For Quick Alerts
  ALLOW NOTIFICATIONS  
  For Daily Alerts

  TV 9 ನಿಂದ ಬಣ್ಣದ ಲೋಕಕ್ಕೆ ಶೀತಲ್ ಶೆಟ್ಟಿ

  By ಸತ್ವ ಮೀಡಿಯಾ, ಬೆಂಗಳೂರು
  |

  ನೀವು ನೋಡ್ತಿದ್ದೀರ ಜಸ್ಟ್ ಬೆಂಗಳೂರ್, ನಾನ್ ಶೀತಲ್.... ಟಿವಿ 9 ಕನ್ನಡ ನ್ಯೂಸ್ ಚಾನೆಲ್ ನಲ್ಲಿ ಸಿಂಪ್ಲೀ ಅಂಡ್ ಸ್ಮೈಲೀ ಶೀತಲ್..

  ಅಯ್ಯೋ ರಾಮ, ಅಲ್ಲಿ ಹಂಗಾಯ್ತಂತೆ, ಇಲ್ಲಿ ಹೀಗಾಯ್ತಂತೆ ಅನ್ನೋ ನ್ಯೂಸನ್ನ ನಗ್ ನಗ್ತಾ ಓದ್ತಿದ್ದ ಚೆಲ್ವೆ ಇದೀಗ ಸ್ಮಾಲ್ ಸ್ಕ್ರೀನ್ ನಿಂದ ದೂರ ಆಗ್ತಿದ್ದಾಳೆ.

  ಹೊಸ ಸಿನಿಮಾದೊಂದಿಗೆ ಬಿಗ್ ಸ್ಕ್ರೀನ್ ಗೆ ಪ್ರಮೋಷನ್ ಪಡ್ಕೊಂಡಿರೋ ಶೀತಲ್ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟಿದ್ದಾಳೆ. ಯಸ್, ಕಣ್ ಮಿಟುಕಿಸಿ ಇವತ್ತಿನ ಸುದ್ದಿ ಇಷ್ಟು ಅಂತ ಸುದ್ದಿ ಮುಗಿಸೋ ಸೊಗಸುಗಾತಿಯನ್ನ ಇನ್ ಮುಂದೆ ಕಾಸ್ ಕೊಟ್ಟೇ ನೋಡ್ಬೇಕು. ಹೌದ್ರೀ ಟಿವಿ9 ನ ಮೋಸ್ಟ್ ಫ್ಯಾನ್ ಫಾಲೋಯರ್ಸ್ ಹೊಂದಿರೋ ಆಂಕರ್ ಟಿವಿನೈನ್ ನಿಂದ ಹೊರ ಬರ್ತಿದ್ದಾರೆ. ಅದೂ ಸುಮ್ ಸುಮ್ನೆ ಅಲ್ಲ, ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳನ್ನ ಹಿಡ್ಕೊಂಡು, ಜೊತೆಯಲ್ಲಿ ಸಿನಿಮಾದಲ್ಲಿ ನಟಿಸಿಕೊಂಡು....

  'ಉಳಿದವರು ಕಂಡಂತೆ' ಚಿತ್ರದ ಶೂಟಿಂಗ್ ಸ್ಟಾರ್ಟ್ ಆಗಿದೆ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ನೀಡಿದ್ದ ಡೈರೆಕ್ಟರ್ ಸುನಿ ಜೊತೆ ತಮ್ಮ ಫಸ್ಟ್ ಪ್ರಾಜೆಕ್ಟ್ ಗೆ ಸೈನ್ ಮಾಡಿರೋ ಶೀತಲ್, ಲೈಟ್-ಕ್ಯಾಮರಾ-ಆಕ್ಷನ್ ಅನ್ನೋ ದನಿಯನ್ನು ಶೂಟಿಂಗ್ ಫೀಲ್ಡಲ್ಲೇ ಕೇಳಿದ್ದಾಳೆ.

