ಮಾಳವಿಕ–ಅವಿನಾಶ್ ಮನೆಯಲ್ಲಿ ವಿಷ್ಣುದಾದಾ ಫೋಟೊ: ಅವಿನಾಶ್‌ಗಾಗಿ ಹುಡುಗಿ ಕೇಳಿದ್ದೇ ಸಾಹಸ ಸಿಂಹ!
ಕನ್ನಡ ಚಿತ್ರರಂಗದ ಹಿರಿಯ ನಟ ಅವಿನಾಶ್ ಹಾಗೂ ಅವರ ಪತ್ನಿ ಮಾಳವಿಕಾ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗ ಕಂಡ ಪ್ರಬುದ್ಧ ಜೋಡಿಗಳಲ್ಲಿ ಇದೂ ಒಂದು. ಇದೂವರೆಗೂ ಇವರಿಬ್ಬರ ಸಿನಿಮಾ ಬಗ್ಗೆ ಗೊತ್ತೇ ವಿನ: ಈ ಜೋಡಿ ಒಂದಾಗಿದ್ದು ಹೇಗೆ? ಮದುವೆ ಹೇಗಾಯ್ತು? ಅನ್ನೋದು ಬಹುದೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ.
ಅವಿನಾಶ್ ಹಾಗೂ ಮಾಳವಿಕಾ ಇಬ್ಬರೂ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅವಿನಾಶ್ ಕನ್ನಡ ಸೇರಿದಂತೆ ಪರಭಾಷೆಯಲ್ಲೂ ನಟಿಸಿ ಜನರ ಪ್ರೀತಿ ಗಳಿಸಿದ್ದಾರೆ. ಅದೇ ಇನ್ನೊಂದು ಕಡೆ ಮಾಳವಿಕಾ ಅವಿನಾಶ್ ನಟನೆ, ರಾಜಕೀಯ ಅಂತ ಬ್ಯುಸಿಯಾಗಿದ್ದಾರೆ.

ಇಬ್ಬರದ್ದೂ ವಿಭಿನ್ನ ಸ್ವಭಾವ. ಹೀಗಿದ್ದರೂ, ಈ ಜೋಡಿ ಪ್ರೀತಿ ಮಾಡಿದ್ದು ಹೇಗೆ? ಬಳಿಕ ಮನೆಯವರನ್ನು ಒಪ್ಪಿಸಿ ಒಂದಾಗಿದ್ದು ಹೇಗೆ? ಇವರಿಬ್ಬರ ಮದುವೆಗೆ ವಿಷ್ಣುವರ್ಧನ್ ನೆರವಿಗೆ ಬಂದಿದ್ದೇಕೆ? ಇಂತಹ ಹಲವು ಪ್ರಶ್ನೆಗಳಿಗೆ ಈ ವಾರ ಪ್ರಸಾರ ಆಗಲಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಿವೀಲ್ ಆಗಲಿದೆ. ಅದಕ್ಕೂ ಮುನ್ನ ಈ ಜೋಡಿ ಲವ್ ಸ್ಟೋರಿ, ಮದುವೆಯ ಬಗೆಗಿನ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಇಬ್ಬರ ಪ್ರೀತಿಗೆ 'ಕೃಷ್ಣಾವತಾರ' ಕಾರಣ
ಅವಿವಾಶ್ ಹಾಗೂ ಮಾಳವಿಕ ಅವರದ್ದು ನೋಡಿದ ತಕ್ಷಣವೇ ಪ್ರೀತಿ ಹುಟ್ಟಿದ್ದಲ್ಲ. ಇಬ್ಬರೂ ನಾಲ್ಕು ವರ್ಷಗಳ ಕಾಲ ಸ್ನೇಹಿತರಾಗಿದ್ದರು. ಆ ಬಳಿಕವೇ ಇಬ್ಬರಲ್ಲೂ ಪ್ರೀತಿ ಹುಟ್ಟಿತ್ತು. ಆ ನಂತರ ಮದುವೆ ಅಂತ ಆಗಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರು ಲವ್ ಸ್ಟೋರಿ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಅದನ್ನೇ ವೀಕೆಂಡ್ ವಿತ್ ರಮೇಶ್‌ನಲ್ಲಿ ಈ ವಾರ ರಿವೀಲ್ ಮಾಡಲಿದ್ದಾರೆ.
ಅವಿನಾಶ್ ಅವರೇ ವೀಕೆಂಡ್ ವಿತ್ ರಮೇಶ್‌ನಲ್ಲಿ ಹೇಳಿದಂತೆ, "ಕೃಷ್ಣಾವತಾರ ಅನ್ನೋ ಒಂದು ಧಾರಾವಾಹಿ ಮಾಡುವುದಕ್ಕೆ ಹೋಗಿದ್ದೆ. ಆಗ ಗೊತ್ತಿಲ್ಲದೆ ಒಂದು ಬಾಂಧವ್ಯ ಬೆಳೆಯುತ್ತಾ ಹೋಯ್ತು." ಎಂದ ತುಣುಕನ್ನು ಪ್ರೋಮೊದಲ್ಲಿ ರಿಲೀಸ್ ಮಾಡಿದ್ದಾರೆ. ಇದೇ ಪ್ರೋಮೊದಲ್ಲಿ ವಿಷ್ಣುವರ್ಧನ್ ಈ ಜೋಡಿಯ ಮದುವೆಗೆ ನೆರವಾಗಿದ್ದರ ಬಗ್ಗೆ ಮಾಳವಿಕಾ ಅವಿನಾಶ್ ಮಾತಾಡಿದ್ದಾರೆ.

