Weekend With Ramesh 5: ವೀಕ್ಷಕರ ಕಂಗಣ್ಣಿಗೆ ಗುರಿಯಾಗಿದ್ದ ಮೋಹಕತಾರೆಯ ವೀಕೆಂಡ್ ಶೋಗೆ ಸಿಕ್ಕ TRP ಎಷ್ಟು?
ಜೀ ಕನ್ನಡದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಟಾಕ್ ಶೋ 'ವೀಕೆಂಡ್ ವಿತ್ ರಮೇಶ್' ಸೀಸನ್ 5 ಅದ್ಧೂರಿಯಾಗಿ ಆರಂಭ ಆಗಿತ್ತು. ಮೊದಲ ಎಪಿಸೋಡ್‌ನಲ್ಲೇ ಮೋಹಕತಾರೆ ರಮ್ಯಾ ಕಾರ್ಯಕ್ರಮಕ್ಕೆ ಬಂದಿದ್ದರು. ಹೀಗಾಗಿ ವೀಕೆಂಡ್‌ನಲ್ಲಿ ವೀಕ್ಷಕರ ನಿರೀಕ್ಷೆ ದುಪ್ಪಟ್ಟಾಗಿತ್ತು.
ಮೋಹಕತಾರೆ ರಮ್ಯಾ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬರಬೇಕು ಅನ್ನೋದು ವೀಕ್ಷಕರ ಆಸೆಯಾಗಿತ್ತು. ಅದರಂತೆಯೇ ರಮ್ಯಾರನ್ನು ಸೀಸನ್ 5ಗೆ ಕರೆದುಕೊಂಡು ಬಂದಿದ್ದರು. ರಮ್ಯಾ ಅವರ ಬಾಲ್ಯ, ಸಿನಿಮಾ ಜರ್ನಿ, ರಾಜಕೀಯ ಎಲ್ಲವನ್ನೂ ಅನಾವರಣ ಮಾಡಲಾಗಿತ್ತು.

ರಮ್ಯಾ ಎಪಿಸೋಡ್ ನಿರೀಕ್ಷೆಯೊಂದಿಗೆ ಆರಂಭ ಆಗಿತ್ತು. ಆದರೆ, ಮೋಹಕತಾರೆಯ ಮೋಹಕ ಆಂಗ್ಲ ಪ್ರೀತಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಈಗ ಟ್ರೋಲ್ ಆಗಿದ್ದ ಮೋಹಕತಾರೆಯ ಮೊದಲ ಸಂಚಿಕೆಯ ರೇಟಿಂಗ್ ಹೊರಬಿದ್ದಿದೆ. ಶನಿವಾರ ಪ್ರಸಾರ ಆಗಿದ್ದ ಮೊದಲ ಎಪಿಸೋಡ್ ಟಿಆರ್‌ಪಿ ಎಷ್ಟು ಅನ್ನೋದನ್ನು ತಿಳಿಯಲು ಮುಂದೆ ಓದಿ.
ರಮ್ಯಾ ಎಪಿಸೋಡ್‌ಗೆ TRP ಎಷ್ಟು?
ಮೋಹಕತಾರೆ ರಮ್ಯಾ ವೀಕೆಂಡ್ ವಿತ್ ರಮೇಶ್ ಬರುತ್ತಾರೆ ಎಂದಾಗಲೇ ವೀಕ್ಷಕರು ಖುಷಿ ಪಟ್ಟಿದ್ದರು. ಎಲ್ಲಾ ಅನಾವರಣ ಆಗದ ರಮ್ಯಾ ಬಾಲ್ಯ, ಬದುಕಿನ ಇಂಟ್ರೆಸ್ಟಿಂಗ್ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಆದರೆ, ಎಪಿಸೋಡ್ ಅದ್ಭುತವಾಗಿಯೇ ಇದ್ದರೂ, ಹೆಚ್ಚಾಗಿ ಆಂಗ್ಲ ಭಾಷೆಯನ್ನು ಬಳಸಿದ್ದರಿಂದ ನೆಟ್ಟಿಗರು ಕಿಡಿಕಾರಿದ್ದರು.
ಟ್ರೊಲ್‌ಗೆ ಒಳಗಾಗಿದ್ದ ಮೋಹಕತಾರೆ ರಮ್ಯಾ ಮೊದಲ ಎಪಿಸೋಡ್‌ನ ಟಿಆರ್‌ಪಿ ಈಗ ಹೊರಬಿದ್ದಿದೆ. ಶನಿವಾರ ಪ್ರಸಾರವಾಗಿದ್ದ ರಮ್ಯಾ ಸಂಚಿಕೆಗೆ 5.8 ಟಿಆರ್‌ಪಿ ಸಿಕ್ಕಿದೆ. ಟ್ರೋಲ್ ಆದ ಹೊರತಾಗಿಯೂ ಇಷ್ಟು ಟಿಆರ್‌ಪಿ ಸಿಕ್ಕಿದ್ದು ಕಾರ್ಯಕ್ರಮದ ಜನಪ್ರಿಯತೆಯನ್ನು ತೋರಿಸಿದೆ.