  ಅಷ್ಟಕ್ಕೂ ಫ್ಯೂಚರ್ ಹೀರೋಯಿನ್ ನ ಫಸ್ಟ್ ಇಂಟರ್ ವ್ಯೂ ಮಾಡಿರೋದು ಸತ್ವ ಮೀಡಿಯಾದ ಟೀಮ್.. ಸ್ಮೈಲಿಂಗ್ ಸ್ಟಾರ್ ಶೀತಲ್ ತಮ್ಮ ಭವಿಷ್ಯದ ಪ್ಲಾನ್ ಗಳನ್ನು ಒಂದೊಂದಾಗಿ ಹಂಚಿಕೊಂಡ್ರು. ಮಾತು ಮಾತಿಗೂ ಟಿವಿನೈನನ್ನು ಹಾಡಿ ಹೊಗಳುತ್ತಿದ್ದ ಶೀತಲ್, ಪತ್ರಿಕೋದ್ಯಮದಿಂದ ದೂರ ಆಗ್ತಿರೋ ಬಗ್ಗೆ ತಮ್ಮ ವಿಷಾದ ಹೊರಹಾಕಿದ್ರು. ಕಳೆದ ಆರು ವರ್ಷ, ನಾಲ್ಕ್ ತಿಂಗ್ಳಿಂದ ನಾನು ನ್ಯೂಸ್ ಚಾನೆಲ್ ನಲ್ಲಿ ಕೆಲಸ ಮಾಡಿದ್ದೆ. ಇನ್ಮುಂದೆ ನನ್ನ ಮತ್ತೊಂದು ಫೇವರೇಟ್ ಹಾಗೂ ಡ್ರೀಮ್ ಫೀಲ್ಡ್ ಆಗಿರೋ ಸಿನಿಮಾದಲ್ಲಿ ಇನ್ ವಾಲ್ವ್ ಆಗ್ತೀನಿ ಅಂತ ನಗ್ ನಗ್ತಾನೇ ಹೇಳಿದ್ರು.

  ನ್ಯೂಸ್ ಚಾನೆಲ್ ನ ಫಸ್ಟ್ ಸ್ಟಾರ್: ನಮಸ್ಕಾರ ನಮಸ್ಕಾರ ನಮಸ್ಕಾರ ಅಂತ ತಮ್ಮ ಫ್ಲಾಟ್ ಫಾರ್ಮನ್ನು ಕ್ರಿಯೇಟ್ ಮಾಡ್ಕೊಂಡಿದ್ದ ಗಣೇಶ್, ಉದಯ ಟಿವಿ ಅನ್ನೋ ಪಾಪ್ಯುಲರ್ ಟಿಆರ್ ಪಿ ಚಾನೆಲ್ ನಿಂದ ಹೊರಬಂದು ಮಳೆ ಹುಡ್ಗ ಆಗಿದ್ದು ಯಾರಿಗೆ ಗೊತ್ತಿಲ್ಲ.. ಅದೇ ರೀತಿ ಸುವರ್ಣ ಎಂಟರ್ ಟೈನ್ ಮೆಂಟ್ ನಲ್ಲಿ ಕೆಲಸ ಮಾಡ್ತಿದ್ದ ಶ್ವೇತ ಚಿಂಕೆ ಮರಿ ಹುಡುಗಿಯಾಗಿ ಮಿಂಚಿದ್ದು ಕೂಡ ಮರೆಯೋ ಹಾಗಿಲ್ಲ... ಇನ್ನು ದರ್ಶನ್, ಸುದೀಪ್ ರಂತವರು ಸ್ಟಾರ್ ಆಗಿದ್ದು ಸೀರಿಯಲ್ ಗಳಿಂದಲೇ ಅಲ್ವಾ..?

