಗಳಿಗೆ ಸಂಕಷ್ಟ?

ವರ್ತೂರು ಸಂತೋಷ್ ಹುಲಿ ಉಗುರು ವಿವಾದದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್, ನವರಸ ನಾಯಕ ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್‌ ಲೈನ್ ವೆಂಕಟೇಶ್ ಹೆಸರು ಸೇರಿದಂತೆ ಹಲವು ಸೆಲೆಬ್ರೆಟಿಗಳ ಹೆಸರು ತಳುಕು ಹಾಕಿಕೊಂಡಿದೆ. ಇನ್ನೂ ಮುಂದಿನ ದಿನಗಳಲ್ಲಿ ಹಲವರು ಹೆಸರುಗಳು ಈ ವಿವಾದಕ್ಕೆ ಸೇರಿಕೊಳ್ಳುವ ಎಲ್ಲಾ ಸಾಧ್ಯಗಳು ಇವೆ.

More from Filmibeat

English summary
Tiger Claw: BBK 9 ex contestant Aryavardhan Guruji tiger claw seize|
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X