ಸಾವಿರ ಎಪಿಸೋಡ್ ಪೂರೈಸಿದ ಸಾಧು ಕೋಕಿಲಾ ನಿರ್ಮಾಣದ 'ಗೌರಿಪುರದ ಗಯ್ಯಾಳಿಗಳು': ಪ್ರಸಾರ ಆಗ್ತಿರೋದೆಲ್ಲಿ?

ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳಿಗೆ ವಿಶೇಷವಾದ ಸ್ಥಾನ ಮಾನವಿದೆ. ವೀಕ್ಷಕರು ಹೆಚ್ಚು ಸಮಯದ ಧಾರಾವಾಹಿಗಳನ್ನು ನೋಡುವುದರಲ್ಲಿ ಕಾಲ ಕಳೆಯುತ್ತಾರೆ. ಅದರಲ್ಲೂ ಕನ್ನಡದ ಮನರಂಜನಾ ವಾಹಿನಿ ಉದಯ ಟಿವಿಯಲ್ಲಿ ವಿಭಿನ್ನ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ವೀಕ್ಷಕರಿಗೆ ಮನರಂಜನೆಯನ್ನು ನೀಡುತ್ತಿವೆ.

ಧಾರಾವಾಹಿಗಳಿಗಿರುವ ಕ್ರೇಜ್ ಅನ್ನು ಮನಗಂಡಿರೋ ಕನ್ನಡ ಚಿತ್ರರಂಗದ ತಾರೆಯರು ಕೂಡ ಕಿರುತೆರೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ನಟನೆ ಮಾಡುವುದಕ್ಕೆ ಮುಂದೆ ಬರುತ್ತಿದ್ದಾರೆ. ಕೆಲವರು ಧಾರಾವಾಹಿಗಳ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಕನ್ನಡ ಚಿತ್ರರಂಗದ ಕಾಮಿಡಿ ಕಿಂಗ್ ಸಾಧು ಕೋಕಿಲಾ ಕೂಡ ಧಾರಾವಾಹಿ ನಿರ್ಮಾಣಕ್ಕೆ ಉಳಿದು ಬಹಳ ದಿನಗಳಾಗಿವೆ.

Udaya tv serial Gowripurada Gayyaligalu telecasted 1000 episodes

ಸಾಧು ಕೋಕಿಲಾ ತಮ್ಮ ನಿರ್ಮಾಣ ಸಂಸ್ಥೆಯಿಂದ ಉದಯ ಟಿವಿಗಾಗಿ ನಿರ್ಮಿಸುತ್ತಿರುವ ಧಾರಾವಾಹಿ 'ಗೌರಿಪುರದ ಗಯ್ಯಾಳಿಗಳು'. ಈ ಧಾರಾವಾಹಿ ಕಳೆದ ಕೆಲವು ದಿನಗಳಿಂದ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿತ್ತು. ಈ ಧಾರಾವಾಹಿ ಈಗ ಸಾವಿರ ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನು ಸೆಟ್‌ನಲ್ಲಿ ಕೇಕ್ ಕತ್ತರಿಸುವುದರ ಮೂಲಕ ಆಚರಿಸಿ ಸಂಭ್ರಮಿಸಲಾಗಿದೆ.

ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ ಎಲ್ಲಾ ಧಾರಾವಾಹಿಗಳ ಕಲಾವಿದರೂ 'ಗಯ್ಯಾಳಿ' ತಂಡಕ್ಕೆ ಶುಭಕೋರಿದ್ದಾರೆ. ತಮ್ಮ ಧಾರಾವಾಹಿ ಸಾವಿರ ಸಂಚಿಕೆಗಳನ್ನು ಪೂರೈಸಿದ ಬೆನ್ನಲ್ಲಿ ಸಾಧು ಕೋಕಿಲಾ ಸಂತಸ ವ್ಯಕ್ತಪಡಿಸಿದ್ದಾರೆ. "ಸಾವಿರ ಸಂಚಿಕೆಗಳನ್ನು ಪೂರೈಸುವುದು ಒಂದು ಮೈಲಿಗಲ್ಲು. ಇದು ಧಾರಾವಾಹಿಯ ಜನಪ್ರಿಯತೆಗೆ ಸಾಕ್ಷಿ. ಮುಂದೆ ಇನ್ನೂ ಹೆಚ್ಚಿನ, ಟ್ರೆಂಡಿಗೆ ತಕ್ಕಂಥ ಹಾಸ್ಯಮಯ ಸಂಚಿಕೆಗಳನ್ನು ಚಿತ್ರೀಕರಿಸುವುದು ನಮ್ಮ ಜವಾಬ್ದಾರಿ ಹಾಗೂ ಸವಾಲೂ ಹೌದು" ಎಂದು ನಿರ್ಮಾಪಕ ಸಾಧುಕೋಕಿಲ ಪ್ರತಿಕ್ರಿಯಿಸಿದ್ದಾರೆ.

