ಕನ್ನಡ ಕಿರುತೆರೆಗೆ ಹೊಸ ಧಾರಾವಾಹಿ 'ಪ್ರೀತಿ ಅರಸಿ': ಎಲ್ಲಿ? ಯಾವಾಗ ಆರಂಭ?

ಕನ್ನಡ ಕಿರಿತೆರೆಯಲ್ಲಿ ಹೊಸ ಹೊಸ ಧಾರಾವಾಹಿಗಳು ಬರುತ್ತಲೇ ಇರುತ್ತವೆ. ಈಗಂತೂ ಮನರಂಜನಾ ವಾಹಿನಿಗಳು ಪೈಪೋಟಿಗೆ ಬಿದ್ದು ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಲೇ ಇರುತ್ತವೆ. ಜೊತೆ ವೀಕ್ಷಕರು ಕೂಡ ಹೊಸ ಹೊಸ ಧಾರಾವಾಹಿಗಳನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಹೀಗಾಗಿ ಧಾರಾವಾಹಿ ನಿರ್ಮಾಣವಾಗುವ ಸಂಖ್ಯೆ ಕೂಡ ಹೆಚ್ಚಾಗಿದೆ.

ಕನ್ನಡದ ಮೊದಲ ಮನರಂಜನಾ ವಾಹಿನಿ ಉದಯ ಟಿವಿ ತನ್ನ ವೀಕ್ಷಕರಿಗಾಗಿ ಹೊಸ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದೆ. ವಿಭಿನ್ನ ಧಾರಾವಾಹಿಗಳನ್ನು ನೀಡುತ್ತಲೇ ಇದೆ. ಉಳಿದ ಮನರಂಜನಾ ವಾಹಿನಿಗಳೊಂದಿಗೆ ಸ್ಪರ್ಧೆಗೆ ಇಳಿದಿರೋ ಉದಯ ಟಿವಿ ಈಗಾಗಲೇ ವಿಶಿಷ್ಟ ರೀತಿಯ ಕಥೆಯೊಂದಿಗೆ 'ಶಾಂಭವಿ' ಅನ್ನೋ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ.

Udaya Tv new serial Preethi Arasi starting from october 16th

ಈ ಧಾರಾವಾಹಿ ಈಗಾಗಲೇ ವೀಕ್ಷಕರಿಂದ ಜನಮನ್ನಣೆಯನ್ನು ಪಡೆದುಕೊಂಡಿದೆ. ಇದರ ಜೊತೆಗೆ 'ಕನ್ಯಾದಾನ', 'ಆನಂದರಾಗ', 'ಅಣ್ಣ-ತಂಗಿ', 'ಸೇವಂತಿ', 'ಜನನಿ', 'ರಾಧಿಕಾ', 'ಗೌರಿಪುರದ ಗಯ್ಯಾಳಿಗಳು' ಸೇರಿದಂತೆ ಹೊಸ ರೀತಿಯ ಕಥೆಗಳನ್ನು ಹೊತ್ತು ವೀಕ್ಷಕರ ಮುಂದೆ ಬಂದಿದೆ. ಉದಯ ಟಿವಿಯ ಈ ವಿಶಿಷ್ಠ ಪ್ರಯತ್ನಕ್ಕೆ ವೀಕ್ಷಕರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

ಈ ಬೆನ್ನಲ್ಲೇ ಮತ್ತೊಂದು ಹೊಸ ಧಾರಾವಾಹಿಯನ್ನು ಆರಂಭಿಸಲು ಹೊರಟಿದೆ. ಅದುವೇ 'ಪ್ರೀತಿ ಅರಸಿ'. ಈ ಹೊಸ ಧಾರಾವಾಹಿ ಉದಯ ಟಿವಿಯಲ್ಲಿ ಪ್ರಸಾರ ಆಗಲಿದ್ದು, ಅಪೂರ್ಣ ಮನಸ್ಸುಗಳ ಪರಿಪೂರ್ಣ ಪ್ರೇಮ ಕಥೆಯನ್ನು ಹೊಂದಿದೆ.

