ಅಂತೂ ಇಂತೂ 'ವೀಕೆಂಡ್ ವಿತ್ ರಮೇಶ್'ಗೆ ಡಿಕೆಶಿ ಎಂಟ್ರಿ: 'ಟ್ರಬಲ್ ಶೂಟರ್' ಕಂಡು ನೆಟ್ಟಿಗರು ಏನಂದ್ರು?

ವೀಕೆಂಡ್ ವಿತ್ ರಮೇಶ್ ಸೀಸನ್ 5 ಸ್ವರೂಪ ಕೊಂಚ ಬದಲಾಗಿದೆ. ಈ ಬಾರಿಗೆ ಆರಂಭದಲ್ಲಿ ಒಬ್ಬರೇ ಅತಿಥಿಯ ಚಿರಿತ್ರೆಯನ್ನು ಎರಡು ಸಂಚಿಕೆಗಳಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಆದ್ರೀಗ ಕೆಲವು ವಾರಗಳಿಂದ ಒಂದು ಸಂಚಿಕೆಯಲ್ಲಿ ಒಬ್ಬೊಬ್ಬ ಅತಿಥಿಯ ಸಾಧನೆಯನ್ನು ತೋರಿಸಲಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬರುತ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಆದರೆ, ಕಳೆದ ವಾರ ಡಿಕೆಶಿ ಬಂದಿರಲಿಲ್ಲ. ಕೊನೆಗೂ ಈ ವಾರ ವೀಕೆಂಡ್ ವಿತ್ ರಮೇಶ್‌ಗೆ ಡಿಕೆಶಿ ಎಂಟ್ರಿ ಕೊಟ್ಟಿದ್ದಾಗಿದೆ.

Weekend with Ramesh Season 5: DCM DK Shivakumar will be the special guest

ಈಗಾಗಲೇ ಡಿ ಕೆ ಶಿವಕುಮಾರ್ ಎಪಿಸೋಡ್ ಶೂಟ್ ಮಾಡಲಾಗಿದೆ. ಈ ವಾರದ ಅತಿಥಿಯಾಗಿ ಡಿಕೆ ಶಿವಕುಮಾರ್ ಬರುತ್ತಿರೋದಕ್ಕೆ ಜೀ ಕನ್ನಡ ಚಿಕ್ಕದೊಂದು ಸುಳಿವು ನೀಡಿದೆ. ಸದ್ಯದಲ್ಲೇ ಪ್ರೋಮೊಗಳನ್ನು ರಿಲೀಸ್ ಮಾಡುವ ಸಾಧ್ಯತೆಯಿದೆ.

'ವೀಕೆಂಡ್‌ ವಿತ್ ರಮೇಶ್‌'ನಲ್ಲಿ ಡಿಕೆಶಿ

ಕಾಂಗ್ರೆಸ್ ಪಕ್ಷದ 'ಟ್ರಬಲ್ ಶೂಟರ್' ಡಿಕೆ ಶಿವಕುಮಾರ್ ಈ ಬಾರಿಯ ಚುನಾವಣೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು. ಬಿಜೆಪಿಯನ್ನು ಮಣಿಸಿ, ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದರು ಅನ್ನೋದನು ರಾಜಕೀಯ ವಿಶ್ಲೇಷಕರೇ ಒಪ್ಪಿಕೊಂಡಿದ್ದಾರೆ. ಡಿಕೆಶಿ ಇದ್ದಲ್ಲಿ ಅದೆಂಥಹದ್ದೇ ಸಮಸ್ಯೆಗಳಿದ್ದರೂ ಬಗೆಹರಿದು ಬಿಡುತ್ತವೆ.

ಇಷ್ಟು ದಿನ ಸಿನಿಮಾ, ಸಾಹಿತ್ಯ, ಶಿಕ್ಷಣ ಕ್ಷೇತ್ರದ ಸಾಧಕರನ್ನು ಕರೆಸಿದ್ದ ಜೀ ಕನ್ನಡ, ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್ ಅವರನ್ನು ಕರೆಸುತ್ತಿದ್ದಾರೆ. ಈ ವೀಕೆಂಡ್‌ನಲ್ಲಿ ಡಿಕೆಶಿ ಅತಿಥಿಯಾಗಿ ಬರೋದು ಬಹುತೇಕ ಕನ್ಫರ್ಮ್.

Weekend with Ramesh Season 5: DCM DK Shivakumar will be the special guest

ಉಪಮುಖ್ಯಮಂತ್ರಿ ಬಳಿಕ ಮೊದಲ ಕಾರ್ಯಕ್ರಮ

ಡಿಕೆ ಶಿವಕುಮಾರ್ ಕಳೆದ ವಾರವೇ ಬರುತ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಆದರೆ, ಚಿತ್ರೀಕರಣವೇ ಆಗಿರಲಿಲ್ಲ. ನಿನ್ನೆ (ಜೂನ್ 4)ರಂದು ಸ್ಟುಡಿಯೋದಲ್ಲಿ ಡಿಕೆ ಶಿವಕುಮಾರ್ ಎಪಿಸೋಡ್ ಚಿತ್ರೀಕರಣ ಮಾಡಲಾಗಿದೆ. ಈ ಕಾರ್ಯಕ್ರಮದ ಫೋಟೊಗಳು ಹರಿದಾಡುತ್ತಿವೆ.

ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಅವರ ಬೆಂಬಲಿಗರು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಕಾರ್ಯಕ್ರಮದ ಹೈಲೈಟ್ ಏನು?

ಡಿಕೆ ಶಿವಕುಮಾರ್ ಹಿನ್ನೆಲೆ ಈಗಾಗಲೇ ಜನರಿಗೆ ಗೊತ್ತಿದೆ. ಅವರ ಸಾಧನೆಯ ಹಾದಿಯೂ ಬಹುತೇಕ ಗೊತ್ತಿದೆ. ಆದರೆ, ಇವೆಲ್ಲವನ್ನೂ ಬಿಟ್ಟು ಇದೂವರೆಗೂ ಗೊತ್ತಿರದ ವಿಷಯಗಳನ್ನು ಕಿರುತೆರೆ ವೀಕ್ಷಕರ ಮುಂದಿಡುವ ಸಾಧ್ಯತೆಯಿದೆ.

ಡಿಕೆ ಶಿವಕುಮಾರ್ ಬಾಲ್ಯ, ಸ್ನೇಹಿತರು, ರಾಜಕೀಯದ ಆರಂಭದ ದಿನಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪ ಆಗುವ ಸಾಧ್ಯತೆಯಿದೆ. ಹೀಗಾಗಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರದ ಸಂಚಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಕಾರ್ಯಕ್ರಮದ ಬಗ್ಗೆ ಕೆಲ ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

More from Filmibeat

English summary
Weekend with Ramesh Season 5: DCM DK Shivakumar will be the special guest, here is the highlights.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X