ಹಾಗೇ ಈ ಧಾರಾವಾಹಿಯ ನಿರ್ದೇಶಕ ಕೈಲಾಶ್ ಮಳವಳ್ಳಿ "ಡಿಜಿಟಲ್ ಮಾಧ್ಯಮದಲ್ಲಿ ಎಗ್ಗಿಲ್ಲದೇ ಹರಿದುಬರುತ್ತಿರುವ ತರಹೇವಾರಿ ಹಾಸ್ಯ ವಿಡಿಯೋಗಳ ನಡುವೆ ಸದಭಿರುಚಿಯ ಹಾಸ್ಯ ಮೂಲೆಗುಂಪಾಗುವ ಅಪಾಯವಿದೆ. ಆದರೂ ಗೌರಿಪುರದ ಗಯ್ಯಾಳಿಗಳ ಜನಪ್ರಿಯತೆ ವೀಕ್ಷಕರು ಒಳ್ಳೆಯ ಹಾಸ್ಯವನ್ನು ಯಾವತ್ತಿದ್ದರೂ ಇಷ್ಟಪಡುತ್ತಾರೆ ಎಂಬುದಕ್ಕೆ ನಿದರ್ಶನ" ಎಂದು ಸಂತಸ ಪಟ್ಟಿದ್ದಾರೆ.

Udaya tv serial Gowripurada Gayyaligalu telecasted 1000 episodes

ಹಾಸ್ಯ ನಟ ಸಾಧು ಕೋಕಿಲಾ ತಮ್ಮ ಸುರಾಗ್ ಪ್ರೊಡಕ್ಷನ್ಸ್ ಮೂಲಕ 'ಗೌರಿಪುರದ ಗಯ್ಯಾಳಿಗಳು' ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಧಾರಾವಾಹಿಗೆ ಚಿತ್ರಕತೆ-ಸಂಭಾಷಣೆ- ದಕ್ಷಿಣಾಮೂರ್ತಿಯವರದ್ದಾದರೆ, ಛಾಯಾಗ್ರಹಣ- ಅಭಿ, ಸಂಕಲನ-ಮಹೇಶ್ ಅವರದ್ದು. ವಿಕಾಸ್, ನವ್ಯ, ದೀಪಿಕಾ, ದಾನಪ್ಪ, ವೀಣಾ, ಹುಬ್ಳಿ ಮಂಜುಳಾ, ದೀಪಾ, ರಂಜಿತ್ ಮುಂತಾದವರು ನಟಿಸುತ್ತಿದ್ದಾರೆ.

ಈ ಧಾರಾವಾಹಿಯಲ್ಲಿ ಹಿರಿಯ ಹಾಸ್ಯಕಲಾವಿದರಾದ ಉಮೇಶ್, ರೇಖಾದಾಸ್, ಮಿಮಿಕ್ರಿ ಗೋಪಿ, ಜಯಮ್ಮ, ನಾಗರಾಜ ಕೋಟೆ, ಮಿಮಿಕ್ರಿ ಮಂಜು, ಲೋಕೇಶ್ ಬಸವಟ್ಟಿ, ರವಿತೇಜ ಸಿನಿಮಾ ನಟಿಯರಾದ ಚಂದನಾ, ರಚನಾ ದಶರಥ ಮತ್ತಿತರರು ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Udaya tv serial Gowripurada Gayyaligalu telecasted 1000 episodes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X