ಪ್ರೇಮಿಗಳ ದಿನದಂದೇ 'ದೊಡ್ಮೆನೆ ಹಬ್ಬ'; ಬಿಗ್ ಬಾಸ್ ಸ್ಪರ್ಧಿಗಳಿಂದ 3 ಗಂಟೆ ಭರ್ಜರಿ ಮನರಂಜನೆ

ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿದ ಬಳಿಕ ಕಲರ್ಸ್ ಕನ್ನಡ ವಿನೂತನ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಮುಂದೆ ಬರುತ್ತಿದೆ. ಬಿಗ್ ಬಾಸ್ ಬಳಿಕ ಸ್ಪರ್ಧಿಗಳನ್ನು ಮಿಸ್ ಮಾಡಿಕೊಳ್ಳುತ್ತಿರುವ ವೀಕ್ಷಕರಿಗಾಗಿ ವಿನೂತನ ಕಾರ್ಯಕ್ರಮವೊಂದನ್ನು ವೀಕ್ಷಕರ ಮುಂದೆ ತರುತಿದೆ. ಕಲರ್ಸ್ ಕನ್ನಡ ಈಗಾಗಲೇ ಪ್ರೋಮೋವನ್ನೂ ರಿಲೀಸ್ ಮಾಡಿದ್ದು, ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ಅದರಲ್ಲೂ ಪ್ರೇಮಿಗಳ ದಿನದಂದು ಕಲರ್ಸ್ ಕನ್ನಡ ಹೊಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಫೆಬ್ರವರಿ 14ರಂದು ಮೂರು ಗಂಟೆಗಳ ಕಾಲ 'ಕಲರ್ಸ್ ದೊಡ್ಮನೆ ಹಬ್ಬ' ಎನ್ನುವ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. 'ಕಲರ್ಸ್‌ ದೊಡ್ಮನೆ ಹಬ್ಬ' ಕಲರ್ಸ್ ಕನ್ನಡದ ಅದ್ಧೂರಿ ಕಾರ್ಯಕ್ರಮವಾಗಿ ಪ್ರೇಮಿಗಳ ದಿನದಂದು ಪ್ರಸಾರವಾಗುತ್ತಿದೆ.

Valentines Day special colors Kannada telecasting 3 hours special program Colors Dodmane Habba

ಫೆಬ್ರವರಿ 14 ಪ್ರೇಮಿಗಳ ದಿನದಂದು ಕರುನಾಡಿನ ಮನೆ ಮಂದಿಯೆಲ್ಲ ಕುಳಿತು ನೋಡಬಹುದಾದ ಅತ್ಯುತ್ತಮ ಕಾರ್ಯಕ್ರಮ ಇದಾಗಲಿದೆ. 'ಕಲರ್ಸ್‌ ದೊಡ್ಮನೆ ಹಬ್ಬ' ಇದೇ ಶನಿವಾರ ಸಂಜೆ 6:00 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳೇ ಹೈಲೈಟ್ ಆಗಲಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್‌ 12 ಮುಗಿಸಿ ಎಲ್ಲಾ ಸ್ಪರ್ಧಿಗಳು ಹೊರಬಂದ ಮೇಲೆ ಇದೇ ಮೊದಲ ಬಾರಿಗೆ ಮತ್ತೆ ಕಲರ್ಸ್ ಕನ್ನಡದ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮನೆಯೊಳಗೆ ಇದ್ದಾಗ ಕಿತ್ತಾಡಿಕೊಂಡಿದ್ದವರು ಈಗ ಕಂಪ್ಲೀಟ್ ಆಗಿ ಬದಲಾಗಿದ್ದಾರೆ. ದ್ವೇಷ, ಕೋಪ-ತಾಪಗಳನ್ನು ಮರೆತು ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಗು, ಹರಟೆ ಮತ್ತು ಸಂಭ್ರಮಕ್ಕೆ ಮಾತ್ರ ಆದ್ಯತೆ ನೀಡಲಾಗಿದ್ದು, ನಕ್ಕು ನಗಿಸುವುದಕ್ಕೆ ಈ 'ಕಲರ್ಸ್‌ ದೊಡ್ಮನೆ ಹಬ್ಬ'ದಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿಯ ನಟಿ ಹಾಗೂ ನಿರೂಪಕಿ ಸುಷ್ಮಾ ರಾವ್ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. ಸುಷ್ಮಾ ರಾವ್ ಎಂದಿನಂತೆ ತಮ್ಮ ಲವಲವಿಕೆಯಿಂದ ಈ ಕಾರ್ಯಕ್ರಮಕ್ಕೆ ಮನರಂಜನೆಯ ಮೆರುಗು ನೀಡಿದ್ದಾರೆ. ಬಿಗ್ ಬಾಸ್ ನಡೆಯುವಾಗಲೂ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ಸುಷ್ಮಾ ರಾವ್ ಮಾಜಿ ಸ್ಪರ್ಧಿಗಳ ಗುಟ್ಟುಗಳನ್ನು ರಟ್ಟು ಮಾಡುತ್ತಿದ್ದಾರೆ.

