Weekend with Ramesh: "ನನ್ನ ಮಗ ಸತ್ತಾಗ ಜೊತೆಗೆ ಇದ್ದಿದ್ದು ಪ್ರಭುದೇವ"–ಪ್ರಕಾಶ್‌ ರಾಜ್‌

ಕನ್ನಡದ ಜನಪ್ರಿಯ ಶೋ 'ವೀಕೆಂಡ್ ವಿತ್ ರಮೇಶ್'. ಕಳೆದ ನಾಲ್ಕು ಸೀಸನ್‌ನಿಂದ ಈ ಶೋಗೆ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ ಕೆಲವು ವರ್ಷಗಳಿಂದ ಈ ಶೋ ಮತ್ತೆ ಪ್ರಸಾರ ಆಗಬೇಕು ಅನ್ನೋ ಬೇಡಿಕೆ ಇದ್ದೇ ಇತ್ತು. ಆದರೆ, ಕೋವಿಡ್ ಕಾರಣದಿಂದ ಶೋ ಆರಂಭ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ.

ನಾಲ್ಕು ವರ್ಷಗಳ ಬಳಿಕ ವೀಕೆಂಡ್‌ನಲ್ಲಿ ಮತ್ತೆ ವೀಕ್ಷಕರನ್ನು ರಂಜಿಸುವುದಕ್ಕೆ ರಮೇಶ್ ಅರವಿಂದ್ ಕಿರುತೆರೆಗೆ ಬಂದಿದ್ದಾರೆ. ಮೊದಲ ಎಪಿಸೋಡ್‌ನಲ್ಲಿ ಸಾಧಕ ಸೀಟ್‌ನಲ್ಲಿ ಮೋಹಕತಾರೆ ರಮ್ಯಾ ಕೂತಿದ್ದರು. ಎರಡನೇ ಅತಿಥಿಯಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಬಂದಿದ್ದಾರೆ. ಇಲ್ಲಿ ಮತ್ತೊಂದು ಜನಪ್ರಿಯ ನಟ ಪ್ರಕಾಶ್ ರಾಜ್ ಗೆಳೆಯನ ಬಗ್ಗೆ ಆಡಿದ ಮಾತು ಕಣ್ಣೀರು ತರಿಸುವಂತಿತ್ತು.

Weekend with Ramesh 5 Prakash Raj says that when his son died, Prabhu Deva stood with him

ಪ್ರಭುದೇವ ಸಾಧಕರ ಸೀಟ್‌ನಲ್ಲಿ ಕೂತಿದ್ದಾರೆ. ಇಂಡಿಯ್ ಮೈಕಲ್ ಜಾಕ್ಸನ್ ಬದುಕಿನ ಪುಟಗಳು ಒಂದೊಂದಾಗೇ ತೆರೆಯುವುದಕ್ಕೆ ಆರಂಭ ಆಗಿದೆ. ಮೊದಲ ದಿನವೇ ಪ್ರಭುದೇವ ಬದುಕು ವೀಕ್ಷಕರಿಗೆ ಇಂಟ್ರೆಸ್ಟಿಂಗ್ ಅಂತ ಅನಿಸಿದೆ. ಹಾಸ್ಯ ಹಾಗೂ ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದ್ದ ಈ ಸಂಚಿಕೆ ಮುಂದುವರೆದ ಭಾಗ ಇಂದು( ಏಪ್ರಿಲ್ 2) ಪ್ರಸಾರ ಆಗಲಿದೆ.

ಮಗ ಸತ್ತಾಗ ಧೈರ್ಯ ತುಂಬಿದ್ದೇ ಪ್ರಭುದೇವ

ರಮೇಶ್ ಅರವಿಂದ್ ಇಂಡಿಯನ್ ಮೈಕಲ್ ಜಾಕ್ಸನ್ ಬದುಕಿನ ಒಂದೊಂದೇ ಪುಟವನ್ನು ತೆರೆದು ವೀಕ್ಷಕರ ಮುಂದಿಡುತ್ತಿದ್ದಾರೆ. ಈ ವೇಳೆ ಬಹುಭಾಷಾ ನಟ ಪ್ರಕಾಶ್ ರಾಜ್ ಎಂಟ್ರಿಯಾಗಿದೆ. ಹಾಗಂತ ವೇದಿಕೆ ಮೇಲೆ ಅವರ ಉಪಸ್ಥಿತಿ ಇರದೇ ಹೋದರೂ, ವಿಡಿಯೋ ಮೂಲಕ ಪ್ರಭುದೇವ ಬಗ್ಗೆ ಆಡಿದ ಮಾತುಗಳು ವೀಕ್ಷಕರನ್ನು ಮನವನ್ನು ಕದಡಿತ್ತು.

