ರಾಜ್ಯದ 3ನಗರಗಳಲ್ಲಿ ಸೆಟ್ ಟಾಪ್ ಬಾಕ್ಸ್ ಕಡ್ಡಾಯ

ಒಂದು ಮಿಲಿಯನ್ (10 ಲಕ್ಷ) ಗಿಂತ ಹೆಚ್ಚಿನ ಜನಸಂಖ್ಯೆ ಇರುವ ದೇಶದ 30 ನಗರಗಳಲ್ಲಿ ಈಗ ಪ್ರಕಟಿಸಿರುವ ದಿನಾಂಕ ಅಂದರೆ 01.04 .2013ರೊಳಗೆ ಟಿವಿ ಸೆಟ್ ಗಳಿಗೆ ಸೆಟ್ ಟಾಪ್ ಬಾಕ್ಸ್ ಅಳವಡಿಸಲೇ ಬೇಕಿದೆ.
ರಾಜ್ಯದ ಬೆಂಗಳೂರು,ಮೈಸೂರು ಮತ್ತು ಹುಬ್ಬಳ್ಳಿ, ಧಾರವಾಡ ಅವಳಿ ನಗರದ ಜನತೆ ಈಗಿನ ಅನಲಾಗ್ ತಂತ್ರಜ್ಞಾನದಿಂದ ಡಿಜಿಟಲ್ ತಂತ್ರಜ್ಞಾನಕ್ಕೆ ವರ್ಗವಾಗುವುದನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಕಡ್ಡಾಯಗೊಳಿಸಿದೆ.
ಬೆಂಗಳೂರು ನಗರದಲ್ಲಿ ಡಿಜಿಟಲ್ ಸೆಟ್ ಟಾಪ್ ಬಾಕ್ಸ್ ಬೆಲೆ ರೂಪಾಯಿ 900 ನಿಂದ 1200 ರ ವರೆಗೆ, ಹೈ ಡೆಫಿನೆಶನ್ (HD) ಡಿಜಿಟಲ್ ಸೆಟ್ ಟಾಪ್ ಬಾಕ್ಸ್ ಬೆಲೆ ರೂಪಾಯಿ 1500 ರಿಂದ 2000 ವರೆಗಿದೆ.
2011ರ ಅವಧಿಯಲ್ಲಿ ಮೈಸೂರು, ಹುಬ್ಬಳ್ಳಿ ಮತ್ತು ಧಾರವಾಡ ನಗರಗಳ ಜನಸಂಖ್ಯೆ ಒಂದು ಮಿಲಿಯನ್ ದಾಟುವುದಿಲ್ಲ, ಆದರೂ ಈ ನಗರಗಳಲ್ಲಿ ಹೊಸ ಪದ್ಧತಿ ಜಾರಿಗೆ ಬರಲಿದೆ.
ಡಿಸೆಂಬರ್ 31, 2014 ರೊಳಗೆ ದೇಶಾದ್ಯಂತ ಕೇಬಲ್ ಪ್ರಸಾರವನ್ನು ಡಿಜಿಟಲೀಕರಣ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ.
ಇದರ ಮೊದಲ ಭಾಗವಾಗಿ ದೇಶದ ನಾಲ್ಕು ಮಹಾನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಅಲ್ಲದೆ ದೆಹಲಿ ವ್ಯಾಪ್ತಿಗೆ ಬರುವ ಫರಿದಾಬಾದ್, ಗುರಗಾಂವ್ ಮತ್ತು ನೋಯ್ಡಾ ನಗರಗಳಲ್ಲಿ ಈ ಹೊಸ ತಂತ್ರಜ್ಞಾನ ಅಳವಡಿಸಲು ನವೆಂಬರ್ ಒಂದರ ಗಡುವು ನೀಡಿದೆ.


Click it and Unblock the Notifications











