ಅವಕಾಶ ನೀಡಲು ಮಂಚಕ್ಕೆ ಕರೆದಿದ್ದ ಆ ನಿರ್ದೇಶಕ: ಅಳಲು ತೋಡಿಕೊಂಡ ಕಿರುತೆರೆ ನಟಿ
ಯಾವುದೇ ಚಿತ್ರರಂಗವಿರಲಿ ಕಾಸ್ಟಿಂಗ್ ಕೌಚ್ ಅನ್ನುವುದು ಇನ್ನೂ ಅಸ್ತಿತ್ವದಲ್ಲಿದೆ. ಈ ವಿಚಾರವಾಗಿ ಆಗಾಗ ನಟಿಯರು ತಮಗಾದ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಚಿತ್ರರಂಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಮಹಿಳೆಯ ಹಿಂದೆ ಇಂತಹದ್ದೊಂದು ಕರಾಳ ಅನುಭವ ಆಗಿರುತ್ತೆ. ಈಗೀಗ ನಟಿಯರು ತಮ್ಮ ಈ ಅನುಭವನ್ನು ಮುಕ್ತವಾಗಿ ಮಾತನಾಡಲು ಆರಂಭಿಸಿದ್ದಾರೆ. ಮತ್ತೊಬ್ಬ ಕಿರುತೆರೆ ನಟಿ ನಿರ್ದೇಶಕನ ಕರಾಳ ಮುಖದ ಬಗ್ಗೆ ಮಾತಾಡಿದ್ದಾರೆ.
ಚಿತ್ರರಂಗ ಯಾವುದೇ ಇರಲಿ. ಸಿನಿಮಾ ಇರಲಿ, ಧಾರಾವಾಹಿ ಇರಲಿ. ಇಲ್ಲಿ ಕೆಲಸ ಮಾಡುವ ನಟಿಯರಿಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿರುತ್ತೆ. ಯಾವುದೋ ಪಾತ್ರಕ್ಕೆ ಅವಕಾಶ ಸಿಕ್ಕಾಗ, ಕೆಲವು ನಿರ್ಬಂಧಗಳನ್ನು ಹಾಕುತ್ತಾರೆ ಎನ್ನುವ ಆರೋಪಗಳನ್ನು ಹಲವು ಮಂದಿ ಮಾಡಿದ್ದಾರೆ. ಈಗ ಪ್ರಸಿದ್ಧ ಧಾರಾವಾಹಿಗಳಲ್ಲಿ ನಟಿಸಿರುವ ಕಿರುತೆರೆ ನಟಿಯೊಬ್ಬರು ನಿರ್ದೇಶಕನೊಬ್ಬ ಮಂಚಕ್ಕೆ ಕರೆದಿದ್ದ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಚಿತ್ರರಂಗಲ್ಲಿ ಕಾಸ್ಟಿಂಗ್ ಕೌಚ್ ಕಾಮನ್
ಹಿಂದಿ ಕಿರುತೆರೆಯಲ್ಲಿ ದಿವ್ಯಂಕಾ ತ್ರಿಪಾಠಿ ಜನಪ್ರಿಯ ನಟಿ. ಇತ್ತೀಚೆಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ದಿವ್ಯಂಕ ತನ್ನ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಬಹಿರಂಗ ಪಡಿಸಿದ್ದಾರೆ. "ಈ ಚಿತ್ರರಂಗಲ್ಲಿ ಎಲ್ಲರೂ ಕಾಸ್ಟಿಂಗ್ ಕೌಚ್‌ಗೆ ಒಳಗಾಗಿದ್ದಾರೆ ಅಂತ ಕೆಲ ಜನರು ಬಿಂಬಿಸುತ್ತಿದ್ದಾರೆ. ಈ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅನ್ನುವ ಕಾಮನ್ ಎನ್ನುವುದನ್ನು ತಿಳಿಸಲು ಪ್ರಯತ್ನಿಸುತ್ತಾರೆ." ಎಂದು ಸಂದರ್ಶನದಲ್ಲಿ ದಿವ್ಯಂಕಾ ತ್ರಿಪಾಠಿ ಹೇಳಿದ್ದಾರೆ.