ಬಹುಭಾಷಾ ನಟ ಪ್ರಕಾಶ್ ರಾಜ್ ಹಲವು ವರ್ಷಗಳ ಹಿಂದೆ ತಮ್ಮ ಪುತ್ರನನ್ನು ಕಳೆದುಕೊಂಡಿದ್ದರು. ಅವರಿಗೆ 'ಸಿದ್ದು' ಎಂಬ ಮುದ್ದಾದ ಮಗನಿದ್ದ. 2004ರಲ್ಲಿ 5 ವರ್ಷದವನಿದ್ದಾಗ ಪುತ್ರ ತೀರಿಕೊಂಡಿದ್ದ. ಆ ವೇಳೆ ನೋವಿನಲ್ಲಿದ್ದ ಪ್ರಕಾಶ್ ರಾಜ್‌ ಜೊತೆ ಪ್ರಭುದೇವ ನಿಂತಿದ್ದ ವಿಷಯವನ್ನು ಈ ವೇದಿಕೆಯಲ್ಲಿ ಬಹಿರಂಗ ಪಡಿಸಿದ್ದಾರೆ. ಈ ವೇಳೆ ವೀಕ್ಷಕರು ಇಬ್ಬರೊಂದಿಗೆ ಭಾವನಾತ್ಮಕವಾಗಿ ಕಳೆದುಹೋಗಿದ್ದರು.

Weekend with Ramesh 5 Prakash Raj says that when his son died, Prabhu Deva stood with him

ವಿಡಿಯೋ ಮೂಲಕ ಸಂದೇಶ

ಪ್ರಭುದೇವಗಾಗಿ ಬಹುಭಾಷಾ ನಟ ಪ್ರಕಾಶ್ ರಾಜ್ ವಿಡಿಯೋ ಸಂದೇಶ ಕಳುಹಿಸಿದ್ದರು. ಈ ವೇಳೆ ಪ್ರಭುದೇವಗೆ 50ನೇ ಹುಟ್ಟುಹಬ್ಬದ ಶುಭಾಶಯಗಳನ್ನೂ ತಿಳಿಸಿದ್ದಾರೆ. ಅಲ್ಲದೆ ಮುಂದಿನ ಸಿನಿ ಜರ್ನಿಗೆ ಶುಭಾಶಯವನ್ನು ತಿಳಿಸಿದ್ದಾರೆ.

ಪ್ರಭುದೇವ ಹಾಗೂ ಪ್ರಕಾಶ್ ರಾಜ್ ಇಬ್ಬರೂ ಒಂದೇ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಕರ್ನಾಟಕ ಮೂಲದವರೇ ಆದರೂ, ಹೆಚ್ಚಾಗಿ ಗುರುತಿಸಿಕೊಂಡಿದ್ದು ತಮಿಳು ನಾಡಿನಲ್ಲಿಯೇ. ಹೀಗಾಗಿ ಇಬ್ಬರಿಗೂ ಉತ್ತಮ ಬಾಂಧವ್ಯವಿದೆ. ಇಬ್ಬರೂ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಪ್ರಭುದೇವ ಸಾಧನೆ ಕಮ್ಮಿಯೇನಲ್ಲ

ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಸಿನಿಮಾ ಹಲವು ಮಜಲುಗಳನ್ನು ನೋಡಿದ್ದಾರೆ. ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಟನಾಗಿ, ನಿರ್ದೇಶಕನಾಗಿ, ಕೊರಿಯೋಗ್ರಾಫರ್ ಆಗಿ ಭಾರತದಾದ್ಯಂತ ಸಾಧನೆ ಮಾಡಿದ್ದಾರೆ. ಅದಕ್ಕಾಗಿಯೇ ಪ್ರಭುದೇವಗೆ ಪದ್ಮಶ್ರೀ ಪ್ರಶಸ್ತಿ ಕೂಡ ಸಿಕ್ಕಿದೆ.

ಪ್ರಭುದೇವ ಸುಮಾರು ಮೂರುವರೆ ವರ್ಷಗಳ ಕಾಲದಿಂದಲೂ ಸಿನಿಮಾದಲ್ಲಿ ಕೆಲಸ ಮಾಡುತ್ತಲೇ ಇದ್ದಾರೆ. 100ಕ್ಕೂ ಹೆಚ್ಚು ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಹಾಗೇ 61 ಸಿನಿಮಾಗಳಲ್ಲಿ ನಟಿಸಿದ್ದು, 15 ಸಿನಿಮಾಗೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ. ಇಲ್ಲಿವರೆಗೂ ಸಖತ್ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿರೋ ನಟನ ಬದುಕಿನ ಪಯಣ ಇಂದು (ಏಪ್ರಿಲ್ 2) ಮುಂದುವರೆಯಲಿದೆ.

More from Filmibeat

English summary
Weekend with Ramesh 5 Prakash Raj says that when his son died, Prabhu Deva stood with him know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X