Weekend With Ramesh 5: ಫಸ್ಟ್ ಟೈಂ ಟಿವಿ ಶೋನಲ್ಲಿ ಪ್ರಭುದೇವ 2ನೇ ಪತ್ನಿ ಪ್ರತ್ಯಕ್ಷ.. ಪತಿ ಬಗ್ಗೆ ಹೇಳಿದ್ದೇನು?
'ವೀಕೆಂಡ್ ವಿತ್ ರಮೇಶ್' ಸೀಸನ್ 5 ಹಲವು ಕಾರಣಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಮೊದಲ ಎಪಿಸೋಡ್ ಮೋಹಕತಾರೆ ರಮ್ಯಾ ಬಳಿಕ ಎರಡೇ ಅತಿಥಿಯಾಗಿ ಪ್ರಭುದೇವ ಬಂದಿದ್ದರು. ಎರಡು ಸಂಚಿಕೆಗಳಲ್ಲಿ ಪ್ರಭುದೇವ ಜರ್ನಿ ಪ್ರಸಾರ ಆಗಿದೆ.
ಪ್ರಭುದೇವ ಜರ್ನಿ ಬಗ್ಗೆ ಗಣ್ಯಾತೀಗಣ್ಯರು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇನ್ನೊಂದು ಕಡೆ ಪ್ರಭುದೇವ ಆತ್ಮೀಯ ಸ್ನೇಹಿತರು, ಕುಟುಂಬ, ತಂದೆ-ತಾಯಿ ಬಂದು ಇಂಡಿಯನ್ ಮೈಕಲ್ ಜಾಕ್ಸನ್ ಬಗ್ಗೆ ಗೊತ್ತಿರದ ಕೆಲವು ವಿಷಯಗಳನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ.

ಇದೇ ಶೋನಲ್ಲಿ ವಿಶೇಷ ಅಂತ ಅನಿಸಿದ್ದು, ಪ್ರಭುದೇವ ಎರಡನೇ ಪತ್ನಿ. ವಿವಾಹವಾಗಿ ಮೂರು ವರ್ಷಗಳಾದ ಬಳಿಕ ಎಲ್ಲಿಯೂ ಕಾಣಿಸಿಕೊಳ್ಳದ ಪ್ರಭುದೇವ ಪತ್ನಿ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಪ್ರತ್ಯಕ್ಷ ಆಗಿದ್ದಾರೆ. ತಮ್ಮ ಪತಿಯ ಬಗ್ಗೆ ಇದೇ ಮೊದಲ ಬಾರಿಗೆ ಕನ್ನಡದ ಟಾಕ್ ಶೋನಲ್ಲಿ ಮನಬಿಚ್ಚಿ ಮಾತಾಡಿದ್ದಾರೆ. ಅಷ್ಟಕ್ಕೂ ಪ್ರಭುದೇವ ಪತ್ನಿ ಹೇಳಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಪ್ರಭುದೇವ 2ನೇ ಪತ್ನಿ ಯಾರು?
2020ರಲ್ಲಿ ಕೋವಿಡ್ ಉಲ್ಬಣಗೊಂಡಿತ್ತು. ಇದೇ ವೇಳೆ ಮತ್ತೊಂದು ಸುದ್ದಿನೂ ಹರಿದಾಡಿತ್ತು. ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಎರಡನೇ ಮದುವೆಯಾಗಿದ್ದಾರೆ. ಕೋವಿಡ್ ಕಾರಣದಿಂದ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿತ್ತು.
