For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕಿಂತ ಮುಂಚೆ ಜಾಹೀರಾತು ಲೋಕಕ್ಕೆ ಶೀತಲ್

  By Mahesh
  |

  ಟಿವಿ 9 ಸುದ್ದಿ ವಾಹಿನಿಯ ಜನಪ್ರಿಯ ಸುದ್ದಿವಾಚಕಿಯಾಗಿದ್ದ ಶೀತಲ್ ಶೆಟ್ಟಿ ಅವರು ಬಿಗ್ ಸ್ಕ್ರೀನ್ ಗೆ ಪ್ರಮೋಷನ್ ಪಡ್ಕೊಂಡು ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಸುದ್ದಿ ನೀವೆಲ್ಲ ಓದಿರುತ್ತೀರಾ.

  ಟಿವಿ9 ನ ಮೋಸ್ಟ್ ಫ್ಯಾನ್ ಫಾಲೋಯರ್ಸ್ ಹೊಂದಿರೋ ಆಂಕರ್ ಟಿವಿನೈನ್ ನಿಂದ ಹೊರ ಬರ್ತಿದ್ದಾರೆ ಎಂಬ ಸುದ್ದಿ ಅನೇಕ ಅಭಿಮಾನಿಗಳು ಬೇಜಾರು ಮಾಡಿಕೊಂಡಿದ್ದರು. ಟಿವಿ 9 ಬಿಟ್ಟಿದ್ದೇಕೆ ಎಂದು ಪ್ರಶ್ನಿಸಲು ಆರಂಭಿಸಿದರು. ರಕ್ಷಿತ್ ಶೆಟ್ಟಿ ನಿರ್ದೇಶನದ 'ಉಳಿದವರು ಕಂಡಂತೆ' ಚಿತ್ರದಲ್ಲಿ ನಟಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಬಗ್ಗೆ ಶೀತಲ್ ಏನು ಹೇಳಿದ್ದಾರೆ ಬನ್ನಿ ನೋಡೋಣ..

  hello ನಮಸ್ಕಾರ,

  ಎಲ್ಲರೂ ತುಂಬಾ ಪ್ರಶ್ನೆಗಳನ್ನ ಕೇಳ್ತಿದ್ದಾರೆ. ಶೀತಲ್ ಯಾಕೆ tv9 ಬಿಟ್ಟಿದ್ದು. ಸಿನಿಮಾಗೋಸ್ಕರ tv9 ಬಿಟ್ಟಿದ್ದ.. ಹೀಗೆ ಹತ್ತು ಹಲವು ಪ್ರಶ್ನೆಗಳು..ಉತ್ತರಿಸೋದು ಬೇಡ ಅಂದ್ಕೊಂಡೆ.. ಬಟ್ ಉತ್ತರಿಸ್ಬೇಕು ಅನ್ನಿಸ್ತಿದೆ.. ಕಳೆದ ಆರುವರೆ ವರ್ಷಗಳಿಂದ tv9ನಂಥ ದೇವಸ್ಥಾನದಲ್ಲಿ ದುಡಿದ ಖುಷಿ ಇದೆ. ಅಲ್ಲಿನ ಎಲ್ಲರೂ ನನ್ನ ಸ್ನೇಹಿತರು ಆಪ್ತರೇ. ಎಲ್ಲರನ್ನೂ ಬಿಟ್ಟು ಬರೋವಾಗ ಮನಸ್ಸಿನಲ್ಲಿ ತುಂಬಾ ನೋವು. ತವರು ಮನೆ ಬಿಟ್ಟು ಬರೋವಾಗಿನ ಅನುಭವ.