'ಕಲರ್ಸ್ ದೊಡ್ಮನೆ ಹಬ್ಬ'ದಲ್ಲಿ ಕೇವಲ ಹಾಡು-ಕುಣಿತ ಅಷ್ಟೇ ಸೀಮಿತವಾಗಿಲ್ಲ. ಈ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಮನೆಯ ಟಾಸ್ಕ್‌ಗಳನ್ನು ನೆನಪಿಸುವಂತಹ ಗೇಮ್‌ಗಳು ಕೂಡ ಇರುತ್ತವೆ. ಸುಷ್ಮಾ ರಾವ್ ಅವರು ಬಿಗ್ ಬಾಸ್ ಸ್ಪರ್ಧಿಗಳ ಕಾಲೆಳೆದು, ಅವರಿಂದಲೇ ಕಾಮಿಡಿ ಮಾಡುತ್ತಾ ಗೇಮ್‌ಗಳನ್ನು ಆಡಿಸಿ ಅವರ ಗುಣವನ್ನು ಹೊರ ತಂದಿದ್ದಾರೆ. ಮತ್ತೆ ಬಿಗ್ ಬಾಸ್‌ ಮನೆಯಲ್ಲಿ ಟಾಸ್ಕ್ ನಡೆಯುತ್ತಿದೆಯೇನೋ? ಎನ್ನುವ ಭಾವವನ್ನು ಮೂಡಿಸಿದ್ದಾರೆ.

Valentines Day special colors Kannada telecasting 3 hours special program Colors Dodmane Habba

ಈ ಕಾರ್ಯಕ್ರಮದ ವಿಶೇಷ ಏನಂದ್ರೆ, ಸೀಸನ್ 12ರಲ್ಲಿ ಬಿಗ್ ಬಾಸ್‌ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ವಿನ್ನರ್ ಗಿಲ್ಲಿ ನಟ ಕಾಣಿಸಿಕೊಂಡಿರೋದು. ಹೀಗಾಗಿ ಗಿಲ್ಲಿಯ ಅಭಿಮನಿಗಳಿಗಾಗಿ ಇದೇ ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ವಿಶೇಷ ವೇದಿಕೆಯನ್ನು ಕಲ್ಪಿಸಲಾಗಿದೆ. ಅವರ ಬಿಗ್‌ ಬಾಸ್‌ ಜರ್ನಿಯನ್ನು ಸಂಭ್ರಮಿಸುವ ಜೊತೆಗೆ, ಫ್ಯಾನ್ಸ್‌ ಸಹ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಕಿರುತೆರೆ ವೀಕ್ಷಕರಿಗಂತೂ ಭರಪೂರ ಮನರಂಜನೆ ಸಿಗಲಿದೆ.

ಬಿಗ್ ಬಾಸ್‌ ಸೀಸನ್‌ 12ರ ಸ್ಪರ್ಧಿಗಳು 'ಕಲರ್ಸ್ ದೊಡ್ಮನೆ ಹಬ್ಬ'ದಲ್ಲಿ ಮೇಲೆ ತಮ್ಮಿಷ್ಟದ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಬಿಗ್‌ ಬಾಸ್‌ ದಿನಗಳನ್ನು ಮೆಲುಕು ಹಾಕಿದ್ದಾರೆ. ಬಿಗ್ ಬಾಸ್ ಮನೆಯೊಂದ ಹೊರ ಬಂದ್ಮೇಲೆ ಅವರ ಲೈಫ್‌ನಲ್ಲಿ ಏನೆಲ್ಲ ಬದಲಾವಣೆ ಆಗಿದೆ ಅನ್ನೋದನ್ನೂ ಹೇಳಿಕೊಂಡಿದ್ದಾರೆ. ಪ್ರೇಮಿಗಳ ದಿನದಂದು 'ಕಲರ್ಸ್ ದೊಡ್ಮನೆ ಹಬ್ಬ' ಕಾರ್ಯಕ್ರಮದ ಮನರಂಜನೆಯ ರಸದೌತಣವನ್ನು ಸವಿಯಲು, ಇದೇ ಫೆಬ್ರವರಿ 14ರ ಸಂಜೆ 6 ಗಂಟೆಗೆ ಮೂರು ಗಂಟೆಗಳ ಕಲರ್ಸ್‌ ಕನ್ನಡದಲ್ಲಿ ನೋಡಬಹುದು.

More from Filmibeat

English summary
Valentines Day special colors Kannada telecasting 3 hours special program Colors Dodmane Habba.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X