Marali Manasagide: ವೈಶು ನಾಟಕ ಸ್ಪಂದನಾಗೆ ಗೊತ್ತಾಗಿದೆ: ಈ ಅಡೆತಡೆಯಲ್ಲಿ ಒಂದಾಗುತ್ತಾ ವಿಕ್ರಾಂತ್-ಸ್ಪಂದನಾ ಪ್ರೀತಿ?

ಮದುವೆನೇ ಆಗಲ್ಲ ಅಂತಿದ್ದ ಇನ್‌ಸ್ಪೆಕ್ಟರ್ ವಿಕ್ರಾಂತ್ ಅನಿವಾರ್ಯತೆ ಕಟ್ಟು ಬಿದ್ದು ಮದುವೆ ಆಗಿದ್ದಾರೆ. ಆದರೆ ಮನೆಯಲ್ಲಿ ಕೆಲವೊಂದು ಸಮಸ್ಯೆಗಳು ತಾಂಡವವಾಡುತ್ತಿವೆ. ಒಂದು ಕಡೆ ಅವರ ಆತ್ಮೀಯ ಗುರುಗಳ ಮಗಳನ್ನೇ ಮದುವೆಯಾಗಿರೋದು, ಮತ್ತೊಂದು ಕಡೆ ತಾನೂ ಮೊದಲು ಪ್ರೀತಿಸಿದ್ದ ಹುಡುಗಿ. ಈ ಇಬ್ಬರು ಒಂದೇ ಮನೆಯಲ್ಲೇ ಇದ್ದಾರೆ.

ಮೊದ ಮೊದಲಿಗೆ ಸ್ಪಂದಾನಾಗೆ ವಿಕ್ರಾಂತ್ ಕಂಡರೆ ಪ್ರೀತಿ, ಗೀತಿ, ಇತ್ಯಾದಿ ಏನೂ ಇರಲಿಲ್ಲ. ಬರಿ ಕಾಲೇಜು, ಓದು, ತನ್ನ ಗುರಿಯ ಕಡೆಗೆ ಅಷ್ಟೇ ಗಮನವಿತ್ತು. ಆದರೆ ಇತ್ತೀಚೆಗೆ ಸ್ಪಂದನಾಗೆ ಇದ್ದಕ್ಕಿದ್ದ ಹಾಗೇ ಲವ್ ಆಗೋಗಿದೆ. ಅದನ್ನ ಹೇಳಿಕೊಳ್ಳುವುದಕ್ಕೆ ಒದ್ದಾಡುತ್ತಿದ್ದಾಳೆ.

ವಿಕ್ಕಿ ಮನೆಗೆ ಬಂದರೆ ಈ ಮುಂಚೆಯೆಲ್ಲಾ ಚಟಪಟಾ ಅಂತ ಮಾತಾಡುತ್ತಿದ್ದ ಸ್ಪಂದನಾ ಈಗ ಮಾತಾಡುವುದಕ್ಕೆ ಮುಜುಗರ ಪಟ್ಟುಕೊಳ್ಳುತ್ತಿದ್ದಾಳೆ. ಕಾಲೇಜಿನಲ್ಲೂ ವಿಕ್ಕಿಯೇ ಕಾಣಿಸುತ್ತಾನೆ. ಬುಕ್ಕಿನಲ್ಲೂ ವಿಕ್ಕಿಯ ದರ್ಶನವಾಗುತ್ತೆ. ಇದೇ ಸ್ಪಂದನಾಗೆ ದೊಡ್ಡ ಸಮಸ್ಯೆಯಾಗಿದೆ. ಕಡೆಗೂ ಫಾಲ್ ಇನ್ ಲವ್ ಅನ್ನೋದು ಕನ್ಫರ್ಮ್ ಆಗಿದೆ.