  ಆದ್ರೆ ನಾನು tv9 ಬಿಡೋದಕ್ಕೆ ಪ್ರಮುಖ ಕಾರಣ ನನ್ನ health.. ಆರೋಗ್ಯದ ಸಮಸ್ಯೆ ಇದ್ದಿದ್ರಿಂದ ನನಗೆ ನನ್ನ ಕೆಲಸಕ್ಕೆ ನ್ಯಾಯ ಒದಗಿಸೊಕಾಗ್ತಿರ್ಲಿಲ್ಲ. tv9 ಬಿಡಬೇಕು ಅಂತಿರೋವಾಗ್ಲೇ ಸಿನಿಮಾ ಬಂದು ತಾಗ್ಲ್ಹಾಕ್ಕೊಳ್ತೇ ವಿನಹ ಸಿನೆಮಗೋಸ್ಕರ tv9 ಖಂಡಿತ ಬಿಡ್ತಿಲ್ಲ. ಸಿನಿಮಾನೇ ಮಾಡೋದಿದ್ರೆ ನಾನು 4 ವರ್ಷದ ಹಿಂದೇನೆ ಮಾಡ್ಬೊದಿತ್ತು. ಬಟ್ ಇದೊಂದು ಒಳ್ಳೆ ,hardworking ಟೀಮ್. ಒಳ್ಳೆ ಎಕ್ಸ್ ಪೀರಿಯೆನ್ಸ್ ಅಂತ ನಾನು ಒಪ್ಕೊಂಡೆ... ಸೊಲ್ಪ ರೆಸ್ಟ್ ಬೇಕು. ಸೊಲ್ಪ break ಬೇಕಿತ್ತು ಅಷ್ಟೇ...

  missss you tv9 ಇನ್ನು ಮುಂದೆ ಜಾಹೀರಾತು ಬಗ್ಗೆ ಓದಿ

  ಆಭರಣ ಜಾಹೀರಾತು

  ಆಭರಣ ಜಾಹೀರಾತು

  ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಜಾಹೀರಾತಿನಲ್ಲಿ ಶೀತಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಇತ್ತೀಚಿಗೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದು 20 ಸೆಕೆಂಡುಗಳ ಜಾಹೀರಾತು ಈಗ ಎಲ್ಲೆಡೆ ಲಭ್ಯವಿದೆ.

  ಇದು ಸತ್ವ ಮೀಡಿಯಾ ಕೊಡುಗೆ

  ಇದು ಸತ್ವ ಮೀಡಿಯಾ ಕೊಡುಗೆ

  ಹೊಸದಾಗಿ ಮಾಧ್ಯಮ, ಜಾಹೀರಾತು ಸಂಸ್ಥೆ ಕಟ್ಟಿಕೊಂಡಿರುವ ಯುವ ಉತ್ಸಾಹಿ ತಂಡ ಸತ್ವ ಮೀಡಿಯಾ ಈ ಜಾಹೀರಾತನ್ನು ನಿರ್ದೇಶಿಸಿದೆ.

  ಶಂಕರ್ ಖಾಗ್ ಭಾಗ್ ಅವರು ಕ್ರಿಯೇಟಿವ್ ಮುಖ್ಯಸ್ಥರಾಗಿದ್ದು, ಸೇಲ್ಸ್, ಮಾರ್ಕೆಟಿಂಗ್ ವಿಭಾಗವನ್ನು ಸೋಮಣ್ಣ ಮಾಚಿಮಾಡ ಅವರು ವಹಿಸಿಕೊಂಡಿದ್ದಾರೆ. ಪೋಸ್ಟ್ ಪ್ರೊಡೆಕ್ಷನ್ ನಲ್ಲಿ ಅಮರ್ ಕಾಪು ಹಾಗೂ ಸುಮಿತ್ ದುಬೆ ಇದ್ದಾರೆ. ಭರತ್ ಪರುಶುರಾಮ್ ಛಾಯಾಗ್ರಹಣ ಹಾಗೂ ವಿಪಿನ್ ಸಿಂಗ್ ಡಿಐ ನೀಡಿದ್ದಾರೆ.