  ಆದ್ರೆ ನ್ಯೂಸ್ ಚಾನೆಲ್ ನಲ್ಲಿ ಕೆಲಸ ಮಾಡ್ತಿದ್ದೋರು ಈ ಟ್ರೆಂಡ್ ಗೆ ಎಂಟ್ರಿ ಆಗಿರ್ಲಿಲ್ಲ. ಅಲ್ಲಲ್ಲಿ ಸಣ್ಣ ಪುಟ್ಟ ರೋಲ್ ಗಳಲ್ಲಿ ಕಾಣಿಸಿಕೊಂಡ ಕೆಲವರನ್ನು ಬಿಟ್ಟರೆ ಫುಲ್ ಟೈಮ್ ಸಿನಿಮಾದಲ್ಲಿ ಯಾರ ಅಪೀರಿಯನ್ಸ್ ಇಲ್ಲ. ಸದ್ಯ ಆ ಕೊರತೆಯನ್ನು ಟಿವಿನೈನ್ ಶೀತಲ್ ಪೂರೈಸುತ್ತಿದ್ದಾರೆ. ಹ್ಹಾ ಅಂದಹಾಗೆ ಸುವರ್ಣ ನ್ಯೂಸ್ ನ ಗೌರೀಶ್ ಅಕ್ಕಿ ಕೂಡ ಫುಲ್ ಟೈಂ ನ್ಯೂಸ್ ನಿಂದ ಹೊರಬಂದಿರೋದು ಹಳೇ ಸುದ್ದಿ. ಆದ್ರೆ ಅವರು ಆಕ್ಟಿಂಗ್ ಬದಲು ಡೈರೆಕ್ಷನ್ ಫೀಲ್ಡ್ ಚೂಸ್ ಮಾಡ್ಕೊಂಡಿದ್ದಾರೆ. ತಮ್ಮ ಚೊಚ್ಚಲ ಚಿತ್ರ ಸಿನಿಮಾ ಮೈ ಡಾರ್ಲಿಂಗ್ ಸ್ಕ್ರಿಪ್ಟಲ್ಲಿ ತುಂಬಾ ಬಿಸಿ ಆಗಿದ್ದಾರೆ.

  ನಗ್ ನಗ್ತಾ ಸುದ್ದಿ ತಿಳಿಸ್ತಾಳಪ್ಪ ಅಂತ ಮಂಡ್ಯಾದಿಂದ ಮಂಗಳೂರವರೆಗೂ ಇತ್ತ ಬೀದರ್ ನಿಂದ ಬೆಳಗಾವಿ ವರೆಗಿನ ಮಂದಿ ಮಾತಾಡಿಕೊಳ್ತಿದ್ರು..ಅಂಥಾ ಶೀತಲ್ ಮುಂದೊಂದು ದಿನ ತುಂಬಾ ಸೀರಿಯಸ್ಸೋ ಇಲ್ಲಾ ಅಳುಮುಂಜಿ ಪಾತ್ರದಲ್ಲೋ ಫುಲ್ ಫರ್ ಫಾಮ್ ಮಾಡಿದ್ರೆ ಅದನ್ನೂ ಜನ ಹೀಗೂ ಉಂಟಾ ಅಂತಲೇ ಕೇಳ್ತಾರೇನೋ. ಏನೇ ಅನ್ನಿ ಈಗಾಗಲೇ ಶೀತಲ್ ಬೆಳ್ಳಿತೆರೆಗೆ ಬರೋದು ಕನ್ ಫರ್ಮ್ ಆಗಿದೆ...ಈ ನಿರ್ಧಾರಕ್ಕೆ ಅವರ ಕುಟುಂಬ ಕೂಡಾ ಸಾಥ್ ಕೊಡ್ತಿದೆ ಅನ್ನೋದನ್ನ ಶೀತಲ್ ಹೇಳೋದಕ್ಕೆ ಮರೆಯಲಿಲ್ಲ.

  ಸೀರಿಯಲ್ ಗೂ ಎಂಟ್ರಿ?: ಒಂದೆರಡು ಸೀರಿಯಲ್ ಗೂ ಕೂಡ ನಮ್ಮ ಸ್ಮೈಲಿಂಗ್ ಅಂಡ್ ಬ್ಲಿಂಕಿಂಗ್ ಸ್ಟಾರ್ ಎಂಟ್ರಿ ಕೊಡ್ತಾರೆ. ಧಾರಾವಾಹಿ ಮೂಲಕ ಮನೆಯ ಮಗಳಾಗಿ, ಅತ್ತೆಗೆ ಸೊಸೆಯಾಗಿ, ಅಣ್ಣನಿಗೆ ತಂಗಿಯಾಗಿ ಇಲ್ಲವೇ ಪತಿರಾಯನ ಧರ್ಮಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಾನು ಸಾಕಷ್ಟು ಚೂಸಿ ಅನ್ನೋ ಮಾತನ್ನು ಶೀತಲ್ ಈಗಾಗ್ಲೇ ಪ್ರೂವ್ ಮಾಡಿದ್ದು, ಈ ಹಿಂದೆ ಹಾಗೂ ಈ ನಡುವೆ ಬಂದಿರೋ ಸಾಕಷ್ಟು ಕಥೆಗಳನ್ನು ರಿಜೆಕ್ಟ್ ಮಾಡಿದ್ದಾರೆ. ಈಗ್ಲೂ ಕೂಡ ನನಗೆ ಇಷ್ಟವಾಗುವಂತಹ ಪಾತ್ರ ಹಾಗೂ ಕಥೆಗೆ ಮಾತ್ರ ತನ್ನನ್ನು ತಾನು ತೊಡಗಿಸಿಕೊಳ್ಳೋಕೆ ಶೀತಲ್ ಡಿಸೈಡ್ ಮಾಡಿದ್ದಾರೆ.