Vaishu is the enemy of love of spandana in Marali Manasagide serial

ಸ್ಪಂದನಾ ಹಾಗೂ ವಿಕ್ಕಿ ಲವ್‌ಸ್ಟೋರಿಯಲ್ಲಿ ವಿಲನ್

ವಿಕ್ಕಿಯನ್ನು ಮನಸ್ಸಿನಲ್ಲಿ ಇಟ್ಕೊಂಡಿರುವ ಸ್ಪಂದನಾ, ಹೀಗೆ ಬಿಡೋದಕ್ಕಿಂತ ಮೊದಲು ಹೇಳಿಕೊಳ್ಳುವುದು ಉತ್ತಮ ಅಂತ ಸ್ಪಂದನಾಗೆ ಅನ್ನಿಸಿದೆ. ಅದಕ್ಕಾಗಿಯೇ ಸಿಕ್ಕಾಪಟ್ಟೆ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾಳೆ. ಆದರೆ ಇಲ್ಲೇ ಇರೋದು ಟ್ವಿಸ್ಟ್. ಯಾಕಂದ್ರೆ, ಮನೆಯಲ್ಲಿಯೇ ಸ್ಪಂದನಾಗೆ ದೊಡ್ಡ ವಿಲನ್ ಇದ್ದಾಳೆ. ಅದು ವೈಶು. ಈ ಮುಂಚೆ ವಿಕ್ಕಿನ ಲವ್ ಮಾಡ್ತಾ ಇದ್ದಳು ವೈಶು.

ಸ್ಪಂದನಾಗೆ ವಿಕ್ಕಿ ಮೇಲೆ ಲವ್ ಆಗಿರೋದು ವೈಶುಗೆ ಗೊತ್ತಾಗಿದೆ. ಆದರೆ, ಅದನ್ನ ಹೇಳೋದಕ್ಕೆ ಬಿಡ್ತಾನೇ ಇಲ್ಲ. ಏನಾದರೂ ಒಂದು ನೆಪ ಹುಡುಕಿ ಸ್ಪಂದನಾ ಹಾದಿ ತಪ್ಪಿಸುತ್ತಿದ್ದಾಳೆ ವೈಶು. "ಬಾಯಿ ತುಂಬಾ ಅಕ್ಕ ಅಂತೀಯಾ, ಆದ್ರೆ ನನ್ನ ಗಂಡ ಸತ್ತು ಹೋಗಿದ್ರು ನೀನು ಮಾತ್ರ ಗಂಡನ ಜೊತೆ ಆರಾಮಾಗಿ ಇರುವುದು ಎಷ್ಟು ನ್ಯಾಯ..? ಅಕ್ಕನ ಸ್ಥಾನಕ್ಕೆ ನೀನು ಕೊಡೋ ಬೆಲೆ ಇದೆಯಾ ಅಂತ ವೈಶು ಕೇಳಿದ ಭಾವನಾತ್ಮಕ ಪ್ರಶ್ನೆಗೆ ಸ್ಪಂದನಾ ಬಾಯಲ್ಲಿ ಪದಗಳೇ ಇಲ್ಲ. ಹೀಗಾಗಿ ಅಂದಿನಿಂದ ಸ್ಪಂದನಾ ತನ್ನ ಪ್ರೀತಿಯನ್ನ ವೈಶು ಮುಂದೆ ವ್ಯಕ್ತಪಡಿಸೋದನ್ನೇ ಬಿಟ್ಟು ಬಿಟ್ಟಿದ್ದಾಳೆ.

ವೈಶು ಆಡುತ್ತಿರುವ ನಾಟಕ ಎಂತಹದ್ದು?

