For Quick Alerts
  ALLOW NOTIFICATIONS  
  For Daily Alerts

  ಸೂಪರ್‌ಸ್ಟಾರ್ ಮಹೇಶ್ ಬಾಬು ಜೂ.ಎನ್‌ಟಿಆರ್ ಮುಖಾಮುಖಿ: ಯಾರು ಕೋಟ್ಯಾಧಿಪತಿ ?

  |

  ತೆಲುಗು ಚಿತ್ರರಂಗದ ಇಬ್ಬರು ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ಜೂ. ಎನ್‌ಟಿಆರ್. ಇವರಿಬ್ಬರನ್ನೂ ಒಂದೇ ವೇದಿಕೆ ಮೇಲೆ ನೋಡಿದ್ದು ತೀರಾ ವಿರಳ. ಮಹೇಶ್ ಬಾಬು ಸಿನಿಮಾ ಬಿಟ್ಟರೆ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ನೋಡುವುದಕ್ಕೆ ಸಿಗುವುದಿಲ್ಲ. ಜೂ.ಎನ್‌ಟಿಆರ್ ಈ ನಟನಿಗೆ ತದ್ವಿರುದ್ಧ. ಟಾಲಿವುಡ್‌ನ ಕಾರ್ಯಕ್ರಮಗಳಲ್ಲಿ ಸದಾ ಮುಂದಿರುತ್ತಾರೆ. ಇಂತಹ ಎರಡು ವಿರುದ್ಧ ಸ್ವಭಾವ ಹೊಂದಿರುವ ನಟರು ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

  ಜೂ. ಎನ್‌ಟಿಆರ್ ತೆಲುಗಿನ ಕೋಟ್ಯಾಧಿಪತಿ 'ಎವರು ಮೀಲೋ ಕೋಟೇಸ್ವರಲು' ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಹೀಗಾಗಿ ಜೂ.ಎನ್‌ಟಿಆರ್ ಹಾಗೂ ಮಹೇಶ್ ಬಾಬುರನ್ನು ಒಂದೇ ವೇದಿಕೆ ಮೇಲೆ ನೋಡಲು ಪ್ರೇಕ್ಷಕರ ಒತ್ತಡ ಹೆಚ್ಚಾಗಿತ್ತು. ಅವರ ಅಣತಿ ಮೇರೆಗೆ ಮಹೇಶ್ ಬಾಬುರನ್ನು ತೆಲುಗಿನ ಕೋಟ್ಯಾಧಿಪತಿಗೆ ಅತಿಥಿಯಾಗಿ ಕರೆಸಲಾಗಿದೆ.

   ಪ್ರಿನ್ಸ್-ಜೂ.ಎನ್‌ಟಿಆರ್ ಫೇಸ್ ಟು ಫೇಸ್

  ಪ್ರಿನ್ಸ್-ಜೂ.ಎನ್‌ಟಿಆರ್ ಫೇಸ್ ಟು ಫೇಸ್

  ಜೂ.ಎನ್‌ಟಿಆರ್ ನಡೆಸಿಕೊಡುವ ಕಾರ್ಯಕ್ರಮ 'ಎವರು ಮೀಲೋ ಕೋಟೇಸ್ವರಲು' ಕಾರ್ಯಕ್ರಮ ನಿಧಾನವಾಗಿ ಪ್ರೇಕ್ಷಕರ ಮನಗೆಲ್ಲುತ್ತಿದೆ. ಈ ಕಾರ್ಯಕ್ರಮಕ್ಕೆ ಆಗಾಗಾ ಸೆಲೆಬ್ರೆಟಿಗಳು ಗ್ರ್ಯಾಂಡ್ ಎಂಟ್ರಿಕೊಟ್ಟು ಶೋವನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತಿದ್ದಾರೆ. ಈ ಸಾಲಿಗೀಗ ಮಹೇಶ್ ಬಾಬು ಕೂಡ ಸೇರಿಕೊಂಡಿದ್ದಾರೆ. ಕೆಲವು ದಿನಗಳಿಂದ ತೆಲುಗಿನ ಕೋಟ್ಯಾಧಿಪತಿಗೆ ಮಹೇಶ್ ಬಾಬು ಬರುತ್ತಾರೆ ಅನ್ನುವ ಸುದ್ದಿ ಹರಿದಾಡಿತ್ತು. ಆದ್ರೀಗ, ಅಧಿಕೃತವಾಗಿ ಈ ವಿಷಯ ಬಹಿರಂಗಗೊಂಡಿದೆ. ಶೀಘ್ರದಲ್ಲೇ ಈ ಎಪಿಸೋಡ್ ಅನ್ನು ಪ್ರಸಾರ ಮಾಡಲಾಗುತ್ತೆ.

