ಜೀ ಕನ್ನಡ ಟ್ರೆಂಡಿಂಗ್ ಧಾರಾವಾಹಿ ಶ್ರಾವಣಿ ಸುಬ್ರಮಣ್ಯದಲ್ಲಿ ವಿಲನ್ ಎಂಟ್ರಿ!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿ ಇತ್ತೀಚೆಗಷ್ಟೇ ಆರಂಭವಾಗಿದ್ದು, ಬಹಳಷ್ಟು ಅಭಿಮಾನಿಗಳನ್ನು ಈಗಾಗಲೇ ಪಡೆದುಕೊಂಡಿದೆ. ಪ್ರೋಮೋ ಮೂಲಕ ಬಹಳಷ್ಟು ಸದ್ದು ಮಾಡಿದ್ದ ಈ ಧಾರಾವಾಹಿ ಈಗಾಗಲೇ ಆರಂಭವಾಗಿದ್ದು, ತಂದೆ ಮಗಳ ಪ್ರೀತಿ ಬಾಂಧವ್ಯದ ಕುರಿತಾಗಿದೆ. ಅಂದರೆ, ಇಲ್ಲಿ ತಂದೆಗೆ ಅದ್ಯಾಕೋ ಮಗಳೆಂದರೆ ದ್ವೇಷ ಅಸಹನೆ. ಆದರೆ, ಮಗಳು ಶ್ರಾವಣಿಗೆ ಅಪ್ಪನೆಂದರೆ ಪ್ರಾಣ. ಹೀಗಿರುವಾಗ ಮಗಳು ಶ್ರಾವಣಿ ಪ್ರತಿದಿನ ಅಪ್ಪನ ಪ್ರೀತಿಗೆ ಹಪ ಹಪಿಸುತ್ತಿದ್ದಾಳೆ. ಆದರೆ, ತಂದೆ ವೀರೇಂದ್ರ ಮಾತ್ರ ಮಗಳ ನೆರಳು ತನ್ನ ಮೇಲೆ ಬಿದ್ದರೂ ಸಿಡುಕುತ್ತಿದ್ದಾರೆ.
ಈ ಎಲ್ಲದಕ್ಕೂ ಕಾರಣವಾಗಿರುವ ಅತ್ತೆ ವಿಜಯ ಅಂಬಿಕಾಳ ಕಿರಾತಕ ಮಗನೇ ವಿಲನ್ ಮದನ್. ತಮ್ಮ ಖಡಕ್ ಲುಕ್ ಮೂಲಕ ಹಾಗೂ ಅಭಿನಯವನ್ನು ತೋರಿಸಿತ್ತಿರುವ ಮದನ್ ಬಹಳ ಕೆಟ್ಟ ಸ್ವಭಾವಗಳನ್ನುಳ್ಳವನಾಗಿದ್ದಾನೆ. ಈ ರೀತಿ ನೈಜವಾಗಿ ಅಭಿನಯ ಮಾಡುತ್ತಿರುವ ನಟ ಯಾರು ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.

ಹಾಗಾದರೆ ಈ ಮದನ್ ಪಾತ್ರಧಾರಿ ಯಾರು ಅವರ ಬ್ಯಾಕ್ ಗ್ರೌಂಡ್ ಏನು ಎಂದು ತಿಳಿದುಕೊಳ್ಳೋಣ ಬನ್ನಿ. ಮದನ್ ಪಾತ್ರದಲ್ಲಿ ಮಿಂಚುತ್ತಿರುವ ನಟನ ನಿಜವಾದ ಹೆಸರು ಅಥರ್ವ. ಸಿರಿ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿರುವ 'ರಜಿಯಾ ರಾಮ್' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿರುವ ಇವರು ಮೂಲತಃ ರಂಗಭೂಮಿ ಕಲಾವಿದರು.
ತಮ್ಮ ನಟನೆ ಮೂಲಕ ಬಹಳಷ್ಟು ದೊಡ್ಡ ಅಭಿಮಾನಿ ಬಳಗವನ್ನು ಪಡೆದಿರುವ ನಟ ಅಥರ್ವ ರಜಿಯಾ ರಾಮ್ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಮೊದಲ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿರುವ ಅಥರ್ವ ನಂತರ ನಟಿಸಿದ್ದು 'ಗೌರಿ ಶಂಕರ' ಧಾರಾವಾಹಿಯಲ್ಲಿ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೌರಿಶಂಕರ' ಧಾರಾವಾಹಿಯಲ್ಲಿ ನಾಯಕ ಶಂಕರನ ಗೆಳೆಯ ಮಂಜನ ಪಾತ್ರ ಮಾಡಿ ಮತ್ತಷ್ಟು ಜನಪ್ರಿಯತೆಯನ್ನು ನಟ ಅಥರ್ವ ಪಡೆದರು.
ಇದೀಗ ವಿಲನ್ ಆಗಿ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಗೆ ಎಂಟ್ರಿ ಕೊಟ್ಟಿರುವ ಇವರು ಶ್ರಾವಣಿಯನ್ನು ವಿಧ ವಿಧವಾಗಿ ಕಾಡುತ್ತಿದ್ದಾರೆ. ಮಾವನ ಆಸ್ತಿಯ ಮೇಲೆ ಕಣ್ಣು, ತಾಯಿಯ ಪ್ರೋತ್ಸಾಹ, ಶ್ರಾವಣಿ ಮೇಲಿನ ಮೋಹ, ಸುಬ್ರಹ್ಮಣ್ಯನ ಮೇಲಿನ ಅಸೂಯೆ ಇವೆಲ್ಲವೂ ಮದನ್ ಕ್ಯಾರೆಕ್ಟರ್‌ನ ಮತ್ತಷ್ಟು ಇಂಟ್ರೆಸ್ಟಿಂಗ್ ಮಾಡುತ್ತಿದೆ.
"ಕಿರುತೆರೆಯಲ್ಲಿ ನಟಿಸುತ್ತೇನೆಂದು ನನ್ನನ್ನು ತುಚ್ಛವಾಗಿ ಕಂಡರು"; ನಟಿ ರೂಪಾಲಿ ಗಂಗೂಲಿ
'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯಲ್ಲಿ ಮುಂದೆ ಏನೇನೆಲ್ಲಾ ಆಗಲಿದೆ? ಮದನ್ ಯಾವ ರೀತಿ ಕಥೆಗೆ ಟ್ವಿಸ್ಟ್ ಕೊಡಲಿದ್ದಾರೆ? ಎಂದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ. ಇದರ ಜೊತೆಗೆ ಈ ಅಮ್ಮ ಮಗನ ಕಳ್ಳಾಟಗಳು ಶ್ರಾವಣಿಗೆ ಮತ್ತು ಅವಳ ತಂದೆಗೆ ತಿಳಿಯುತ್ತದೆಯೇ ಎಂಬುದನ್ನೆಲ್ಲ ಕಾದು ನೋಡಬೇಕಿದೆ.


Click it and Unblock the Notifications