ನಿರೀಕ್ಷೆ ದೊಡ್ಡದಿತ್ತು?
ವೀಕೆಂಡ್ ವಿತ್ ರಮೇಶ್ ಸೀಸನ್ 5 ನಾಲ್ಕು ವರ್ಷಗಳ ಬಳಿಕ ಮತ್ತೆ ಆರಂಭ ಆಗಿತ್ತು. ಹೀಗಾಗಿ ಅತೀ ಹೆಚ್ಚು ನಿರೀಕ್ಷೆಯೊಂದಿಗೆ ವೀಕೆಂಡ್ ವಿತ್ ರಮೇಶ್ ಆರಂಭ ಆಗಿತ್ತು. ಕಾರ್ಯಕ್ರಮದ ವಿನ್ಯಾಸದಲ್ಲಿ ಕೆಲವು ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವೀಕ್ಷಕರಿಗೂ ಪ್ರಶ್ನೆ ಕೇಳುವ ಅವಕಾಶವನ್ನು ನೀಡಲಾಗಿತ್ತು.
ಈ ಎಲ್ಲಾ ಕಾರಣಕ್ಕೆ ಮೊದಲ ಸಂಚಿಕೆ ದುಪ್ಪಟ್ಟು ನಿರೀಕ್ಷೆಯೊಂದಿಗೆ ಮರಳಿತ್ತು. ಆದರೆ, ರಮ್ಯಾ ಆಂಗ್ಲ ಭಾಷೆ ವೀಕೆಂಡ್ ವಿತ್ ರಮೇಶ್ ಓಟಕ್ಕೆ ಬ್ರೇಕ್ ಹಾಕಿದೆ. ಮೊದಲ ಎಪಿಸೋಡ್ ಕನಿಷ್ಟ ಅಂದ್ರೂ 8ರ ಮೇಲೆ ಟಿಆರ್‌ಪಿ ನಿರೀಕ್ಷೆಯಿತ್ತು. ಆದರೆ, ಆ ಮಟ್ಟಿಗೆ ರೀಚ್ ಆಗುವಲ್ಲಿ ವಿಫಲವಾಗಿದೆ.
ಟ್ರೋಲ್ ಆಗಿದ್ದೆ ಹಿನ್ನೆಡೆಗೆ ಕಾರಣನಾ?
ಮೋಹಕತಾರೆ ರಮ್ಯಾ ಕನ್ನಡದಲ್ಲಿ ತಮ್ಮ ಜರ್ನಿಯನ್ನು ಹೇಳಿಕೊಂಡಿದ್ದರೆ, ಇನ್ನಷ್ಟು ಟಿಆರ್‌ಪಿಯನ್ನು ನಿರೀಕ್ಷೆ ಮಾಡಬಹುದಿತ್ತೇನೋ. ರಮ್ಯಾ ಟ್ರೋಲ್ ಆಗಿದ್ದೂ ಕೂಡ ಟಿಆರ್‌ಪಿ ಕುಸಿತಕ್ಕೆ ಕಾರಣ ಎಂದು ಅಂದಾಜು ಮಾಡಲಾಗುತ್ತಿದೆ. ಹಾಗೇ ಎರಡನೇ ಎಪಿಸೋಡ್ ಟಿಆರ್‌ಪಿ ಮತ್ತಷ್ಟು ಕಡಿಮೆ ಆಗುತ್ತಾ? ಇಲ್ಲಾ ಹೆಚ್ಚಾಗುತ್ತಾ? ಅನ್ನೋದು ಕುತೂಹಲವಿದೆ.
ಎರಡನೇ ಅತಿಥಿ ಪ್ರಭುದೇವ ಎಪಿಸೋಡ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಾಗಿ ಆ ಎಪಿಸೋಡ್ ಮೇಲೆ ಎಲ್ಲರ ನಿರೀಕ್ಷೆಯಿದೆ. ಇದೂವರೆಗೂ ಎಲ್ಲಾ ಅನಾವರಣ ಆದ ಪ್ರಭುದೇವ ಎಪಿಸೋಡ್‌ನಲ್ಲಿ ಕನ್ನಡಿಗರಿಗೆ ಖುಷಿ ಕೊಟ್ಟಿತ್ತು. ಈ ವಾರ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಹಾಗೂ ಕನ್ನಡದ ಹಿರಿಯ ನಟ ದತ್ತಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.


Click it and Unblock the Notifications