ವಿಷ್ಣುದಾದಾಗೆ ಅವಿನಾಶ್‌ಗೆ ಮದುವೆ ಮಾಡೋ ಆಸೆ
ಅವಿನಾಶ್ ಹಾಗೂ ಮಾಳವಿಕ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇಬ್ಬರು ಮದುವೆ ಆಗಬೇಕು ಅಂದ್ಕೊಂಡಿದ್ದರು. ಇನ್ನೊಂದು ಕಡೆ ವಿಷ್ಣುವರ್ಧನ್ ಸೀರಿಯಸ್ ಆಗಿ ಹುಡುಗಿ ಹುಡುಕುತ್ತಿದ್ದರು. ಅತ್ತ ಅವಿನಾಶ್ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಅವರ ಮನೆಗೆ ಹೋಗಿ ಕೇಳುವ ಧೈರ್ಯವಿರಲಿಲ್ಲ. ಇದೇ ವೇಳೆ ವಿಷ್ಣದಾದಾ ಮನಸ್ಸಿನಲ್ಲಿ ಮದುವೆ ಮಾಡ್ಬೇಕು ಅನ್ನೋ ಹಂಬಲವಿತ್ತು. "ವಿಷ್ಣುವರ್ಧನ್ ಅವರು ಅವಿನಾಶ್ ಅವರಿಗೆ ಹೇಗಾದರೂ ಒಂದು ಮದುವೆ ಮಾಡಿಬಿಡಬೇಕು ಅಂತ ಅವರಿಗೆ ಆಸೆಯಿತ್ತು." ಎಂದು ವೀಕೆಂಡ್ ವಿತ್ ರಮೇಶ್ ಪ್ರೋಮೊದಲ್ಲಿ ಮಾಳವಿಕ ರಿವೀಲ್ ಮಾಡಿದ್ದಾರೆ.
ಅವಿನಾಶ್ ಪ್ರೀತಿ ಮಾಡುತ್ತಿರುವ ವಿಷಯವನ್ನು ವಿಷ್ಣುವರ್ಧನ್ ಅವರೇ ಮಾಳವಿಕ ಅವರ ಮನೆಯವರಿಗೆ ತಿಳಿಸಿದ್ದೇ ವಿಷ್ಣುದಾದಾ. ಅವಿನಾಶ್ ಮನೆಯವರಾಗಿ ನಿಲ್ಲುತ್ತೇನೆ ಎಂದು ವಿಷ್ಣುವರ್ಧನ್ ಹೇಳಿದ್ದರು. ಅದರಂತೆ ಇವರಿಬ್ಬರ ಮದುವೆ ನೆರವೇರಿತ್ತು.
ವಿಷ್ಣುದಾದಾಗೆ ವಿಶೇಷ ಸ್ಥಾನ
ಡಾ.ವಿಷ್ಣುವರ್ಧನ್ ಅವರ ಸ್ವಭಾವವೇ ಅಂತಹದ್ದು. ನೋಡೋಕೆ ಗಂಭೀರ ಅಂತ ಅನಿಸಿದ್ದರೂ, ಹಾಸ್ಯ ಪ್ರವೃತ್ತಿ, ಸಹಾಯದ ಮನೋಭಾವವಿತ್ತು. ವಿಷ್ಣುದಾದಾ ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಅವಿನಾಶ್‌ಗೆ ಒಂದು ಪಾತ್ರ ಇದ್ದೇ ಇರುತ್ತಿತ್ತು. ಆ ಮಟ್ಟಿಗೆ ಅವಿನಾಶ್ ಅಂದರೆ ಪ್ರೀತಿ.
ಈ ಕಾರಣಕ್ಕೆ ಡಾ.ವಿಷ್ಣುವರ್ಧನ್ ನಟ ಅವಿನಾಶ್ ಅವರನ್ನು ಮದುವೆ ಮಾಡಿಸುವುದಕ್ಕೆ ಮುಂದಾಗಿದ್ದರು. ಹೀಗಾಗಿ ವಿಷ್ಣುದಾದಾರನ್ನು ಅವರ ಮನೆಯ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಇಂತಹದ್ದೊಂದು ವರದಿ ಬಂದಿತ್ತು. ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆನೂ ರಿವೀಲ್ ಆಗಬಹುದು.


Click it and Unblock the Notifications