ಸಾಮಾನ್ಯವಾಗಿ ಗಂಡು ಎಂದರೆ ಹೊರ ಪ್ರಪಂಚದಲ್ಲಿ ದುಡಿಯುವುದು, ಹೆಣ್ಣು ಎಂದರೆ ಮನೆ ನಿಭಾಯಿಸುವ ಜವಾಬ್ದಾರಿ ಹೊತ್ತವಳು ಎನ್ನುವುದು ಅಭಿಪ್ರಾಯವಿದೆ. ಆದರೆ 'ಪ್ರೀತಿಯ ಅರಸಿ' ಧಾರಾವಾಹಿಯಲ್ಲಿ ಕಥಾನಾಯಕಿ ಅಂಜಲಿ ಮತ್ತು ಕಥಾನಾಯಕ ರಾಕಿ ಇವರಿಬ್ಬರ ಯೋಚನಾಲಹರಿ ವಿಭಿನ್ನ. ತನ್ನ ಉದ್ಯೋಗದಲ್ಲಿ ಅತ್ತ್ಯುನತ ಮಟ್ಟಕ್ಕೇರುವುದು ಅಂಜಲಿಯ ಕನಸಾದರೆ, ಕುಟುಂಬವೇ ಸರ್ವಸ್ವ, ಮನೆಯೇ ಎಲ್ಲಕ್ಕಿಂತ ಮುಖ್ಯ ಅನ್ನೋದು ರಾಕಿಯ ಧೃಡ ನಿರ್ಧಾರ.

Udaya Tv new serial Preethi Arasi starting from october 16th

ಪ್ರೀತಿಯನ್ನ ಅರಸುತ್ತಿರುವ ಅಂಜಲಿ, ರಾಕಿಯ ಪ್ರೀತಿಯ ಅರಸಿಯಾಗುವಳೇ? ಈ ಅಪೂರ್ಣ ಮನಸ್ಸುಗಳನ್ನು ಬೆಸೆಯುವ ಅಪರೂಪದ ಪ್ರೇಮ ಕಥೆಯೇ 'ಪ್ರೀತಿಯ ಅರಸಿ'. ಇದು ವೀಕ್ಷಕರನ್ನು ಸೆಳೆಯುವುದೇ ಅನ್ನೋದು ಈಗ ಕುತೂಹಲ.

'ಪ್ರೀತಿಯ ಅರಸಿ' ಧಾರಾವಾಹಿಯನ್ನು ಶೃತಿ ನಾಯ್ಡು ನಿರ್ಮಿಸಿದ್ದಾರೆ. ರಮೇಶ್‌ ಇಂದ್ರ ನಿರ್ದೇಶಿಸುತ್ತಿದ್ದು, ಈ ಪ್ರೇಮ ಕಥೆಯಲ್ಲಿ ಅಂಜಲಿ ಪಾತ್ರದಲ್ಲಿ ರಕ್ಷಾ ನಿಂಬರ್ಗಿ, ರಾಕಿಯಾಗಿ ಪೃಥ್ವಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಇಬ್ಬರನ್ನು ಒಂದು ಮಾಡುವ ಜವಾಬ್ದಾರಿ ಇಬ್ಬರು ಹಿರಿಯ ನಟಿಯರದ್ದು. ಅಜ್ಜಿ ಪಾತ್ರದಲ್ಲಿ ಗಿರಿಜಾ ಲೋಕೇಶ್‌ ಮತ್ತು ಪದ್ಮಾ ವಾಸಂತಿ ನಟಿಸುತ್ತಿದ್ದಾರೆ.

ಇನ್ನು ಅಪ್ಪನಾಗಿ ಜೈಜಗದಿಶ್‌ ಇವರೊಂದಿಗೆ ಮಿಥುನ್‌ ತೇಜಸ್ವಿ, ನಾಗೇಂದ್ರ ಅರಸ್‌ ಮತ್ತು ರಾಧಾ ಜೈರಾಮ್‌ ಕೂಡ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ 'ಪ್ರೀತಿಯ ಅರಸಿ' ಇದೇ ಅಕ್ಟೋಬರ್‌ 16 ರಿಂದ ವಾರದ ಎಲ್ಲಾ ದಿನಗಳಲ್ಲಿ ರಾತ್ರಿ 9 ಕ್ಕೆ ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ.

More from Filmibeat

English summary
Udaya Tv new serial Preethi Arasi starting from october 16th:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X