  ಟಿವಿ9 ನಲ್ಲಿ ಕಿರಿಕ್ ಆಗುತ್ತಾ?: ಶೀತಲ್ ಜನರಲ್ ನ್ಯೂಸ್ ನಲ್ಲಷ್ಟೇ ಅಲ್ಲ, ಸಿನಿಮಾ ಬೇಸ್ ಇಂಟರ್ ವ್ಯೂ, ಡಿಸ್ ಕಷನ್, ಸ್ಟಾರ್ ಗಳ ಜೊತೆ ಇಂಟರಾಕ್ಷನ್, ಸ್ಪೆಷಲ್ ಸ್ಟೋರಿಯಲ್ಲಿ ಮಾಡೋ ಗ್ರೌಂಡ್ ಆಂಕರಿಂಗ್, ಸ್ಕ್ರಿಪ್ಟಿಂಗ್ ಹೀಗೆ ಸಾಕಷ್ಟು ವಿಭಾಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಶೀತಲ್ ಆಂಕರಿಂಗ್ ಮಾಡ್ತಿದ್ದಾರೆ ಅಂದ್ರೆ ಅಲ್ಲಿ ವೀವರ್ ಶಿಪ್ ಒಂದು ಪಾಯಿಂಟ್ ಹೆಚ್ಚೇ ಇರುತ್ತೆ. ಅದೆಷ್ಟೋ ಜನ ಶೀತಲ್ ಬರ್ತಾಳೆ ಅಂತಾನೆ ನ್ಯೂಸ್ ನೋಡೋ ಅಭ್ಯಾಸ ಇಟ್ಕೊಂಡಿದ್ದಾರೆ.

  ಹೀಗಿರುವಾಗ ಟಿವಿನೈನ್ ಅಷ್ಟು ಸಲೀಸಾಗಿ ಶೀತಲ್ ಅನ್ನು ಬಿಟ್ಟುಕೊಡೋದಿಲ್ಲ. ಆದ್ರೂ ಕೂಡ ಶೀತಲ್ ತಮಗೆ ಬ್ರೇಕ್ ನೀಡಿರೋ ಸಂಸ್ಥೆಯನ್ನು ಅಷ್ಟು ಕೇವಲವಾಗಿ ಬಿಟ್ಟುಕೊಡದೆ ಸದ್ಯ ನೋಟೀಸ್ ಪೀರಿಯಡ್ ನಲ್ಲಿ ಕೆಲಸ ಮಾಡ್ತಿದ್ದಾರೆ. ಟಿವಿನೈನ್ ನಲ್ಲಿ ಕೆಲಸ ಮಾಡ್ತಿದ್ದ ಅದೆಷ್ಟೋ ಮಂದಿ ಹೊಸ ಆಫರ್ ಸಿಕ್ಕ ತಕ್ಷಣ ಹೇಳ್ದೇ ಕೇಳ್ದೇ ಅಬ್ಬೇಸ್ ಆಗಿದ್ದ ಉದಾಹರಣೆಗಳ ಮಧ್ಯೆ ಶೀತಲ್ ಕೊಂಚ ಡಿಫರೆಂಟ್..ಶೀತಲ್ ನಿಮಗೆ ಓನ್ಸ್ ಅಗೇನ್, ಆಲ್ ದಿ ಬೆಸ್ಟ್..

  English summary
  TV9 Kannada news channel popular news anchor Sheetal Shetty enters sandalwood aka Kannada Film Industry with Ulidavaru Kandanate movie directed by Rakshith Shetty of Simpleaagond love story fame. Here is the summary of her interview by Satva Media

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X