ಒಡಹುಟ್ಟಿದವರಿಗಾಗಿ ಉಪ್ಪಿಲ್ಲದ ಆಹಾರ ತಿನ್ನಲ್ಲವೆಂದು ಪ್ರತಿಜ್ಞೆ ಮಾಡಿದ 'ರಾಧಿಕಾ' ಕತೆಯೇನು?

ಉದಯ ಟಿವಿ ಒಂದರ ಹಿಂದೊಂದು ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಮುಂದಾಗಿದೆ. ಕೆಲವು ದಿನದ ಹಿಂದೆ ಹೊಚ್ಚ ಹೊಸ ಧಾರಾವಾಹಿಯನ್ನು ಅನೌನ್ಸ್ ಮಾಡಿತ್ತು. ಈಗ ಮತ್ತೊಂದು ಧಾರಾವಾಹಿಯನ್ನು ಇದೇ ತಿಂಗಳು ಪ್ರೇಕ್ಷಕರ ಮುಂದಿಡಲಿದೆ. ಮಹಿಳೆಯ ಬದುಕನ್ನು ಆಧರಿಸಿದ ಈ ಹೊಚ್ಚ ಹೊಸ ಧಾರಾವಾಹಿಯ ಪ್ರಸಾರದ ದಿನವನ್ನು ಮಹಿಳಾ ದಿನಾಚರಣೆಯಂದೇ ಘೋಷಣೆ ಮಾಡಿದೆ. ಆ ಧಾರಾವಾಹಿಯೇ 'ರಾಧಿಕಾ'.

ಮಹಿಳೆಯನ್ನೇ ಟಾರ್ಗೆಟ್ ಆಗಿಟ್ಟುಕೊಂಡು ಈ ಧಾರಾವಾಹಿಯನ್ನು ನಿರ್ಮಿಸಲಾಗಿದೆ. ರಾಧಿಕಾ ಮಧ್ಯಮ ವರ್ಗದ ಮಹಿಳೆಯ ಸ್ಟೋರಿ. ಈ ಕಾರಣಕ್ಕೆ ಹೊಚ್ಚ ಹೊಸ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸವನ್ನು ಸಷ್ಟಿಸಲಿದೆ ಎಂಬ ಆತ್ಮ ವಿಶ್ವಾಸದಲ್ಲಿ ಇದೆ. ಇದೇ ಮಾರ್ಚ್ 14ರಿಂದ ರಾತ್ರಿ 8.30ಕ್ಕೆ ಪ್ರೈಂ ಟೈಮ್‌ನಲ್ಲಿ ಹೊಚ್ಚ ಹೊಸ ಧಾರಾವಾಹಿ 'ರಾಧಿಕಾ' ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿದೆ. ಅಂದ್ಹಾಗೆ ಈ ಧಾರಾವಾಹಿಯ ನಾಯಕಿ ಉಪ್ಪಿ ಇರದ ಆಹಾರ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾಳೆ. ಅದ್ಯಾಕೆ ಅಂತ ತಿಳಿಯಲು ಮುಂದೆ ಓದಿ.

 ಯಾರೀ ರಾಧಿಕಾ?

ಯಾರೀ ರಾಧಿಕಾ?

