Weekend With Ramesh: ಈ ವಾರ ಬರಲ್ಲ 'ಟ್ರಬಲ್ ಶೂಟರ್': ಸಾಧಕರ ಖುರ್ಚಿಯಲ್ಲಿ ಡಿಕೆ ಶಿವಕುಮಾರ್ ಕೂರೋದ್ಯಾವಾಗ?
ಜೀ ಕನ್ನಡದ ಟಾಕ್ ಶೋ 'ವೀಕೆಂಡ್ ವಿತ್ ರಮೇಶ್' ಕಿರುತೆರೆಯ ಜನಪ್ರಿಯ ಕಾರ್ಯಕ್ರಮ. ಈಗಾಗಲೇ ರಾಜಕೀಯ, ಚಿತ್ರರಂಗ, ಸಾಹಿತ್ಯ ಲೋಕದ ತಜ್ಞರು ಅತಿಥಿಗಳಾಗಿ ಆಗಮಿಸಿದ್ದಾರೆ. ಮೋಹಕತಾರೆ ರಮ್ಯಾರಿಂದ ಆರಂಭಗೊಂಡ ಈ ಕಾರ್ಯಕ್ರಮ ಇಲ್ಲಿವರೆಗೂ ನಡೆದುಕೊಂಡು ಬಂದಿದೆ.
ಕಳೆದ ನಾಲ್ಕು ಸೀಸನ್‌ಗಳಿಂದಲೂ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕರ್ನಾಟಕದ ಅನೇಕ ಸಾಧಕರು ಬಂದು ಹೋಗಿದ್ದಾರೆ. ಒಬ್ಬೊಬ್ಬರ ಸಾಧನೆಯನ್ನು ಕಿರುತೆರೆ ವೀಕ್ಷಕರು ಕಣ್ತುಂಬಿಕೊಂಡಿದ್ದಾರೆ. ಈಗ ಐದನೇ ಎಪಿಸೋಡ್ ಕೂಡ ಮೆಚ್ಚುಗೆ ಗಳಿಸಿದೆ.

ಕಳೆದೆರಡು ದಿನಗಳಿಂದ ಇದೇ 'ವೀಕೆಂಡ್ ವಿತ್ ರಮೇಶ್' ಸೀಸನ್ 5 ಶೋ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಬರುತ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಈ ವಾರವೇ ಸಾಧಕ ಸೀಟ್ ಅನ್ನು ಅಲಂಕರಿಸುತ್ತಿದ್ದಾರೆ ಅನ್ನೋ ಸುದ್ದಿ ಕೇಳಿಬಂದಿತ್ತು. ಆದರೆ, ಈ ವಾರ ಸಾಧಕರ ಖುರ್ಚಿಯಲ್ಲಿ ಡಿಕೆ ಶಿವಕುಮಾರ್ ಕೂರುವುದಿಲ್ಲ. ಈ ಕಾರ್ಯಕ್ರಮಕ್ಕೆ ಡಿಕೆಶಿ ಬರ್ತಾರಾ ಇಲ್ವಾ? ಯಾವಾಗ ಬರಬಹುದು? ಅನ್ನೋ ಡಿಟೈಲ್ಸ್ ಇಲ್ಲಿದೆ.
ವೀಕೆಂಡ್ ವಿತ್ ರಮೇಶ್‌ಗೆ ಡಿಕೆ ಶಿವಕುಮಾರ್ ಬರ್ತಾರಾ?
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಡಿಕೆ ಶಿವಕುಮಾರ್ ಪಾತ್ರ ದೊಡ್ಡ ಅನ್ನೋದು ರಾಜಕೀಯ ವಿಶ್ಲೇಷಕರ ಮಾತು. ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಅಂತಲೇ ಕರೆಯುತ್ತಾರೆ. ಏನೇ ಸಮಸ್ಯೆ ಎದುರಾದರೂ, ಅಲ್ಲಿ ಡಿಕೆಶಿ ಇದ್ದರೆ, ಸಮಸ್ಯೆ ಬಗೆ ಹರಿಯುತ್ತೆ ಅನ್ನೋದು ಅವರ ಮುಖಂಡಿರಿಗೂ ಗೊತ್ತಿದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಡಿಕೆಶಿ ಗೆದ್ದು ಬೀಗಿದ್ದಾರೆ.