ವಿಕ್ರಾಂತ್ ಹೇಳೋದಕ್ಕೆ ಇರಲು ಸಾಧ್ಯವೇ ಇಲ್ಲ. ಈಗಾಗಲೇ ಪ್ರೀತಿ ಹುಟ್ಟಿರೋ ಬಗ್ಗೆ ಸ್ಪಂದನಾ ಕೆಲವೊಂದು ಕುರುಹಗಳನ್ನ ಬಿಟ್ಟು ಕೊಡ್ತಾನೆ ಇದ್ದಾಳೆ. ಅದ್ಯಾಕೋ ಏನೋ ವಿಕ್ಕಿಗೆ ಈ ಪ್ರೀತಿ ಅರ್ಥವೇ ಆಗುತ್ತಿಲ್ಲ. ಅಥವಾ ಅರ್ಥ ಆದರೂ ನಾಟಕ ಮಾಡುತ್ತಲೂ ಇರಬಹುದು. ಏನೇ ಆಗಲೀ ಪ್ರೀತಿ ಹೇಳಿಕೊಳ್ಳಲೇಬೇಕೆಂದು ಸ್ಪಂದನಾ ರೂಮ್ ಅನ್ನೆಲ್ಲಾ ಸ್ಪೆಷಲ್ ಆಗಿ ಅರೆಂಜ್ಮೆಂಟ್ ಮಾಡಿದ್ದಾಳೆ. ಇದು ವೈಶುಗೆ ಗೊತ್ತಾಗಿದೆ. ಪ್ರೀತಿಯನ್ನು ಹೇಳಿಕೊಂಡು ಬಿಡುತ್ತಾಳೆ. ಅದಕ್ಕೆ ಅವಕಾಶ ಕೊಡಬಾರದು ಎಂದು ನಾಟಕ ಮಾಡಲು ಶುರು ಮಾಡುತ್ತಾಳೆ.

ಬಾಗಿಲ ಬಳಿ ಗುಲಾಬಿ ಹಿಡಿದು ಆ ಕಡೆ ಸ್ಪಂದನಾ ನಿಂತಿದ್ದಾಳೆ. ಈ ಕಡೆಯಿಂದ ವಿಕ್ರಾಂತ್ ರೂಮಿನೊಳಗೆ ಹೋಗಲು ಬರ್ತಿದ್ದಾನೆ. ಬಾಗಿಲು ತೆಗೆದೊಡನೆ ಧೈರ್ಯ ಮಾಡಿ ಸ್ಪಂದನಾ ಇವತ್ತು ಪ್ರಪೋಸ್ ಮಾಡಿಯೇ ಮಾಡುತ್ತಾಳೆ. ಆದರೆ, ಇದನ್ನ ಹಾಳು ಮಾಡಲೆಂದೇ ವೈಶು ತಲೆ ತಿರುಗಿ ಬಿದ್ದಾಗಿದೆ. ವಿಕ್ಕಿ ಮೊದಲು ವೈಶುನ ಹಾರೈಕೆ ಮಾಡ್ತಾನೆ. ಕಡೆಯಲ್ಲಿ ಹೋಗುವಾಗ ವೈಶು ನೋಟ ಅದು ನಾಟಕ ಅನ್ನೋದು ಸ್ಪಂದನಾಗೆ ಪಕ್ಕಾ ಆಗಿದೆ. ಪ್ರೀತಿ ಹೇಳಿಕೊಳ್ಳುವುದನ್ನು ಹಾಳು ಮಾಡಲು ಈ ನಾಟಕ ಆಡಿದಳಾ ಎಂಬ ಅನುಮಾನ ಸ್ಪಂದನಾ ಮನಸ್ಸಿಗೆ ಬಂದಾಗಿದೆ. ಇದನ್ನೆಲ್ಲಾ ದಾಟಿ ಈಗ ಸ್ಪಂದನಾ-ವಿಕ್ಕಿಗೆ ಪ್ರಪೋಸ್ ಮಾಡ್ತಾಳಾ ಅನ್ನೋ ಕ್ಯೂರಿಯಾಸಿಟಿ ಎಲ್ಲರೊಳಗೂ ಹೊಕ್ಕಿದೆ.

More from Filmibeat

English summary
Vaishu is the enemy of love of spandana in Marali Manasagide serial.. Here more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X