ಉದಯ ಟಿವಿ ಮೂಲಕ ಕನ್ನಡಿಗರ ಮನೆಗಳಿಗೆ ತನ್ನ ಕೌಟುಂಬಿಕ ಕಥೆಯನ್ನು ಹೇಳಲು 'ರಾಧಿಕಾ' ಬರುತ್ತಿದ್ದಾರೆ. ಈಕೆ ಖಾಸಗಿ ಆಸ್ಪತ್ರೆಯ ಹೆಡ್ ನರ್ಸ್. ಇಡೀ ಆಸ್ಪತ್ರೆಯಲ್ಲಿ ರಾಧಿಕಾ ಬೆಸ್ಟ್ ನರ್ಸ್. ರೋಗಿಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವ ನರ್ಸ್. ಹೀಗಾಗಿ ಆಸ್ಪತ್ರೆಯ ಸಿಬ್ಬಂದಿಯಿಂದ ಹಿಡಿದು ಎಲ್ಲರೂ ಇಷ್ಟ ಪಡುವ ನರ್ಸ್ ಈಕೆ. ರಾಧಿಕಾಳ ಸ್ನೇಹ-ಕಾಳಜಿ ಎಲ್ಲರಿಗೂ ಇಷ್ಟ ಆಗಿರುವುದರಿಂದ ಅಚ್ಚುಮೆಚ್ಚು. ತನ್ನ ವೈಯಕ್ತಿಕ ಹಾಗೂ ವೃತ್ತಿ ಬದುಕಲ್ಲಿ ನೂರೆಂಟು ಸವಾಲುಗಳು ಇದ್ದರೂ, ಆತ್ಮವಿಶ್ವಾಸದಿಂದ ನಿಭಾಯಿಸುವವಳೇ ಈ ರಾಧಿಕಾ.

 ರಾಧಿಕಾಳಿಂದ ಉಪ್ಪಿಲ್ಲದ ಆಹಾರ ಸೇವನೆ

ರಾಧಿಕಾಳಿಂದ ಉಪ್ಪಿಲ್ಲದ ಆಹಾರ ಸೇವನೆ

ಉದಯ ಟಿವಿಯ ಹೊಚ್ಚ ಹೊಸ ಧಾರಾವಾಹಿ 'ರಾಧಿಕಾ' ಹಲವು ಕಾರಣಗಳಿಂದ ಪ್ರೇಕ್ಷಕರಿಗೆ ಇಷ್ಟ ಆಗಬಹುದು. ರಾಧಿಕಾ ಮಧ್ಯಮ ವರ್ಗದ ಅವಿವಾಹಿತ ಮಹಿಳೆ. ಆಕೆಯ ಕುಟುಂಬಕ್ಕೆ ಅಂತಿರುವ ಏಕೈಕ ಆಧಾರಸ್ತಂಭ. ತನ್ನ ಸೋದರ ಸೋದರಿಯರ ಬದುಕು ರೂಪಿಸಲು ಹಗಲುರಾತ್ರಿ ದುಡಿಯುತ್ತಾಳೆ. ಸಹೋದರ ಪೊಲೀಸ್ ಆಗಲಿ, ಒಬ್ಬ ಸಹೋದರಿ ಡಾಕ್ಟರ್ ಆಗಲಿ ಮತ್ತು ಇನ್ನೊಬ್ಬಳು ಕಾರ್ಪೊರೇಟ್ ಉದ್ಯೋಗ ಪಡೆಯಲಿ ಎಂದು ಬಯಸುತ್ತಾಳೆ. ತನ್ನ ಸೋದರ ಸೋದರಿ ನೆಲೆಕಂಡುಕೊಳ್ಳವವರೆಗೂ ರಾಧಿಕಾ ಉಪ್ಪಿರುವ ಆಹಾರವನ್ನು ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾಳೆ. ಇಷ್ಟೆಲ್ಲಾ ಸವಾಲುಗಳನ್ನ ಎದುರಿಸುವ ರಾಧಿಕಾ ತನ್ನ ಜೀವನದಲ್ಲಿ ಗೆಲ್ಲುತ್ತಾಳಾ ಅನ್ನುವುದು ಕಥೆ.

 ರಾಧಿಕಾ ಪಾತ್ರ ಮಾಡುತ್ತಿರೋರು ಯಾರು?

ರಾಧಿಕಾ ಪಾತ್ರ ಮಾಡುತ್ತಿರೋರು ಯಾರು?