  ವಿಡಿಯೋದಲ್ಲಿ ಏನಿದೆ

  ವಿಡಿಯೋದಲ್ಲಿ ಏನಿದೆ

  ನ್ಯೂಸ್ ಓದುವ ಶೈಲಿಯಲ್ಲಿ ಶೀತಲ್ ಅವರು ಚಿನ್ನ ಖರೀದಿ ಬಗ್ಗೆ ಹೇಳುತ್ತಾ ಬೆಲೆ ಏರಿಕೆ ಬೆಲೆ ಏರಿಕೆ ಬೆಲೆ ಏರಿಕೆ ಬಿಸಿ ನಮಗೂ ಇದೆ ಕಂಡ್ರಿ. ಚಿನ್ನ ಖರೀದಿ ವಿಷಯದಲ್ಲಿ ರಾಜಿ ಮಾಡೋಕೆ ಆಗುತ್ತಾ

  ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ಗೆ ಬಂದರೆ ಯೋಚನೆ ಮಾಡುವ ಹಾಗೆ ಇಲ್ಲ ಏಕೆಂದರೆ ಇಲ್ಲಿ ಜೀರೋ ವೇಸ್ಟೇಜ್ ಚಾರ್ಜ್ ಇಲ್ಲ, ಅತಿ ಕಡಿಮೆ ಮೇಕಿಂಗ್ ಚಾರ್ಜ್ ಎಂದು ಆಭರಣ ಭೂಷಿತೆ ಶೀತಲ್ ಹೇಳುತ್ತಾರೆ. ನಂತರ ಗೋಲ್ಡ್ ಪ್ಯಾಲೇಸ್ ಮಾಲೀಕ ಜೆಡಿಎಸ್ ಮುಖಂಡ ಶರವಣ ಅವರು ತಮ್ಮ ಸಂಸ್ಥೆ ಬಗ್ಗೆ ಹೇಳುವುದರೊಂದಿಗೆ ಆಡ್ ಮುಕ್ತಾಯ.

  ಜಾಹೀರಾತಿನ ಬಗ್ಗೆ

  ಜಾಹೀರಾತಿನ ಬಗ್ಗೆ

  ಜಾಹೀರಾತು ಆರಂಭದಲ್ಲಿ 2 ಸೆಕೆಂಡ್ ಗ್ಯಾಪ್ ಇಲ್ಲದಂತೆ ಡೈಲಾಗ್ ಬರುವುದರಿಂದ ವೀಕ್ಷಕರಿಗೆ ಮೊದಲ ಸೀನ್ ನೆನಪಿನಿಂದ ತಕ್ಷಣಕ್ಕೆ ಮರೆಯಾಗಿ ಬಿಡುತ್ತದೆ. ಮೊದಲ ಸೀನ್ ನಲ್ಲಿ ಸತ್ವ ಮಿಡಿಯಾ ಅರ್ಪಿಸುವ ಎಂದಾದರೂ ಇದ್ದಿದ್ದರೆ ಒಂದು pause ಸಿಗುತ್ತಿತ್ತು.

  ಮಿಕ್ಕಂತೆ ಶೀತಲ್ ವಸ್ತ್ರ ವಿನ್ಯಾಸ, ದೃಶ್ಯ ಸಂಯೋಜನೆ ಸೂಕ್ತವಾಗಿ ಬಂದಿದೆ. ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಆಭರಣ ಜಾಹೀರಾತು ಈಗಾಗಲೇ ಟಿವಿ 9 ಕನ್ನಡ ವಾಹಿನಿಯಲ್ಲಿ ಪ್ರಸಾರ ಕೂಡಾ ಆಗಿದೆ.

  ಜಾಹೀರಾತು ನೋಡಿ

  ಶೀತಲ್ ಶೆಟ್ಟಿ ನಟಿಸಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಆಭರಣ ಮಳಿಗೆ ಜಾಹೀರಾತು ಇಲ್ಲಿದೆ ನೋಡಿ

  ಈ ಹಿಂದಿನ ಮಾಡೆಲ್ ಗಳು

  ಶರ್ಮಿಳಾ ಮಾಂಡ್ರೆ ಅವರು ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ರಾಯಭಾರಿಯಾಗಿದ್ದರು. ಹಳೆ ವಿಡಿಯೋ ಇಲ್ಲಿದೆ ನೋಡಿ

  English summary
  TV9 Kannada news channel's former news anchor Sheetal Shetty entered advertisement world before making a big leap in to sandalwood aka Kannada Film Industry. Sheetal also doing a prime role in Ulidavaru Kandanate movie directed by Rakshith Shetty of Simpleaagond love story fame.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X