ಆಗಲೇ ಪ್ರಭುದೇವ ಎರಡನೇ ಪತ್ನಿಯ ಹೆಸರು ಬೆಳಕಿಗೆ ಬಂದಿತ್ತು. ಮುಂಬೈನಲ್ಲಿ ಫಿಸಿಯೋಥೆರಪಿಸ್ಟ್ ಆಗಿರುವ ವೈದ್ಯೆ ಹಿಮಾನಿಯನ್ನು ವಿವಾಹವಾಗಿದ್ದಾರೆ ಎನ್ನಲಾಗಿತ್ತು. ಈ ವಿಷಯವನ್ನು ಪ್ರಭುದೇವ ಸಹೋದರ ರಾಜು ಸುಂದರಂ ಅವರೇ ಖಚಿತ ಪಡಿಸಿದ್ದರು. ಪ್ರಭುದೇವ ಬ್ಯಾಕ್ ಹಾಗೂ ಕಾಲಿನ ಚಿಕಿತ್ಸೆಗೆಂದು ಹೋಗಿದ್ದರು. ಈ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಎರಡು ಒಟ್ಟಿಗೆ ಇದ್ದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ವೀಕೆಂಡ್ ವಿತ್ ರಮೇಶ್‌ನಲ್ಲಿ ಪ್ರತ್ಯಕ್ಷ
ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಪ್ರಭುದೇವ ಪತ್ನಿ ಸರ್ಪ್ರೈಸ್ ಎಂಟ್ರಿಕೊಟ್ಟಿದ್ದರು. ನೇರವಾಗಿ ವೇದಿಕೆ ಮೇಲೆ ಬಾರದೇ ಹೋದರೂ, ವಿಡಿಯೋ ಮೂಲಕ ಪತಿಗೆ ಸಂದೇಶವನ್ನು ಕಳುಹಿಸಿಕೊಟ್ಟಿದ್ದರು. "ಸಾರಿ ಪ್ರಭುಜೀ.. ಇವತ್ತು ಅಲ್ಲಿಗೆ ನಾನು ಬರುವುದಕ್ಕೆ ಸಾಧ್ಯವಾಗಿಲ್ಲ. ಆದರೆ, ಕೆಲವು ವಿಷಯಗಳನ್ನು ನಾನು ನಿಮ್ಮ ಬಗ್ಗೆ ಹೇಳಲೇಬೇಕು. ಕಳೆದ ಮೂರು ವರ್ಷಗಳಿಂದ ನಾವು ಜೊತೆಗಿದ್ದೇವೆ. ನಮ್ಮಿಬ್ಬರ ಜರ್ನಿ ಅದ್ಭುತವಾಗಿದೆ." ಎಂದು ಪ್ರಭುದೇವ ಹೇಳಿದ್ದಾರೆ.
ಇಷ್ಟೇ ಅಲ್ಲದೆ ಪ್ರಭುದೇವ ಅವರ ಶಿಸ್ತು, ಕೆಲಸ ಬದುಕುವ ರೀತಿಯನ್ನು ಸೂಕ್ಷ್ಮವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ. "ನಿಮ್ಮ ಬಗ್ಗೆ ನನಗೆ ಅದ್ಭುತ ಎನಿಸೋದು, ನಿಮ್ಮ ಶಿಸ್ತು, ಹಾರ್ಡ್‌ವರ್ಕ್ ಹಾಗೂ ಖುಷಿ ಖುಷಿಯಾಗಿರುವ ವ್ಯಕ್ತಿ." ಎಂದು ಪ್ರಭುದೇವ ಪತ್ನಿ ಹಿಮಾನಿ ವಿಡಿಯೋದಲ್ಲಿ ತಿಳಿಸಿದ್ದಾರೆ.
ನಿಮ್ಮನ್ನು ಮದುವೆಯಾಗಿದ್ದು ಲಕ್ಕಿ
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ ಬಳಿಕ ಪತ್ನಿ ಹಿಮಾನಿಯ ವಿಡಿಯೋ ರಿಲೀಸ್ ಮಾಡಲಾಯ್ತು. ಈ ವಿಡಿಯೋದಲ್ಲಿ ನಿಮ್ಮನ್ನು ಮದುವೆ ಆಗಿದ್ದು ಲಕ್ಕಿ ಎಂದು ಹೇಳಿದ್ದಾರೆ.
" ನಿಮಗೆ ಉಡುಗೊರೆಯಾಗಿ ಸಿಕ್ಕಿರುವ ಹಾಸ್ಯ ಪ್ರಜ್ಞೆ, ಎನರ್ಜಿ ನನ್ನ ಪರಿಸರವನ್ನು ಯಾವಾಗಲೂ ಖುಷಿಯಾಗಿ ಇಟ್ಟಿರುತ್ತೆ. ನಾನು ನಿಮ್ಮನ್ನು ಮದುವೆ ಆಗಿದ್ದು, ಲಕ್ಕಿ ಅಂತ ಭಾವಿಸುತ್ತೇನೆ." ಎಂದು ಪ್ರಭುದೇವ ಪತ್ನಿ ಹಿಮಾನಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.


Click it and Unblock the Notifications