'ರಾಧಿಕಾ' ಧಾರಾವಾಹಿಯ ಹೈಲೈಟ್ ಎಂದರೆ ಕಾಸ್ಟಿಂಗ್. ಈ ಹೊಚ್ಚ ಹೊಸ ಧಾರಾವಾಹಿಯಲ್ಲಿ ರಾಧಿಕಾ ಪಾತ್ರದಲ್ಲಿ ಕಾವ್ಯಾ ಶಾಸ್ತ್ರಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕಾವ್ಯಾಶಾಸ್ತ್ರಿ ಉದಯ ಟಿವಿಯಲ್ಲೇ ಪ್ರಸಾರವಾಗಿದ್ದ 'ನಂದಿನಿ' ಸೀರಿಯಲ್‌ನಲ್ಲಿ ತ್ರಿಶಲಾ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಕಾವ್ಯಾ ಶಾಸ್ತ್ರಿ ಜೊತೆ ನಾಯಕನ ಪಾತ್ರದಲ್ಲಿ ಶರತ್ ಕ್ಷತ್ರಿಯಾ ನಟಿಸಿದ್ದಾರೆ. ಉಳಿದಂತೆ ಹಿರಿಯ ಕಲಾವಿದರಾದ ಗಾಯತ್ರಿ ಪ್ರಭಾಕರ್, ರವಿ ಕಲಾಬ್ರಹ್ಮ, ಮಾಲತಿ ಸರ್ದೇಶಪಾಂಡೆ, ಸುರೇಶ್ ರೈ ಮತ್ತು ಸವಿತಾ ಕೃಷ್ಣಮೂರ್ತಿ, ಅನುಭವಿ ನಟರಾದ ಶ್ವೇತಾ ರಾವ್, ಸುನಿಲ್, ಜೀವನ್, ರೇಖಾ ಸಾಗರ್ ಮತ್ತು ಇಂಚರ ಶೆಟ್ಟಿ, ಪ್ರಿಯಾದರ್ಶಿನಿ ಮತ್ತು ಬೇಬಿ ದೃಯಾ, ಆದಿತ್ಯ ಕಾಣಿಸಿಕೊಂಡಿದ್ದಾರೆ.

 ಉದಯ ಟಿವಿಯಲ್ಲಿ ಯಶಸ್ವಿ ಧಾರಾವಾಹಿ

ಉದಯ ಟಿವಿಯಲ್ಲಿ ಯಶಸ್ವಿ ಧಾರಾವಾಹಿ

ಉದಯ ಟಿವಿ ಕಳೆದ 28 ವರ್ಷಗಳಿಂದ ಹಲವು ಯಶಸ್ವಿ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಈ ಹಿಂದೆ ಯಾರಿವಳು, ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸದಂತಹ ಹಲವಾರು ವಿಭಿನ್ನ ಕೂತೂಹಲಕಾರಿ ಕಥೆಗಳನ್ನು ಉದಯ ಟಿವಿ ಪ್ರಸಾರ ಮಾಡಿದೆ. ಈಗ 'ರಾಧಿಕಾ' ಎಂಬ ಹೊಚ್ಚ ಹೊಸ ಧಾರಾವಾಹಿ ಮೂಲಕ ವೀಕ್ಷಕರಿಗೆ ರಂಜನೆ ನೀಡಲು ಸಜ್ಜಾಗಿದೆ. ಗಣಪತಿ ಭಟ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದು, ದರ್ಶಿತ್ ಭಟ್ ನಿರ್ದೇಶಿಸುತ್ತಿದ್ದಾರೆ. ಈ ಧಾರಾವಾಹಿ ಮಾರ್ಚ್ 14 ರಿಂದ ರಾತ್ರಿ 8.30ಕ್ಕೆ ಪ್ರಸಾರ ಆಗಲಿದೆ.

More from Filmibeat

English summary
Udaya Tv will telecast new serial Radhika from March 14th. It is a story of head nurse, she is unmarried and solo earnings to the family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X