ಇವರನ್ನೇ ವೀಕೆಂಡ್ ವಿತ್ ರಮೇಶ್ ವೇದಿಕೆ ಕರೆಸುವ ಪ್ರಯತ್ನ ನಡೆಯುತ್ತಿದೆ. ವೀಕೆಂಡ್ ವಿತ್ ರಮೇಶ್‌ಗೆ ಈ ಬಾರಿಯ ವಿಶೇಷ ಅತಿಥಿಯಾಗಿ ಡಿಕೆ ಶಿವಕುಮಾರ್ ಕರೆಯಲು ನಿರ್ಧರಿಸಿದ್ದಾರೆ. ಅದಕ್ಕೆ ಶತ ಪ್ರಯತ್ನ ಕೂಡ ನಡೆಯುತ್ತಿದೆ. ಜೀ ಕನ್ನಡದ ಮೂಲಗಳ ಪ್ರಕಾರ, ಡಿಕೆಶಿ ಈ ವಾರ ವೀಕೆಂಡ್ ವಿತ್ ರಮೇಶ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮುಂದಿನ ವಾರದ ಅತಿಥಿಯಾಗಿ ಆಗಮಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಡಿಕೆ ಶಿವಕುಮಾರ್ ಸಂಚಿಕೆಯ ಚಿತ್ರೀಕರಣ ಆಗಿಲ್ಲ
ವೀಕೆಂಡ್ ವಿತ್ ರಮೇಶ್ ವೇದಿಕೆ ಈಗಾಗಲೇ ಡಿಕೆ ಶಿವಕುಮಾರ್ ಬಂದಿದ್ದಾರೆ. ಜೀ ಕನ್ನಡ ಈಗಾಗಲೇ ಚಿತ್ರೀಕರಣ ಮಾಡಿ ಮುಗಿಸಿದೆ ಎನ್ನಲಾಗಿತ್ತು. ಜೀ ಮೂಲಗಳ ಪ್ರಕಾರ, ಇನ್ನೂ ಡಿಕೆ ಶಿವಕುಮಾರ್ ವೀಕೆಂಡ್‌ಗೆ ವೇದಿಕೆ ಬಂದಿಲ್ಲ. ಮಾತುಕತೆ ನಡೆದಿದ್ದು, ಅವರು ಬರಲು ಒಪ್ಪಿಕೊಂಡಿದ್ದಾರೆ ಎನ್ನುತ್ತಿವೆ.
ಈಗತಾನೇ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿಕೆ ಶಿವಕುಮಾರ್ ಅಗತ್ಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರಣಕ್ಕೆ ಈ ವಾರದ ಕೊನೆಯಲ್ಲಿ, ಇಲ್ಲವೇ ಮುಂದಿನ ವಾರದ ಆರಂಭ ಚಿತ್ರೀಕರಣ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾಗಿ ಈ ವಾರ ವೀಕೆಂಡ್ ವಿತ್ ರಮೇಶ್‌ನಲ್ಲಿ ಡಿಕೆಶಿ ಅತಿಥಿಯಾಗಿ ಕಾಣಿಸಿಕೊಳ್ಳುವುದಿಲ್ಲ.
ಈ ವಾರ ಅತಿಥಿ ಯಾರು?
ಇದೇ ವಾರ ಡಿಕೆ ಶಿವಕುಮಾರ್ ಅತಿಥಿಯಾಗಿ ಬರುತ್ತಾರೆ ಅನ್ನೋ ನಿರೀಕ್ಷೆಯಿತ್ತು. ಆದರೆ, ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿದ್ದರಿಂದ ಮುಂದಿನ ವಾರಕ್ಕೆ ಮುಂದೂಡಲ್ಪಟ್ಟಿದೆ. ಹಾಗಿದ್ದರೆ, ಈ ವಾರದ ಅತಿಥಿ ಯಾರು? ಅನ್ನೋ ಪ್ರಶ್ನೆ ಮೂಡುವುದು ಸಹಜ. ಈ ವಾರ ವೀಕೆಂಡ್ ವಿತ್ ರಮೇಶ್ ಪ್ರಸಾರ ಆಗುವುದಿಲ್ಲ ಎನ್ನಲಾಗಿದೆ.
ಈ ವಾರ ಜೀ ಕನ್ನಡದಲ್ಲಿ ಶನಿವಾರ ಹಾಗೂ ಭಾನುವಾರ ವಿಶೇಷ ಸಂಚಿಕೆಗಳು ಪ್ರಸಾರ ಆಗುತ್ತಿವೆ. ಆದರೆ, ವೀಕೆಂಡ್ ವಿತ್ ರಮೇಶ್ ಬದಲು ಏನನ್ನು ಪ್ರಸಾರ ಮಾಡುತ್ತೆ ಅನ್ನೋ ಬಗ್ಗೆ ಇನ್ನೂ ಸುಳಿವು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಈ ವಾರ ವೀಕೆಂಡ್ ವಿತ್ ರಮೇಶ್ ಪ್ರಸಾರ ಆಗೋದು ಶೇ.90ರಷ್ಟು ಅನುಮಾನ. ಆದರೆ, ಮುಂದಿನ ವಾರ ಡಿಕೆ ಶಿವಕುಮಾರ್ ಮೆಗಾ ಸಂಚಿಕೆ ಪ್ರಸಾರ ಆಗಲಿದೆ.


Click it and Unblock the Notifications