   ತೆಲುಗು ಕೋಟ್ಯಾಧಿಪತಿಗೆ ದಶಕ ಸಂಚಿಕೆ ಪಟ್ಟ

  ತೆಲುಗು ಕೋಟ್ಯಾಧಿಪತಿಗೆ ದಶಕ ಸಂಚಿಕೆ ಪಟ್ಟ

  'ಎವರು ಮೀಲೋ ಕೋಟೇಸ್ವರಲು' ರಿಯಾಲಿಟಿ ಶೋಗೆ ಸೂಪರ್‌ಸ್ಟಾರ್ ಮಹೇಶ್ ಬಾಬು ಆಗಮಿಸಿದ ವಿಷಯವನ್ನು ಜೆಮಿನಿ ಟಿವಿ ಸ್ಪಷ್ಟಪಡಿಸಿದೆ. ಈಗಾಗಲೇ ಮಹೇಶ್ ಬಾಬು ಹಾಗೂ ಜೂ. ಎನ್‌ಟಿಆರ್ ಮುಖಾಮುಖಿ ಆಗಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಎಪಿಸೋಡ್ ಅನ್ನು ದಶಕದ ಸಂಚಿಕೆ ಅಂತಲೇ ಕರೆಯಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಎಪಿಸೋಡ್ ಬಗ್ಗೆ ಇಬ್ಬರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವುದಾಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

  ದೀಪಾವಳಿಗೆ ಪ್ಪ್ರಿನ್ಸ್-ಮಹೇಶ್ ಮುಖಾಮುಖಿ ಆಗ್ಬೇಕಿತ್ತು

  ದೀಪಾವಳಿಗೆ ಪ್ಪ್ರಿನ್ಸ್-ಮಹೇಶ್ ಮುಖಾಮುಖಿ ಆಗ್ಬೇಕಿತ್ತು

  ಈಗಾಗಲೇ ಮಹೇಶ್ ಬಾಬು ಅತಿಥಿಯಾಗಿ ಬಂದಿರುವ 'ಎವರು ಮೀಲೋ ಕೋಟೇಸ್ವರಲು' ಎಪಿಸೋಡ್ ಅನ್ನು ಚಿತ್ರೀಕರಿಸಲಾಗಿದೆ. ಆದರೆ, ಈ ಸಂಚಿಕೆ ಯಾವಾಗ ಪ್ರಸಾರ ಆಗುತ್ತೆ ಅನ್ನುವುದನ್ನು ವಾಹಿನಿ ಇನ್ನೂ ಬಹಿರಂಗ ಪಡಿಸಿಲ್ಲ. ದೀಪಾವಳಿ ಹಬ್ಬದ ವಿಶೇಷ ಸಂಚಿಕೆಗೆ ಮಹೇಶ್ ಬಾಬು ಬರಬೇಕೆಂಬ ಮಾತುಕಥೆ ನಡೆದಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಈ ಸಂಚಿಕೆಗೆ ಮಹೇಶ್ ಬಾಬು ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ವಿಶೇಷ ದಿನದಂದು ಈ ಸಂಚಿಕೆಯನ್ನು ಪ್ರಸಾರ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

  ಕೋಟ್ಯಾಧಿಪತಿಗೆ ದಿಗ್ಗಜರೇ ಎಂಟ್ರಿ

  ಕೋಟ್ಯಾಧಿಪತಿಗೆ ದಿಗ್ಗಜರೇ ಎಂಟ್ರಿ

  ಈಗಾಗಲೇ ಈ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ದಿಗ್ಗಜರು ಆಗಮಿಸಿ ಆಟ ಆಡಿದ್ದಾರೆ. ನಟಿ ಸಮಂತಾ ರುತ್ ಪ್ರಭು, ನಿರ್ದೇಶಕ ಎಸ್‌ ಎಸ್ ರಾಜಮೌಳಿ, ರಾಮ್‌ ಚರಣ್ ತೇಜಾ, ಕೊರಟಾಲ ಶಿವ ಸೇರಿದಂತೆ, ದಿಗ್ಗಜರೇ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು, 'ಎವರು ಮೀಲೋ ಕೋಟೇಸ್ವರಲು' ಕಾರ್ಯಕ್ರಮವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ. ಹೀಗಾಗಿ ಬಹಳ ದಿನಗಳಿಂದ ಮಹೇಶ್ ಬಾಬು ಸಂಚಿಕೆ ಯಾವಾಗ ಪ್ರಸಾರ ಆಗುತ್ತೋ ಅಂತ ಪ್ರೇಕ್ಷಕರು ಕಾಯುತ್ತಿದ್ದಾರೆ. ಸದ್ಯ ಖಾಸಗಿ ವಾಹಿನಿ ಬಿಟ್ಟಿರುವ ಒಂದು ಪೋಸ್ಟರ್ ಈಗ ಮಹೇಶ್ ಬಾಬು ಹಾಗೂ ಜೂ ಎನ್‌ಟಿಆರ್ ಆಭಿಮಾನಿಗಳಿಗೆ ಮತ್ತಷ್ಟು ಕಿಕ್ ಕೊಟ್ಟಿದೆ.

  English summary
  Superstar Mahesh Babu will make an appearance on the game show ‘Evaru Meelo Koteeswarulu’ hosted by RRR fame actor Jr NTR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X