ನಿರ್ದೇಶಕನೊಬ್ಬ ಮಂಚಕ್ಕೆ ಕರೆದಿದ್ದ ದಿವ್ಯಂಕಾ
ನಟಿ ದಿವ್ಯಂಕಾ ತ್ರಿಪಾಠಿ ಒಂದೊಂದು ಪಾತ್ರಕ್ಕೂ ಹುಡುಕಾಡುತ್ತಿದ್ದ ಕಾಲವದು. ಆ ಸಮಯದಲ್ಲಿ ದಿವ್ಯಂಕಾ ಬಳಿಕ ಹಣವಿರಲಿಲ್ಲ. ಇಎಂಐ, ಬಿಲ್‌ಗಳನ್ನು ಕಟ್ಟಲು ಪರದಾಡಬೇಕಿದ್ದ ಸಮಯ. ಆಗ ಒಂದು ಅವಕಾಶ ಸಿಕ್ಕಿತ್ತು. ಆದರೆ, ನಿರ್ದೇಶಕ ಈಕೆಯನ್ನು ಮಂಚಕ್ಕೆ ಕರೆದಿದ್ದ. ಈ ವಿಷಯನ್ನು ದಿವ್ಯಂಕಾ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ಆ ಸಮಯದಲ್ಲಿ ನನ್ನ ಬಳಿ ಹಣವಿರಲಿಲ್ಲ. ಇಎಂಐ, ಬಿಲ್‌ಗಳನ್ನು ಕಟ್ಟಬೇಕಿತ್ತು. ನನ್ನ ಮೇಲೆ ತುಂಬಾನೇ ಒತ್ತಡವಿತ್ತು. ಆಗ ಒಂದು ಅವಕಾಶ ಬಂತು. ಈ ನಿರ್ದೇಶಕನ ಜೊತೆ ಇದ್ದರೆ ನಿನಗೆ ದೊಡ್ಡ ಆಫರ್ ಸಿಗುತ್ತೆ. ನಿನಗೆ ಇದೊಂದೇ ದಾರಿ ಎನ್ನುವಂತೆ ನನ್ನ ಬಳಿ ಬಿಂಬಿಸುತ್ತಿದ್ದರು." ಎಂದು ದಿವ್ಯಂಕಾ ತ್ರಿಪಾಠಿ ಹೇಳಿದ್ದಾರೆ.

ನಿರ್ದೇಶಕನ ಹೆಸರು ಹೇಳದ ನಟಿ
ಕೆಲಸ ಇಲ್ಲದೆ ವೇಳೆ ತನಗಾದ ಕೆಟ್ಟ ಅನುಭವವನ್ನು ದಿವ್ಯಂಕಾ ತ್ರಿಪಾಠಿ ನಿರ್ಭಯವಾಗಿ ಹಂಚಿಕೊಂಡಿದ್ದರೆ. ಆದರೆ, ಆ ನಿರ್ದೇಶಕನ ಹೆಸರನ್ನು ರಿವೀಲ್ ಮಾಡಿಲ್ಲ. ಸಿನಿಮಾರಂಗದಲ್ಲಿ ಇಂತಹದ್ದೊಂದು ಪದ್ಧತಿ ಇದೆ ಎನ್ನುವುದನ್ನು ಖಚಿತ ಪಡಿಸಿದ್ದಾರೆ. "ನನಗೆ ನಮ್ಮ ಪೋಷಕರು ಹಾಗೂ ಸಹೋದರಿ ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಅರ್ಥ ಮಾಡಿಸಿದ್ದಾರೆ." ಎಂದು ಕಾಸ್ಟಿಂಗ್ ಕೌಚ್ ಬಗ್ಗೆ ದಿವ್ಯಂಕಾ ತ್ರಿಪಾಠಿ ತಿಳಿಸಿದ್ದಾರೆ.

ಕಿರುತೆರೆಯಲ್ಲಿ ಮಿಂಚಿದ ದಿವ್ಯಂಕಾ ತ್ರಿಪಾಠಿ
"ಚಿತ್ರರಂಗದಲ್ಲಿ ನಡೆಯುತ್ತಿರುವ ಇಂತಹ ಬೆಳವಣಿಗಳ ಜೊತೆ ನೀವು ಹೋಗದೆ ಇದ್ದರೆ, ನಿಮ್ಮನ್ನು ಬೆದರಿಸುವ ಕೆಲಸ ಕೂಡ ನಡೆಯುತ್ತೆ. ನಿಮ್ಮ ವೃತ್ತಿ ಬದುಕನ್ನೇ ನಾಶ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಾರೆಂದು." ದಿವ್ಯಂಕಾ ಆತಂಕ ವ್ಯಕ್ತಪಡಿಸಿದ್ದಾರೆ. ದಿವ್ಯಂಕಾ ತ್ರಿಪಾಠಿ, 'ಬನೂ ಮೇ ತೇರಿ ದುಲ್ಹನ್' ಹಾಗೂ 'ಯೇ ಹೈ ಮೊಹಬ್ಬತ್ತೇ' ಯಂತಹ ಮೆಗಾ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.


Click it and Unblock the Notifications











